13 ಲಕ್ಷ ಬೆಲೆಯ ಈ ಹ್ಯುಂಡೈ ಕಾರಿನ ಮೈಲೇಜ್‌ ಕೇಳಿದರೆ ತಲೆ ತಿರುಗುವುದು ಖಂಡಿತಾ!: ಭರ್ಜರಿ ಇಂಟೀರಿಯರ್ಸ್‌...

ಮಿಡ್‌ಸೈಜ್ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ಸದ್ಯಕ್ಕೆ ಭಾರತೀಯ ಮಾರುಕಟ್ಟೆಯಲ್ಲು ಆಳುತ್ತಿರುವುದು ಹ್ಯುಂಡೈ ಕಂಪನಿಯ ಕ್ರೆಟಾ ಎಂಬುದು ಎಲ್ಲರಿಗೂ ಗೊತ್ತಿದೆ. ಈ ವರ್ಷದ ಆರಂಭದಲ್ಲಿಯೇ ಕ್ರೆಟಾ ಕಾರಿಗೆ ಹ್ಯುಂಡೈ ಫೇಸ್‌ಲಿಫ್ಟ್‌ ಟಚ್‌ ಅನ್ನು ನೀಡಿತ್ತು. ಹಳೆಯ ಕ್ರೆಟಾಗಿಂತ ಸಕಷಟ್ಉ ಸ್ಟೈಲಿಶ್‌ ಮತ್ತು ಫೀಚರ್‌ ಪ್ಯಾಕ್‌ ಆಗಿ ಬಂದ ಕಾರಿನ ಮಾರಾಟವಂತೂ ರಾಕೆಟ್‌ ವೇಗದಲ್ಲಿ ಏರುತ್ತಿದೆ. ಸಾಕಷ್ಟು ಜನರಿಗೆ ಈ ಕಾರು ಖರೀದಿಸುವುದಕ್ಕೂ ಮೊದಲು ಸಿಟಿಯಲ್ಲಿ ಮತ್ತು ಹೈವೇಯಲ್ಲಿ ಈ ಕಾರಿನ ಮೈಲೇಜ್‌ ಎಷ್ಟಿರುತ್ತದೆ ಎಂಬ ಸಂಶಯವಿದ್ದು, ಅದಕ್ಕೆ ಉತ್ತರ ಈ ಲೇಖನದಲ್ಲಿದೆ.

ಬೆಂಗಳೂರಿನಲ್ಲಿ ಹ್ಯುಂಡೈ ಕ್ರೆಟಾ ಎಸ್‌ಯುವಿಯ ಪೆಟ್ರೋಲ್ ಚಾಲಿತ ಬೇಸ್ ವೇರಿಯೆಂಟ್ (ಆರಂಭಿಕ ಆವೃತ್ತಿ) 'ಇ' ರೂ.13.75 ಲಕ್ಷ, ಮತ್ತೊಂದು ಡೀಸೆಲ್ ಚಾಲಿತ ಬೇಸ್ ಮಾಡೆಲ್ 'ಇ' ರೂ.15.51 ಲಕ್ಷ, ಟಾಪ್ ಮಾಡೆಲ್ (ಗರಿಷ್ಠ ಶ್ರೇಣಿ), 'ಎಸ್ಎಕ್ಸ್ (ಒ) ಟರ್ಬೊ ಡಿಸಿಟಿ ಡಿಟಿ' (ಪೆಟ್ರೋಲ್) ರೂ.25.25 ಲಕ್ಷ, ಡೀಸೆಲ್ ಮೂಲಕ ಓಡಬಲ್ಲ ಟಾಪ್ ವೇರಿಯೆಂಟ್ 'ಎಸ್ಎಕ್ಸ್ (ಒ) ಎಟಿ ಡಿಟಿ' ರೂ.25.25 ಲಕ್ಷ ಆನ್-ರೋಡ್ ಬೆಲೆಯನ್ನು ಹೊಂದಿದೆ.

Hyundai Creta Facelift Real World Mileage And Other Details For You

ನೀವು ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ (Hyundai Creta Facelift) ಎಸ್‌ಯುವಿಯನ್ನು ರೂ.1.38 ಲಕ್ಷ ಡೌನ್ ಪೇಮೆಂಟ್ ಪಾವತಿಸಿ ಖರೀದಿಸಿದರೆ ಶೇಕಡ 9.8% ಬಡ್ಡಿ ದರದಲ್ಲಿ 5 ವರ್ಷದ ಅವಧಿಗೆ ರೂ.26,172 ಇಎಂಐ ಕಟ್ಟಬೇಕು. ಈ ಕಾರು ವಿನ್ಯಾಸದ ದೃಷ್ಟಿಯಿಂದಲೂ ಅತ್ಯುತ್ತಮವಾಗಿದ್ದು, ರೇಂಜರ್ ಖಾಕಿ, ಅಬಿಸ್ ಬ್ಲ್ಯಾಕ್, ಅಟ್ಲಾಸ್ ವೈಟ್ ಸೇರಿದಂತೆ ಆಕರ್ಷಕ ಬಣ್ಣಗಳೊಂದಿಗೆ ದೊರೆಯುತ್ತದೆ.

ಈ ಕಾರಿನ ಮೈಲೇಜ್‌ ಅನ್ನು ನೋಡುವುದಾದರೆ, ARAI ಪ್ರಕಾರ ಈ ಕಾರಿನ ಮೈಲೇಜ್‌ ಅನ್ನು ನೋಡುವುದಾದರೆ ಹ್ಯುಂಡೈ ಕ್ರೆಟಾ ಸಿವಿಟಿ, 17.7kpl ನೀಡುತ್ತದೆ. ಆದರೆ ರಿಯಲ್‌ ವರ್ಲ್ಡ್‌ ಟೆಸ್ಟ್‌ ಮಾಡಿದಾಗ ಹ್ಯುಂಡೈ ಕ್ರೆಟಾ, ಸಿಟಿಯಲ್ಲಿ 10.3kpl ಮತ್ತು ಹೈವೇಯಲ್ಲಿ 13.8kpl ಮೈಲೇಜ್‌ ಕೊಡುತ್ತದೆ ಎಂಬುದನ್ನು ನಾವಿಲ್ಲಿ ಗಮನಿಸಬೇಕಿದೆ.

Hyundai Creta Facelift Real World Mileage And Other Details For You

ಈ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಪೆಟ್ರೋಲ್ ಮತ್ತು ಡಿಸೇಲ್ ಪವರ್ ಟ್ರೇನ್ ಆಯ್ಕೆಯಲ್ಲಿ ಲಭ್ಯವಿದೆ. ಇದರ 1.5-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ 115 ಪಿಎಸ್ ಗರಿಷ್ಠ ಪವರ್ (ಶಕ್ತಿ) ಹಾಗೂ 144 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6-ಸ್ವೀಡ್ ಮ್ಯಾನುವಲ್ ಅಥವಾ ಸಿವಿಟಿ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗುತ್ತದೆ.

ಮತ್ತೊಂದು 1.5-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 160 ಪಿಎಸ್ ಪವರ್ ಮತ್ತು 253 ಎನ್ಎಂ ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಒಳಗೊಂಡಿದೆ. ಜೊತೆಗೆ 7-ಸ್ವೀಡ್ ಡಿಸಿಟಿ (ಡುಯಲ್ ಕ್ಲಚ್ ಟ್ರಾಸ್ಮಿಷನ್) ಗೇರ್ ಬಾಕ್ಸ್ ಆಯ್ಕೆಯಲ್ಲಿಯೂ ದೊರೆಯುತ್ತದೆ. ಪೆಟ್ರೋಲ್ ರೂಪಾಂತರಗಳು 17.4 ರಿಂದ 18.4 ಕೆಎಂಪಿಎಲ್ ಮೈಲೇಜ್ ಕೊಡುತ್ತವೆ.

Hyundai Creta Facelift Real World Mileage And Other Details For You

ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಕಾರಿನ 1.5-ಲೀಟರ್ ಡಿಸೇಲ್ ಎಂಜಿನ್ 116 ಪಿಎಸ್ ಗರಿಷ್ಠ ಪವರ್ (ಶಕ್ತಿ) ಮತ್ತು 250 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6-ಸ್ವೀಡ್ ಮ್ಯಾನುವಲ್ ಅಥವಾ 6-ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ. ಡೀಸೆಲ್ ಚಾಲಿತ ಮಾದರಿಗಳು 19.1 ರಿಂದ 21.8 ಕೆಎಂಪಿಎಲ್ ಮೈಲೇಜ್ ನೀಡುತ್ತವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, June 3, 2024, 13:01 [IST]
English summary
Hyundai creta facelift real world mileage and other details for you
Read more on hyundai india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+