ಈ ಮಿಡ್‌ಸೈಜ್ ಎಸ್‌ಯುವಿಗಳಲ್ಲಿ ಯಾವುದು ಬೆಸ್ಟ್? ಸಿಂಪಲ್ ವಿವರಣೆ ಇಲ್ಲಿದೆ ನೋಡಿ...
ಭಾರತದಲ್ಲಿ ಮಿಡ್‌ಸೈಜ್ ಎಸ್‌ಯುವಿ ವಿಭಾಗಕ್ಕೆ ಪ್ರತ್ಯೇಕ ಅಭಿಮಾನಿ ಬಳಗವಿದೆ. ಪ್ರತಿಯೊಂದು ಕಾರು ತಯಾರಕ ಕಂಪನಿ ಕೂಡ ಈ ವಿಭಾಗದಲ್ಲಿ ತಮ್ಮ ಅತ್ಯುತ್ತಮ ಎಸ್‌ಯುವಿಗಳನ್ನು ನೀಡಲು ಬಯಸುತ್ತವೆ. ಈ ವಿಭಾಗದಲ್ಲಿ ಎರಡು ಜನಪ್ರಿಯ ಕಾರುಗಳಾದ ನವೀಕೃತ ಕಿಯಾ ಸೆಲ್ಟೋಸ್ ಮತ್ತು 2024ರ ಹ್ಯುಂಡೈ ಕ್ರೆಟಾ ಉತ್ತಮ ಬೇಡಿಕೆ ಪಡೆದಿವೆ. ಹೊಸ ವಿನ್ಯಾಸ ಮತ್ತು ಸೊಗಸಾದ ನೋಟಗಳೊಂದಿಗೆ ಬರುತ್ತವೆ. ಒಂದೇ ವೇದಿಕೆಯ ಆಧಾರದ ಮೇಲೆ, ಎರಡೂ SUV ಗಳು ಬಹುತೇಕ ಒಂದೇ ಆಯಾಮಗಳನ್ನು ಹೊಂದಿವೆ. ಹಾಗಾದ್ರೆ ಯಾವೆಲ್ಲಾ ವಿಷಯಗಳಲ್ಲಿ ಎರಡೂ ಕಾರುಗಳಲ್ಲಿ ಯಾವುದು ಉತ್ತಮ ಎಂಬುದನ್ನು ಇಲ್ಲಿ ನೋಡೋಣ.
ವೈಶಿಷ್ಟ್ಯಗಳು: ಹುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್ ಎರಡು ಆಧುನಿಕ ವೈಶಿಷ್ಟ್ಯಗಳನ್ನು ಹೊಂದಿವೆ. ಎರಡೂ ಎಸ್‌ಯುವಿಗಳಲ್ಲಿ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ಪನೋರಮಿಕ್ ಸನ್‌ರೂಫ್, ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ವೆಂಟಿಲೇಟೆಡ್ ಸೀಟ್‌ಗಳು, ಆಂಬಿಯೆಂಟ್ ಲೈಟಿಂಗ್, ಪ್ರೀಮಿಯಂ ಆಡಿಯೊ ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಹೊಂದಿವೆ.

ಆದರೆ ಸೆಲ್ಟೋಸ್ ಮಾತ್ರ ತನ್ನ ಟಾಪ್ ವೇರಿಯೆಂಟ್ ಆದ ಎಕ್ಸ್-ಲೈನ್‌ನಲ್ಲಿ ವಿಶೇಷವಾದ ಹೆಡ್ - ಅಪ್ ಡಿಸ್‌ಪ್ಲೇಯನ್ನು ಹೊಂದಿದೆ. ಉಳಿದಂತೆ ಎರಡರಲ್ಲೂ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಲೇನ್ - ಕೀಪಿಂಗ್ ಅಸಿಸ್ಟ್ ಅನ್ನು ಒಳಗೊಂಡಿರುವ ಸ್ಟೇಜ್ 2 ಸುಧಾರಿತ ADAS ಸಿಸ್ಟಮ್ ಅನ್ನು ಹೊಂದಿವೆ.
ಕ್ರೆಟಾ ಎಂಜಿನ್ ವಿಶೇಷತೆಗಳು: 2024 ಹ್ಯುಂಡೈ ಕ್ರೆಟಾ ಮೂರು ವಿಭಿನ್ನ ಎಂಜಿನ್ ಆಯ್ಕೆಗಳನ್ನು ಹೊಂದಿದ್ದು, ಇದರಲ್ಲಿ ಎರಡು ಪೆಟ್ರೋಲ್ ಮತ್ತು ಒಂದು ಡೀಸೆಲ್ ಆಯ್ಕೆಯಿದೆ. ಪೆಟ್ರೋಲ್ ರೂಪಾಂತರಗಳು 1.5-ಲೀಟರ್ MPi ಎಂಜಿನ್ ಮತ್ತು 1.5-ಲೀಟರ್ ಕಪ್ಪಾ ಟರ್ಬೋಚಾರ್ಜ್ಡ್ GDi ಹಾಗೂ 1.5-ಲೀಟರ್ U2 CRDi ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ.

1.5 - ಲೀಟರ್ MPi ಪೆಟ್ರೋಲ್ ಎಂಜಿನ್ 113 bhp ಗರಿಷ್ಠ ಪವರ್ ಮತ್ತು 144 Nm ಗರಿಷ್ಠ ಟಾರ್ಕ್ ಹೊರಹಾಕುತ್ತದೆ. 1.5 - ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ 157 bhp ಗರಿಷ್ಠ ಪವರ್ ಮತ್ತು 253 Nm ಗರಿಷ್ಠ ಟಾರ್ಕ್ ಅನ್ನು ಹೊರಹಾಕುತ್ತದೆ.
ಉಳಿದಂತೆ 1.5 - ಲೀಟರ್ U2 CRDi ಡೀಸೆಲ್ ಎಂಜಿನ್ 113 bhp ಗರಿಷ್ಠ ಪವರ್ ಮತ್ತು 250 Nm ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ. 6 - ಸ್ಪೀಡ್ ಮ್ಯಾನುವಲ್, IVT, 7 - ಸ್ಪೀಡ್ DCT ಮತ್ತು 6 - ಸ್ಪೀಡ್ ಆಟೋಮ್ಯಾಟಿಕ್ ಆಯ್ಕೆಗಳನ್ನು ಹೊಂದಿದೆ.

ಸೆಲ್ಟೋಸ್ ಎಂಜಿನ್ ವಿಶೇಷತೆಗಳು: ಕಿಯಾ ಸೆಲ್ಟೋಸ್ ಎರಡು ಪೆಟ್ರೋಲ್ ಮತ್ತು ಒಂದು ಡೀಸೆಲ್ ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಇದು 1.5 - ಲೀಟರ್ ಟರ್ಬೊ - ಪೆಟ್ರೋಲ್ ಘಟಕವನ್ನು ಪಡೆದಿದ್ದು, ಇತರ ಎರಡು 1.5 - ಲೀಟರ್ ನ್ಯಾಚುರಲ್ಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಮತ್ತು 1.5 - ಲೀಟರ್ ಡೀಸೆಲ್ ಎಂಜಿನ್ ಅನ್ನು ಒಳಗೊಂಡಿದೆ.
ಗೇರ್ ಬಾಕ್ಸ್ ಆಯ್ಕೆಗಳನ್ನು ನೋಡುವುದಾದ್ರೆ 6 - ಸ್ಪೀಡ್ ಮ್ಯಾನುವಲ್, IVT, 6 - ಸ್ಪೀಡ್ iMT, 7-ಸ್ಪೀಡ್ DCT ಮತ್ತು 6 - ಸ್ಪೀಡ್ ಆಟೋಮ್ಯಾಟಿಕ್ ಆಯ್ಕೆಯಿದೆ. ಈ ಎಂಜಿನ್‌ಗಳು ಹ್ಯುಂಡೈ ಕ್ರೆಟಾದಂತೆಯೇ ಅದೇ ಪವರ್ ಮತ್ತು ಟಾರ್ಕ್ ಔಟ್‌ಪುಟ್‌ಗಳನ್ನು ಹೊರಹಾಕುತ್ತವೆ.


Click it and Unblock the Notifications