7-ಸೀಟರ್ ಕಾರುಗಳಿಗೆ ಭಾರೀ ಬೇಡಿಕೆ: ಜೀಪ್ ಮೆರಿಡಿಯನ್ ಎಕ್ಸ್ ಸ್ಪೆಷಲ್ ಎಡಿಷನ್ ಬಿಡುಗಡೆ
ಜನಪ್ರಿಯ ಕಾರು ತಯಾರಕ ಕಂಪನಿಯಾದ ಜೀಪ್ ಇಂಡಿಯಾ ತನ್ನ ಹೊಸ ಮೆರಿಡಿಯನ್ ಎಕ್ಸ್ ಸ್ಪೆಷಲ್ ಎಡಿಷನ್ ಅನ್ನು ಬಿಡುಗಡೆಗೊಳಿಸಿದೆ. ಈ ಹೊಸ ಜೀಪ್ ಮೆರಿಡಿಯನ್ ಎಕ್ಸ್ ಸ್ಪೆಷಲ್ ಎಡಿಷನ್ (Jeep Meridian X Special Edition) ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.34.27 ಲಕ್ಷವಾಗಿದೆ. ಈ ಹೊಸ ಜೀಪ್ ಮೆರಿಡಿಯನ್ ಎಕ್ಸ್ ಸ್ಪೆಷಲ್ ಎಡಿಷನ್ ಮಾದರಿಯು ಮೂರು-ಸಾಲು ಎಸ್‌ಯುವಿಗೆ ವಿಶೇಷ ಸ್ಟೈಲಿಂಗ್ ಅಪ್‌ಗ್ರೇಡ್‌ಗಳು ಮತ್ತು ಅಕ್ಸೆಸರಿಸ್ ನೊಂದಿಗೆ ಬಂದಿದೆ. ಈ ಹೊಸ ಸ್ಪೆಷಲ್ ಎಡಿಷನ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಹೊಸ ಜೀಪ್ ಮೆರಿಡಿಯನ್ ಎಕ್ಸ್ ಸ್ಪೆಷಲ್ ಎಡಿಷನ್ ಹೊರಭಾಗವು ಹೊಸ ಗ್ರೇ ಬಣ್ಣದ ಲೋವರ್‌ಗಳು, ಗ್ರೇ ರೂಫ್ ಮತ್ತು ಗ್ರೇ ಪಾಕೆಟ್‌ಗಳೊಂದಿಗೆ ಅಲಾಯ್ ವ್ಹೀಲ್ ಗಳನ್ನು ಒಳಗೊಂಡಿದೆ. ಇನ್ನು ಈ ಹೊಸ ಸ್ಪೆಷಲ್ ಎಡಿಷನ್ ಮಾದರಿಯ ಒಳಭಾಗದಲ್ಲಿ ಹೊಸ ಸೈಡ್ ಮೋಲ್ಡಿಂಗ್, ಪ್ರೊಗ್ರಾಮೆಬಲ್ ಆಂಬಿಯೆಂಟ್ ಲೈಟಿಂಗ್, ಸನ್ ಶೇಡ್‌ಗಳು, ಏರ್ ಪ್ಯೂರಿಫೈಯರ್ ಮತ್ತು ಡ್ಯಾಶ್ ಕ್ಯಾಮ್ ಅನ್ನು ನೀಡುತ್ತದೆ.

ಇದು ಪ್ರೀಮಿಯಂ ಕಾರ್ಪೆಟ್ ಮ್ಯಾಟ್ಸ್ ಮತ್ತು ಆಯ್ಕೆಯ ಹಿಂಬದಿ-ಸೀಟಿನ ಮನರಂಜನಾ ಪ್ಯಾಕೇಜ್ ಅನ್ನು ಸಹ ಒಳಗೊಂಡಿದೆ. ಈ ಜೀಪ್ ಮೆರಿಡಿಯನ್ ಎಕ್ಸ್ ಸ್ಪೆಷಲ್ ಎಡಿಷನ್ ಮಾದರಿಯು 2.0-ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಜೀಪ್ ಮಾದರಿಯು 10.8 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಜೀಪ್ ಎಸ್‍ಯುವಿಯು 198 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.
ಈ ಸ್ಪೆಷಲ್ ಎಡಿಷನ್ ಮಾದರಿಯಲ್ಲಿ ಯಾವುದೇ ಯಾಂತ್ರಿಕ ನವೀಕರಣಗಳಿಲ್ಲ. ಈ ಜೀಪ್ ಮೆರಿಡಿಯನ್ ಎಸ್‍ಯುವಿಯಲ್ಲಿರುವ 2.0 ಲೀಟರ್ ನಾಲ್ಕು-ಸಿಲಿಂಡರ್ ಮಲ್ಟಿಜೆಟ್ II ಡೀಸೆಲ್ ಎಂಜಿನ್168 ಬಿಹೆಚ್‍ಪಿ ಪವರ್ ಮತ್ತು 350 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ 6 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 9-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಜೋಡಿಸಲಾಗಿದೆ.

ಟ್ಯೂನ್ ಮಾಡಲಾದ ಎಂಜಿನ್‌ನಲ್ಲಿ ಕಂಪನಿಯು ಮೈಲ್ಡ್-ಹೈಬ್ರಿಡ್ ಸಿಸ್ಟಂ ಅನ್ನು ಜೋಡಣೆ ಮಾಡಿದ್ದು, ಫ್ರಂಟ್ ವ್ವೀಲ್ ಡ್ರೈವ್ ಮಾದರಿಯಲ್ಲಿ ಮ್ಯಾನುವಲ್ ಮತ್ತು ಆಟೋ ಮ್ಯಾಟಿಕ್ ಮಾದರಿಗಳಿದ್ದರೆ ಆಲ್ ವ್ಹೀಲ್ ಡ್ರೈವ್ ಮಾದರಿಯಲ್ಲಿ ಕೇವಲ ಆಟೋಮ್ಯಾಟಿಕ್ ಮಾದರಿಯನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಜೀಪ್ ಮೆರಿಡಿಯನ್ ಮೂಲತಃ ಕಂಪಾಸ್‌ನ 7-ಸೀಟರುಗಳ ಆವೃತ್ತಿಯಾಗಿದೆ, ಇದು ಈಗಾಗಲೇ ಕಮಾಂಡರ್ ಆಗಿ ಆಯ್ದ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟದಲ್ಲಿದೆ.
ಜೀಪ್ ಮೆರಿಡಿಯನ್ ಎಸ್‍ಯುವಿಯನ್ನು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ ಮತ್ತು ಕಂಪಾಸ್ ಆಧಾರಿತವಾದ ಫ್ಲಾಟ್ ಫಾರ್ಮ್ ಅನ್ನು ಹಂಚಿಕೊಳ್ಳುತ್ತದೆ. ಮೆರಿಡಿಯನ್ ತನ್ನ ಪ್ರತಿಸ್ಪರ್ಧಿಗಳಿಗೆ ತೀವ್ರ ಸ್ಪರ್ಧೆಯನ್ನು ನೀಡುತ್ತಿದೆ. ಜೀಪ್ ಮೆರಿಡಿಯನ್ (Jeep Meridian) ಜನಪ್ರಿಯ ಕಂಪಾಸ್ ಎಸ್‍ಯುವಿಯನ್ನು ಆಧರಿಸಿದೆ. ಜೀಪ್ ಮೆರಿಡಿಯನ್ ಮಾದರಿ ದಕ್ಷಿಣ ಅಮೆರಿಕಾದ ಮಾರುಕಟ್ಟೆಯಲ್ಲಿ ಮಾರಾಟವಾಗುವ ಜೀಪ್ ಕಮಾಂಡರ್‌ನೊಂದಿಗೆ ಹಲವಾರು ಸಾಮ್ಯತೆಯನ್ನು ಹೊಂದಿದೆ.
ಜೀಪ್ ಪ್ರೀಮಿಯಂ ಎಸ್‍ಯುವಿಯ ಮುಂಭಾಗವನ್ನು ಕಂಪಾಸ್‌ಗೆ ಹೋಲಿಸಿದರೆ ವಿಭಿನ್ನ ಸ್ಟೈಲಿಂಗ್ ಅಂಶಗಳೊಂದಿಗೆ ಇದು ಹೆಚ್ಚು ಮಸ್ಕ್ಲರ್ ಲುಕ್ ಅನ್ನು ಹೊಂದಿದೆ. ಈ ಎಸ್‍ಯುವಿಯ ಮುಂಭಾಗದ ಫಾಸಿಕ ವಿಶಿಷ್ಟವಾದ ಕ್ರೋಮ್ ಸ್ಲೇಟೆಡ್ ಫ್ರಂಟ್ ಗ್ರಿಲ್ ಅನ್ನು ಹೊಂದಿದೆ. ಇದರೊಂದಿಗೆ ಮಸ್ಕಲರ್ ಬಾನೆಟ್ ರಚನೆ, ಅಗಲವನ್ನು ಒಳಗೊಂಡ ದಪ್ಪ ಅಡ್ಡ ರೇಖೆಯೊಂದಿಗೆ ಸ್ಪೋರ್ಟಿ ಬಂಪರ್, ಅಗಲವಾದ ಸೆಂಟ್ರಲ್ ಏರ್ ಟೆಕ್ ಮತ್ತು ಬಾನೆಟ್‌ನ ಅಂಚಿನಲ್ಲಿ ಜೀಪ್ ಬ್ಯಾಡ್ಜ್ ಹೊಂದಿದೆ.
ಇದರೊಂದಿಗೆ ಸ್ಕ್ವೇರ್-ಆಫ್ ವ್ಹೀಲ್ ಆರ್ಚ್‌ಗಳು, ಬ್ಲ್ಯಾಕ್ ಬಾಡಿ ಕ್ಲಾಡಿಂಗ್ ಮತ್ತು ಮುಂಭಾಗದ ಡೋರುಗಳು, ದೊಡ್ಡ ವಿಂಡೋಗಳು, ಎಲ್ಇಡಿ ಟೈಲ್ ಲ್ಯಾಂಪ್‌ಗಳನ್ನು ಮತ್ತು ನೇರವಾದ ಟೈಲ್‌ಗೇಟ್ ಅನ್ನು ಹೊಂದಿದೆ. ಈ ಮೂರು-ಸಾಲಿನ ಮೆರಿಡಿಯನ್ ಎಸ್‍ಯುವಿಯು ಸುಮಾರು 364 ಎಂಎಂ ಉದ್ದ, 41 ಎಂಎಂ ಅಗಲ ಮತ್ತು 42 ಎಂಎಂ ಎತ್ತರವನ್ನು ಹೊಂದಿದೆ. ಜೀಪ್ ಮೆರಿಡಿಯನ್ ಎಸ್‌ಯುವಿಯು 2794 ಎಂಎಂ ವೀಲ್‌ಬೇಸ್ ಅನ್ನು ಹೊಂದಿದೆ.


Click it and Unblock the Notifications








