Kia EV9: 2024ರ ವಿಶ್ವ ಕಾರು ಪ್ರಶಸ್ತಿಯಲ್ಲಿ ಡಬಲ್ ಗೆಲುವು ಸಾಧಿಸಿದ ಕಿಯಾ ಇವಿ9

ನ್ಯೂಯಾರ್ಕ್ ಆಟೋ ಶೋನಲ್ಲಿ ನಡೆದ ವರ್ಲ್ಡ್ ಕಾರ್ ಅವಾರ್ಡ್ಸ್ ಸಮಾರಂಭದಲ್ಲಿ ಕಿಯಾ EV9 ವರ್ಷದ ವರ್ಲ್ಡ್ ಕಾರ್ ಮತ್ತು ವರ್ಲ್ಡ್ ಎಲೆಕ್ಟ್ರಿಕ್ ವೆಹಿಕಲ್ ಎರಡಕ್ಕೂ ಪ್ರತಿಷ್ಠಿತ ಶೀರ್ಷಿಕೆಗಳನ್ನು ಪಡೆದುಕೊಂಡು, 2024 ರ ವರ್ಲ್ಡ್ ಕಾರ್ ಅವಾರ್ಡ್ಸ್‌ನಲ್ಲಿ Kia EV9 ಗಮನಾರ್ಹ ವಿಜಯವನ್ನು ಸಾಧಿಸಿದೆ.

ವರ್ಲ್ಡ್ ಕಾರ್ ಅವಾರ್ಡ್ಸ್ ನಲ್ಲಿ Kia EV9 ನ ನವೀನ ವಿನ್ಯಾಸ, ವಿಶಾಲವಾದ ಏಳು - ಆಸನಗಳ ಒಳಾಂಗಣ ಮತ್ತು ಸ್ಪರ್ಧಾತ್ಮಕ ಬೆಲೆಯನ್ನು ಗುರುತಿಸಿ ಪ್ರಶಸ್ತಿ ಘೋಷಿಸಲಾಗಿದೆ. E-GMP ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ ಕಿಯಾ EV9, ಸುಧಾರಿತ ಕಾರ್ಯಕ್ಷಮತೆಯನ್ನು ಹೊಂದಿರುವ ನಾಲ್ಕನೇ ತಲೆಮಾರಿನ ಬ್ಯಾಟರಿ ತಂತ್ರಜ್ಞಾನವನ್ನು ಹೊಂದಿರುವ ಮೊದಲ ಕಿಯಾ ಕಾರಾಗಿದೆ.

kia-ev9-secures-double-win-at-the-2024-world-car-awards

ವರ್ಲ್ಡ್ ಕಾರ್ ಅವಾರ್ಡ್ಸ್: ಈ 2024 ರ ವರ್ಲ್ಡ್ ಕಾರ್ ಅವಾರ್ಡ್ಸ್' 2003 ರಲ್ಲಿ ಸ್ಥಾಪಿತವಾಗಿದ್ದು, ಜಾಗತಿಕವಾಗಿ ಆಟೋಮೋಟಿವ್ ಎಕ್ಸಲೆನ್ಸ್ ಮತ್ತು ನಾಯಕತ್ವದ ಪ್ರಮುಖ ಮಾನದಂಡವಾಗಿ ಪ್ರಸಿದ್ಧಿ ಪಡೆದಿದೆ. 29 ದೇಶಗಳನ್ನು ಪ್ರತಿನಿಧಿಸುವ 100 ಪ್ರಸಿದ್ಧ ಆಟೋಮೋಟಿವ್ ಪತ್ರಕರ್ತ ತೀರ್ಪುಗಾರರ ಮೂಲಕ ಬೆಸ್ಟ್ ಕಾರನ್ನು ಆಯ್ಕೆ ಮಾಡಲಾಗುತ್ತದೆ. ವೇಗವಾಗಿ ಬದಲಾಗುತ್ತಿರುವ ಆಟೋಮೋಟಿವ್ ಉದ್ಯಮದಲ್ಲಿ ಗಮನಾರ್ಹ ಸಾಧನೆಗಳನ್ನು ಇದು ಗುರ್ತಿಸಿ ಪ್ರಶಸ್ತಿಗಳನ್ನು ಘೋಷಿಸುತ್ತದೆ.

ಇತ್ತೀಚಿನ 2024ರ ಈವೆಂಟ್‌ಗೂ ಮೊದಲು, ಕಿಯಾ ಈಗಾಗಲೇ ವರ್ಲ್ಡ್ ಕಾರ್ ಅವಾರ್ಡ್ಸ್‌ನಲ್ಲಿ ಮೂರು ಗೆಲುವುಗಳನ್ನು ಪಡೆದುಕೊಂಡಿದೆ. ತನ್ನ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರಸಿದ್ದಿ ಪಡೆದಿರುವ ಕಿಯಾ ಟೆಲ್ಲುರೈಡ್ ಕಾರನ್ನು ವರ್ಷದ ವರ್ಲ್ಡ್ ಕಾರ್ ಮತ್ತು ಕಿಯಾ ಸೋಲ್ ಇವಿ 2020 ರಲ್ಲಿ ವರ್ಲ್ಡ್ ಅರ್ಬನ್ ಕಾರ್ ಆಗಿ, ಜೊತೆಗೆ ಕಿಯಾ ಇವಿ 6 ಜಿಟಿ ವರ್ಷದ ವರ್ಲ್ಡ್ ಪರ್ಫಾರ್ಮೆನ್ಸ್ ಕಾರ್ ಆಗಿ 2023 ರಲ್ಲಿ ಪ್ರಶಸ್ತಿಗಳನ್ನು ಪಡೆದಿವೆ.

kia-ev9-secures-double-win-at-the-2024-world-car-awards

ಕಿಯಾ ಅಧ್ಯಕ್ಷ ಮತ್ತು ಸಿಇಒ ಹೋ ಸುಂಗ್ ಸಾಂಗ್ ಮಾತನಾಡಿ, 2024ರಲ್ಲಿ EV9 ಅನ್ನು ವರ್ಷದ ವರ್ಲ್ಡ್ ಕಾರ್ ಮತ್ತು ವರ್ಲ್ಡ್ ಎಲೆಕ್ಟ್ರಿಕ್ ವೆಹಿಕಲ್ ಎಂದು ಘೋಷಿಸಿರುವುದು ನಮಗೆ ಬಹಳ ಗೌರವವಾಗಿದೆ. ಈ ವಿಜಯವು ತಂತ್ರಜ್ಞಾನ ಮತ್ತು ವಿನ್ಯಾಸದ ಶ್ರೇಷ್ಠತೆಯ ಗಡಿಗಳನ್ನು ದಾಟುವ ನಮ್ಮ ಅಚಲ ಬದ್ಧತೆಗೆ ಸಾಕ್ಷಿಯಾಗಿದೆ. Kia EV9 ಮುಂದುವರಿದ ಯಶಸ್ಸು ಪ್ರಪಂಚದಾದ್ಯಂತದ ಗ್ರಾಹಕರಿಗೆ ಅಸಾಧಾರಣ ವಾಹನಗಳನ್ನು ತಲುಪಿಸಲು ನಮ್ಮನ್ನು ಪ್ರೇರೇಪಿಸುತ್ತದೆ ಎಂದರು.

2024 ರಲ್ಲಿ ವರ್ಲ್ಡ್ ಕಾರ್ ಅವಾರ್ಡ್‌ಗಳಲ್ಲಿ ಎರಡು ಗೆಲುವುಗಳು Kia EV9 ಗೆ ಈಗಾಗಲೇ ಪ್ರಭಾವಶಾಲಿಯಾದ ಪುರಸ್ಕಾರಗಳನ್ನು ತಂದಿವೆ. Kia ದ ಮೊದಲ ಮೀಸಲಾದ ಮೂರು - ಸಾಲಿನ EV SUV ಆಗಿ ಪರಿಚಯಿಸಿದಾಗಿನಿಂದ, ಕಿಯಾ EV9 ಹಲವಾರು ಬಹುಮಾನಗಳನ್ನು ಸಂಗ್ರಹಿಸಿದೆ.

kia-ev9-secures-double-win-at-the-2024-world-car-awards

ಗೋಲ್ಡನ್ ಸ್ಟೀರಿಂಗ್ ವೀಲ್ ಪ್ರಶಸ್ತಿಗಳ 'ಫ್ಯಾಮಿಲಿ ಕಾರ್ಸ್' ವಿಭಾಗ, 2024 ರ ಉತ್ತರ ಅಮೇರಿಕನ್ ಯುಟಿಲಿಟಿ ವೆಹಿಕಲ್ ಆಫ್ ದಿ ಇಯರ್, ಮತ್ತು 'ಬೆಸ್ಟ್ 2023 ನ್ಯೂಸ್‌ವೀಕ್ ಆಟೋಸ್ ಅವಾರ್ಡ್ಸ್‌ನಲ್ಲಿ ಪ್ರೀಮಿಯಂ SUV ಆಗಿ ಗುರ್ತಿಸಿಕೊಂಡಿದೆ. "EV9 ಕಿಯಾದ ದೃಷ್ಟಿಯ ಸ್ಪಷ್ಟ ನಿರೂಪಣೆಯಾಗಿದೆ. ಗುಣಮಟ್ಟಕ್ಕೆ ನಮ್ಮ ಸಮರ್ಪಣೆಗೆ ಹೆಚ್ಚಿನ ಪುರಾವೆಯಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಈ ಪ್ರಶಸ್ತಿಯು ಸಾಂಪ್ರದಾಯಿಕ ಆಟೋಮೊಬೈಲ್‌ಗಳನ್ನು ಮೀರಿದ ಸುಸ್ಥಿರ ಚಲನಶೀಲತೆ ಪರಿಹಾರಗಳಲ್ಲಿ ಕಿಯಾ ಮುಂಚೂಣಿಯಲ್ಲಿ ನಿಂತಿದೆ. EV9 ನ ಯಶಸ್ಸಿಗೆ ತಮ್ಮ ಹೆಚ್ಚಿನ ಪ್ರಯತ್ನಗಳನ್ನು ನೀಡಿದ ನಮ್ಮ ಜಾಗತಿಕ ತಂಡಗಳೊಂದಿಗೆ ನಾವು ಈ ಗೌರವವನ್ನು ಹಂಚಿಕೊಳ್ಳುತ್ತೇವೆ ಎಂದು ಕಿಯಾ ಉತ್ತರ ಅಮೇರಿಕಾ ಮತ್ತು ಕಿಯಾ ಅಮೆರಿಕದ ಅಧ್ಯಕ್ಷ ಮತ್ತು ಸಿಇಒ ಸೀನ್ ಯೂನ್ ಹೇಳಿದರು.

More from DriveSpark

Article Published On: Thursday, March 28, 2024, 11:42 [IST]
English summary
Kia ev9 secures double win at the 2024 world car awards
Read more on ಕಿಯಾ kia
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+