ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಜೀಪ್ ಎಸ್‍ಯುವಿ: ನಿಟ್ಟಿಸಿರು ಬಿಟ್ಟ ಟೊಯೊಟಾ ಫಾರ್ಚೂನರ್
ಅಮೆರಿಕ ಮೂಲದ ವಾಹನ ತಯಾರಕ ಕಂಪನಿಯಾದ ಜೀಪ್ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಫಾರ್ಚೂನರ್ ಎಸ್‍ಯುವಿಗೆ ಪೈಪೋಟಿಯಾಗಿ ಮೆರಿಡಿಯನ್ 7-ಸೀಟರ್ ಪ್ರೀಮಿಯಂ ಎಸ್‍ಯುವಿಯನ್ನು ಬಿಡುಗಡೆಗೊಳಿಸಿತು. ಇದೀಗ ಜೀಪ್ ಕಂಪನಿಯು ಈ ಜನಪ್ರಿಯ ಮೆರಿಡಿಯನ್ ಎಸ್‌ಯುವಿಯ ಬೆಲೆಯನ್ನು ಹೆಚ್ಚಿಸಿದೆ. ಇದರಿಂದ ಭಾರತದಲ್ಲಿ ಜೀಪ್ ಮೆರಿಡಿಯನ್ ಎಸ್‍ಯುವಿಯು ದುಬಾರಿಯಾಗಿದೆ.
ಜೀಪ್ ಮೆರಿಡಿಯನ್ ಎಸ್‍ಯುವಿಯ ಎಲ್ಲಾ ರೂಪಾಂತರಗಳ ಬೆಲೆಯನ್ನು ರೂ. 20,000 ವರೆಗೆ ಹೆಚ್ಚಿಸಲಾಗಿದೆ. ಇದೀಗ ಇದರ ಬೇಸ್ ಲಿಮಿಟೆಡ್ (O) 4x2MT ರೂಪಾಂತರದ ಬೆಲೆಯು ರೂ.33.60 ಲಕ್ಷವಾಗಿದ್ದು, ಟಾಪ್-ಎಂಡ್ ಓವರ್‌ಲ್ಯಾಂಡ್ 4x4 AT ರೂಪಾಂತರದ ಬೆಲೆಯು ರೂ.39.66 ಲಕ್ಷವಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ.

ಜೀಪ್ ಮೆರಿಡಿಯನ್ ಎಸ್‍ಯುವಿಯನ್ನು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ ಮತ್ತು ಕಂಪಾಸ್ ಆಧಾರಿತವಾದ ಫ್ಲಾಟ್ ಫಾರ್ಮ್ ಅನ್ನು ಹಂಚಿಕೊಳ್ಳುತ್ತದೆ. ಮೆರಿಡಿಯನ್ ತನ್ನ ಪ್ರತಿಸ್ಪರ್ಧಿಗಳಿಗೆ ತೀವ್ರ ಸ್ಪರ್ಧೆಯನ್ನು ನೀಡುತ್ತಿದೆ. ಜೀಪ್ ಮೆರಿಡಿಯನ್ (Jeep Meridian) ಜನಪ್ರಿಯ ಕಂಪಾಸ್ ಎಸ್‍ಯುವಿಯನ್ನು ಆಧರಿಸಿದೆ. ಜೀಪ್ ಮೆರಿಡಿಯನ್ ಮಾದರಿ ದಕ್ಷಿಣ ಅಮೆರಿಕಾದ ಮಾರುಕಟ್ಟೆಯಲ್ಲಿ ಮಾರಾಟವಾಗುವ ಜೀಪ್ ಕಮಾಂಡರ್‌ನೊಂದಿಗೆ ಹಲವಾರು ಸಾಮ್ಯತೆಯನ್ನು ಹೊಂದಿದೆ.
ಈ ಜೀಪ್ ಪ್ರೀಮಿಯಂ ಎಸ್‍ಯುವಿಯ ಮುಂಭಾಗವನ್ನು ಕಂಪಾಸ್‌ಗೆ ಹೋಲಿಸಿದರೆ ವಿಭಿನ್ನ ಸ್ಟೈಲಿಂಗ್ ಅಂಶಗಳೊಂದಿಗೆ ಇದು ಹೆಚ್ಚು ಮಸ್ಕ್ಲರ್ ಲುಕ್ ಅನ್ನು ಹೊಂದಿದೆ. ಈ ಎಸ್‍ಯುವಿಯ ಮುಂಭಾಗದ ಫಾಸಿಕ ವಿಶಿಷ್ಟವಾದ ಕ್ರೋಮ್ ಸ್ಲೇಟೆಡ್ ಫ್ರಂಟ್ ಗ್ರಿಲ್ ಅನ್ನು ಹೊಂದಿದೆ. ಇದರೊಂದಿಗೆ ಮಸ್ಕಲರ್ ಬಾನೆಟ್ ರಚನೆ, ಅಗಲವನ್ನು ಒಳಗೊಂಡ ದಪ್ಪ ಅಡ್ಡ ರೇಖೆಯೊಂದಿಗೆ ಸ್ಪೋರ್ಟಿ ಬಂಪರ್, ಅಗಲವಾದ ಸೆಂಟ್ರಲ್ ಏರ್ ಟೆಕ್ ಮತ್ತು ಬಾನೆಟ್‌ನ ಅಂಚಿನಲ್ಲಿ ಜೀಪ್ ಬ್ಯಾಡ್ಜ್ ಹೊಂದಿದೆ.

ಈ ಜೀಪ್ ಮೆರಿಡಿಯನ್ ಎಸ್‍ಯುವಿಯ ಇತರ ಸ್ಟೈಲಿಂಗ್ ಮುಖ್ಯಾಂಶಗಳು ಸ್ಕ್ವೇರ್-ಆಫ್ ವ್ಹೀಲ್ ಆರ್ಚ್‌ಗಳು, ಬ್ಲ್ಯಾಕ್ ಬಾಡಿ ಕ್ಲಾಡಿಂಗ್ ಮತ್ತು ಮುಂಭಾಗದ ಡೋರುಗಳು, ದೊಡ್ಡ ವಿಂಡೋಗಲು ಮತ್ತು ಪ್ರಮುಖ ರೂಫ್ ರೈಲ್ ಗಳ ಮೇಲೆ ಮೆರಿಡಿಯನ್ ಎಂದು ಬರೆದಿದೆ. ಜೀಪ್ ಮೆರಿಡಿಯನ್ ಎಸ್‍ಯುವಿಯಲ್ಲಿ ಸುತ್ತುವ ಎಲ್ಇಡಿ ಟೈಲ್ ಲ್ಯಾಂಪ್‌ಗಳನ್ನು ಮತ್ತು ನೇರವಾದ ಟೈಲ್‌ಗೇಟ್ ಅನ್ನು ಹೊಂದಿದೆ.
ಈ ಮೆರಿಡಿಯನ್ ಎಸ್‍ಯುವಿ ಸಿಂಗಲ್ ಮತ್ತು ಡ್ಯುಯಲ್ ಟೋನ್ ಬಣ್ಣಗಳಲ್ಲಿ ಲಭ್ಯವಿರಲಿದೆ. ಇನ್ನು ಜೀಪ್ ಕಂಪಾಸ್ ಎಸ್‍ಯುವಿಗೆ ಹೋಲಿಸಿದರೆ, ಹೊಸ ಮೂರು-ಸಾಲಿನ ಮೆರಿಡಿಯನ್ ಎಸ್‍ಯುವಿಯು ಸುಮಾರು 364 ಎಂಎಂ ಉದ್ದ, 41 ಎಂಎಂ ಅಗಲ ಮತ್ತು 42 ಎಂಎಂ ಎತ್ತರವನ್ನು ಹೊಂದಿದೆ. ಜೀಪ್ ಮೆರಿಡಿಯನ್ ಎಸ್‌ಯುವಿಯು 2794 ಎಂಎಂ ವೀಲ್‌ಬೇಸ್ ಅನ್ನು ಹೊಂದಿದೆ.
ಈ ಜೀಪ್ ಮೆರಿಡಿಯನ್ ಎಸ್‍ಯುವಿಯಲ್ಲಿ 2.0 ಲೀಟರ್ ನಾಲ್ಕು-ಸಿಲಿಂಡರ್ ಮಲ್ಟಿಜೆಟ್ II ಡೀಸೆಲ್ ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್ 168 ಬಿಹೆಚ್‍ಪಿ ಪವರ್ ಮತ್ತು 350 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ 6 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 9-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಜೋಡಿಸಲಾಗಿದೆ.
ಟ್ಯೂನ್ ಮಾಡಲಾದ ಎಂಜಿನ್‌ನಲ್ಲಿ ಕಂಪನಿಯು ಮೈಲ್ಡ್-ಹೈಬ್ರಿಡ್ ಸಿಸ್ಟಂ ಅನ್ನು ಜೋಡಣೆ ಮಾಡಿದ್ದು, ಫ್ರಂಟ್ ವ್ವೀಲ್ ಡ್ರೈವ್ ಮಾದರಿಯಲ್ಲಿ ಮ್ಯಾನುವಲ್ ಮತ್ತು ಆಟೋ ಮ್ಯಾಟಿಕ್ ಮಾದರಿಗಳಿದ್ದರೆ ಆಲ್ ವ್ಹೀಲ್ ಡ್ರೈವ್ ಮಾದರಿಯಲ್ಲಿ ಕೇವಲ ಆಟೋಮ್ಯಾಟಿಕ್ ಮಾದರಿಯನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಜೀಪ್ ಮೆರಿಡಿಯನ್ ಮೂಲತಃ ಕಂಪಾಸ್‌ನ 7-ಸೀಟರುಗಳ ಆವೃತ್ತಿಯಾಗಿದೆ, ಇದು ಈಗಾಗಲೇ ಕಮಾಂಡರ್ ಆಗಿ ಆಯ್ದ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟದಲ್ಲಿದೆ.
ಆದರೆ ಭಾರತದಲ್ಲಿ ಇಂಡಿಯಾ-ಸ್ಪೆಕ್ ಮಾದರಿಯನ್ನು 'ಮೆರಿಡಿಯನ್' ಹೆಸರನ್ನು ನೀಡಲಾಗಿದೆ, ಏಕೆಂದರೆ ಮಹೀಂದ್ರಾ ಕಂಪನಿಯು ಭಾರತದಲ್ಲಿ 'ಕಮಾಂಡರ್' ಟ್ರೇಡ್‌ಮಾರ್ಕ್ ಹೊಂದಿದೆ. ಇದರಿಂದ ಮೆರಿಡಿಯನ್ ಹೆಸರಿನಲ್ಲಿ ಭಾರತದಲ್ಲಿ ಬಿಡುಗಡೆಯಾಗಿದೆ. ಜೀಪ್ ಮೆರಿಡಿಯನ್ ಎಸ್‍ಯುವಿಯ ಒಳಭಾಗವು ಬ್ರೌನ್ ಥೀಮ್ ಅನ್ನು ಹೊಂದಿದ್ದು, 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದೆ.
ಇದು ಕನೆಕ್ಟ್ ಟೆಕ್ನಾಲಜಿಯೊಂದಿಗೆ ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ, ಆಲ್-ಡಿಜಿಟಲ್ ಇನ್ಸ್‌ಟ್ರೂಮೆಂಟ್ ಕನ್ಸೋಲ್, ಸನ್‌ರೂಫ್, ಲೆದರ್ ಅಪ್ಹೋಲ್ಸ್ಟರಿ, ಅಡ್ಜೆಸ್ಟ್ ಮಾಡಬಹುದಾದ ಹೆಡ್‌ರೆಸ್ಟ್‌ಗಳು, ಮೆಟಾಲಿಕ್ ಆಕ್ಸೆಂಟ್‌ಗಳೊಂದಿಗೆ ಲೇಯರ್ಡ್ ಡ್ಯಾಶ್‌ಬೋರ್ಡ್ ಹೊಂದಿದೆ. ಈ ಎಸ್‍ಯುವಿಯಲ್ಲಿ 8 ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, 360 ಡಿಗ್ರಿ ಕ್ಯಾಮೆರಾ, ಟ್ರಾಕ್ಷನ್ ಕಂಟ್ರೊಲ್, ಹಿಲ್ ಹೋಲ್ಡ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್ ಸೇರಿದಂತೆ 60ಕ್ಕೂ ಹೆಚ್ಚು ಸುರಕ್ಷಾ ಫೀಚರ್ಸ್ ನೀಡಲಾಗಿದೆ.


Click it and Unblock the Notifications








