ಮಾರುಕಟ್ಟೆಯಲ್ಲಿ ಸುನಾಮಿ ಎಬ್ಬಿಸುತ್ತಾ ಕಿಯಾ ಸೆಲ್ಟೋಸ್‌ ಹೈಬ್ರಿಡ್!: ಇನ್ನುಮುಂದೆ ಎದುರಾಳಿಗಳ ಕಥೆಯೇನು?

ದಕ್ಷಿಣ ಕೊರಿಯಾ ಮೂಲದ ಪ್ರಸಿದ್ದ ಕಾರು ನಿರ್ಮಾಣ ಕಂಪನಿಯಾದ ಕಿಯಾ, ಭಾರತದಲ್ಲಿ ಈಗಾಗಲೇ ತನ್ನ ಸಾಮರ್ಥ್ಯ ಏನು ಎಂಬುದನ್ನು ತೋರಿಸಿದೆ. ಈಗಾಗಲೇ ಭಾರತದಲ್ಲಿ ತನ್ನ ಕೆಲವೇ ಕೆಲವು ಕಾರು ಮಾದರಿಗಳನ್ನು ಭಾರೀ ಸಂಖ್ಯೆಯಲ್ಲಿ ಮಾರಾಟ ಮಾಡುವುದರ ಜೊತೆಗೆ ತನ್ನದೇ ಆದ ಅಭಿಮಾನಿ ವರ್ಗದವರನ್ನು ಹೊಂದಿದೆ. ಈ ಕಾರಿನ ಪ್ರಸಿದ್ದ ಕಾರು ಮಾದರಿಗಳಾದ ಕಿಯಾ ಸೆಲ್ಟೋಸ್‌ ಮತ್ತು ಸಾನೆಟ್ ಕಾರಿನ ಫೇಸ್‌ಲಿಫ್ಟ್‌ ಮಾದರಿಯನ್ನೂ ಸಹ ಕಿಯಾ ಇತ್ತೀಚೆಗೆ ಭಾರತೀಯ ಮಾರುಕಟ್ಟೆಗೆ ಪರಿಚಯಿಸಿತ್ತು. ಕಂಪನಿ ಇದೀಗ ಕಿಯಾ ಕಾರೆನ್ಸ್‌ ಕಾರಿನ ಫೇಸ್‌ಲಿಫ್ಟ್‌ ಅನ್ನು ಸಹ ಅಭಿವೃದ್ದಿ ಪಡಿಸುತ್ತಿದೆ.

ಇದೀಗ ಬಂದ ಮಾಹಿತಿಗಳ ಪ್ರಕಾರ ಕಿಯಾ ಇದೀಗ ಸೆಲ್ಟೋಸ್‌ ಕಾರನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ತೀರ್ಮಾನಿಸಿದ್ದು, ಎಲ್ಲರೂ ಬಯಸುವಂತಹ ಅಪ್‌ಡೇಟ್‌ ಮುಂದಿನ ವರ್ಷ ಈ ಕಾರಿಗೆ ಬರಲಿದೆ ಎಂದು ಹೇಳುತ್ತಿದ್ದಾರೆ. ಕಿಯಾ ಇಂಡಿಯಾ ಕಂಪನಿಯು ದೇಶದ 5 ನೇ ಅತಿದೊಡ್ಡ ಕಾರು ತಯಾರಾಗಲು ಕಿಯಾ ಸೆಲ್ಟೋಸ್ ಎಸ್‍ಯುವಿಯು ಹೆಚ್ಚಿನ ಕೊಡುಗೆಯನ್ನು ನೀಡಿದೆ.

KIA Seltos Hybrid Will Be Coming To Market By 2025

ಮಮೂಲಗಳ ಪ್ರಕಾರ ಕಿಯಾ ಕಂಪನಿಯು ಸೆಲ್ಟೋಸ್‌ ಕಾರಿನ ಹೈಬ್ರಿಡ್‌ (KIA Seltos Hybrid) ಆವೃತ್ತಿಯನ್ನು ಅಭಿವೃದ್ದಿ ಪಡಿಸುತ್ತಿದ್ದು, ಮುಂದಿನ ವರ್ಷ ಇದನ್ನು ಮಾರುಕಟ್ಟೆಗೆ ತರುವತ್ತ ಪ್ರಯತ್ನಿಸುತ್ತಿದೆ ಎಂದು ತಿಳಿದು ಬಂದಿದೆ. ಮಾತ್ರವಲ್ಲದೇ ಈ ಹೊಸ ಸೆಲ್ಟೋಸ್ ಆಲ್‌ವ್ಹೀಲ್‌ ಡ್ರೈವ್‌ ಮಾದರಿಯೊಂದಿಗೆ ಬರಲಿದ್ದು, ಇದು ವಾಹನ ಪ್ರೇಮಿಗಳ ನಡುವೆ ಹೆಚ್ಚಿನ ಸದ್ದು ಮಾಡಲಿದೆ ಎಂದು ತಿಳಿದು ಬಂದಿದೆ. ಮೈಲೇಜ್‌ ಸಹ ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಾಗಲಿದೆ.

ಮಾತ್ರವಲ್ಲದೇ ಕಿಯಾ ಕಂಪನಿ ಮುಂಬರುವ ವರ್ಷಗಳಲ್ಲಿ ಭಾರತ ಸೇರಿದಂತೆ ಜಾಗತಿಕವಾಗಿ ಸುಮಾರು ಎಂಟು ಹೈಬ್ರಿಡ್ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಲಿದೆ ಎನ್ನಲಾಗುತ್ತಿದೆ. ಇಂಡಿಯಾ-ಸ್ಪೆಕ್ ಕಿಯಾ ಸೆಲ್ಟೋಸ್ ಎಸ್‍ಯುವಿಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ನವೀಕರಿಸಿದೆ. ಸದ್ಯಕ್ಕೆ ಭಾರತೀಯ ಮಾರುಕಟ್ಟೆಯಲ್ಲಿರುವ ಕಿಯಾ ಸೆಲ್ಟೋಸ್‌ ಬಗ್ಗೆ ನೋಡುವುದಾದರೆ,

KIA Seltos Hybrid Will Be Coming To Market By 2025

ಈ ಹೊಸ ಕಿಯಾ ಸೆಲ್ಟೋಸ್ ಎಸ್‍ಯುವಿಯು GT ಲೈನ್ ಮಾದರಿಗಳು ಡ್ಯುಯಲ್-ಎಕ್ಸಾಸ್ಟ್ ಸೆಟಪ್ ಅನ್ನು ಸಹ ಹೊಂದಿವೆ, ಇದು ಫಾಕ್ಸ್ ರಿಯರ್ ಬ್ಯಾಷ್ ಪ್ಲೇಟ್‌ನ ಎರಡೂ ಬದಿಯಿಂದ ನಿರ್ಗಮಿಸುತ್ತದೆ. ಒಟಾರೆಯಾಗಿ ಹೊಸ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಎಸ್‍ಯುವಿಯು ಹಿಂದಿನ ಮಾದರಿಗಿಂತ ಹೆಚ್ಚು ಸ್ಟೈಲಿಷ್ ಆಗಿದೆ.

ಹೊಸ ಸೆಲ್ಟೋಸ್ ಆರು ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆಗೆ ಇಬಿಡಿ, ಬ್ರೇಕ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ಹಿಲ್ ಡಿಸೆಂಟ್ ಕಂಟ್ರೋಲ್, ಹಿಲ್ ಹೋಲ್ಡ್ ಕಂಟ್ರೋಲ್, ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್‌ಮೆಂಟ್, ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳು, ಐಎಸ್‌ಒಫಿಕ್ಸ್ ಮತ್ತು ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳಂತಹ ಸುರಕ್ಷತಾ ಸಾಧನಗಳೊಂದಿಗೆ ಗಿಲ್‌ಗಳಿಗೆ ಪ್ಯಾಕ್ ಮಾಡಲಾಗಿದೆ.

KIA Seltos Hybrid Will Be Coming To Market By 2025

ಹೊಸ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ಎಸ್‍ಯುವಿಯು ADAS ಲೆವೆಲ್ 2 ಡ್ರೈವಿಂಗ್ ಏಡ್ಸ್ ಅನ್ನು ಸಹ ಒಳಗೊಂಡಿದೆ, ಇದರಲ್ಲಿ ಸ್ಟಾಪ್-ಅಂಡ್-ಗೋ ಕಾರ್ಯನಿರ್ವಹಣೆಯೊಂದಿಗೆ ಕ್ರೂಸ್ ಕಂಟ್ರೋಲ್, (FCW ಮತ್ತು FCA), ಲೇನ್ ಕೀಪ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಕೊಲಿಶನ್ ವಾರ್ನಿಂಗ್ ಮತ್ತು ಹೆಚ್ಚಿನವು ಸೇರಿವೆ.

ಹೊಸ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಎಸ್‍ಯುವಿಯು ಮೂರು ಎಂಜಿನ್ ಆಯ್ಕೆಗಳನ್ನು ಹೊಂದಿವೆ. ಫೇಸ್‌ಲಿಫ್ಟೆಡ್ ಸೆಲ್ಟೋಸ್ ಎಸ್‍ಯುವಿಯಲ್ಲಿ 1.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ 113 bhp ಮತ್ತು 144 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಅಥವಾ iVT ಗೇರ್‌ಬಾಕ್ಸ್‌ನೊಂದಿಗೆ ಜೋಡಿಯಾಗಿ ಬರುತ್ತದೆ.

ಇನ್ನು ಈ ಎಸ್‍ಯುವಿಯಲ್ಲಿ 1.5-ಲೀಟರ್ ಡೀಸೆಲ್ ಎಂಜಿನ್ ಬದಲಾಗದೆ ಉಳಿದಿದೆ. ಇದು 114 bhp ಪವರ್ ಮತ್ತು 250 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು iMT ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಆಯ್ಕೆಗಳೊಂದಿಗೆ ಜೋಡಿಯಾಗಿ ಬರುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, July 9, 2024, 10:30 [IST]
English summary
Kia seltos hybrid will be coming to market by 2025
Read more on kia motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+