ಆಫ್‌ರೋಡ್ ಪ್ರೀಯರೇ ಗಮನಿಸಿ! ಈ ಪ್ರಸಿದ್ಧ ರಗಡ್ ವಾಹನಕ್ಕೆ ಸಿಗುತ್ತಿದೆ ಲಕ್ಷಗಟ್ಟಲೆಯ ಡಿಸ್ಕೌಂಟ್...
ಅಮೇರಿಕನ್ ಕಾರು ನಿರ್ಮಾಣ ಕಂಪನಿಯಾದ ಜೀಪ್ ಭಾರತೀಯ ಮಾರುಕಟ್ಟೆಯಲ್ಲಿ ರಗಡ್ ಆದ ಕಾರುಗಳಿಗೆ ಹೆಸರುವಾಸಿ. ಇವರ ಪ್ರಸಿದ್ದ ಕಾರಾದ ಜೀಪ್ ಕಂಪಾಸ್ ಆಫ್‌ರೋಡ್ ಪ್ರೀಯರಿಗೆ ತುಂಬಾನೇ ಅಚ್ಚುಮೆಚ್ಚು. ಇದೀಗ ಜೀಪ್ ತನ್ನ ಮತ್ತೊಂದು ಕಾರು ಮಾದರಿಯಾದ ಮೆರಿಡಿಯನ್‌ಗೆ ಭಾರೀ ಡಿಸ್ಕೌಂಟ್ ಅನ್ನು ನೀಡುತ್ತಿದೆ.
ಹವದು, ಜೀಪ್ ಕಂಪನಿಯ ಮತ್ತೊಂದು ಪ್ರಸಿದ್ದ ಸೆವೆನ್ ಸೀಟರ್ ಕಾರಾಗಿರುವ ಜೀಪ್ ಮೆರಿಡಿಯನ್ (Jeep Meridian) ಭಾರತೀಯ ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿದ್ದು, ಇದೀಗ ಕಂಪನ ಈ ಕಾರಿಗೆ ಭರ್ಜರಿ ಆಫರ್ ಅನ್ನು ನೀಡುತ್ತಿದೆ. ಮಾಹಿತಿಗಳ ಪ್ರಕಾರ ಜೀಪ್ ಎಪ್ರಿಲ್ ತಿಂಗಳಲ್ಲಿ ಈ ಕಾರಿಗೆ ಸುಮಾರು 2.80 ಲಕ್ಷ ರೂಪಾಯಿಗಳ ಡಿಸ್ಕೌಂಟ್ ನೀಡುತ್ತಿದೆ.

ಇದರ ಜೊತೆಗೆ ಜೀಪ್ ಕಂಪಾಸ್‌ಗೂ ಸಹ ಈ ಸುಮಾರು 1.55 ಲಕ್ಷ ರೂಗಳವರೆಗಿನ ಆಫರ್ ನೀಡುತ್ತಿದ್ದು ಜೀಪ್ ವಾಹನಗಳನ್ನು ಕೊಳ್ಳುವವರಿಗೆ ಇದು ಸುವರ್ಣಾವಕಾಶ ಎಂದರೆ ತಪ್ಪಾಗಲಾರದು. ಜೀಪ್ ಮೆರಿಡಿಯನ್‌ಗೆ ನೀಡಲಾಗುವ ಆಫರ್‌ನಲ್ಲಿ ಕ್ಯಾಶ್ ಡಿಸ್ಕೌಂಟ್, ಎಕ್ಸ್‌ಚೇಂಜ್ ಬೋನಸ್, ಕಾರ್ಪೋರೇಟ್ ಆಫರ್‌ಗಳು ಸೇರಿದೆ. ಇದರ ಜೊತೆಗೆ ೩ ವರ್ಷದ ಕಾರು ಮೆಂಟೇನೆನ್ಸ್ ಮತ್ತು ಎರಡು ವರ್ಷಗಳ ವಿಸ್ತರಿಯತ ವಾರಂಟಿಯೂ ಸೇರಿದೆ.
ಜೀಪ್ ಮೆರಿಡಿಯನ್ ಮೂಲತಃ ಕಂಪಾಸ್‌ನ 7-ಸೀಟರುಗಳ ಆವೃತ್ತಿಯಾಗಿದೆ, ಇದು ಈಗಾಗಲೇ ಕಮಾಂಡರ್ ಆಗಿ ಆಯ್ದ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟದಲ್ಲಿದೆ. ಆದರೆ ಭಾರತದಲ್ಲಿ ಇಂಡಿಯಾ-ಸ್ಪೆಕ್ ಮಾದರಿಯನ್ನು 'ಮೆರಿಡಿಯನ್' ಹೆಸರನ್ನು ನೀಡಲಾಗಿದೆ, ಏಕೆಂದರೆ ಮಹೀಂದ್ರಾ ಕಂಪನಿಯು ಭಾರತದಲ್ಲಿ 'ಕಮಾಂಡರ್' ಟ್ರೇಡ್‌ಮಾರ್ಕ್ ಹೊಂದಿದೆ.

ಇನ್ನು ಈ ಕಾರಿನ ಬೆಲೆ ಮತ್ತು ಇತರ ವಿಷಯಗಳನ್ನು ನೋಡುವುದಾದರೆ, ಈ ಕಾರಿನ ಬೇಸ್ ಲಿಮಿಟೆಡ್ (O) 4x2MT ರೂಪಾಂತರದ ಬೆಲೆಯು ರೂ.33.60 ಲಕ್ಷವಾಗಿದ್ದು, ಟಾಪ್-ಎಂಡ್ ಓವರ್‌ಲ್ಯಾಂಡ್ 4x4 AT ರೂಪಾಂತರದ ಬೆಲೆಯು ರೂ.39.66 ಲಕ್ಷವಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ.
ಜೀಪ್ ಮೆರಿಡಿಯನ್ ಎಸ್‍ಯುವಿಯನ್ನು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ ಮತ್ತು ಕಂಪಾಸ್ ಆಧಾರಿತವಾದ ಫ್ಲಾಟ್ ಫಾರ್ಮ್ ಅನ್ನು ಹಂಚಿಕೊಳ್ಳುತ್ತದೆ. ಮೆರಿಡಿಯನ್ ತನ್ನ ಪ್ರತಿಸ್ಪರ್ಧಿಗಳಿಗೆ ತೀವ್ರ ಸ್ಪರ್ಧೆಯನ್ನು ನೀಡುತ್ತಿದೆ. ಜೀಪ್ ಮೆರಿಡಿಯನ್ (Jeep Meridian) ಜನಪ್ರಿಯ ಕಂಪಾಸ್ ಎಸ್‍ಯುವಿಯನ್ನು ಆಧರಿಸಿದೆ. ಜೀಪ್ ಮೆರಿಡಿಯನ್ ಮಾದರಿ ದಕ್ಷಿಣ ಅಮೆರಿಕಾದ ಮಾರುಕಟ್ಟೆಯಲ್ಲಿ ಮಾರಾಟವಾಗುವ ಜೀಪ್ ಕಮಾಂಡರ್‌ನೊಂದಿಗೆ ಹಲವಾರು ಸಾಮ್ಯತೆಯನ್ನು ಹೊಂದಿದೆ.
ಈ ಜೀಪ್ ಪ್ರೀಮಿಯಂ ಎಸ್‍ಯುವಿಯ ಮುಂಭಾಗವನ್ನು ಕಂಪಾಸ್‌ಗೆ ಹೋಲಿಸಿದರೆ ವಿಭಿನ್ನ ಸ್ಟೈಲಿಂಗ್ ಅಂಶಗಳೊಂದಿಗೆ ಇದು ಹೆಚ್ಚು ಮಸ್ಕ್ಲರ್ ಲುಕ್ ಅನ್ನು ಹೊಂದಿದೆ. ಈ ಎಸ್‍ಯುವಿಯ ಮುಂಭಾಗದ ಫಾಸಿಕ ವಿಶಿಷ್ಟವಾದ ಕ್ರೋಮ್ ಸ್ಲೇಟೆಡ್ ಫ್ರಂಟ್ ಗ್ರಿಲ್ ಅನ್ನು ಹೊಂದಿದೆ. ಇದರೊಂದಿಗೆ ಮಸ್ಕಲರ್ ಬಾನೆಟ್ ರಚನೆ, ಅಗಲವನ್ನು ಒಳಗೊಂಡ ದಪ್ಪ ಅಡ್ಡ ರೇಖೆಯೊಂದಿಗೆ ಸ್ಪೋರ್ಟಿ ಬಂಪರ್, ಅಗಲವಾದ ಸೆಂಟ್ರಲ್ ಏರ್ ಟೆಕ್ ಮತ್ತು ಬಾನೆಟ್‌ನ ಅಂಚಿನಲ್ಲಿ ಜೀಪ್ ಬ್ಯಾಡ್ಜ್ ಹೊಂದಿದೆ.
ಈ ಜೀಪ್ ಮೆರಿಡಿಯನ್ ಎಸ್‍ಯುವಿಯಲ್ಲಿ 2.0 ಲೀಟರ್ ನಾಲ್ಕು-ಸಿಲಿಂಡರ್ ಮಲ್ಟಿಜೆಟ್ II ಡೀಸೆಲ್ ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್ 168 ಬಿಹೆಚ್‍ಪಿ ಪವರ್ ಮತ್ತು 350 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ 6 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 9-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಜೋಡಿಸಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








