ರಗಡ್ ಲುಕ್‌ನ ಹೊಸ ಹ್ಯುಂಡೈ ವೆನ್ಯೂ ಅಡ್ವೆಂಚರ್ ಎಡಿಷನ್ ವಿಶೇಷತೆಗಳು

ಹ್ಯುಂಡೈ ವೆನ್ಯೂ ಸಬ್-4 ಮೀಟರ್ ಎಸ್‍ಯುವಿ ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆಯ ಮತ್ತು ಜನಪ್ರಿಯ ಮಾದರಿಯಾಗಿದೆ. ಈ ಹ್ಯುಂಡೈ ವೆನ್ಯೂ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ನೆಕ್ಸನ್, ಮಾರುತಿ ಸುಜುಕಿ ಬ್ರೆಝಾ, ಕಿಯಾ ಸೊನೆಟ್, ಮಹೀಂದ್ರಾ ಮ್ಯಾಗ್ನೈಟ್ ಮತ್ತು ರೆನಾಲ್ಟ್ ಕಿಗರ್‌ನಂತಹ ಮಾದರಿಗಳಿಗೆ ಪೈಪೋಟಿ ನೀಡುತ್ತದೆ. ಇದೀಗ ಹ್ಯುಂಡೈ ಕಂಪನಿಯು ಈ ಹ್ಯುಂಡೈ ವೆನ್ಯೂ ಎಸ್‍ಯುವಿಗಾಗಿ ಹೊಸ ಸ್ಪೆಷಲ್ ಎಡಿಷನ್ ಅನ್ನು ಪರಿಚಯಿಸಿದೆ. ಹೊಸದಾಗಿ ಬಿಡುಗಡೆಯಾದ ಮಾದರಿ ಹ್ಯುಂಡೈ ವೆನ್ಯೂ ಅಡ್ವೆಂಚರ್ ಎಡಿಷನ್ (Hyundai Venue Adventure Edition) ಆಗಿದೆ.

ಬೆಲೆಗಳು: ಹೊಸ ಹ್ಯುಂಡೈ ವೆನ್ಯೂ ಅಡ್ವೆಂಚರ್ ಎಡಿಷನ್ ಬೆಲೆಯು ಎಕ್ಸ್ ಶೊರೂಂ ಪ್ರಕಾರ ರೂ.10.15 ಲಕ್ಷವಾಗಿದೆ. ವೆನ್ಯೂ ಅಡ್ವೆಂಚರ್ ಆವೃತ್ತಿಯು S(O)+, SX, ಮತ್ತು SX(O) ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ. S(O)+ 1.2 MPi MT ರೂಪಾಂತರದ ಆರಂಭಿಕ ಬೆಲೆ ರೂ.10.71 ಲಕ್ಷವಾದರೆ, ಟಾಪ್-ಎಂಡ್ SX(O) 1.0 GDi DCT ರೂಪಾಂತರದ ಬೆಲೆಯು ರೂ.13.38 ಲಕ್ಷವಾಗಿದೆ. ಈ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ.

Hyundai Venue Adventure Edition

ವಿನ್ಯಾಸ ಮತ್ತು ಫೀಚರ್ಸ್: ಗಮನಾರ್ಹವಾದ ಬಾಹ್ಯ ವೈಶಿಷ್ಟ್ಯಗಳಲ್ಲಿ ಬ್ಲ್ಯಾಕ್ ಲೋಗೋ, ಬ್ಲ್ಯಾಕ್ ಅಲಾಯ್ ವ್ಹೀಲ್ ಗಳು ಮತ್ತು ಕೆಂಪು ಮುಂಭಾಗದ ಬ್ರೇಕ್ ಕ್ಯಾಲಿಪರ್‌ಗಳು ಸೇರಿವೆ. ಈ ಹೊಸ ವೆನ್ಯೂ ಅಡ್ವೆಂಚರ್ ಎಡಿಷನ್ ಮಾದರಿಯ ಒಳಭಾಗದಲ್ಲಿ ಡ್ಯಾಶ್‌ಕ್ಯಾಮ್, 3D ಅಡ್ವೆಂಚರ್ ಮ್ಯಾಟ್‌ಗಳು, ಸೇಜ್ ಗ್ರೀನ್ ಹೈಲೈಟ್‌ಗಳೊಂದಿಗೆ ಅನನ್ಯ ಸೀಟ್ ಅಪ್ಹೋಲ್ಸ್ಟರಿ ಮತ್ತು ಸ್ಪೋರ್ಟಿ ಮೆಟಾಲಿಕ್ ಪೆಡಲ್‌ಗಳಂತಹ ಹಲವಾರು ವಿಶೇಷ ವೈಶಿಷ್ಟ್ಯಗಳನ್ನು ಸೇರಿಸಿದೆ.

ಬಣ್ಣಗಳ ಆಯ್ಕೆ: ವೆನ್ಯೂ ಅಡ್ವೆಂಚರ್ ಎಡಿಷನ್ ಹೊರಭಾಗವು ನಾಲ್ಕು ಮೊನೊಟೋನ್ ಬಣ್ಣಗಳು ಮತ್ತು ಮೂರು ಡ್ಯುಯಲ್-ಟೋನ್ ಆಯ್ಕೆಗಳನ್ನು ಹೊಂದಿದೆ. ಇದರಲ್ಲಿ ಅಬಿಸ್ ಬ್ಲ್ಯಾಕ್, ರೇಂಜರ್ ಖಾಕಿ, ಟೈಟಾನ್ ಗ್ರೇ ಮತ್ತು ಅಟ್ಲಾಸ್ ವೈಟ್ ಎಂಬ ಮೊನೊಟೋನ್ ಬಣ್ಣಗಳಾದರೆ, ಯಲ್-ಟೋನ್ ಬಣ್ಣಗಳು ರೇಂಜರ್ ಖಾಕಿ ಬ್ಲ್ಯಾಕ್ ರೂಫ್ ನೊಂದಿಗೆ, ಟೈಟಾನ್ ಗ್ರೇ ವಿತ್ ಎ ಬ್ಲ್ಯಾಕ್ ರೂಫ್ ಮತ್ತು ಅಟ್ಲಾಸ್ ವೈಟ್ ಜೊತೆಗೆ ಒಂದು ಬ್ಲ್ಯಾಕ್ ರೂಪ್ ಆಗಿದೆ.

Hyundai Venue Adventure Edition

ಹ್ಯುಂಡೈ ವೆನ್ಯೂ ಅಡ್ವೆಂಚರ್ ಎಡಿಷನ್ ಬ್ಲ್ಯಾಕ್ ರೂಫ್ ರೈಲ್ ಗಳು, ORVM ಗಳು (ಹೊರಗಿನ ಹಿಂಬದಿಯ ವ್ಯೂ ಮಿರರ್‌ಗಳು) ಮತ್ತು ಅದರ ಒರಟಾದ ಆಕರ್ಷಣೆಯನ್ನು ಹೆಚ್ಚಿಸಲು ಶಾರ್ಕ್-ಫಿನ್ ಆಂಟೆನಾದೊಂದಿಗೆ ವಿಶೇಷ ಅಡ್ವೆಂಚರ್ ಲೋಗೋವನ್ನು ಸಹ ಒಳಗೊಂಡಿದೆ. ಈ ಹೊಸ ಆವೃತ್ತಿಯು ಹಬ್ಬದ ಸೀಸನ್ ನಲ್ಲಿ ಹ್ಯುಂಡೈನ ಮಾರುಕಟ್ಟೆ ಪಾಲನ್ನು ಹೆಚ್ಚಿಸಲು ಸಹಾಯವಾಗುತ್ತದೆ ಮತ್ತು ಸಬ್-4 ಮೀಟರ್ ಎಸ್‍ಯುವಿ ವಿಭಾಗದಲ್ಲಿ ವಿಶಿಷ್ಟವಾದ ಕಾರನ್ನು ಹುಡುಕುವ ಖರೀದಿದಾರರನ್ನು ಆಕರ್ಷಿಸುತ್ತದೆ.

ಎಂಜಿನ್: ಹ್ಯುಂಡೈ ವೆನ್ಯೂ ಅಡ್ವೆಂಚರ್ ಎಡಿಷನ್ ಮಾದರಿಯಲ್ಲಿ ಎರಡು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಇದರಲ್ಲಿ 1.2 ಲೀಟರ್ ನ್ಯಾಚುರಲ್ ಆಸ್ಪೈರರ್ಡ್ 4-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ 83 bhp ಪವರ್ ಮತ್ತು 114 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.

Hyundai Venue Adventure Edition

ಇನ್ನು ವೆನ್ಯೂ ಅಡ್ವೆಂಚರ್ ಎಡಿಷನ್ ಮಾದರಿಯ ಟಾಪ್ ಸ್ಪೆಕ್ ರೂಪಾಂತರಗಳು 1.0 ಲೀಟರ್ ಟರ್ಬೋಚಾರ್ಜ್ಡ್ 3-ಸಿಲಿಂಡರ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 120 bhp ಪವರ್ ಮತ್ತು 172 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಟರ್ಬೊ ಎಂಜಿನ್ ಅನ್ನು ಆಯ್ಕೆ ಮಾಡುವವರಿಗೆ, ಹುಂಡೈ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯನ್ನು ನೀಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, September 18, 2024, 13:48 [IST]
English summary
Hyundai venue adventure edition top things details
Read more on hyundai india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+