ಅದ್ಬುತ ಸನ್‌ರೂಫ್.. ಹೊಸ ಕಾರಿನ ಟೀಸರ್ ಬಿಡುಗಡೆ.. ಸೆ.11 ಕ್ಕೆ ಪಾದಾರ್ಪಣೆ, ವಿಶೇಷತೆಗಳೇನು?
JSW MG ಮೋಟಾರ್ ತನ್ನ ಮುಂಬರುವ ಎಲೆಕ್ಟ್ರಿಕ್ ಕಾರಾದ ವಿಂಡ್ಸರ್ EV ಯ ಹೊಸ ಟೀಸರ್ ಅನ್ನು ಬಿಡುಗಡೆ ಮಾಡಿದೆ. ಈ ವೀಡಿಯೊದಲ್ಲಿ 'ಇನ್ಫಿನಿಟಿ ಗ್ಲಾಸ್ ರೂಫ್' ಅನ್ನು ತೋರಿಸಲಾಗಿದೆ. ಈ ಕಾರು ಪ್ರೀಮಿಯಂ ಇಂಟೀರಿಯರ್ ಹಾಗೂ ಆಕರ್ಷಕ ಬಾಹ್ಯ ಡಿಸೈನ್ ಹೊಂದಿರುವುದಾಗಿ ಹೇಳಿದ್ದ ಎಂಜಿ ಮೋಟಾರ್, ಇದೀಗ ಅದ್ಭುತ ಪನಾರಮಿಕ್ ಸನ್‌ರೂಫ್ ಅನ್ನು ತೋರಿಸುವ ಮೂಲಕ ನಿರೀಕ್ಷೆಗಳನ್ನು ಹೆಚ್ಚಿಸಿದೆ. ಹೊಸ MG ವಿಂಡ್ಸರ್, ಭಾರತದ ಮೊದಲ ಇಂಟೆಲಿಜೆಂಟ್ ಕ್ರಾಸ್ಒವರ್ ಯುಟಿಲಿಟಿ ವೆಹಿಕಲ್ [CUV] ಎಂದು ಸಹ ಕಂಪನಿ ಹೇಳಿದೆ.
ಇದರ ವಿಸ್ತಾರವಾದ ಗ್ಲಾಸ್ ರೂಫ್, MG ವಿಂಡ್ಸರ್‌ಗೆ ಐಷಾರಾಮಿ ಸ್ಪರ್ಶವನ್ನು ನೀಡಿದೆ. ಸುಧಾರಿತ ಕ್ಯಾಬಿನ್‌ನಲ್ಲಿ ಹೆಚ್ಚಿನ ಗಾಳಿಗೆ ಅನುವು ಮಾಡಿಕೊಡುತ್ತದೆ. ಇನ್ಫಿನಿಟಿ ವ್ಯೂ ಗ್ಲಾಸ್ ರೂಫ್ ವಿಂಡ್ಸರ್‌ನ ಸೊಗಸಾದ ವಿನ್ಯಾಸವನ್ನು ಸಂಪೂರ್ಣವಾಗಿ ಪೂರೈಸುತ್ತದೆ, ಇದು ಪ್ರೀಮಿಯಂ ಶೈಲಿ ಮತ್ತು ಸೌಕರ್ಯ ಎರಡನ್ನೂ ಬಯಸುವ ಭಾರತೀಯ ಗ್ರಾಹಕರಿಗೆ ಸೂಕ್ತವಾದ ಆಯ್ಕೆಯಾಗಿದೆ ಎಂದು ಕಂಪನಿ ಹೇಳಿದೆ.

ಮೊದಲ ಕ್ರಾಸ್ ಓವರ್: MG ಮೋಟಾರ್ ವಿಂಡ್ಸರ್ EV ಅನ್ನು ಕ್ರಾಸ್ಒವರ್ ಎಲೆಕ್ಟ್ರಿಕ್ ವಾಹನವಾಗಿ ಬಿಡುಗಡೆ ಮಾಡಲಿದೆ. ಇದು ZS EV ಮತ್ತು ಕಾಮೆಟ್ EV ನಂತರ ಕಂಪನಿಯಿಂದ ಬರುತ್ತಿರುವ ಮೂರನೇ ಎಲೆಕ್ಟ್ರಿಕ್ ಕಾರ್ ಆಗಿದೆ. ಭಾರತೀಯ EV ವಿಭಾಗವು ಇಂತಹ ಡಿಸೈನ್‌ನಲ್ಲಿ ಇಲ್ಲಿಯವರೆಗೆ ಯಾವುದೇ ಎಲೆಕ್ಟ್ರಿಕ್ ಕಾರನ್ನು ಹೊಂದಿಲ್ಲ.
ಬಿಡುಗಡೆ ಯಾವಾಗ? ಮುಂದಿನ ಕೆಲವೇ ವಾರಗಳಲ್ಲಿ ಭಾರತದಲ್ಲಿ ಈ ಹೊಸ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗಲಿದೆ. ಕಂಪನಿಯು ಸೆಪ್ಟೆಂಬರ್ 11 ರಂದು ಭಾರತೀಯ ಮಾರುಕಟ್ಟೆಯಲ್ಲಿ ವಿಂಡ್ಸರ್ ಇವಿಯನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಕಾರು ಚೀನಾದಲ್ಲಿ ಈಗಾಗಲೇ ಮಾರಾಟದಲ್ಲಿರುವ ಕ್ಲೌಡ್ ಇವಿಯನ್ನು ಆಧರಿಸಿದೆ.

ವಿಶೇಷತೆಗಳು: ಕಾರಿನಲ್ಲಿ ಹಿಂಬದಿಯ ಆಸನಗಳನ್ನು 135-ಡಿಗ್ರಿ ಕೋನದಲ್ಲಿ ಹಿಂದಕ್ಕೆ ತಳ್ಳುವ ಸೌಕರ್ಯವನ್ನು ಒದಗಿಸಲಾಗಿದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಟು-ಸ್ಪೋಕ್ ಸ್ಟೀರಿಂಗ್ ವೀಲ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇಗೆ ಹೊಂದಿಕೊಳ್ಳುವ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಮಲ್ಟಿಫಂಕ್ಷನಲ್ ಯೂನಿಟ್, ಆಂಬಿಯೆಂಟ್ ಲೈಟಿಂಗ್ ಸೇರಿದಂತೆ ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ವಿಂಡ್ಸರ್ ಇವಿ ಬಿಡುಗಡೆಯಾಗಲಿದೆ.
ಬ್ಯಾಟರಿ ಮತ್ತು ರೇಂಜ್: MG ವಿಂಡ್ಸರ್ ಇವಿ ಕಾರು ಸಿಂಗಲ್ ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ 50.6 kWh ಬ್ಯಾಟರಿ ಪ್ಯಾಕ್ ಹೊಂದಿರುವುದಾಗಿ ಮೂಲಗಳು ತಿಳಿಸಿವೆ. ಒಮ್ಮೆ ಚಾರ್ಜ್ ಮಾಡಿದ್ರೆ 460 ಕಿ.ಮೀ ರೇಂಜ್ ನೀಡಬಲ್ಲದು. ಹಾಗೆಯೇ DC ಫಾಸ್ಟ್ ಚಾರ್ಜರ್‌ನೊಂದಿಗೆ ಅರ್ಧ ಗಂಟೆಯೊಳಗೆ ಶೇ30 ರಷ್ಟು ಚಾರ್ಜ್ ಮಾಡಬಹುದು. 134 bhp ಪವರ್ ಮತ್ತು 200Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ ಎನ್ನಲಾಗಿದೆ.
CUV ಕಾರುಗಳು ವಾಯುಬಲವೈಜ್ಞಾನಿಕ (ಏರೋಡೈನಮಿಕ್) ವಿನ್ಯಾಸ ಮತ್ತು ವಿಶಾಲವಾದ ಒಳಾಂಗಣವನ್ನು ಹೊಂದಿರುತ್ತವೆ. ದೈನಂದಿನ ಪ್ರಯಾಣ ಅಥವಾ ವಾರಾಂತ್ಯದ ವಿಹಾರಕ್ಕೆ ಪ್ರಯಾಣಿಸಲು ಕುಟುಂಬಗಳಿಗೆ ಸೌಕರ್ಯಯುತ ಪ್ರಯಾಣವನ್ನು ಒದಗಿಸುತ್ತವೆ. ವಾಹನದ ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಗುಂಡಿಗಳು, ಉಬ್ಬುಗಳನ್ನು ಉತ್ತಮವಾಗಿ ನಿರ್ವಹಿಸುತ್ತದೆ ಎಂದು ಕಂಪನಿ ಹೇಳಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








