Kia: ಡೀಸೆಲ್ ಎಂಜಿನ್‌ನೊಂದಿಗೆ ಹೊಸ 6-ಸೀಟರ್ MT ಕಾರೆನ್ಸ್ ಬಿಡುಗಡೆ: ಆರಂಭಿಕ ಬೆಲೆ 12 ಲಕ್ಷ
ಭಾರತದ ಪ್ರಮುಖ ಕಾರು ತಯಾರಕರಾದ ಕಿಯಾ (Kia) ಇಂದು U2 1.5 VGT ಎಂಜಿನ್ ವೇರಿಯೆಂಟ್‌ನಲ್ಲಿ, ಹೊಸ 6-ಸ್ಪೀಡ್ 1.5 ಡೀಸೆಲ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ 2024ರ ರಿಫ್ರೆಶ್ಡ್ ಕಾರೆನ್ಸ್ (Carens) ಅನ್ನು ಬಿಡುಗಡೆ ಮಾಡಿದೆ. ಈ ಕಾರು ಕುರಿತ ಹೆಚ್ಚಿನ ವಿವರಗಳನ್ನು ಇಲ್ಲಿ ನೋಡೋಣ.
ಕಿಯಾ ಇಂಡಿಯಾವು 6 - ಆಸನಗಳ ರಿಫ್ರೆಶ್ಡ್ 2024 ಕಾರೆನ್ಸ್ ಆರಂಭಿಕ ಬೆಲೆಯನ್ನು ರೂ. 1,211,900 ಮತ್ತು 1.5 ಡೀಸೆಲ್ MT ಕ್ಯಾರೆನ್ಸ್ ಅನ್ನು ರೂ. 12,66,900 ಕ್ಕೆ ನಿಗಧಿಪಡಿಸಿದೆ. ಹೊಸ 1.5 ಡೀಸೆಲ್ MT ಪವರ್‌ಟ್ರೇನ್ ಸೇರ್ಪಡೆಯೊಂದಿಗೆ ಟ್ರಿಮ್ ಲೈನ್ ಅಪ್ ಅನ್ನು 23 ರಿಂದ 30 ಟ್ರಿಮ್‌ಗಳಿಗೆ ವಿಸ್ತರಿಸಲಾಗಿದೆ.

ಈ ರಿಫ್ರೆಶ್ಡ್ ಲೈನ್‌ಅಪ್‌ನಲ್ಲಿ, ಕಿಯಾ ವರ್ಧಿತ X-ಲೈನ್ ಮಾದರಿಯನ್ನು ಕೂಡ ಪರಿಚಯಿಸಿದೆ, ಡ್ಯಾಶ್‌ಕ್ಯಾಮ್, ಎಲ್ಲಾ ವಿಂಡೋ ಆಟೋ ಅಪ್ ಮತ್ತು ಡೌನ್‌ನೊಂದಿಗೆ ವಾಯಿಸ್ ಕಮಾಂಡ್‌ನಂತಹ ಪ್ರೀಮಿಯಂ ವೈಶಿಷ್ಟ್ಯಗಳನ್ನು ನೀಡಿದೆ. ಜೊತೆಗೆ 7-ಸೀಟಿಂಗ್ ಆಯ್ಕೆಗಳನ್ನು ವಿಸ್ತರಿಸುವ ಮೂಲಕ ಅದರ ವಿಶೇಷತೆಯನ್ನು ಹೆಚ್ಚಿಸಿರುವುದಾಗಿ ಕಂಪನಿ ಹೇಳಿಕೊಂಡಿದೆ.
ಕ್ಯಾರೆನ್ಸ್ ಎಕ್ಸ್-ಲೈನ್ ಅನ್ನು ಮೊದಲು ಅಕ್ಟೋಬರ್ 2023 ರಲ್ಲಿ ಪ್ರಾರಂಭಿಸಲಾಯಿತು. ಹೊಸ ಟ್ರಿಮ್‌ಗಳ ಪರಿಚಯದೊಂದಿಗೆ, 7DCT ಮತ್ತು 6AT ನಲ್ಲಿನ ಪ್ರೆಸ್ಟೀಜ್ +(O) ವೇರಿಯೆಂಟ್ ದೇಶದ ಹೆಸರಾಂತ ವೈಶಿಷ್ಟ್ಯವಾದ 'ಸನ್‌ರೂಫ್' ಅನ್ನು LED ಮ್ಯಾಪ್ ಲ್ಯಾಂಪ್ ಮತ್ತು ರೂಮ್ ಲ್ಯಾಂಪ್‌ನೊಂದಿಗೆ ಪ್ರದರ್ಶಿಸುತ್ತದೆ.

ಹೆಚ್ಚುವರಿಯಾಗಿ, ಪ್ರೆಸ್ಟೀಜ್ (O) ರೂಪಾಂತರವು 6 ಅಥವಾ 7 ಆಸನ ಸಾಮರ್ಥ್ಯ, ಲೆಥೆರೆಟ್ ಕವರ್ಡ್ ಗೇರ್ ನಾಬ್, ಪುಶ್ - ಬಟನ್ ಸ್ಟಾರ್ಟ್‌ನೊಂದಿಗೆ ಸ್ಮಾರ್ಟ್ ಕೀ, LED ರಿಯರ್ ಕಾಂಬಿನೇಶನ್ ಲ್ಯಾಂಪ್, LED DRL ಮತ್ತು ಸ್ಥಾನೀಕರಣ ದೀಪ (Positioning lamp)ದ ಆಯ್ಕೆಯನ್ನು ನೀಡುತ್ತದೆ.
ಇದಲ್ಲದೆ, ಪ್ರೀಮಿಯಂ (O) ಟ್ರಿಮ್ ಕೀಲೆಸ್ ಎಂಟ್ರಿ, 8" D/Audio ಸಿಸ್ಟಮ್, ಶಾರ್ಕ್ ಫಿನ್ ಆಂಟೆನಾ, ಸ್ಟೀರಿಂಗ್ ವೀಲ್ - ಮೌಂಟೆಡ್ ರಿಮೋಟ್ ಕಂಟ್ರೋಲ್, ಬಲ್ಗರ್ ಅಲಾರಂಗಳು (Burglar alarms) ಮತ್ತು ಸುರಕ್ಷತಾ ವೈಶಿಷ್ಟ್ಯಗಳಂತಹ ಫೀಚರ್‌ಗಳೊಂದಿಗೆ ಅನುಕೂಲತೆಯನ್ನು ಹೆಚ್ಚಿಸುತ್ತದೆ ಎಂದು ಕಂಪನಿ ತಿಳಿಸಿದೆ.

ಎಲ್ಲಾ ಮಾದರಿಗಳು ಈಗ 180W ಚಾರ್ಜರ್‌ನೊಂದಿಗೆ ಸಜ್ಜುಗೊಂಡಿವೆ, ಇದು ಹಿಂದಿನ 120W ಚಾರ್ಜರ್‌ನಿಂದ ಅಪ್‌ಗ್ರೇಡ್ ಅನ್ನು ಪಡೆದಿದೆ. ಇದಲ್ಲದೆ, ಕಾರೆನ್ಸ್‌ಗೆ ಹೊಚ್ಚ ಹೊಸ ಪ್ಯೂಟರ್ ಆಲಿವ್ ಬಣ್ಣವನ್ನು ಪರಿಚಯಿಸಲಾಗಿದೆ. X-ಲೈನ್ ಹೊರತುಪಡಿಸಿ ಎಲ್ಲಾ ಮಾದರಿಗಳಿಗೂ ಇದು ಲಭ್ಯವಿದೆ. ಈ ಸೇರ್ಪಡೆಯು ಗ್ರಾಹಕರಿಗೆ 8 ಮೊನೊಟೋನ್, 3 ಡ್ಯುಯಲ್-ಟೋನ್ ಆಯ್ಕೆಗಳು ಮತ್ತು X-ಲೈನ್‌ಗಾಗಿ 1 ವಿಶೇಷ ಬಣ್ಣದ ಆಯ್ಕೆಯನ್ನು ಒದಗಿಸುತ್ತದೆ.
ಕಿಯಾ ಇಂಡಿಯಾದ ಮುಖ್ಯ ಮಾರಾಟ ಮತ್ತು ವ್ಯಾಪಾರ ಅಧಿಕಾರಿ ಮ್ಯುಂಗ್-ಸಿಕ್ ಸೋಹ್ನ್ ಮಾತನಾಡಿ, "ನಾವು ಕಾರೆನ್ಸ್‌ನ ಹೊಸ ಟ್ರಿಮ್‌ಗಳನ್ನು ಪರಿಚಯಿಸಲು ಉತ್ಸುಕರಾಗಿದ್ದೇವೆ. 2022 ರಲ್ಲಿ ಪ್ರಾರಂಭವಾದಾಗಿನಿಂದ, ನಾವು 6-ಆಸನಗಳ ಆಯ್ಕೆಗೆ ದೊಡ್ಡ ಸಾಮರ್ಥ್ಯವನ್ನು ನೋಡಿದ್ದೇವೆ. ಐಷಾರಾಮಿ ಮತ್ತು ಆರಾಮದಾಯಕ ಸವಾರಿಗಳನ್ನು ಬಯಸುವ ಕುಟುಂಬಗಳಿಗೆ ಆದ್ಯತೆಗಳನ್ನು ಮರುರೂಪಿಸಲು ಕಾರೆನ್ಸ್ ಅನ್ನು ರಿಫ್ರೆಶ್ ಮಾಡಿದ್ದೇವೆ ಎಂದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








