8 ಲಕ್ಷ ಬೆಲೆಯ ಬೆಸ್ಟ್ ಎಸ್‌ಯುವಿ: 22 ಕಿ.ಮೀ ಮೈಲೇಜ್, 6 ಏರ್‌ಬ್ಯಾಗ್, ಅತ್ಯುತ್ತಮ ಫೀಚರ್ಸ್
ಜನಪ್ರಿಯ ಕಾರು ತಯಾರಕ ಕಂಪನಿಯಾದ ಕಿಯಾ, ತನ್ನ ಸಾನೆಟ್ ಫೆಸ್‌ಲಿಫ್ಟ್ (Sonet Facelift) ಎಸ್‌ಯುವಿಯನ್ನು ಇದೇ ವರ್ಷದ ಜನವರಿಯಲ್ಲಿ ಬಿಡುಗಡೆ ಮಾಡಿತ್ತು. ಸಾನೆಟ್ ಭರ್ಜರಿ ವೈಶಿಷ್ಟ್ಯಗಳನ್ನು ಪಡೆದುಕೊಳ್ಳುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿದಾರರನ್ನು ಆಕರ್ಷಿಸಿದೆ. ಭಾರತದ ಮಾರುಕಟ್ಟೆಯಲ್ಲಿ ಕಿಯಾ ಸಾನೆಟ್ ಫೇಸ್‌ಲಿಫ್ಟ್ ಎಸ್‌ಯುವಿ ರೂ.7.99 ದಿಂದ ರೂ.15.69 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಈ ಕಾರು ವಿನ್ಯಾಸ ಹಾಗೂ ವೈಶಿಷ್ಟ್ಯದ ವಿಚಾರದಲ್ಲಿ ಅತ್ಯಾಧುನಿಕವಾಗಿದ್ದು, ಆಸಕ್ತ ಖರೀದಿದಾರರಿಗೆ ಬೇಕಾದ ಎಲ್ಲಾ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಈ ಕಾರು, ಹೆಚ್‌ಟಿಇ, ಹೆಚ್‌ಟಿಕೆ, ಹೆಚ್‌ಟಿಕೆ ಪ್ಲಸ್, ಹೆಚ್‌ಟಿಎಕ್ಸ್ ಹೆಚ್‌ಟಿಎಕ್ಸ್ ಪ್ಲಸ್, ಜಿಟಿಎಕ್ಸ್ ಪ್ಲಸ್ ಸೇರಿದಂತೆ ವಿವಿಧ ರೂಪಾಂತರಗಳು ಮತ್ತು 11 ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿ ಸಿಗುತ್ತದೆ. ಸಾನೆಟ್ ಫೇಸ್‌ಲಿಫ್ಟ್ ಎಸ್‌ಯುವಿಯ ಮೈಲೇಜ್ ವಿಷಯಕ್ಕೆ ಬಂದರೆ ಈ ಕಾರಿನ ಪೆಟ್ರೋಲ್ ರೂಪಾಂತರಗಳು, 18.70 kmpl - 19.20 kmpl, ಡೀಸೆಲ್ ರೂಪಾಂತರಗಳು 18.60 kmpl - 22.30 kmpl ಇಂಧನ ದಕ್ಷತೆ ಹೊಂದಿರುವುದಾಗಿ ಕಂಪನಿ ಹೇಳಿಕೊಂಡಿದೆ.

ಸಾನೆಟ್ ಫೇಸ್‌ಲಿಫ್ಟ್ ಎರಡು ಪೆಟ್ರೋಲ್ ಮತ್ತು ಒಂದು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರೆಯುತ್ತದೆ. ಇದರ 1.2-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ 82 bhp ಪವರ್, 115 Nm ಪೀಕ್ ಟಾರ್ಕ್, ಮತ್ತೊಂದು 998ಸಿಸಿ ಟರ್ಬೋ ಚಾರ್ಜ್ಡ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ 182 bhp ಪವರ್ ಹಾಗೂ 172 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಪೆಟ್ರೋಲ್ ಕಾರುಗಳು ರೂಪಾಂತರಗಳಿಗೆ ಅನುಗುಣವಾಗಿ 5-ಸ್ವೀಡ್ ಮ್ಯಾನುವಲ್ 6-ಸ್ವೀಡ್ ಐಎಂಟಿ, 7-ಸ್ವೀಡ್ ಡಿಸಿಟಿ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿವೆ. 1.5-ಲೀಟರ್ ಟರ್ಬೊ ಡಿಸೇಲ್ ಎಂಜಿನ್ 114 bhp ಪವರ್, 250 Nm ಪೀಕ್ ಟಾರ್ಕ್ ಹೊರಹಾಕುತ್ತದೆ. 6-ಸ್ವೀಡ್ ಮ್ಯಾನುವಲ್, 6-ಸ್ವೀಡ್ ಐಎಂಟಿ, 6-ಸ್ವೀಡ್ ಟಾರ್ಕ್ ಕನ್ವರ್ಟರ್ ಆಟೋಮೆಟಿಕ್ ಟ್ರಾನ್ಸ್ಮಿಷನ್ (ಗೇರ್‌ಬಾಕ್ಸ್) ಅನ್ನು ಪಡೆದಿದೆ.

ಕಿಯಾ ಸಾನೆಟ್ ಯುವ ಗ್ರಾಹಕರನ್ನು ಆಕರ್ಷಿಸುವ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಮುಖವಾಗಿ 10.25-ಇಂಚಿನ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಸ್ಮಾರ್ಟ್ ಏರ್ ಪ್ಯೂರಿಫೈಯರ್ ಸಿಸ್ಟಮ್, 4-ವೇ ಪವರ್ ಡ್ರೈವರ್ ಸೀಟ್, 7-ಸ್ಪೀಕರ್ ಪ್ರೀಮಿಯಂ ಆಡಿಯೊ ಸಿಸ್ಟಮ್, ಹೊಸದಾದ ಇನ್ಫೋಟೈನ್‌ಮೆಂಟ್ ಸ್ಕ್ರೀನ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಕಿಯಾ ಕನೆಕ್ಟ್ ಸೂಟ್, ಒಟಿಎ ಅಪ್ಡೇಟ್, ಸೆಂಟ್ರಲ್ ಏರ್ ವೆಂಟ್ಸ್ ಸೇರಿದಂತೆ ವಿವಿಧ ಫೀಚರ್ಸ್ ಪಡೆದಿದೆ.
ಸುರಕ್ಷತೆಯ ದೃಷ್ಟಿಯಿಂದಲೂ ಹೊಸ ಕಿಯಾ ಸಾನೆಟ್ ಫೇಸ್‌ಲಿಫ್ಟ್ (Kia Sonet Facelift) ಅತ್ಯುತ್ತಮವಾಗಿದೆ. 6 ಏರ್‌ಬ್ಯಾಗ್, ರೇರ್ ಪಾರ್ಕಿಂಗ್ ಸೆನ್ಸಾರ್ಸ್, 360-ಡಿಗ್ರಿ ಕ್ಯಾಮೆರಾ, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಹಿಲ್ ಅಸಿಸ್ಟ್, ಫ್ರಂಟ್, ಆಲ್-ವೀಲ್ ಡಿಸ್ಕ್ ಬ್ರೇಕ್ ಅನ್ನು ಒಳಗೊಂಡಿದೆ. ವಿಶೇಷವಾಗಿ ಅಪಘಾತವನ್ನು ತಪ್ಪಿಸಲು ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ಅನ್ನು ಹೊಂದಿದೆ.

ಸಾನೆಟ್ ಫೇಸ್‌ಲಿಫ್ಟ್ ಕಾರನ್ನು ಅತ್ಯಾಧುನಿಕವಾಗಿ ವಿನ್ಯಾಸಗೊಳಿಸಲಾಗಿದ್ದು, ಮುಂಭಾಗ (ಫ್ರಂಟ್) ಹುಲಿಯ ಮೂಗಿನ (Tiger Nose) ಆಕಾರದ ಗ್ರೀಲ್, ನವೀನ ಕ್ರೌನ್ ಜ್ಯುವೆಲ್ ಎಲ್‌ಇಡಿ ಹೆಡ್‌ಲ್ಯಾಂಪ್, ಆಕರ್ಷಕ ಎಲ್ಇಡಿ ಡಿಆರ್‌ಎಲ್ ಪಡೆದಿದೆ. ಸೈಡ್ (ಬದಿ) ವಿನ್ಯಾಸ ಹಿಂದಿನ ಮಾದರಿಯಂತೆಯೇ ಇದ್ದು, 16-ಇಂಚಿನ ಡುಯಲ್ ಟೋನ್ ಅಲಾಯ್ ವೀಲ್ಸ್ ಅನ್ನು ಒಳಗೊಂಡಿದೆ. ಹಿಂಭಾಗದ (ರೇರ್) ವಿನ್ಯಾಸವು ನೋಡುಗರನ್ನು ಸೆಳೆಯುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








