ಆಕರ್ಷಕ ವಿನ್ಯಾಸ, ಲಕ್ಷುರಿ ಫೀಚರ್ಸ್‌ಗಳಿಂದ ಎಸ್‍ಯುವಿಗಳ ರಾಜನಾಗಿ ಉಳಿದುಕೊಂಡ ಹ್ಯುಂಡೈ ಕ್ರೆಟಾ

ಹ್ಯುಂಡೈ ಕ್ರೆಟಾ (Hyundai Creta) ಹ್ಯುಂಡೈ ಕಂಪನಿಯ ಭರ್ಜರಿ ಬೇಡಿಕೆ ಹೊಂದಿರುವ ಮಾಡೆಲ್ ಆಗಿದೆ. ಈ ವರ್ಷದ ಆರಂಭದಲ್ಲಿ ಹ್ಯುಂಡೈ ಫೇಸ್‌ಲಿಫ್ಟೆಡ್ ಕ್ರೆಟಾ ಎಸ್‌ಯುವಿಯನ್ನು ಬಿಡುಗಡೆ ಮಾಡಿತು. ಬಳಿಕ ಕೆಲವೇ ಅವಧಿ ಬಳಿಕ ಹ್ಯುಂಡೈ ಕಂಪನಿಯು ಕ್ರೆಟಾ ಎಸ್‍ಯುವಿಯ ಸ್ಪೋರ್ಟಿಯರ್ ಮಾದರಿಯಾದ ಕ್ರೆಟಾ ಎನ್ ಲೈನ್ ಮಾದರಿಯನ್ನು ಬಿಡುಗಡೆಗೊಳಿಸಿತು. ಹುಂಡೈ ಕ್ರೆಟಾ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಎಸ್‍ಯುವಿಗಳಲ್ಲಿ ಒಂದಾಗಿದೆ.ಹಲವಾರು ವರ್ಷಗಳಿಂದ ಮಾರಾಟವಾಗಿದ್ದರೂ, ಇದು ಭಾರತೀಯ ಖರೀದಿದಾರರನ್ನು ಆಕರ್ಷಿಸುತ್ತಲೇ ಇದೆ. ಹ್ಯುಂಡೈ ನಿರಂತರವಾಗಿ ಮಾರುಕಟ್ಟೆ ಅಗತ್ಯಗಳಿಗೆ ಅನುಗುಣವಾಗಿ ಕ್ರೆಟಾವನ್ನು ನವೀಕರಿಸುತ್ತಾ ಬಂದಿದೆ.

ಈ ಹ್ಯುಂಡೈ ಕ್ರೆಟಾ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿದೆ. ಹುಂಡೈ ಕ್ರೆಟಾವು E, EX, S, S(O), SX, SX Tech, ಮತ್ತು SX(O) ಎಂಬ ಏಳು ರೂಪಾಂತರಗಳಲ್ಲಿ ಲಭ್ಯವಿದೆ. ಪ್ರತಿಯೊಂದು ರೂಪಾಂತರವು ವಿಭಿನ್ನ ವೈಶಿಷ್ಟ್ಯಗಳನ್ನು ಹೊಂದಿದೆ. ಕೆಲವು ರೂಪಾಂತರಗಳು ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿವೆ ಮತ್ತು ಕೆಲವು ರೂಪಾಂತರಗಳು ಕಡಿಮೆ ವೈಶಿಷ್ಟ್ಯಗಳನ್ನು ಹೊಂದಿವೆ. ರೂಪಾಂತರಗಳ ಅನುಗುಣವಾಗಿ ಫೀಚರ್ಸ್ ಬಗ್ಗೆ ಮಾಹಿತಿ ಇಲ್ಲಿದೆ.

Hyundai Creta

E ರೂಪಾಂತರ: ಹ್ಯುಂಡೈ ಕ್ರೆಟಾ ಎಸ್‍ಯುವಿಯ E ರೂಪಾಂತರವು 16-ಇಂಚಿನ ವ್ಹೀಲ್ ಗಳು, ಆರು ಏರ್‌ಬ್ಯಾಗ್‌ಗಳು, ESP ಜೊತೆಗೆ ABS, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಹಿಂಬದಿ ಚಕ್ರಗಳಿಗೆ ಡಿಸ್ಕ್ ಬ್ರೇಕ್‌ಗಳು, ಸೆಂಟ್ರಲ್ ಲಾಕಿಂಗ್, ರಿಯರ್ ಪಾರ್ಕಿಂಗ್ ಸೆನ್ಸಾರ್, ಎಲ್ಲಾ ಪ್ರಯಾಣಿಕರಿಗೆ ಮೂರು-ಪಾಯಿಂಟ್ ಸೀಟ್ ಬೆಲ್ಟ್‌ಗಳು, ಡ್ಯುಯಲ್-ಟೋನ್ ಅನ್ನು ಹೊಂದಿದೆ.

EX ರೂಪಾಂತರ: ಕ್ರೆಟಾ ಎಸ್‍ಯುವಿಯ EX ರೂಪಾಂತರವು E ರೂಪಾಂತರದ ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿದೆ. ಇತರ ವೈಶಿಷ್ಟ್ಯಗಳಲ್ಲಿ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ಮುಂಭಾಗ ಮತ್ತು ಹಿಂಭಾಗದ ಪ್ರಯಾಣಿಕರ ಸ್ಪೀಕರ್‌ಗಳು, ಸ್ಟೀರಿಂಗ್ ವೀಲ್- ಕಂಟ್ರೋಲ್ ಬಟನ್‌ಗಳು, ಶಾರ್ಕ್‌ಫಿನ್ ಆಂಟೆನಾ, ಎಲೆಕ್ಟ್ರಿಕ್ ಆಗಿ ಹೊಂದಾಣಿಕೆ ಮಾಡಬಹುದಾದ ORVM, ಮ್ಯಾಪ್‌ಲೈಟ್‌ಗಳು ಮತ್ತು ಕೂಲಿಂಗ್ ಗ್ಲಾಸ್ ಹೋಲ್ಡರ್ ಸೇರಿವೆ.

Hyundai Creta

S ರೂಪಾಂತರ: ಕ್ರೆಟಾ ಎಸ್‍ಯುವಿಯ S ರೂಪಾಂತರ ಎಲ್ಇಡಿ ಡಿಆರ್ಎಲ್, ಎಲ್ಇಡಿ ಟೈಲ್ ಲೈಟ್, ಓಆರ್ವಿಎಂ ಪ್ರದೇಶದಲ್ಲಿ ಎಲ್ಇಡಿ ಇಂಡೀಕೆಟರ್, ಆಟೋಮ್ಯಾಟಿಕ್ ಹೆಡ್ ಲೈಟ್, ರೇರ್ ಡಿಫಾಗರ್, ಹಿಂಬದಿಯ ಕ್ಯಾಮೆರಾ, ಹಿಂಬದಿಯ ಸನ್ ಬ್ಲೈಂಡ್, ಕ್ರೂಸ್ ಕಂಟ್ರೋಲ್, ಹಿಂಬದಿ ವೈಪರ್ ಮತ್ತು ಲಗೇಜ್ ವಿಭಾಗದಲ್ಲಿ ಕೂಲ್ ಗ್ಲೋವ್ ಬಾಕ್ಸ್ ಅನ್ನು ಪಡೆಯುತ್ತದೆ.

SO ರೂಪಾಂತರ: ಕ್ರೆಟಾ ಎಸ್‍ಯುವಿಯ SO ರೂಪಾಂತರದಲ್ಲಿ ವೈಶಿಷ್ಟ್ಯಗಳನ್ನು ಕೆಲವು ಬದಲಾವಣೆಗಳೊಂದಿಗೆ ನವೀಕರಿಸಲಾಗಿದೆ. ಅದರಂತೆ, 17 ಇಂಚಿನ ಬ್ಲ್ಯಾಕ್ ಅಲಾಯ್ ವ್ಹೀಲ್ ಗಳನ್ನು ಳವಡಿಸಲಾಗಿದೆ. ಪನೋರಮಿಕ್ ಸನ್‌ರೂಫ್ ಅನ್ನು ಸಹ ನೀಡಲಾಗುತ್ತದೆ. ಡ್ಯುಯಲ್ ಜೋನ್ ಕ್ಲೈಮೇಟ್ ಕಂಟ್ರೋಲ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಡ್ರೈವ್ ಮೋಡ್‌ಗಳು ಮತ್ತು ಪೆಡಲ್‌ವಿಫ್ಟರ್ ಆಟೋಮ್ಯಾಟಿಕ್ ಗೇರ್ ಆಯ್ಕೆಯಲ್ಲಿ ಮಾತ್ರ ಲಭ್ಯವಿದೆ.

Hyundai Creta

SX Tech ರೂಪಾಂತರ: ಹ್ಯುಂಡೈ ಕ್ರೆಟಾ ಎಸ್‍ಯುವಿಯ ಜನಪ್ರಿಯ SX ಟೆಕ್ ರೂಪಾಂತರ ಹೆಚ್ಚಿನ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಇದಕ್ಕಾಗಿ, ADAS ತಂತ್ರಜ್ಞಾನವು ಕೊಲಿಷನ್ ವಾರ್ನಿಂಗ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಬ್ಲೈಂಡ್ ಸ್ಪಾಟ್ ಮಾನಿಟರ್ ಅನ್ನು ಹೊಂದಿದೆ. ಪಾರ್ಕಿಂಗ್ ಬ್ರೇಕ್, ಡ್ರೈವ್ ಮೋಡ್‌ಗಳು ಮತ್ತು ಪೆಡಲ್ ಶಿಫ್ಟರ್‌ಗಳ ಜೊತೆಗೆ ಆಟೋಮ್ಯಾತಿಕ್ ಗೇರ್ ರೂಪಾಂತರಗಳಿಗೆ ಬೋಸ್ ಆಡಿಯೊ ಸಿಸ್ಟಮ್ ಅನ್ನು ನೀಡಲಾಗುತ್ತದೆ.

ಟಾಪ್ ವೇರಿಯಂಟ್‌ SX(O ಮಾದರಿಗೆ ಸಂಬಂಧಿಸಿದಂತೆ ಎಲ್ಲಾ ಇತರ ವೈಶಿಷ್ಟ್ಯಗಳು ಬರುತ್ತದೆ. ಇದರ ಜೊತೆಗೆ, ಎಲೆಕ್ಟ್ರೋಕ್ರೊಮಿಕ್ ಐಆರ್‌ವಿಎಂ, ಮುಂಭಾಗದ ಪಾರ್ಕಿಂಗ್ ಸಂವೇದಕ, 360 ಡಿಗ್ರಿ ಕ್ಯಾಮೆರಾ ಸಿಸ್ಟಮ್, ಬ್ಲೈಂಡ್ ಸ್ಪಾಟ್ ವ್ಯೂ ಮಾನಿಟರ್, ಎಲೆಕ್ಟ್ರಿಕಲಿ ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್, ಫ್ರಂಟ್ ವೆಂಟಿಲೇಟರ್ ಸೀಟ್‌ಗಳು ಮತ್ತು ಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಒಳಗೊಂಡಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, June 4, 2024, 16:41 [IST]
English summary
Hyundai creta suv variant wise features full details
Read more on hyundai india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+