ವರ್ಷಾಂತ್ಯಕ್ಕೆ ಕೇವಲ ಒಂದೇ ದಿನ ಬಾಕಿ: ಜನವರಿಯಲ್ಲಿ ಹೊಸ ಕಾರುಗಳು ಬಿಡುಗಡೆಗೆ ಸಜ್ಜು!

2025 ರಲ್ಲಿ ಸಾಲು ಸಾಲು ಹೊಸ ಕಾರುಗಳು ಬಿಡುಗಡೆಗೆ ಸಜ್ಜಾಗಿವೆ. ಟಾಟಾ, ಮಹೀಂದ್ರಾ, ಬೆಂಝ್, ಕಿಯಾ, ಎಂಜಿ ಬ್ರಾಂಡ್‌ಗಳಿಂದ ಪ್ರಮುಖ ಕಾರುಗಳು ಮುಂದಿನ ಜನವರಿಯಲ್ಲಿ ಬಿಡುಗಡೆಗೆಯಾಗಲಿವೆ. ಮೊದಲ ತಿಂಗಳಲ್ಲೇ (2025 ಜನವರಿ) ಭಾರತದಲ್ಲಿ ಹಲವು ಪ್ರಮುಖ ಕಾರುಗಳು ಎಂಟ್ರಿಕೊಡುತ್ತಿವೆ. ಇದರಲ್ಲಿ ಎಲೆಕ್ಟ್ರಿಕ್ ಕಾರುಗಳು ಕೂಡ ಇವೆ, ಇಂಧನ ಚಾಲಿತ ಕಾರುಗಳಿಗೆ ಹೋಲಿಸಿಕೊಂಡರೆ 2025 ರಲ್ಲಿ ಕಡಿಮೆ ಇವಿ ವಾಹನಗಳು ಬಿಡುಗಡೆಯಾಗಲಿವೆ. ಒಟ್ಟಾರೆ ಈ ಲೇಖನದಲ್ಲಿ ಜನವರಿ 2025 ರಲ್ಲಿ ಕುತೂಹಲ ಹೆಚ್ಚಿಸಿ ಬಿಡುಗಡೆ ಆಗಲಿರುವ ಪ್ರಮುಖ ಕಾರುಗಳನ್ನು ನೋಡೋಣ.

ಮರ್ಸಿಡಿಸ್ ಬೆಂಝ್ ಇಕ್ಯೂಎಸ್ ಎಸ್‌ಯುವಿ 450: ಮರ್ಸಿಡಿಸ್ ಬೆಂಝ್ ಜನವರಿ 9 ರಂದು ತನ್ನ ಹೊಸ ಎಲೆಕ್ಟ್ರಿಕ್ ಎಸ್‌ಯುವಿ, ಇಕ್ಯೂಎಸ್ ಎಸ್‌ಯುವಿ 450 ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಇದು 122 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಜೊತೆಗೆ ಎರಡು ಎಲೆಕ್ಟ್ರಿಕ್ ಮೋಟರ್‌ಗಳೊಂದಿಗೆ ಬರಲಿದೆ. ಈ ಕಾರು 5 ಆಸನಗಳೊಂದಿಗೆ ಬಿಡುಗಡೆಯಾಗಲಿದೆ.

january-2025-new-car-launches-in-india

ಹ್ಯುಂಡೈ ಕ್ರೆಟಾ ಇವಿ: ಹ್ಯುಂಡೈ ಕ್ರೆಟಾ ಇವಿ 2025 ರ ಭಾರತ್ ಮೊಬಿಲಿಟಿ ಎಕ್ಸ್ ಪೋದಲ್ಲಿ (ಜನವರಿ 17 ರಿಂದ 22 ರ ನಡುವೆ) ಬಿಡುಗಡೆ ಆಗಲಿದೆ. ಇದು 60 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್‌ನ್ನು ಹೊಂದಿದ್ದು, 500 ಕಿ.ಮೀ ರೇಂಜ್ ಒದಗಿಸುತ್ತದೆ. ಕಾರು ಮುಂಭಾಗದ ಚಕ್ರಗಳಿಗೆ ಶಕ್ತಿ ನೀಡುವ ಸಿಂಗಲ್ ಎಲೆಕ್ಟ್ರಿಕ್ ಮೋಟರ್ ಮೂಲಕ ಕಾರ್ಯನಿರ್ವಹಿಸುತ್ತದೆ.

ಕಿಯಾ ಸೈರಸ್: ಕಿಯಾ ಸೈರಸ್ ಎಸ್‌ಯುವಿ ಕೂಡ 2025ರ ಭಾರತ್ ಮೊಬಿಲಿಟಿ ಎಕ್ಸ್‌ಪೋದಲ್ಲಿ ಎಂಟ್ರಿ ಕೊಡಲಿದೆ. ಇದು 1.0 ಲೀಟರ್ ಟರ್ಬೋ - ಪೆಟ್ರೋಲ್ ಎಂಜಿನ್ ಮತ್ತು 1.5 - ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಈ ಕಾರು 6-ಸ್ಪೀಡ್ ಮ್ಯಾನ್ಯುಯಲ್ ಮತ್ತು 7-ಸ್ಪೀಡ್ ಡಿಸಿಟಿ ಘಟಕಗಳೊಂದಿಗೆ ಬರಲಿದೆ.

january-2025-new-car-launches-in-india

ಟಾಟಾ ಕರ್ವ್ ವಿಶೇಷ ಆವೃತ್ತಿಗಳು: ಟಾಟಾ ಮೋಟಾರ್ಸ್ ತನ್ನ ಬಹುನಿರೀಕ್ಷಿತ ಹಾಗೂ ಹೊಸ ಡಿಸೈನ್‌ನಲ್ಲಿ ಪರಿಚಯಿಸಿದ ಎಸ್‌ಯುವಿ ಕೂಪೆ ಕರ್ವ್ ಅನ್ನು ವಿಶೇಷ ಆವೃತ್ತಿಗಳಲ್ಲಿ ಪರಿಚಯಿಸಲಿದೆ. ತನ್ನ ಡಾರ್ಕ್ ಎಡಿಷನ್ ಮತ್ತು ಇವಿ, ಐಸಿಇ ಆವೃತ್ತಿಗಳನ್ನು ಮುಂದಿನ ತಿಂಗಳಲ್ಲಿ ಬಿಡುಗಡೆ ಮಾಡಲಿದೆ. ಇದು ಗ್ರಾಹಕರಿಗೆ ಹೊಸ ವೈಶಿಷ್ಟ್ಯಗಳೊಂದಿಗೆ ಲಭ್ಯವಾಗಲಿದೆ.

MG ಸೈಬರ್ ಸ್ಟರ್: MG ಸೈಬರ್ ಸ್ಟರ್, 2025ರಲ್ಲಿ ಭಾರತದ ಎಂಜಿಯ ಹ್ಯಾಲೋ ಉತ್ಪನ್ನವಾಗಿ ಮಾರುಕಟ್ಟೆಗೆ ಬರಲಿದೆ. ಇದರ ಬೆಲೆ ರೂ. 60 ರಿಂದ 70 ಲಕ್ಷಗಳ ಮಧ್ಯೆ ಇರಬಹುದು. ಇದು 77 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಹಾಗೂ 510 ಕಿ.ಮೀ ರೇಂಜ್ ಒದಗಿಸುತ್ತದೆ. 510 BH ಪವರ್ ಮತ್ತು 725 Nm ಟಾರ್ಕ್ ಉತ್ಪಾದಿಸುವ ಈ ಕಾರು, 3.2 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ತಲುಪಬಲ್ಲದು.

january-2025-new-car-launches-in-india

ಇವೆಲ್ಲವೂ 2025 ರಲ್ಲಿ ಭಾರೀ ನಿರೀಕ್ಷೆಗಳೊಂದಿಗೆ ಭಾರತೀಯ ಮಾರುಕಟ್ಟೆಗೆ ಎಂಟ್ರಿಕೊಡಲು ಸಜ್ಜಾಗಿರುವ ಕಾರುಗಳಾಗಿವೆ. ಮುಖ್ಯವಾಗಿ 2025 ರ ಜನವರಿ 17 ರಿಂದ 22 ರ ನಡುವೆ ನಡೆಯಲಿರುವ ಭಾರತ್ ಮೊಬಿಲಿಟಿ ಎಕ್ಸ್ ಪೋದಲ್ಲಿ ಬಹುತೇಕ ಕಂಪನಿಗಳು ತಮ್ಮ ಹೊಸ ವಾಹನಗಳು ಯಾವುದೇ ಮಾಹಿತಿ ನೀಡದೇ ಬಿಡುಗಡೆ ಮಾಡಿದ್ರೂ ಅಚ್ಚರಿಯಿಲ್ಲ. ಸದ್ಯ ನಮಗಿರುವ ಮಾಹಿತಿಯಂತೆ ಮೇಲಿನ ಕಾರುಗಳು ಬಿಡುಗಡೆಗೆ ಸಜ್ಜಾಗಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, December 31, 2024, 17:50 [IST]
English summary
January 2025 new car launches in india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+