ಎಂಜಿ ಜೊತೆ ಸೇರಿ ಜಿಂದಾಲ್‌ ರಣತಂತ್ರ: ಹಣ ಪಾವತಿಸದೆ ಮನೆಗೆ ತನ್ನಿ ಹೊಸ ಕಾರು

ಪ್ರತಿಯೊಬ್ಬರಿಗೂ ಜೀವನದಲ್ಲಿ ಹೊಸ ಕಾರು ಖರೀದಿಸಬೇಕೆಂಬ ಆಸೆಯಿರುತ್ತದೆ. ಆದರೆ, ಕುಟುಂಬದ ಆರ್ಥಿಕ ಪರಿಸ್ಥಿತಿಯಿಂದ ಎಷ್ಟೋ ಮಂದಿ ಹೊಸ ಕಾರು ಕೊಂಡುಕೊಳ್ಳಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಇಎಂಐಯಲ್ಲಿ ಕಾರನ್ನು ಖರೀದಿಸುವ ಆಯ್ಕೆಯನ್ನು ಮಾಡಿಕೊಳ್ಳುತ್ತಾರೆ. ಈಗ ಇಎಂಐ ಮೂಲಕ ಕಾರು ಕಾರು ಖರೀದಿಸುವುದು ಸುಲಭವಾದರೂ ಡೌನ್ ಪೇಮೆಂಟ್ ಮಾಡುವುದು ಸಾವಲು ಆಗಿದೆ. ಆದರೆ ಎಂಜಿ ಮೋಟಾರ್ (MG Motor) ಅಂತಹವರಿಗೆ ಖುಷಿಯ ಸುದ್ದಿಯನ್ನು ನೀಡಿದೆ. ಎಂಜಿ ಕಂಪನಿಯು ತನ್ನ ವರ್ಷಾಂತ್ಯದ ಕೊಡುಗೆಗಳ ಭಾಗವಾಗಿ ಜೀರೊ ಡೌನ್ ಪೇಮೆಂಟ್ ಯೋಜನೆಯನ್ನು ಪರಿಚಯಿಸಿದೆ.

ಎಂಜಿ ಮೋಟಾರ್ ಇಂಡಿಯಾ ಕಂಪನಿಯು ಜೀರೊ ಡೌನ್ ಪೇಮೆಂಟ್ ಪ್ರಯೋಜನವು ಆಸ್ಟರ್ ಮತ್ತು ಹೆಕ್ಟರ್ ಎಂಬ ಎಸ್‍ಯುವಿಗಳಿಗೆ ಮಾತ್ರ ಅನ್ವಯಿಸುತ್ತದೆ. 2024ರ ಡಿಸೆಂಬರ್ 31ರವರೆಗೆ ಮಾನ್ಯವಾಗಿರುವ ಸೀಮಿತ ಸಮಯದ ಕೊಡುಗೆಯಾಗಿದೆ. ಖರೀದಿದಾರರಿಗೆ ಈ ವಾಹನಗಳ ಸಂಪೂರ್ಣ ಆನ್-ರೋಡ್ ಮೊತ್ತವನ್ನು ಪಾವತಿಸಲು ಅನುಮತಿಸುತ್ತದ. ಕಂಪನಿಯ ಬ್ರ್ಯಾಂಡ್‌ನ ಪ್ರಮಾಣೀಕೃತ ಹಣಕಾಸು ಪಾಲುದಾರರ ಮೂಲಕ ಹಲವಾರು ಹಣಕಾಸಿನ ಪ್ರಯೋಜನಗಳನ್ನು ನೀಡುತ್ತಿದೆ.

MG Motor

ಈ ಯೋಜನೆಯಡಿಯಲ್ಲಿ, 7 ವರ್ಷಗಳವರೆಗಿನ ಸಾಲ ಮರುಪಾವತಿ ಅವಧಿ ಮತ್ತು ಬಿಡಿಭಾಗಗಳಿಗೆ ನಿಧಿಯಂತಹ ಹೆಚ್ಚುವರಿ ಪ್ರಯೋಜನಗಳು, ವಿಸ್ತೃತ ವಾರಂಟಿ ಮತ್ತು ವಾರ್ಷಿಕ ನಿರ್ವಹಣೆ ಒಪ್ಪಂದ (AMC) ಒಳಗೊಂಡಿರುವುದು ಗಮನಿಸಬೇಕಾದ ಅಂಶವಾಗಿದೆ. ಅಲ್ಲದೆ, ವಾಹನ ಖರೀದಿದಾರರು ಸಂಸ್ಕರಣಾ ಶುಲ್ಕದ ಮೇಲೆ ರಿಯಾಯಿತಿಯನ್ನು ಸಹ ಪಡೆಯುತ್ತಾರೆ. ವಿಂಡ್ಸರ್ ಇವಿ ನಂತರ ಹೆಕ್ಟರ್ ಪ್ರಸ್ತುತ ಎಂಜಿಯ ಅತ್ಯುತ್ತಮ-ಮಾರಾಟದ ಮಾದರಿಯಾಗಿದೆ.

ಎಂಜಿ ಮೋಟಾರ್ ಇಂಡಿಯಾದ ಎಂಜಿ ಆಸ್ಟರ್ ಎಸ್‍ಯುವಿಯ ಬಗ್ಗೆ ಹೇಳುವುದಾದರೆ, ಇದು ಸ್ಪ್ರಿಂಟ್, ಶೈನ್, ಸೆಲೆಕ್ಟ್, ಶಾರ್ಪ್ ಪ್ರೊ ಮತ್ತು ಸ್ಯಾವಿ ಪ್ರೊ ಎಂಬ ರೂಪಾಂತರಗಳಲ್ಲಿ ಲಭ್ಯವಿರುತ್ತದೆ. ಇನ್ನು ಈ ಎಸ್‍ಯುವಿಯು ಬ್ಲ್ಯಾಕ್ ಕ್ಯಾಂಡಿ ವೈಟ್, ಗ್ಲೇಜ್ ರೆಡ್, ಅರೋರಾ ಸಿಲ್ವರ್, ಹವಾನಾ ಗ್ರೇ ಮತ್ತು ಕ್ಯಾಂಡಿ ವೈಟ್ ಜೊತೆಗೆ ಸ್ಟಾರ್ರಿ ಬ್ಲ್ಯಾಕ್ ರೂಫ್‌ನಂತಹ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ.

MG Motor

ಎಂಜಿ ಆಸ್ಟರ್ ಎಸ್‍ಯುವಿಯ ಮಾದರಿಯು ಆಕರ್ಷಕ ಬೆಲೆ ಮತ್ತು ಅತ್ಯಾಧುನಿಕ ಫೀಚರ್ಸ್ ಗಳನ್ನು ಹೊಂದಿವೆ. ಈ ಎಂಜಿ ಆಸ್ಟರ್ ಎಸ್‍ಯುವಿ 1.5 ಲೀಟರ್ ನ್ಯಾಚುರಲ್ ಆಸ್ಪೈರರ್ಡ್ ಎಂಜಿನ್ ಒಳಗೊಂಡಿರುತ್ತವೆ. ಇದು 110 PS ಪವರ್ ಮತ್ತು 144 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹೆಚ್ಚುವರಿಯಾಗಿ, 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 1.3 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಪ್ರತ್ಯೇಕವಾಗಿ Savvy Pro ಟ್ರಿಮ್‌ಗಾಗಿ ಕಾಯ್ದಿರಿಸಲಾಗಿದೆ.

ಎಂಜಿ ಆಸ್ಟರ್ ಆಟೋ IRVM ಮತ್ತು ವೆಂಟಿಲೇಟೆಡ್ ಸೀಟ್‌ಗಳನ್ನು ಒಳಗೊಂಡಂತೆ ಹಲವಾರು ವೈಶಿಷ್ಟ್ಯಗಳ ನವೀಕರಣಗಳನ್ನು ಹೊಂದಿದೆ. ಇದು Savvy Pro ಟ್ರಿಮ್‌ಗಾಗಿ ಪ್ರತ್ಯೇಕವಾಗಿ ಲಭ್ಯವಿದೆ. ಸೆಲೆಕ್ಟ್ ಟ್ರಿಮ್‌ನಿಂದ ಪ್ರಾರಂಭಿಸಿ, ಈ ಎಸ್‍ಯುವಿ i-Smart 2.0 ಸಂಪರ್ಕಿತ ತಂತ್ರಜ್ಞಾನ, ವೈರ್‌ಲೆಸ್ ಸ್ಮಾರ್ಟ್‌ಫೋನ್ ಸಂಪರ್ಕ, ಪನರೊಮಿಕ್ ಸನ್‌ರೂಫ್ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್ ಅನ್ನು ನೀಡುತ್ತದೆ.

MG Motor

ಇನ್ನು ಎಂಜಿ ಹೆಕ್ಟರ್ ಎಸ್‍ಯುವಿಯಲ್ಲಿ ಬಗ್ಗೆ ಹೇಳುವುದಾದರೆ, ಇದರಲ್ಲಿ 1.5 ಲೀಟರ್ ಟಬೋಜಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 143 ಬಿಹೆಚ್‍‍ಪಿ ಪವರ್ ಮತ್ತು 250 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ 6-ಸ್ಪೀಡ್ ಮ್ಯಾನುವಲ್ ಮತ್ತು ಸಿವಿಟಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅಳವಡಿಸಲಾಗಿದೆ.

ಇನ್ನು ಈ ಎಸ್‍ಯುವಿಯಲ್ಲಿ 2.0 ಲೀಟರ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. 2.0-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿಯೂ ದೊರೆಯಲಿದ್ದು, 168 ಪಿಎಸ್ ಮತ್ತು 350 ಎನ್ಎಂ ಪೀಕ್ ಟಾರ್ಕ್ ಮಾತ್ರ ಹೊರಹಾಕುತ್ತದೆ. 6-ಸ್ಪೀಡ್ ಮ್ಯಾನುವಲ್‌ ಗೇರ್ ಬಾಕ್ಸ್ ನೊಂದಿಗೆ ಸಿಗುತ್ತದೆ. ಇದು ಕೂಡ 15.58 ಕೆಎಂಪಿಎಲ್ ಮೈಲೇಜ್ ನೀಡಬಹುದು ಎಂದು ಅಂದಾಜಿಸಲಾಗಿದೆ

ಈ ಎಂಜಿ ಹೆಕ್ಟರ್ ಎಸ್‌ಯುವಿ ಆಕರ್ಷಕ ಫಾಗ್ ಲ್ಯಾಂಪ್‌ ಅನ್ನು ಒಳಗೊಂಡಿದ್ದು, 18-ಇಂಚಿನ ಡ್ಯುಯಲ್-ಟೋನ್ ಅಲಾಯ್ ವೀಲ್ ಗಳನ್ನು ಹೊಂದಿದೆ. ಈ ಹೊಸ ಎಸ್‍ಯುವಿಯು ಪ್ಲಾಸ್ಟಿಕ್ ಕವರ್ಡ್ ಹಾಗೂ ಸ್ಕ್ವೇರ್-ಆಫ್ ವೀಲರ್ಚ್‌ನೊಳಗೆ ಸುತ್ತುವರಿದಿದೆ. ಈ ಎಸ್‍ಯುವಿಯ ವಿನ್ಯಾಸದ ವಿಷಯದಲ್ಲಿ ಇತರೆ ದೊಡ್ಡ ಬದಲಾವಣೆ ಎಂದರೆ, ಎಸ್‍ಯುವಿಯ ಹಿಂಭಾಗದಲ್ಲಿ ಮರುವಿನ್ಯಾಸಗೊಳಿಸಲಾದ ಟೈಲ್‌ಲೈಟ್‌ ಇದೆ. ಒಳಭಾಗ ಡ್ಯುಯಲ್-ಟೋನ್ ಥೀಮ್ ಅನ್ನು ಹೊಂದಿದ್ದು, ಇದು ಎಸ್‍ಯುವಿಯ ಒಳಭಾಗಕ್ಕೆ ಪ್ರೀಮಿಯಂ ಲುಕ್ ಅನ್ನು ನೀಡುತ್ತದೆ.

More from DriveSpark

Article Published On: Thursday, December 26, 2024, 19:06 [IST]
English summary
Jsw mg motor india zero down payment astor hector suvs details
Read more on mg motor india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+