ಅಖಾಡಕ್ಕೆ ಎಂಟ್ರಿಯಾಗಲಿದೆ ಕಿಯಾ ಸೆಲ್ಟೋಸ್ ಸಿಎನ್‌ಜಿ: ಎದುರಾಳಿಗಳಿಗೆ ನಡುಕ ಶುರು
ಜನಪ್ರಿಯ ಕಾರು ತಯಾರಕ ಕಂಪನಿಯಾದ ಕಿಯಾ ಇಂಡಿಯಾ (Kia India) ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ ಮೊದಲ ಕಾರು ಸೆಲ್ಟೋಸ್ ಎಸ್‍ಯುವಿಯಾಗಿದೆ. ಈ ಕಿಯಾ ಸೆಲ್ಟೋಸ್ ಎಸ್‍ಯುವಿಯು ಭಾರತದಲ್ಲಿ ಕಡಿಮೆ ಅವಧಿಯಲ್ಲಿ ಭರ್ಜರಿಯಾಗಿ ಮಾರಾಟವಾಗಿ ಭಾರೀ ಸಂಚಲನವನ್ನು ಮೂಡಿಸಿತ್ತು. ಹೊಸ ನವೀಕರಣಗಳೊಂದಿಗೆ ಕಿಯಾ ಇಂಡಿಯಾ ಕಂಪನಿಯು ಕಿಯಾ ಸೆಲ್ಟೋಸ್ (Kia Seltos ) ಭಾರತದಲ್ಲಿ ಬಿಡುಗಡೆಗೊಳಿಸಿ ಸುನಾಮಿ ಎಬ್ಬಸಿತು. ಆದರೆ ಇದೀಗ ಮರೆಮಾಚಿದ ಕಿಯಾ ಸೆಲ್ಟೋಸ್ ಎಸ್‍ಯುವಿ ರೋಡ್ ಟೆಸ್ಟ್ ಅನ್ನು ನಡೆಸಿದ್ದು, ವಾಹನ ಪ್ರೇಮಿಗಳಿಗೆ ಹೆಚ್ಚು ಕುತೂಹಲ ಮೂಡಿಸಿದೆ.
ಕಿಯಾ ಇಂಡಿಯಾ ಈಗಾಗಲೇ ಹೊಸ 1.5-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಮತ್ತು ಹೊಸ ಸೆಲ್ಟೋಸ್‌ನಲ್ಲಿ ವಿವಿಧ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಿರುವುದರಿಂದ, ಹೊಸದಾಗಿ ರೋಡ್ ಟೆಸ್ಟ್ ನಲ್ಲಿ ಕಾಣಿಸಿಕೊಂಡ ಕಿಯಾ ಸೆಲ್ಟೋಸ್ ಎಸ್‍ಯುವಿಯು ಸಿಎನ್‌ಜಿ-ಹೊಂದಾಣಿಕೆಯ ಪವರ್‌ಟ್ರೇನ್ ಅನ್ನು ಹೊಂದಿರುವ ಮಾದರಿಯಾಗಿರಬಹುದು ಎಂದು ನಿರೀಕ್ಷಿಸುತ್ತೇವೆ. ಸ್ಪೈ ಚಿತ್ರಗಳನ್ನು ಹೊರತುಪಡಿಸಿ ಇದರ ಬಗ್ಗೆ ಹೆಚ್ಚು ಮಾಹಿತಿ ಬಹಿರಂಗವಾಗಿಲ್ಲ.

ಈ CNG-ಹೊಂದಾಣಿಕೆಯ ಪವರ್‌ಟ್ರೇನ್ 1.5-ಲೀಟರ್, 4-ಸಿಲಿಂಡರ್, ಟರ್ಬೋಚಾರ್ಜ್ಡ್ ಯುನಿಟ್ ಆಗಿರಬಹುದು. ಈ ಪವರ್‌ಟ್ರೇನ್ ದೇಶದ ಮೊದಲ ಟರ್ಬೋಚಾರ್ಜ್ಡ್ ಸಿಎನ್‌ಜಿ ಎಂಜಿನ್ ಆಗಬಹುದು. ಈ ಪವರ್‌ಟ್ರೇನ್ ಕಿಯಾ ಕ್ಯಾರೆನ್ಸ್ ಎಂಪಿವಿಯೊಂದಿಗೆ ಯೊಂದಿಗೆ ತನ್ನ ಚೊಚ್ಚಲ ಪ್ರವೇಶವನ್ನು ಮಾಡಬಹುದು. ಅಲ್ಲದೆ, ಕಿಯಾ ತನ್ನದೇ ಆದ ಡ್ಯುಯಲ್ ಸಿಎನ್‌ಜಿ ಟ್ಯಾಂಕ್ ಅನ್ನು ಪರಿಚಯಿಸುವ ಹೆಚ್ಚಿನ ಸಾಧ್ಯತೆಯಿದೆ.
ಹಾಗಿದ್ದಲ್ಲಿ, ಈ ವಿನ್ಯಾಸವು ಟಾಟಾದ ಇತ್ತೀಚಿನ CNG ಕಾರುಗಳಲ್ಲಿ ಈಗಾಗಲೇ ನೋಡಿದಂತೆ, ಒಂದು ದೊಡ್ಡ CNG ಟ್ಯಾಂಕ್ ಹೊಂದಿರುವ CNG ಕಾರುಗಳಿಗೆ ಹೋಲಿಸಿದರೆ ಬೂಟ್ ಅನ್ನು ಹೆಚ್ಚು ಬಳಸಬಹುದಾಗಿದೆ. ಇದಲ್ಲದೆ, ಭಾರತೀಯ ಮಾರುಕಟ್ಟೆಯಲ್ಲಿ ಸಿಎನ್‌ಜಿ ಕಾರುಗಳಿಗೆ ಹೆಚ್ಚುತ್ತಿರುವ ಬೇಡಿಕೆಯೊಂದಿಗೆ, ಕಿಯಾ ಇಂಡಿಯಾ ತನ್ನ ಸಿಎನ್‌ಜಿ-ಹೊಂದಾಣಿಕೆಯ ಪವರ್‌ಟ್ರೇನ್ ಅನ್ನು ಅಭಿವೃದ್ಧಿಪಡಿಸುವಲ್ಲಿ ಹೆಚ್ಚು ಸಕ್ರಿಯವಾಗಿರುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ.

ಹೇಳಿದಂತೆ, ಈ CNG-ಹೊಂದಾಣಿಕೆಯ ಪವರ್‌ಟ್ರೇನ್ ಕ್ಯಾರೆನ್ಸ್, ಸೆಲ್ಟೋಸ್ ಮತ್ತು ಕ್ರೆಟಾ ಸೇರಿದಂತೆ ಹಲವಾರು ಉತ್ಪನ್ನಗಳಲ್ಲಿ ಲಭ್ಯವಿರಬಹುದು. ವಿಶೇಷಣಗಳ ವಿಷಯದಲ್ಲಿ, CNG ಮೋಡ್ 1.5-ಲೀಟರ್ ಟರ್ಬೋಚಾರ್ಜ್ಡ್ ಪವರ್‌ಟ್ರೇನ್‌ನ ಶಕ್ತಿ ಮತ್ತು ಟಾರ್ಕ್ ಉತ್ಪಾದನೆಯನ್ನು ಸ್ವಲ್ಪಮಟ್ಟಿಗೆ ಮಂದಗೊಳಿಸುತ್ತದೆ. ಸ್ಟ್ಯಾಂಡರ್ಡ್ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಜೊತೆಗೆ 7-ಸ್ಪೀಡ್ ಡಿಸಿಟಿ ಗೇರ್‌ಬಾಕ್ಸ್‌ನೊಂದಿಗೆ ಈ ಪವರ್‌ಟ್ರೇನ್ ನೀಡಲಾಗುವುದು ಎಂದು ನಾವು ನಿರೀಕ್ಷಿಸುತ್ತೇವೆ.
ಬಿಡುಗಡೆಯಾದರೆ, ಕಿಯಾ ಸೆಲ್ಟೋಸ್ ಸಿಎನ್‌ಜಿ (Kia Seltos CNG) ಆಯ್ದ ರೂಪಾಂತರಗಳ ಅಡಿಯಲ್ಲಿ ನೀಡಬಹುದು. ಅಲ್ಲದೆ, ಕಿಯಾ ಸೆಲ್ಟೋಸ್ ಸಿಎನ್‌ಜಿಯನ್ನು ಅದರ ಪೆಟ್ರೋಲ್ ಚಾಲಿತ ಒಡಹುಟ್ಟಿದವರ ಜೊತೆ ನೇರ ಸ್ಪರ್ಧೆಯನ್ನು ತಪ್ಪಿಸಲು ಬೇಸ್ ಟ್ರಿಮ್ ಮಟ್ಟದಲ್ಲಿ ನೀಡುತ್ತೇವೆ ಎಂದು ನಾವು ನಿರೀಕ್ಷಿಸುವುದಿಲ್ಲ. ಇನ್ನು 1.5-ಲೀಟರ್, ಟರ್ಬೋಚಾರ್ಜ್ಡ್ ಸಿಎನ್‌ಜಿ-ಹೊಂದಾಣಿಕೆಯು ಯಶಸ್ವಿಯಾದರೆ, ಮುಂದಿನ ಹೊಸ ವರ್ಷದಲ್ಲಿ ಈ ಪವರ್‌ಟ್ರೇನ್‌ಗಳು ಸೆಲ್ಟೋಸ್, ಕ್ಯಾರೆನ್ಸ್ ಮತ್ತು ಹ್ಯುಂಡೈ ಕ್ರೆಟಾದಂತಹ ಮಾದರಿಗಳಲ್ಲಿಯೂ ನೀಡಬಹುದು ಎಂದು ನಿರೀಕ್ಷಿಸುತ್ತೇವೆ.

ಮಾರುಕಟ್ಟೆಯಲ್ಲಿ ಮಾರಾಟವಾಗುವ ಕಿಯಾ ಸೆಲ್ಟೋಸ್ ಮಾದರಿಯ ಒಳಭಾಗದಲ್ಲಿ ಅದರ ಹೊಸ ಡ್ಯುಯಲ್-ಸ್ಕ್ರೀನ್ ವಿನ್ಯಾಸದೊಂದಿಗೆ ಹೆಚ್ಚು ಹೈಟೆಕ್ ಆಗಿ ಕಾಣುತ್ತದೆ. ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಬಗ್ಗೆ ಹೇಳುವುದಾದರೆ, ಪ್ರಮುಖ ಅಂಶವೆಂದರೆ ಈಗ ಲೆವೆಲ್-2 ADAS ತಂತ್ರಜ್ಞಾನವನ್ನು ಹೊಂದಿದೆ. ಈ ತಂತ್ರಜ್ಞಾನವು ಆಟೋ ಎಮರ್ಜೆನ್ಸಿ ಬ್ರೇಕಿಂಗ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ರಿಯರ್ ಕ್ರಾಸ್-ಟ್ರಾಫಿಕ್ ಅಲರ್ಟ್, ಲೇನ್-ಕೀಪಿಂಗ್ ಅಸಿಸ್ಟ್, ಬ್ಲೈಂಡ್-ಸ್ಪಾಟ್ ಮಾನಿಟರಿಂಗ್ ಮತ್ತು ಹೆಚ್ಚಿನ ಸುರಕ್ಷತಾ ಫೀಚರ್ಸ್ ಗಳನ್ನು ಹೊಂದಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








