ಕಿಯಾದಿಂದ ಹೊಸ ಕಾಂಪ್ಯಾಕ್ಟ್ SUV: ಮೊದಲ ಬಾರಿಗೆ ಕ್ಯಾಮರಾ ಕಣ್ಣಿಗೆ ಬಿದ್ದ 'ಕಿಯಾ ಕ್ಲಾವಿಸ್'

ಕಿಯಾದಿಂದ ಮುಂಬರುವ ಕಾಂಪ್ಯಾಕ್ಟ್ ಎಸ್‌ಯುವಿಯಾದ ಕ್ಲಾವಿಸ್ ಅನ್ನು ಮೊದಲ ಬಾರಿಗೆ ಕೊರಿಯಾದಲ್ಲಿ ಗುರುತಿಸಲಾಗಿದೆ. ಈ ಹೊಸ ಕಾರನ್ನು ಸಾನೆಟ್‌ಗಿಂತ ಹೆಚ್ಚು ಸೆಲ್ಟೋಸ್‌ಗಿಂತ ಕಡಿಮೆ ಮಟ್ಟದಲ್ಲಿ ಇರಿಸಲಾಗುತ್ತದೆ. ಕ್ಲಾವಿಸ್ ವಿಶಿಷ್ಟವಾದ ಡಿಸೈನ್ ಹಾಗೂ ರಗಡ್ ಎಸ್‌ಯುವಿ ಲುಕ್‌ನೊಂದಿಗೆ ಆಕರ್ಷಕವಾಗಿ ಕಾಣುತ್ತಿದೆ. ಹೊರಬಂದ ಫೋಟೋಗಳನ್ನು ಆಧರಿಸಿ ಹೆಚ್ಚಿನ ವಿವರಗಳನ್ನು ಇಲ್ಲಿ ನೋಡೋಣ.

ಫೋಟೋಗಳಲ್ಲಿ ಕಾರಿನ ಹೆಚ್ಚಿನ ಭಾಗವು ಮರೆಮಾಚಿದ್ದರೂ, ಕ್ಲಾವಿಸ್ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟವಾಗುವ ಕ್ರಾಸ್ಒವರ್ ಅನ್ನು ಹೋಲುತ್ತಿರುವುದನ್ನು ಈ ಚಿತ್ರಗಳು ಬಹಿರಂಗಪಡಿಸುತ್ತಿವೆ. ಮುಂಭಾಗದಲ್ಲಿ ಬಾಕ್ಸಿ ವಿನ್ಯಾಸ ಹಾಗೂ ಎತ್ತರವಾದ ನೋಟ ಸಂಪೂರ್ಣ ಹೊಸ ಡಿಸೈನ್ ಅನ್ನು ತೋರುತ್ತಿದ್ದರೂ, ಕೆಲವು ಕಿಯಾ ಸಾಂಪ್ರದಾಯಿಕ ಅಂಶಗಳನ್ನು ಅಲ್ಲಲ್ಲಿ ನೋಡಬಹುದು.

kia-clavis-spy-shots-leaked-know-interesting-details

ಈಗ ಹೊರ ಬಂದಿರುವ ಫೋಟೋಗಳಲ್ಲಿ ಕಂಡುಬರುವ ಮಾದರಿಯು ಭಾರತದಲ್ಲಿ ಬಿಡುಗಡೆಯಾಗದಿದ್ದರೂ, ಟೆಸ್ಟಿಂಗ್ ಮಾದರಿಯು ಮೇಡ್ ಇನ್ ಇಂಡಿಯಾ ವಾಹನವಾಗಿದೆ ಎಂಬುದಕ್ಕೆ ಪ್ರಮುಖ ಕೊಡುಗೆಯೆಂದರೆ ಅದು MRF ಟೈರ್‌ಗಳನ್ನು ಹೊಂದಿರುವುದು. ಇನ್ನೂ ಹಲವು ವಿಶೇಷತೆಗಳು ಹೊರಬಿದ್ದಿಲ್ಲವಾದ್ರೂ ಮುಂಬರುವ ದಿನಗಳಲ್ಲಿ ಹೆಚ್ಚಿನ ವಿವರಗಳು ಹೊರಬರಲಿವೆ.

ಇಂಟೀರಿಯರ್: ಈ ಚಿತ್ರಗಳಲ್ಲಿ ಕಂಡುಬರುವ ಕ್ಲಾವಿಸ್ ಆಕರ್ಷಕ ಸೀಟ್‌ಗಳು, 360-ಡಿಗ್ರಿ ಕ್ಯಾಮೆರಾ ಸೆಟಪ್, ಸನ್‌ರೂಫ್, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ಇತರ ಸೌಕರ್ಯಯುತ ವೈಶಿಷ್ಟ್ಯಗಳನ್ನು ಪಡೆಯಲಿದೆ. ಸುರಕ್ಷತೆಯ ಭಾಗವಾಗಿ ಆರು ಏರ್‌ಬ್ಯಾಗ್‌ಗಳು ಮತ್ತು ನಾಲ್ಕು ಬದಿಗಳಲ್ಲಿ ಡಿಸ್ಕ್ ಬ್ರೇಕ್‌ಗಳನ್ನು ಪಡೆದು, ಟಾಪ್‌ ವೇರಿಯೆಂಟ್‌ಗಳಲ್ಲಿ ADAS ಸಹ ಪಡೆಯುವ ಸಾಧ್ಯತೆಯಿದೆ.

kia-clavis-spy-shots-leaked-know-interesting-details

ಕ್ಲಾವಿಸ್ ವಿನ್ಯಾಸವು ಒಟ್ಟಾರೆ ಸಿಲೂಯೆಟ್ ಕಿಯಾದ ಸಾಂಪ್ರದಾಯಿಕ ಕ್ರಾಸ್‌ಒವರ್ ಅನ್ನು ಹೋಲುವಂತೆ ತೋರುತ್ತದೆಯಾದರೂ, ಮುಂಬರುವ ಕೆಲವು ಹೊಸ ಕಿಯಾ ಮಾದರಿಗಳೊಂದಿಗೆ ಇದು ಅನೇಕ ಡಿಸೈನ್ ಅಂಶಗಳನ್ನು ಹಂಚಿಕೊಳ್ಳಲಿದೆ ಎಂದು ಹತ್ತಿರದಿಂದ ನೋಡಿದಾಗ ಖಚಿತಪಡಿಸುತ್ತದೆ. ಈ SUV ವಿಶಿಷ್ಟವಾದ ಡೇಟೈಮ್ ರನ್ನಿಂಗ್ ಲ್ಯಾಂಪ್ ಸಿಗ್ನೇಚರ್‌ನೊಂದಿಗೆ ಲಂಬವಾದ ಹೆಡ್‌ಲ್ಯಾಂಪ್‌ಗಳನ್ನು ಪಡೆದಿದೆ.

ಹೆಡ್‌ಲ್ಯಾಂಪ್‌ಗಳು ಮೂರು ಪ್ರತ್ಯೇಕ ವಿಭಾಗಗಳಾಗಿ ವಿಭಜಿಸಲ್ಪಟ್ಟಿದ್ದು, ಅವುಗಳ ರಿಫ್ಲೆಕ್ಟರ್‌ಗಳಿಗೆ ಹೊಸ ಲುಕ್ ನೀಡಿವೆ. ಹಿಂಬದಿಯ ವಿನ್ಯಾಸವು ಕಿಯಾದ ಬಹುನಿರೀಕ್ಷಿತ ಮಾದರಿಗಳಲ್ಲಿ ಒಂದಾದ Kia EV9 SUV ನಂತೆಯೇ ಉದ್ದವಾದ ಟೈಲ್-ಲ್ಯಾಂಪ್‌ಗಳನ್ನು ಹೋಲುವಂತೆ ಕಾಣುತ್ತದೆ, ಒಟ್ಟಾರೆ ಹಿಂಬದಿಯು ಬಾಕ್ಸಿ ಡಿಸೈನ್‌ನಲ್ಲೂ ರಗಡ್ ಆಗಿ ಕಾಣುತ್ತಿದೆ.

kia-clavis-spy-shots-leaked-know-interesting-details

2024 ರ ಅಂತ್ಯದ ವೇಳೆಗೆ ಕಿಯಾ ಕ್ಲಾವಿಸ್ ಜಾಗತಿಕ ಚೊಚ್ಚಲ ಪ್ರವೇಶವನ್ನು ಕಾಣಲಿದೆ ಎಂದು ಮೂಲಗಳು ಹೇಳುತ್ತಿವೆ. ಇದು ಬಹು FWD ಪವರ್‌ಟ್ರೇನ್ ಆಯ್ಕೆಗಳನ್ನು ಹೊಂದಿರುತ್ತದೆ. ಅಂದರೆ ICE, EV ಮತ್ತು ಹೈಬ್ರಿಡ್ ನಲ್ಲಿ ಪರಿಚಯಿಸುವ ಸಾಧ್ಯತೆಗಳು ಹೆಚ್ಚಾಗಿ ಕಾಣುತ್ತಿವೆ. Clavis EVಯು ICE ಮಾದರಿಗಳಂತೆಯೇ ಅದೇ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿರುತ್ತದೆ.

ಮೊದಲು ಇಂಧನ ಚಾಲಿತ ಮಾದರಿಗಳು ಬಿಡುಗಡೆಯಾದ ಬಳಿಕ ಇವಿ ಕ್ಲಾವಿಸ್ ಅನ್ನು ಪರಿಚಯಿಸುವ ನಿರೀಕ್ಷೆಯಿದೆ. ಕಿಯಾ ವಾರ್ಷಿಕವಾಗಿ ಸುಮಾರು 1 ಲಕ್ಷ ಯೂನಿಟ್ ಕ್ಲಾವಿಸ್ ಅನ್ನು ಉತ್ಪಾದಿಸಲು ಯೋಜಿಸಿದೆ ಎಂದು ಮೂಲಗಳು ಹೇಳುತ್ತಿವೆ. ಶೇ 80 ರಷ್ಟು ಮಾದರಿಗಳು ICE ಶ್ರೇಣಿಯಿಂದ ಹೊರಬರಲಿವೆ. ಇದರಲ್ಲಿ ಕೆಲವನ್ನು ರಫ್ತಿಗೂ ಮೀಸಲಿಡಲಾಗುವುದು.

kia-clavis-spy-shots-leaked-know-interesting-details

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, January 26, 2024, 13:00 [IST]
English summary
Kia clavis spy shots leaked know interesting details
Read more on ಕಿಯಾ kia
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+