ಚಿನ್ನದಂತಹ ಬಹುಕೋಟಿ ಬೆಲೆಯ ರೋಲ್ಸ್‌ರಾಯ್ಸ್‌ ಖರೀದಿಸಿದ ಚಿನ್ನದ ಅಂಗಡಿ ಮಾಲೀಕ!

ರೋಲ್ಸ್‌ ರಾಯ್ಸ್‌ ಕಾರುಗಳೆಂದರೆ ಐಷಾರಾಮಿಯ ತುತ್ತ ತುದಿ ಎಂದರೆ ತಪ್ಪಾಗಲಾರದು. ಪ್ರತಿಯೊಬ್ಬ ಮಿಲಿಯೇನರ್‌ ಸಹ ಒಂದಲ್ಲಾ ಒಂದು ದಿನ ರೋಲ್ಸ್‌ ರೋಯ್ಸ್‌ನ ಯಾವುದಾದರು ಒಂದು ಕಾರನ್ನು ಕೊಳ್ಳಬೇಕು ಎಂಬ ಕನಸನ್ನು ಕಂಡೇ ಇರುತ್ತಾನೆ. ಈ ಸಾಲಿಗೆ ಇದೀಗ ಮತ್ತೊಂದು ಹೆಸರು ಸೇರ್ಪಡೆಯಾಗಿದೆ.

ಪ್ರಸಿದ್ದ ಚಿನ್ನದ ವ್ಯಾಪಾರ ಮಳಿಗೆಯಾದ ಜಾಯ್‌ ಆಲುಕಾಸ್‌ ಬಹುತೇಕ ಜನರಿಗೆ ಗೊತ್ತಿರುತ್ತದೆ. ಶ್ರೀಮಂತ ವರ್ಗದ ಜನ ಮದುವೆ ಮತ್ತು ಇತರ ಸಮಾರಂಭಗಳಿಗೆ ಚಿನ್ನವನ್ನು ಖರೀದಿಸಲು ಒಮ್ಮೆಯಾದರೂ ಅಲ್ಲಿಗೆ ಭೇಟಿ ನೀಡಿರುತ್ತಾರೆ. ದೇಶದ ನಾನಾ ಕಡೆಗಳಲ್ಲಿ ಜಾಯ್‌ ಆಲುಕಾಸ್‌ ಚಿನ್ನದ ಮಳಿಗೆಗಳಿದ್ದು, ವ್ಯಾಪಾರವನ್ನು ನಡೆಸುತ್ತಿದೆ. ಅಷ್ಟೇ ಯಾಕೆ, ಹೊರ ದೇಶದಲ್ಲಿಯೂ ಜಾಯ್‌ ಆಲುಕಾಸ್‌ ಚಿನ್ನಾಭರಣಗಳ ಅಂಗಡಿಗಳಿದೆ.

Joy Alukkas Owner Brought New Rolls Royce Cullinan Luxury SUV

ಅಷ್ಟರ ಮಟ್ಟಿಗೆ ಜಾಯ್ ಆಲುಕಾಸ್‌ ಅಂಗಡಿಗಳು ಜನಪ್ರಿಯವಾಗಿದೆ. ಇದೀಗ ಜಾಯ್‌ ಆಲುಕಾಸ್ ಅಂಗಡಿ ಮಾಲೀಕ ಹೊಸ ರೋಲ್ಸ್‌ರಾಯ್ಸ್‌ ಕಾರೊಂದನ್ನು ಖರೀದಿ ಮಾಡಿದ್ದು, ಸುದ್ದಿಯಾಗುತ್ತಿದೆ. ಜೋಯ್‌ ಆಲುಕ್ಕಾಸ್‌ ಗ್ರೂಪ್‌ ನ ಮ್ಯಾನೆಜಿಂಗ್‌ ಡೈರೆಕ್ಟರ್‌ ಆಗಿರುವ ಮಿಸ್ಟರ್‌ ಜಾಯ್‌ ಆಲುಕ್ಕಾಸ್‌ ಹೊಸ ರೋಲ್ಸ್‌ ರಾಯ್ಸ್‌ ಕಲಿನನ್‌ ಕಾರು ಖರೀದಿಸಿದ್ದಾರೆ. ರೋಲ್ಸ್‌ರಾಯ್ಸ್‌ ಕಾರುಗಳಲ್ಲಿನ ಏಕೈಕ ಎಸ್‌ಯುವಿ ಆಗಿರುವ ಕಲಿನನ್‌ ಹಲವರ ನೆಚ್ಚಿನ ಕಾರಾಗಿದೆ.

ಜಾಯ್‌ ಆಲುಕ್ಕಾಸ್ ಖರೀದಿಸಿರುವ ರೋಲ್ಸ್‌ ರಾಯ್ಸ್‌ ಕಲಿನನ್‌ (Rolls Royce Cullinan) ಬಗ್ಗೆ ನೊಡುವುದಾದರೆ ಈ ಕಾರಿನಲ್ಲಿ 6.75-ಲೀಟರ್ ಟ್ವಿನ್-ಟರ್ಬೊ V12 ಎಂಜಿನ್‌ ಸಿಗುತ್ತದೆ. ಈ ಎಂಜಿನ್‌ ಸಹಾಯದಿಂದ ಈ ಕಾರು ಸುಮಾರು 69 bhp ಮತ್ತು 850 Nm ಪೀಕ್‌ ಟಾರ್ಕ್‌ ಅನ್ನು ಉತ್ಪಾದಿಸುತ್ತದೆ. ಇತರ ರೋಲ್ಸ್‌ ರಾಯ್ಸ್‌ ಕಾರು ಮಾದರಿಗಳಂತೆ ಈ ಕಾರು ಸಹ ಪ್ರಯಾಣಿಕರಿಗೆ ಶ್ರೇಷ್ಟ ದರ್ಜೆಯ ಕಂಫರ್ಟ್‌ ಅನ್ನು ನೀಡುತ್ತದೆ.

ಇಲ್ಲಿ ಕಂಡುಬರುವ ಸಾಮಾನ್ಯ ಕಲಿನನ್ ಬೆಲೆ ಎಕ್ಸ್ ಶೊರೂಂ ಪ್ರಕಾರ 6.95 ಕೋಟಿ ರೂ.ಗಳಿಂದ ಆರಂಭವಾಗುತ್ತದೆ. ಇದರಲ್ಲಿ ಮತ್ತೊಂದು ಮಾದರಿಯಿದ್ದು ಅದನ್ನು ಬ್ಲಾಕ್‌ ಬ್ಯಾಡ್ಜ್‌ ಎಂದು ಕರೆಯುತ್ತಾರೆ. ರೋಲ್ಸ್ ರಾಯ್ಸ್ ಕಲಿನನ್ ಬ್ಲ್ಯಾಕ್ ಬ್ಯಾಡ್ಜ್ ಹೆಚ್ಚು ದುಬಾರಿಯಾಗಿದೆ. ಬ್ಲ್ಯಾಕ್ ಬ್ಯಾಡ್ಜ್‌ನ ಬೆಲೆ ಸುಮಾರು ಎಕ್ಸ್ ಶೋರೂಂ ಪ್ರಕಾರ 10 ಕೋಟಿ ರೂ. ಸಾಮಾನ್ಯ ಆವೃತ್ತಿಯಂತೆಯೇ ಅದೇ ಎಂಜಿನ್‌ನಿಂದ ಚಾಲಿತವಾಗಿದೆ, ಆದರೆ ಹೆಚ್ಚಿನ ಪವರ್, ಟಾರ್ಕ್ ಉತ್ಪಾದಿಸಲು ಇದನ್ನು ಟ್ಯೂನ್ ಮಾಡಲಾಗಿದೆ.

ಬ್ಲ್ಯಾಕ್ ಬ್ಯಾಡ್ಜ್ ಕಲಿನನ್ ಸಾಮಾನ್ಯ ಕಲ್ಲಿನನ್‌ಗಿಂತ 29 PS ಮತ್ತು 50 Nm ಹೆಚ್ಚು ಶಕ್ತಿ ಮತ್ತು ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಭಾರತದ ಶ್ರೀಮಂತ ಕುಟುಂಬ, ಅಂಬಾನಿಗಳು, ಇತರ ರೋಲ್ಸ್-ರಾಯ್ಸ್ ಐಷಾರಾಮಿ ಸೆಡಾನ್‌ಗಳ ಜೊತೆಗೆ ಇತ್ತೀಚೆಗೆ ಖರೀದಿಸಿದ ಬ್ಲ್ಯಾಕ್ ಬ್ಯಾಡ್ಜ್ ಸೇರಿದಂತೆ ಕನಿಷ್ಠ 4 ರೋಲ್ಸ್ ರಾಯ್ಸ್ ಕಲ್ಲಿನಾನ್‌ಗಳನ್ನು ಹೊಂದಿದ್ದಾರೆ. ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಪ್ರಸ್ತುತ ರೋಲ್ಸ್ ರಾಯ್ಸ್ ಕಲಿನನ್ ಕಪ್ಪು ಬ್ಯಾಡ್ಜ್ ಹೊಂದಿರುವ ದೇಶದ ಏಕೈಕ ನಟ.

Joy Alukkas Owner Brought New Rolls Royce Cullinan Luxury SUV

ಕೆಲವು ವಾರಗಳ ಹಿಂದೆ ಕಲ್ಯಾಣ್‌ ಜ್ಯುವೆಲ್ಲರ್ಸ್‌ ಮಾಲೀಕ ಒಂದು ಬ್ಲ್ಯಾಕ್ ಬ್ಯಾಡ್ಜ್ ಮತ್ತು ಎರಡು ಸಾಮಾನ್ಯ ರೋಲ್ಸ್ ರಾಯ್ಸ್ ಕೂಲಿನನ್ ಎಸ್‌ಯುವಿಗಳನ್ನು ಖರೀದಿಸಿದ್ದರು. ಕೇರಳದಲ್ಲಿ ಅದ್ಧೂರಿ ಕಾರುಗಳನ್ನು ಖರೀದಿ ಮಾಡಿರುವುದು ಇದೇ ಮೊದಲು ಅಲ್ಲ. ಎಮ್‌ಎ ಯೂಸುಫ್ ಅಲಿಯಂತಹ ವ್ಯಾಪಾರಿಗಳು ಕೂಡ ಈ ಕಾರುಗಳನ್ನು ಹೊಂದಿದ್ದಾರೆ. ರೋಲ್ಸ್ ರಾಯ್ಸ್ ಕೂಲ್ಲಿನನ್ ಬ್ಲ್ಯಾಕ್ ಬ್ಯಾಡ್ಜ್ ಅನ್ನು ಮ್ಯಾಗ್ಮಾ ರೆಡ್ ಶೇಡ್‌ನಲ್ಲಿ ಪೂರ್ಣಗೊಳಿಸಿದರೆ, ಸಾಮಾನ್ಯವಾದವುಗಳನ್ನು ಮಿಡ್‌ನೈಟ್ ಸಫೈರ್ ಮತ್ತು ಡೈಮಂಡ್ ಬ್ಲ್ಯಾಕ್ ಶೇಡ್ ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, March 20, 2024, 17:55 [IST]
English summary
Joy alukkas owner brought new rolls royce cullinan luxury suv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+