KIA Carens: ಕಿಯಾ ಕಾರೆನ್ಸ್‌ ಡೀಸೆಲ್‌ ಎಂಜಿನ್ ಮ್ಯಾನುವಲ್‌ ವೇರಿಯಂಟ್ ಬಿಡುಗಡೆ ಯಾವಾಗ?

ಕಿಯಾ ಕಂಪನಿ ಭಾರತಕ್ಕೆ ಕಾಲಿಟ್ಟ ಕೆಲವೇ ವರ್ಷಗಳಲ್ಲಿ ಭಾರತೀಯರ ನೆಚ್ಚಿನ ಕಾರಾಗಿ ಬದಲಾಗಿದೆ. ಅದರಲ್ಲೂ ಕಿಯಾ ಸೆಲ್ಟೋಸ್ ಅಂತೂ ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮಾರಾಟವಾಗಿದ್ದು, ಈ ಒಂದು ಕಾರು ಮಾದರಿಯಿಂದಲೇ ಕಿಯಾ ಭಾರತದಲ್ಲಿ ಭಧ್ರವಾಗಿ ನೆಲೆಯೂರಿದ್ದು. ಇದಾದ ನಂತರ ಬಂದ ಕಿಯಾ ಕಾರೆನ್ಸ್‌ ನಿಮಗೆಲ್ಲಾ ತಿಳಿದೇ ಇದೆ.

ಕೋವಿಡ್‌ ನಂತರ ಭಾರತದಲ್ಲಿ ದೊಡ್ಡ ಕಾರುಗಳ ಬೇಡಿಕೆ ವಿಪರೀತವಾಗಿ ಹೆಚ್ಚಿದೆ. ದೊಡ್ಡ ಕಾರುಗಳೆಂದರೆ ಅದು ಐಷಾರಾಮಿ ಕಾರುಗಳಲ್ಲ, ಬದಲಾಗಿ 7 ಸೀಟರ್‌ ಕಾರುಗಳು. ಒಂದು ಕುಟುಂಬ ಜೊತೆಯಾಗಿ ತಮ್ಮ ಲಗೇಜುಗಳನ್ನೆಲ್ಲಾ ತೆಗೆದುಕೊಂಡು ಒಂದು ದೂರ ಪ್ರಯಾಣ ಮಾಡಲು ಸಾಧ್ಯವಿರುವಂತಹ ಕಾರುಗಳ ಬೇಡಿಕೆ ಭಾರತದಲ್ಲಿ ಹೆಚ್ಚಾಯಿತು.

Kia Carens Diesel Manual Variant Details Leaked Ahead Of Launch

ಕಿಯಾ ಸೆಲ್ಟೋಸ್‌ ನಂತರ ಭಾರತದಲ್ಲಿ ಪ್ರಸಿದ್ಧಿ ಪಡೆದ ಮತ್ತೊಂದು ಅದೇ ಕಂಪನಿಯ ಕಾರೆಂದರೆ, ಕಿಯಾ ಕಾರೆನ್ಸ್‌ (Kia Carens). ಮಾರುಕಟ್ಟೆಗೆ ಬಂದು ಹೆಚ್ಚೇನು ವರ್ಷಗಳಾಗದೇ ಇದ್ದರೂ, ಬಹುಬೇಗ ಭಾರತೀಯರ ಪ್ರೀತಿಗೆ ಪಾತ್ರವಾದ ಮತ್ತೊಂದು ಕಾರಿದು. ಇದೀಗ ಕಿಯಾ ಕಾರೆನ್ಸ್ ಪ್ರೀಯರಿಗೆ ಸಿಹಿ ಸುದ್ದಿಯೊಂದು ಬಂದಿದ್ದು, ಆ ಕುರಿತಾಗಿ ನಾವಿಂದು ಈ ಲೇಖನದಲ್ಲಿ ನೋಡಲಿದ್ದೇವೆ.

ಮಾಹಿತಿಗಳ ಪ್ರಕಾರ ಕಿಯಾ ತನ್ನ ಕಾರೆನ್ಸ್ ಕಾರು ಮಾದರಿಗೆ ಹೊಸ ಆವೃತ್ತಿಯೊಂದನ್ನು ಸೇರಿಸಲಿದೆ ಎಂದು ತಿಳಿದು ಬಂದಿದೆ. ಸ್ವಲ್ಪ ದಿನದಲ್ಲೇ ಕಿಯಾ, ಕಾರೆನ್ಸ್‌ ಕಾರಿಗೆ ಹೊಸ ಡೀಸೆಲ್‌ ಮ್ಯಾನುವಲ್‌ ಆವೃತ್ತಿಯನ್ನು ಸೇರಿಸುತ್ತಿದ್ದು, ಲಾಂಚ್ ಆಗುವುದಕ್ಕೂ ಮೊದಲು ಇದರ ಮಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆ ಆಗಿದೆ.

Kia Carens Diesel Manual Variant Details Leaked Ahead Of Launch

ಬಹುದಿನಗಳಿಂದ ಕಿಯಾ ಕಾರೆನ್ಸ್‌ ಪ್ರೀಯರು ಈ ಅಪ್‌ಡೇಟ್‌ಗಾಗಿ ಕಾಯುತ್ತಿದ್ದು, ಕೊನೆಗೂ ಅವರ ಕಾಯುವಿಕೆಗೆ ಅಂತ್ಯ ಹಾಡುವ ಸಮಯ ಬಂದಿದೆ ಎಂದು ಕಿಯಾ ತಿಳಿಸಿದೆ. ಡೀಸೆಲ್‌ ಮ್ಯಾನುವಲ್‌ ವೇರಿಯಂಟ್‌ ಬಹುತೇಕ ಎಲ್ಲಾ ಕಾರುಗಳಿಗೂ ನೆಚ್ಚಿನ ಆವೃತ್ತಿಯಾಗಿದ್ದು, ಗ್ರಾಹಕರು ಸಹ ಇದನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬುದು ಕಂಪನಿಯ ಅಭಿಪ್ರಾಯ ಎಂದು ಮೂಲಗಳು ತಿಳಿಸಿವೆ.

ಇನ್ನು ಸದ್ಯಕ್ಕೆ ಭಾರತೀಯ ಮಾರುಕಟ್ಟೆಯಲ್ಲಿರುವ ಕಿಯಾ ಕಾರೆನ್ಸ್ ಬಗ್ಗೆ ನೋಡುವುದಾದರೆ, ಕಾರೆನ್ಸ್ ಕಾರು ಮಾದರಿಯು ಸೆಲ್ಟೊಸ್ ಎಸ್‌ಯುವಿ ಮಾದರಿಯಲ್ಲಿರುವಂತೆ 1.5-ಲೀಟರ್ ಸಾಮಾನ್ಯ ಪೆಟ್ರೋಲ್, 1.4-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಪಡೆದುಕೊಂಡಿದೆ. ಎಂಜಿನ್ ಆಯ್ಕೆಗೆ ಅನುಗುಣವಾಗಿ 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮ್ಯಾಟಿಕ್ ಅಥವಾ 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮಾದರಿಯನ್ನು ಆಯ್ಕೆ ಮಾಡಬಹುದಾಗಿದೆ.

Kia Carens Diesel Manual Variant Details Leaked Ahead Of Launch

ಹೊಸ ಕಾರು ಮಧ್ಯಮ ಕ್ರಮಾಂಕದ ಎಸ್‌ಯುವಿ ಶ್ರೇಣಿಯಲ್ಲಿರುವ 6 ಸೀಟರ್ ಮತ್ತು 7 ಸೀಟರ್ ಸೌಲಭ್ಯ ಹೊಂದಿರುವ ಹ್ಯುಂಡೈ ಅಲ್ಕಾಜರ್, ಮಹೀಂದ್ರಾ ಎಕ್ಸ್‌ಯುವಿ700 ಮತ್ತು ಎಂಜಿ ಹೆಕ್ಟರ್ ಪ್ಲಸ್, ಟಾಟಾ ಸಫಾರಿ ಮತ್ತು ಎಂಪಿವಿ ಕಾರು ಮಾದರಿಗಳಾದ ಎರ್ಟಿಗಾ ಹಾಗೂ ಇನೋವಾ ಕ್ರಿಸ್ಟಾ ಆರಂಭಿಕ ಮಾದರಿಗಳಿಗೂ ಇದು ಪೈಪೋಟಿ ನೀಡುತ್ತಿದೆ.

ಕಿಯಾ ಕಾರೆನ್ಸ್ ಕಾರು ಮಾದರಿಯು ಒಟ್ಟು ಐದು ವೆರಿಯೆಂಟ್ ಮತ್ತು ಮೂರು ಎಂಜಿನ್ ಆಯ್ಕೆಗಳಲ್ಲಿ ಬಿಡುಗಡೆಗೊಂಡಿತ್ತು. ಹೊಸ ಕಾರು ಎಸ್‌ಯುವಿ ಮತ್ತು ಎಂಪಿವಿ ಕಾರು ಮಾದರಿಗಳಿಗೆ ಉತ್ತಮ ಪೈಪೋಟಿಯಾಗಿದ್ದು ಕಾರೆನ್ಸ್ ಕಾರು ಎಸ್‌ಯುವಿ ಮತ್ತು ಎಂಪಿವಿ ಕಾರುಗಳಿಗೆ ಪೈಪೋಟಿಯಾಗಿ ನಿರ್ಮಾಣಗೊಂಡಿದ್ದು, ಹೊಸ ಕಾರು 4,540 ಎಂಎಂ ಉದ್ದ, 1,800 ಎಂಎಂ ಅಗಲ, 1,708 ಎತ್ತರ ಮತ್ತು 2,780 ಎಂಎಂ ವ್ಹೀಲ್ ಬೆಸ್ ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, March 27, 2024, 10:06 [IST]
English summary
Kia carens diesel manual variant details leaked ahead of launch
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+