ಬರೀ 6 ಲಕ್ಷಕ್ಕೆ ಸನ್‌ರೂಫ್ ಜೊತೆ 27 ಕಿಮೀ ಮೈಲೇಜ್ ಕೊಡುತ್ತೆ ಈ ಕಾರು: ಚಿಕ್ಕ ಫ್ಯಾಮಿಲಿಗೆ ಪರ್ಫೆಕ್ಟ್ SUV
ದಕ್ಷಿಣ ಕೊರಿಯಾದ ಪ್ರಸಿದ್ದ ಕಾರು ನಿರ್ಮಾಣ ಕಂಪನಿಯಾದ ಹ್ಯುಂಡೈಯ ಅತೀ ಚಿಕ್ಕ ಎಸ್‌ಯುವಿ ಎಂದೇ ಹೆಸರಾಗಿರುವ ಎಕ್ಸ್ಟರ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಈ ಕಾರನ್ನು ಮೈಕ್ರೋ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ಟಾಟಾ ಪಂಚ್‌ಗೆ ಎದುರಾಳಿಯಾಗಿ ಅಖಾಡಕ್ಕೆ ಇಳಿಸಿದ ಹ್ಯುಂಡೈ, ತಕ್ಕ ಮಟ್ಟಿಗೆ ಯಶಸ್ವಿಯಾಗಿದೆ ಎನ್ನಬಹುದು. ಕಡಿಮೆ ಬೆಲೆಗೆ ಸಿಗುವ ಹ್ಯುಂಡೈ ಎಕ್ಸ್ಟರ್ ಸಾಕಷ್ಟು ಫೀಚರ್‌ಗಳನ್ನು ಹೊಂದಿದೆ. ಇಂದಿನ ಈ ಲೇಖನದಲ್ಲಿ ನಾವು ಹ್ಯುಂಡೈ ಎಕ್ಸ್ಟರ್ ಕಾರಿನ ಮೈಲೇಜ್ ಬಗ್ಗೆ ಮಾತನಾಡಲಿದ್ದು, ಇದರ ಕುರಿತಾಗಿನ ಸಂಪೂರ್ಣ ಮಾಹಿತಿಗಾಗಿ ಕೊನೆಯವರೆಗೆ ಓದಿ.
ಈ ಎಸ್‌ಯುವಿ, 1.2-ಲೀಟರ್, 4 ಸಿಲಿಂಡರ್ (ಪೆಟ್ರೋಲ್) ಎಂಜಿನ್ ಹೊಂದಿದ್ದು, 81.8 bhp ಗರಿಷ್ಠ ಪವರ್ ಹಾಗೂ 113.8 Nm ಪಿಕ್ ಟಾರ್ಕ್ ಉತ್ಪಾದಿಸುತ್ತದೆ. ಸಿಎನ್‌ಜಿ ಮೋಡ್ ನಲ್ಲಿ 67.7 bhp ಪವರ್ ಮತ್ತು 95.2 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಪೆಟ್ರೋಲ್ ಆವೃತ್ತಿಯು ಮ್ಯಾನ್ಯುವಲ್ ಮತ್ತು AMT ಗೇರ್‌ಬಾಕ್ಸ್ ಆಯ್ಕೆಯನ್ನು ಹೊಂದಿದೆ.

ಸಿಎನ್‌ಜಿ ಆವೃತ್ತಿಯು ಮ್ಯಾನ್ಯುವಲ್ (5 ಸ್ಪೀಡ್) ಗೇರ್‌ಬಾಕ್ಸ್ ಅನ್ನು ಪಡೆದಿದೆ. ಹ್ಯುಂಡೈ ಎಕ್ಸ್ಟರ್ (Hyundai Exter) ಕಾರಿನ ಮೈಲೇಜ್ ವಿಚಾರವಾಗಿ ಮಾತನಾಡುವದಾದರೆ, ಪೆಟ್ರೋಲ್ ಚಾಲಿತ ಕಾರು, 19.2km/l - 19.4km/l ಇಂಧನ ದಕ್ಷತೆಯನ್ನು ಹೊಂದಿದೆ. ಸಿಎನ್‌ಜಿ ಚಾಲಿತ ಕಾರು ಗರಿಷ್ಠ 27.1km/kg ಮೈಲೇಜ್ ನೀಡುತ್ತದೆ.
ಈ ಎಕ್ಸ್‌ಟರ್ ಚಾಲನೆ ಮಾಡುವುದು ಎಲೆಕ್ಕ್ಟ್ರಿಕ್ ಕಾರನ್ನು ಓಡಿಸಿದ ಅನುಭವ ನೀಡುತ್ತದೆ. ಆಸನಗಳು ಕೊಂಚ ಗಟ್ಟಿ ಇದ್ದರೂ ಆರಾಮದಾಯಕವಾಗಿ ಲಾಂಗ್ ಡ್ರೈವ್ ಹೋಗಬಹುದು. ಪ್ರಯಾಣದ ಅವಧಿಯಲ್ಲಿ ತುಂಬಾ ಖುಷಿಯ ಅನುಭವ ನೀಡುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ದಕ್ಷಿಣ ಕೊರಿಯಾದ ಹ್ಯುಂಡೈನ ಎಕ್ಸ್‌ಟರ್ ಟಾಟಾ ಪಂಚ್‌ಗೆ ಭಾರೀ ಪೈಪೋಟಿ ನೀಡಲಿದ್ದು, ಭಾರತದ ಮಾರುಕಟ್ಟೆಯಲ್ಲಿ ರೂ.6 ಲಕ್ಷದಿಂದ ರೂ.10.10 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಈ ಕಾರಿನ ಒಂದಷ್ಟು ಡಿಸೈನ್ ಹಾಗೂ ಫೀಚರ್ಸ್ ಗ್ರ್ಯಾಂಡ್ ಐ10 ನಿಯೋಸ್ ಹ್ಯಾಚ್‌ಬ್ಯಾಕ್ ಹಾಗೂ ಔರಾ ಸೆಡಾನ್‌ಗೆ ಹೋಲಿಕೆಯಾಗುತ್ತದೆ.
ಕಂಪನಿಯು, ಎಕ್ಸ್‌ಟರ್ ಎಸ್‌ಯುವಿಯನ್ನು ಬೇರೆ ಲುಕ್ ಹೊಂದಿರುವಂತೆ ವಿನ್ಯಾಸ ಮಾಡಿದ್ದು, ಫ್ರಂಟ್ ಭಾಗವು ಅತ್ಯಾಕರ್ಷಕವಾಗಿದೆ. ಸ್ಪ್ಲಿಟ್ ಹೆಡ್‌ಲೈಟ್ ಸೆಟಪ್ ಹಾಗೂ ಪ್ಯಾರಾಮೆಟ್ರಿಕ್ ಗ್ರಿಲ್ ನೋಡುಗರನ್ನು ಸೆಳೆಯುತ್ತದೆ. ಪ್ಯಾರಾಮೆಟ್ರಿಕ್ ಗ್ರಿಲ್‌ನ ಎರಡು ಬದಿಗಳಲ್ಲಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳಿದ್ದು, ಇನ್-ಬಿಲ್ಟ್ ಹೆಚ್ ಆಕಾರದ ಎಲ್ಇಡಿ DRL ಸಿಂಪಲ್ ಲುಕ್ ಹೊಂದಿದೆ.
ಸೈಡ್ ನಲ್ಲಿ ಹ್ಯುಂಡೈ ಎಕ್ಸ್‌ಟರ್ ಎಸ್‌ಯುವಿ 15 ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್ ಪಡೆದಿದೆ. ಸಿ-ಪಿಲ್ಲರ್‌ನಲ್ಲಿ ಬ್ಲ್ಯಾಕ್ ರೂಫ್ ರೈಲ್ಸ್ ಇದ್ದು, ಶಾರ್ಕ್ ಫಿನ್ ಆಂಟೆನಾ, ಬಾಡಿ ಕ್ಲಾಡಿಂಗ್ ಹೈಲೆಟ್ ಆಗಿವೆ. ಹಿಂಭಾಗದಲ್ಲೂ ಅತ್ಯಾಧುನಿಕ ವಿನ್ಯಾಸ ಹೊಂದಿದ್ದು, ಟೈಲ್‌ಲೈಟ್ಸ್ ಹ್ಯುಂಡೈ ಬ್ಯಾಡ್ಜ್‌ನೊಂದಿಗೆ ಕನೆಕ್ಟ್ ಆಗಿವೆ. ಇದಿಷ್ಟೇ ಅಲ್ಲದೆ, ಸಿಲ್ವರ್ ಬಣ್ಣದ ಸ್ಕಿಡ್ ಪ್ಲೇಟ್ ಹಾಗೂ ಬ್ಲ್ಯಾಕ್ ಬಣ್ಣದ ರೂಫ್-ಮೌಂಟೆಡ್ ಸ್ಪಾಯ್ಲರ್ ಅನ್ನು ಒಳಗೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications