ಸ್ಟೈಲಿಷ್ ಲುಕ್‌ನಲ್ಲಿ ಕಂಪಾಸ್ ಆನಿವರ್ಸರಿ ಎಡಿಷನ್ ಪರಿಚಯಿಸಿದ ಜೀಪ್
ಭಾರತೀಯ ಮಾರುಕಟ್ಟೆಯಲ್ಲಿ 2017ರಲ್ಲಿ ಬಿಡುಗಡೆಯಾದ ಜೀಪ್ ಕಂಪಾಸ್ ಎಸ್‌ಯುವಿ ದೇಶದಲ್ಲಿ ಎಂಟು ಯಶಸ್ವಿ ವರ್ಷಗಳನ್ನು ಪೂರೈಸಿದೆ. ಈ ಸಂದರ್ಭವನ್ನು ಸ್ಮರಣಾರ್ಥವಾಗಿ, ಅಮೇರಿಕನ್ ವಾಹನ ತಯಾರಕರು ಕೆಲವು ಕಾಸ್ಮೆಟಿಕ್ ನವೀಕರಣಗಳು ಮತ್ತು ಅಕ್ಸೆಸರೀಸ್ ಗಳು ವಿಶೇಷ ಜೀಪ್ ಕಂಪಾಸ್ ಆನಿವರ್ಸರಿ ಎಡಿಷನ್ (Jeep Compass Anniversary Edition) ಪರಿಚಯಿಸಿದ್ದಾರೆ. ಈ ಹೊಸ ಜೀಪ್ ಲಿಮಿಟೆಡ್ ಎಡಿಷನ್ ಬುಕಿಂಗ್‌ಗಳು ಎಲ್ಲಾ ಜೀಪ್ ಡೀಲರ್‌ಶಿಪ್‌ಗಳಲ್ಲಿ ಮತ್ತು ಆನ್‌ಲೈನ್‌ನಲ್ಲಿ ಪ್ರಾರಂಭವಾಗಿದೆ. ಜೀಪ್ ಕಂಪಾಸ್ ಆನಿವರ್ಸರಿ ಎಡಿಷನ್ ಬೆಲೆಗಳು ಮತ್ತು ರೂಪಾಂತರದ ವಿವರಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುತ್ತದೆ.
ಹೊಸ ಜೀಪ್ ಕಂಪಾಸ್ ಆನಿವರ್ಸರಿ ಎಡಿಷನ್ ವಿನ್ಯಾಸದ ಬಗ್ಗೆ ಹೇಳುವುದಾದರೆ, ಈ ಎಸ್‍ಯುವಿ ಮಾದರಿ ಗ್ರಿಲ್‌ನಲ್ಲಿ ವೆಲ್ವೆಟ್ ರೆಡ್ ಇನ್ಸರ್ಟ್ ಮತ್ತು ಡ್ಯುಯಲ್-ಟೋನ್ ಹುಡ್ ಡೆಕಲ್ ಅನ್ನು ಒಳಗೊಂಡಿದೆ. ಈ ಜೀಪ್ ಎಸ್‍ಯುವಿಯು ವೆಲ್ವೆಟ್ ರೆಡ್ ಸೀಟ್ ಕವರ್‌ಗಳು, ವೈಟ್ ಆಂಬಿಯೆಂಟ್ ಲೈಟಿಂಗ್ ಮತ್ತು ಇಂಟಿಗ್ರೇಟೆಡ್ ಡ್ಯಾಶ್‌ಕ್ಯಾಮ್‌ನೊಂದಿಗೆ ಬರುತ್ತದೆ.

ಜೀಪ್ ಕಂಪಾಸ್ ಆನಿವರ್ಸರಿ ಎಡಿಷನ್ ಒಳಭಾಗದಲ್ಲಿ 10.25-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಯುಕನೆಕ್ಟ್-5 ಜೊತೆಗೆ 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಚಾರ್ಜರ್, ವೈರ್‌ಲೆಸ್ ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ, ವೆಂಟಿಲೇಟೆಡ್ ಫ್ರಂಟ್ ಸೀಟುಗಳು, ಲೆಥೆರೆಟ್ ಅಪ್ಹೋಲ್‌ಸ್ಟರಿ, 360 ಮುಂತಾದ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.
ಇದರೊಂದಿಗೆ ಡಿಗ್ರಿ ಪಾರ್ಕಿಂಗ್ ಕ್ಯಾಮೆರಾ, 9 ಸ್ಪೀಕರ್‌ಗಳು, ಪನೋರಮಿಕ್ ಸನ್‌ರೂಫ್, ಆಟೋ IRVM, ಜೀಪ್ ಸೆಲೆಕ್-ಟೆರೈನ್ 4X4 ಸಿಸ್ಟಮ್, ಮೆಮೊರಿ ಫಂಕ್ಷನ್ ನೊಂದಿಗೆ 8-ವೇ ಪವರ್-ಹೊಂದಾಣಿಕೆ ಚಾಲಕ ಸೀಟ್, ಡ್ಯುಯಲ್-ಜೋನ್ ಸ್ವಯಂಚಾಲಿತ ಹವಾಮಾನ ನಿಯಂತ್ರಣ, ಕ್ರೂಸ್ ಕಂಟ್ರೋಲ್, ಮತ್ತು ಹೆಚ್ಚಿನ ಫೀಚರ್ಸ್ ಗಳೊಂದಿಗೆ ಬಂದಿದೆ.

ಹೊಸ ಜೀಪ್ ಕಂಪಾಸ್ ಆನಿವರ್ಸರಿ ಎಡಿಷನ್ ಮಾದರಿಯ ಸುರಕ್ಷತಾ ಫೀಚರ್ಸ್ ಗಳ ಬಗ್ಗೆ ಹೇಳುವುದಾದರೆ, ಈ ಎಸ್‍ಯುವಿಯಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಹಿಲ್ ಸ್ಟಾರ್ಟ್ ಅಸಿಸ್ಟ್, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ಎಲೆಕ್ಟ್ರಿಕ್ ರೋಲ್ ಮಿಟಿಗೇಶನ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, Isofix ಚೈಲ್ಡ್ ಸೀಟ್ ಮೌಂಟ್‌ಗಳು, ಕ್ಯಾಮೆರಾ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸರ್‌ಗಳನ್ನು ಹೊಂದಿವೆ.
ಟಾಪ್ ಟ್ರಿಮ್‌ಗಳು ಹಿಲ್ ಡಿಸೆಂಟ್ ಕಂಟ್ರೋಲ್, 6 ಏರ್‌ಬ್ಯಾಗ್‌ಗಳು ಮತ್ತು ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾದೊಂದಿಗೆ ಪ್ರತ್ಯೇಕವಾಗಿ ಬರುತ್ತವೆ. ಜೀಪ್ ಕಂಪಾಸ್ ಆನಿವರ್ಸರಿ ಎಡಿಷನ್ ಎಸ್‍ಯುವಿಯಲ್ಲಿ 2.0-ಲೀಟರ್, 4-ಸಿಲಿಂಡರ್ ಟರ್ಬೊ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 170 bhp ಮತ್ತು 350 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು 9-ಸ್ಪೀಡ್ ಟಾರ್ಕ್ ಕರ್ನವಾಟರ್ ಗೇರ್‌ಬಾಕ್ಸ್ ಅನ್ನು ನೀಡಲಾಗಿದೆ.

ಹೊಸ ಜೀಪ್ ಕಂಪಾಸ್ ಆನಿವರ್ಸರಿ ಎಡಿಷನ್ ಮಾದರಿ FWD (ಫ್ರಂಟ್-ವೀಲ್ ಡ್ರೈವ್) ನೊಂದಿಗೆ ಸ್ಟ್ಯಾಂಡರ್ಡ್ ಆಗಿ ಬರುತ್ತದೆ, ಆದರೆ ಆಯ್ಕೆಯ 4WD ಸೆಟಪ್ ಟಾಪ್ ಸ್ಪೆಕ್ ಮಾದರಿ S (O) ಟ್ರಿಮ್‌ನೊಂದಿಗೆ ಮಾತ್ರ ಲಭ್ಯವಿದೆ. ಸಾಮಾನ್ಯ ಜೀಪ್ ಕಂಪಾಸ್‌ನ (jeep Compass) ಬೆಲೆಗಳು ರೂ 18.99 ಲಕ್ಷದಿಂದ ಪ್ರಾರಂಭವಾಗುತ್ತದೆ.


Click it and Unblock the Notifications