ಕಿಯಾ ಸಾನೆಟ್ 4 ಹೊಸ ರೂಪಾಂತರಗಳ ಬಿಡುಗಡೆ: ರೂ.8 ಲಕ್ಷಕ್ಕೆ ಸನ್‌ರೂಫ್, ಆಧುನಿಕ ಫೀಚರ್ಸ್!
ಕಿಯಾ ಇಂಡಿಯಾವು ಸನ್‌ರೂಫ್‌ನಂತಹ ಹೆಚ್ಚು ಜನಪ್ರಿಯ ಪ್ರೀಮಿಯಂ ವೈಶಿಷ್ಟ್ಯಗಳನ್ನು ಸೇರಿಸುವ ಮೂಲಕ ಹೊಸ ಸಾನೆಟ್‌ನಲ್ಲಿ 4 ಹೊಸ ಎಂಟ್ರಿ ಲೆವಲ್ ಮತ್ತು ಮಿಡ್ ವೇರಿಯೆಂಟ್‌ಗಳನ್ನು ಪರಿಚಯಿಸಿದೆ. ಹೊಸದಾಗಿ ಪರಿಚಯಿಸಲಾದ HTE(O) ಮತ್ತು HTK(O) ವೇರಿಯೆಂಟ್‌ಗಳು ಈಗ ಪೆಟ್ರೋಲ್ G1.2 ಮತ್ತು ಡೀಸೆಲ್ 1.5 CRDi VGT ಎಂಜಿನ್‌ಗಳೊಂದಿಗೆ ಲಭ್ಯವಿದೆ.
HTE (O) ಅಸ್ತಿತ್ವದಲ್ಲಿರುವ HTE ವೇರಿಯೆಂಟ್ ಮೇಲೆ ಹೆಚ್ಚುವರಿ ಸನ್‌ರೂಫ್ ಅನ್ನು ಪಡೆದರೆ, HTK (O) ಸನ್‌ರೂಫ್, LED ಕನೆಕ್ಟೆಡ್ ಟೈಲ್ಯಾಂಪ್‌ಗಳು, ಫುಲ್ಲಿ ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್ (FATC) ಮತ್ತು ಅಸ್ತಿತ್ವದಲ್ಲಿರುವ HTK ವೇರಿಯೆಂಟ್ ವೈಶಿಷ್ಟ್ಯಗಳ ಮೇಲೆ ಹಿಂದಿನ ಡಿಫಾಗರ್ ಅನ್ನು ಪಡೆಯುತ್ತದೆ.

ಹೆಚ್ಚುವರಿಯಾಗಿ, ಕಿಯಾ ಇಂಡಿಯಾ ಈಗ GTX+ ಮತ್ತು HTX+ ವೇರಿಯೆಂಟ್‌ಗಳೊಂದಿಗೆ ಎಲ್ಲಾ - ವಿಂಡೋಸ್ ಅಪ್/ಡೌನ್ ಸುರಕ್ಷತೆಯನ್ನು ನೀಡುತ್ತದೆ. ಇದಲ್ಲದೆ, HTE ಮತ್ತು HTK ವೇರಿಯೆಂಟ್‌ಗಳ ಗ್ರಾಹಕರು ಈಗ ಮೂರು ಹೊಸ ಬಣ್ಣಗಳನ್ನು ಆಯ್ಕೆ ಮಾಡುವ ಆಯ್ಕೆಯನ್ನು ಹೊಂದಿದ್ದಾರೆ. ಹೊಸ ಬಣ್ಣಗಳನ್ನು ನೋಡುವುದಾದ್ರೆ - ಅರೋರಾ ಬ್ಲ್ಯಾಕ್ ಪರ್ಲ್, ಇಂಪೀರಿಯಲ್ ಬ್ಲೂ ಮತ್ತು ಪ್ಯೂಟರ್ ಆಲಿವ್.
ದೇಶದಲ್ಲಿ ಎಸ್‌ಯುವಿಗಳಿಗೆ ಹೆಚ್ಚುತ್ತಿರುವ ಕ್ರೇಜ್‌ನಿಂದಾಗಿ ಹಣಕ್ಕೆ ತಕ್ಕ ಮೌಲ್ಯದೊಂದಿಗೆ ಸಾನೆಟ್ ಅನ್ನು ಗ್ರಾಹಕರಿಗೆ ನೀಡಲಾಗುತ್ತಿದೆ. ಇದೀಗ ಹೊಸ ವೇರಿಯೆಂಟ್‌ಗಳು ಮತ್ತು ವೈಶಿಷ್ಟ್ಯಗಳೊಂದಿಗೆ, ಕಂಪನಿಯು ಹಣಕ್ಕೆ ತಕ್ಕ ಮೌಲ್ಯವನ್ನು ಇನ್ನಷ್ಟು ಹೆಚ್ಚಿಸುವ ಗುರಿಯನ್ನು ಹೊಂದಿದ್ದು, ಕಿಯಾ ಸಾನೆಟ್ ಗ್ರಾಹಕರ ನಿರೀಕ್ಷೆಗಳಿಗೆ ನ್ಯಾಯ ಒದಗಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಹೊಸ ವೇರಿಯೆಂಟ್‌ಗಳ ಬಗ್ಗೆ ಪ್ರತಿಕ್ರಿಯಿಸಿದ ಕಿಯಾ ಇಂಡಿಯಾದ ಮುಖ್ಯ ಮಾರಾಟ ಮತ್ತು ವ್ಯವಹಾರ ಅಧಿಕಾರಿ ಮ್ಯುಂಗ್ - ಸಿಕ್ ಸೋಹ್ನ್, "ಕೆಲವು ತಿಂಗಳ ಹಿಂದೆ ಬಿಡುಗಡೆಯಾದ ಹೊಸ ಸಾನೆಟ್ ಫೇಸ್‌ಲಿಫ್ಟ್ ನಮ್ಮ ಹೊಸ ಯುಗದ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಹೊಸ ನವೀಕರಣದೊಂದಿಗೆ, ನಾವು ಹಲವು ಗುರಿಗಳನ್ನು ಹೊಂದಿದ್ದೇವೆ.
ಸನ್‌ರೂಫ್ ಮತ್ತು ಕನೆಕ್ಟೆಡ್ ಟೈಲ್ ಲ್ಯಾಂಪ್‌ಗಳಂತಹ ಪ್ರೀಮಿಯಂ ವೈಶಿಷ್ಟ್ಯಗಳನ್ನು ನಮ್ಮ ಪ್ರವೇಶ ಮತ್ತು ಮಧ್ಯಮ ರೂಪಾಂತರದ ಖರೀದಿದಾರರಿಗೆ ಹೆಚ್ಚು ಕೈಗೆಟುಕುವಂತೆ ಮಾಡಿದ್ದೇವೆ. ಈ ಅಪ್‌ಡೇಟ್ ಪ್ರತಿ ಬೆಲೆಯಲ್ಲೂ ಉತ್ತಮ ಗುಣಮಟ್ಟದ ವೈಶಿಷ್ಟ್ಯಗಳನ್ನು ಒದಗಿಸುವ ನಮ್ಮ ಸಮರ್ಪಣೆಯನ್ನು ಒತ್ತಿಹೇಳುತ್ತದೆ. ಉದ್ಯಮ ಸಂಶೋಧನೆಯ ಪ್ರಕಾರ ಸಾನೆಟ್ ತನ್ನ ವಿಭಾಗದಲ್ಲಿ ಕಡಿಮೆ ನಿರ್ವಹಣಾ ವೆಚ್ಚವನ್ನು ಹೊಂದಿದೆ ಎಂದರು.

ಇಲ್ಲಿಯವರೆಗೆ ಕಿಯಾ ಇಂಡಿಯಾ ಭಾರತೀಯ ಮಾರುಕಟ್ಟೆಗಾಗಿ ಸೆಲ್ಟೋಸ್, ಕಾರ್ನಿವಲ್, ಸೋನೆಟ್, ಕ್ಯಾರೆನ್ಸ್ ಮತ್ತು EV6 ಸೇರಿದಂತೆ ಐದು ವಾಹನಗಳನ್ನು ಬಿಡುಗಡೆ ಮಾಡಿದೆ. ಭಾರತದ 236 ನಗರಗಳಲ್ಲಿ 522 ಟಚ್‌ಪಾಯಿಂಟ್‌ಗಳ ವ್ಯಾಪಕ ನೆಟ್‌ವರ್ಕ್ ಅನ್ನು ಹೊಂದಿರುವ ಕಿಯಾ, ದೇಶಾದ್ಯಂತ ತನ್ನ ಹೆಜ್ಜೆಗುರುತುಗಳನ್ನು ಬಲಪಡಿಸುವತ್ತ ಗಮನಹರಿಸಿದೆ ಎಂದರು.
ಕಿಯಾ ಬಗ್ಗೆ: ಏಪ್ರಿಲ್ 2017 ರಲ್ಲಿ, ಕಿಯಾ ಇಂಡಿಯಾ ಅನಂತಪುರ ಜಿಲ್ಲೆಯಲ್ಲಿ ಹೊಸ ಉತ್ಪಾದನಾ ಸೌಲಭ್ಯವನ್ನು ನಿರ್ಮಿಸಲು ಆಂಧ್ರಪ್ರದೇಶದ ರಾಜ್ಯ ಸರ್ಕಾರದೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ (MOU) ಸಹಿ ಹಾಕಿತು. ಕಿಯಾ ಆಗಸ್ಟ್ 2019 ರಲ್ಲಿ ಸಾಮೂಹಿಕ ಉತ್ಪಾದನೆಯನ್ನು ಪ್ರಾರಂಭಿಸಿ ಇದೀಗ 300,000 ಯುನಿಟ್‌ಗಳ ವಾರ್ಷಿಕ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








