ಆಕರ್ಷಕ ಬೆಲೆ: ಭಾರೀ ಬೇಡಿಕೆಯ ಕಿಯಾ ಸೆಲ್ಟೋಸ್ ಎಸ್‍ಯುವಿಯ ಹೊಸ ರೂಪಾಂತರಗಳು ಬಿಡುಗಡೆ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಕಿಯಾ ಇಂಡಿಯಾ ತನ್ನ ನವೀಕರಿಸಿದ 2024ರ ಕಿಯಾ ಸೆಲ್ಟೋಸ್ (Kia Seltos) ಎಸ್‍ಯುವಿಯನ್ನು ಬಿಡುಗಡೆಗೊಳಿಸಲಾಗಿತ್ತು. ಈಗ ಕಿಯಾ ಸೆಲ್ಟೋಸ್ ಮಿಡ್ ಸೈಜ್ ಎಸ್‍ಯುವಿಯಲೈನ್-ಅಪ್‌ಗೆ ಎರಡು ಹೊಸ ರೂಪಾಂತರಗಳನ್ನು ಸೇರಿಸಿದೆ. ಸೆಲ್ಟೋಸ್ ಈಗ ಹೆಚ್ಚುವರಿಯಾಗಿ HTK+ ಪೆಟ್ರೋಲ್ CVT ಮತ್ತು HTK+ ಡೀಸೆಲ್ AT ರೂಪಾಂತರಗಳಲ್ಲಿ ಲಭ್ಯವಿದ.

ಕಿಯಾ ಸೆಲ್ಟೋಸ್ ಎಸ್‍ಯುವಿಯ HTK+ ಪೆಟ್ರೋಲ್ CVT ರೂಪಾಂತರದ ಬೆಲೆಯು ರೂ.15.40 ಲಕ್ಷವಾದರೆ, HTK+ ಡೀಸೆಲ್ AT ರೂಪಾಂತರದ ಬೆಲೆಯು ರೂ.16.90 ಲಕ್ಷವಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. ಕಿಯಾ ಸೆಲ್ಟೋಸ್ ಎಸ್‍ಯುವಿ ಪೆಟ್ರೋಲ್ CVT ಈ ಹಿಂದೆ HTX ರೂಪಾಂತರದಲ್ಲಿ ಮಾತ್ರ ಲಭ್ಯವಿತ್ತು. ಅದೇ ರೀತಿ, ಡೀಸೆಲ್ AT ಆವೃತ್ತಿಯನ್ನು HTX, GTX+ (S), GTX+, X-Line (S), ಮತ್ತು X-Line ರೂಪಾಂತರಗಳಲ್ಲಿ ನೀಡಲಾಗಿತ್ತು.

Kia Seltos

ಹೊಸ ಸೆಲ್ಟೋಸ್ ಎಸ್‍ಯುವಿ HTK+ (ಪೆಟ್ರೋಲ್ CVT ಮತ್ತು ಡೀಸೆಲ್ AT) ರೂಪಾಂತರದಲ್ಲಿ LED DRL ಗಳು, 16-ಇಂಚಿನ ಅಲಾಯ್ ವ್ಹೀಲ್ ಗಳು, ಎಂಜಿನ್ ಸ್ಟಾರ್ಟ್-ಸ್ಟಾಪ್ ಬಟನ್ ಹೊಂದಿರುವ ಸ್ಮಾರ್ಟ್ ಕೀ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ರಿಯರ್ ಡಿಫಾಗರ್, ರಿಯರ್ ವೈಪರ್ ಮತ್ತು ವಾಷರ್, ಕ್ರೂಸ್ ಕಂಟ್ರೋಲ್, ಎಲೆಕ್ಟ್ರಿಕಲ್ ಫೋಲ್ಡಿಂಗ್ ORVMಗಳು, ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್‌ಗಳು ಮತ್ತು ವೈರ್‌ಲೆಸ್ ಫೋನ್ ಪ್ರೊಜೆಕ್ಷನ್‌ನೊಂದಿಗೆ ಎಂಟು ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್ ಹೊಂದಿದೆ.

ಸೆಲ್ಟೋಸ್ ಎಸ್‍ಯುವಿ CVT ಮತ್ತು ಡೀಸೆಲ್ AT ಆವೃತ್ತಿಯ HTK+ ರೂಪಾಂತರಗಳು , HTX ರೂಪಾಂತರಗಳಲ್ಲಿ ಲಭ್ಯವಿರುವ ಫಿಚರ್ಸ್ ಗಳನ್ನು ಕಳೆದುಕೊಳ್ಳುತ್ತವೆ. ಉದಾಹರಣೆಗೆ ಪನರೊಮಿಕ್ ಸನ್‌ರೂಫ್, LED ಹೆಡ್‌ಲ್ಯಾಂಪ್‌ಗಳು, ಫಾಗ್ ಲ್ಯಾಂಪ್ ಗಳು ಮತ್ತು ಟೈಲ್‌ಲೈಟ್ ಆಗಿದೆ. ಇನ್ನು ಈ ರೂಪಾಂತರಗಳಲ್ಲಿ 17-ಇಂಚಿನ ಡೈಮಂಡ್-ಕಟ್ ಅಲಾಯ್ ವ್ಹೀಲ್ ಗಳು, ಬ್ಲ್ಯಾಕ್ ಮತ್ತು ಬೀಜ್ ಆಂತರಿಕ ಥೀಮ್, ಸಾಫ್ಟ್-ಟಚ್ ಡ್ಯಾಶ್‌ಬೋರ್ಡ್ ಅನ್ನು ಫ್ಲಾಟ್-ಬಾಟಮ್ ಸ್ಟೀರಿಂಗ್ ವೀಲ್ ಅನ್ನು ಹೊಂದಿದೆ.

Kia Seltos

ಇದರೊಂದಿಗೆ ವೈರ್‌ಲೆಸ್ ಫೋನ್ ಪ್ರೊಜೆಕ್ಷನ್‌ನೊಂದಿಗೆ 10.25-ಇಂಚಿನ ಸ್ಕ್ರೀನ್, OTA ಅಪ್‌ಡೇಟ್‌ಗಳು ಮತ್ತು ವಾಯ್ಸ್ ಕಾಮೆಂಡ್ ಒಳಗೊಂಡಿದೆ. ಇತರ ಗಮನಾರ್ಹ ವೈಶಿಷ್ಟ್ಯಗಳೆಂದರೆ ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ಆಂಬಿಯೆಂಟ್ ಲೈಟಿಂಗ್, ಪ್ಯಾಡಲ್ ಶಿಫ್ಟರ್‌ಗಳು, ಸ್ವಯಂ-ಡಿಮ್ಮಿಂಗ್ IRVM, ಡ್ರೈವ್ ಮೋಡ್‌ಗಳು, ಟ್ರಾಕ್ಷನ್ ಮೋಡ್‌ಗಳು, 60:40 ಸ್ಪ್ಲಿಟ್ ರಿಯರ್ ಸೀಟ್‌ಗಳು ಮತ್ತು ಕಪ್ ಹೋಲ್ಡರ್‌ಗಳೊಂದಿಗೆ ಹಿಂಭಾಗದ ಆರ್ಮ್‌ರೆಸ್ಟ್ ಅನ್ನು ಹೊಂದಿದೆ.

ಈ ಸೆಲ್ಟೋಸ್ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ 1.5-ಲೀಟರ್, ನ್ಯಾಚುರಲ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 113bhp ಮತ್ತು 144Nm ಪೀಕ್ ಟಾರ್ಕ್‌ನೊಂದಿಗೆ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ iMT ಗೇರ್‌ಬಾಕ್ಸ್ ಅಥವಾ CVT ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಈ ಫೇಸ್‌ಲಿಫ್ಟೆಡ್ ಮಾಡೆಲ್‌ನಲ್ಲಿಯೂ 1.5-ಲೀಟರ್, ಟರ್ಬೋಚಾರ್ಜ್ಡ್, ಡೀಸೆಲ್ ಎಂಜಿನ್ ಹೊಂದಿದೆ.

ಈ ಎಂಜಿನ್ 114bhp ಮತ್ತು 250Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಯುನಿಟ್‌ನೊಂದಿಗೆ ಜೋಡಿಸಬಹುದು. ಇನ್ನು ಕೊನೆಯದಾಗಿ, ಹೊಸದಾಗಿ ಪರಿಚಯಿಸಲಾದ 1.5-ಲೀಟರ್, ಟರ್ಬೋಚಾರ್ಜ್ಡ್, ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 158 bhp ಪವರ್ ಮತ್ತು 253 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

2019ರಿಂದ ಬಿಡುಗಡೆಯಾದಗಿನಿಂದ, ಭಾರತದ ಗ್ರಾಹಕರು ಹೊಸ ಸೆಲ್ಟೋಸ್ ಎಸ್‍‍ಯುವಿಯ ಆಕರ್ಷಕ ಲುಕ್ ಮತ್ತು ಅತ್ಯಾಧುನಿಕ ಫೀಚರ್ಸ್‌ಗಳಿಗೆ ಫುಲ್ ಫಿದಾ ಆಗಿದ್ದಾರೆ.ದೇಶಿಯ ಮಾರುಕಟ್ಟೆಯ ಗ್ರಾಹಕರ ಗಮನ ಸೆಳೆಯುವಲ್ಲಿ ಕಿಯಾ ಸೆಲ್ಟೋಸ್ ಎಸ್‍ಯುವಿಯು ಯಶ್ವಸಿಯಾಗಿದೆ. ಈ ರಿಫ್ರೆಶ್ ಮಾಡೆಲ್ ಕಿಯಾ ಸೆಲ್ಟೋಸ್ ಎಸ್‍ಯುವಿ ಮಾದರಿಯು ಸೋರ್ಟಿ ವಿನ್ಯಾಸ ಮತ್ತು ಅತ್ಯಾಧುನಿಕ ಫೀಚರ್ಸ್ ಅನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, March 26, 2024, 18:53 [IST]
English summary
Kia seltos suv gets new automatic variants prices details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+