ಮಧ್ಯಮ ವರ್ಗದವರ ಫೇವರೆಟ್ ಕಾರು ಸೊನೆಟ್ ಗ್ರಾಹಕರಿಗೆ ಶಾಕ್ ನೀಡಿದ ಕಿಯಾ
ಜನಪ್ರಿಯ ಕಾರು ತಯಾರಕ ಕಂಪನಿಯಾದ ಕಿಯಾ ಇಂಡಿಯಾ ಕಂಪನಿಯು ತನ್ನ ಕಿಯಾ ಸೊನೆಟ್ ಫೆಸ್‌ಲಿಫ್ಟ್ (Kia Sonet Facelift) ಎಸ್‌ಯುವಿಯನ್ನು ಇದೇ ವರ್ಷದ ಜನವರಿಯಲ್ಲಿ ಬಿಡುಗಡೆಗೊಂಡಿತು. ಈ ಕಿಯಾ ಸೊನೆಟ್ ಭರ್ಜರಿ ವೈಶಿಷ್ಟ್ಯಗಳನ್ನು ಪಡೆದುಕೊಳ್ಳುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿದಾರರನ್ನು ಆಕರ್ಷಿಸಿದೆ. ಈ ನಡುವೆ ಕಿಯಾ ಸೊನೆಟ್ ಎಸ್‌ಯುವಿಯ ವೇರಿಯಂಟ್ ಲೈನ್-ಅಪ್ ಮತ್ತು ಬಣ್ಣದ ಪ್ಯಾಲೆಟ್ ಅನ್ನು ಪರಿಷ್ಕರಿಸಿದ ನಂತರ, ಕಾರು ತಯಾರಕರು ಈಗ ಇದರ ಆಯ್ದ ರೂಪಾಂತರಗಳ ಬೆಲೆಗಳನ್ನು ಹೆಚ್ಚಿಸಿದ್ದಾರೆ. ಈ ಮೂಲಕ ಈ ಜನಪ್ರಿಯ ಎಸ್‍ಯುವಿಯು ತುಸು ದುಬಾರಿಯಾಗಿದೆ.
ಕಿಯಾ ಸೊನೆಟ್ ಎಸ್‌ಯುವಿಯ ಬೆಲೆಯನ್ನು ರೂ. 27,000 ವರೆಗೆ ಹೆಚ್ಚಿಸಲಾಗಿದೆ. ಕಿಯಾ ಸೊನೆಟ್ ಎಸ್‍ಯುವಿಯು ಒಂಬತ್ತು ರೂಪಾಂತರಗಳಲ್ಲಿ ಲಭ್ಯವಿದೆ, ಅವುಗಳೆಂದರೆ HTE, HTE (O), HTK, HTK (O), HTK+, HTX, HTX+, GTX, GTX+, ಮತ್ತು X ಲೈನ್. ಇದಲ್ಲದೆ, ಗ್ರಾಹಕರು ಹಲವಾರು ಎಂಜಿನ್ ಮತ್ತು ಗೇರ್ ಬಾಕ್ಸ್ ಆಯ್ಕೆಗನ್ನು ಆಯ್ಕೆ ಮಾಡಬಹುದು.

ಕಿಯಾ ಸೊನೆಟ್ ಎಸ್‍ಯುವಿಯು ವಿನ್ಯಾಸ ಹಾಗೂ ವೈಶಿಷ್ಟ್ಯದ ವಿಚಾರದಲ್ಲಿ ಅತ್ಯಾಧುನಿಕವಾಗಿದ್ದು, ಆಸಕ್ತ ಖರೀದಿದಾರರಿಗೆ ಬೇಕಾದ ಎಲ್ಲಾ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಈ ಕಿಯಾ ಸೊನೆಟ್ ಎಸ್‍ಯುವಿಯು ಫೇಸ್‌ಲಿಫ್ಟ್ ಎಸ್‌ಯುವಿಯ ಮೈಲೇಜ್ ವಿಷಯಕ್ಕೆ ಬಂದರೆ ಈ ಕಾರಿನ ಪೆಟ್ರೋಲ್ ರೂಪಾಂತರಗಳು, 18.70 kmpl - 19.20 kmpl, ಡೀಸೆಲ್ ರೂಪಾಂತರಗಳು 18.60 kmpl - 22.30 kmpl ಮೈಲೇಜ್ ಅನ್ನು ನೀಡುತ್ತದೆ.
ಈ ಕಿಯಾ ಸೊನೆಟ್ ಫೇಸ್‌ಲಿಫ್ಟ್ ಎರಡು ಪೆಟ್ರೋಲ್ ಮತ್ತು ಒಂದು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರೆಯುತ್ತದೆ. ಇದರ 1.2-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ 82 bhp ಪವರ್, 115 Nm ಪೀಕ್ ಟಾರ್ಕ್, ಮತ್ತೊಂದು 998ಸಿಸಿ ಟರ್ಬೋ ಚಾರ್ಜ್ಡ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ 182 bhp ಪವರ್ ಹಾಗೂ 172 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಪೆಟ್ರೋಲ್ ಕಾರುಗಳು ರೂಪಾಂತರಗಳಿಗೆ ಅನುಗುಣವಾಗಿ 5-ಸ್ವೀಡ್ ಮ್ಯಾನುವಲ್ 6-ಸ್ವೀಡ್ ಐಎಂಟಿ, 7-ಸ್ವೀಡ್ ಡಿಸಿಟಿ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿವೆ. 1.5-ಲೀಟರ್ ಟರ್ಬೊ ಡಿಸೇಲ್ ಎಂಜಿನ್ 114 bhp ಪವರ್, 250 Nm ಪೀಕ್ ಟಾರ್ಕ್ ಹೊರಹಾಕುತ್ತದೆ. 6-ಸ್ವೀಡ್ ಮ್ಯಾನುವಲ್, 6-ಸ್ವೀಡ್ ಐಎಂಟಿ, 6-ಸ್ವೀಡ್ ಟಾರ್ಕ್ ಕನ್ವರ್ಟರ್ ಆಟೋಮೆಟಿಕ್ ಟ್ರಾನ್ಸ್ಮಿಷನ್ (ಗೇರ್‌ಬಾಕ್ಸ್) ಅನ್ನು ಪಡೆದಿದೆ.
ಕಿಯಾ ಸೊನೆಟ್ ಯುವ ಗ್ರಾಹಕರನ್ನು ಆಕರ್ಷಿಸುವ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಮುಖವಾಗಿ 10.25-ಇಂಚಿನ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಸ್ಮಾರ್ಟ್ ಏರ್ ಪ್ಯೂರಿಫೈಯರ್ ಸಿಸ್ಟಮ್, 4-ವೇ ಪವರ್ ಡ್ರೈವರ್ ಸೀಟ್, 7-ಸ್ಪೀಕರ್ ಪ್ರೀಮಿಯಂ ಆಡಿಯೊ ಸಿಸ್ಟಮ್, ಹೊಸದಾದ ಇನ್ಫೋಟೈನ್‌ಮೆಂಟ್ ಸ್ಕ್ರೀನ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಕಿಯಾ ಕನೆಕ್ಟ್ ಸೂಟ್, ಒಟಿಎ ಅಪ್ಡೇಟ್, ಸೆಂಟ್ರಲ್ ಏರ್ ವೆಂಟ್ಸ್ ಸೇರಿದಂತೆ ವಿವಿಧ ಫೀಚರ್ಸ್ ಪಡೆದಿದೆ.
ಸುರಕ್ಷತೆಯ ದೃಷ್ಟಿಯಿಂದಲೂ ಹೊಸ ಕಿಯಾ ಸೊನೆಟ್ ಫೇಸ್‌ಲಿಫ್ಟ್ (Kia Sonet Facelift) ಅತ್ಯುತ್ತಮವಾಗಿದೆ. 6 ಏರ್‌ಬ್ಯಾಗ್, ರೇರ್ ಪಾರ್ಕಿಂಗ್ ಸೆನ್ಸಾರ್ಸ್, 360-ಡಿಗ್ರಿ ಕ್ಯಾಮೆರಾ, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಹಿಲ್ ಅಸಿಸ್ಟ್, ಫ್ರಂಟ್, ಆಲ್-ವೀಲ್ ಡಿಸ್ಕ್ ಬ್ರೇಕ್ ಅನ್ನು ಒಳಗೊಂಡಿದೆ. ವಿಶೇಷವಾಗಿ ಅಪಘಾತವನ್ನು ತಪ್ಪಿಸಲು ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ಅನ್ನು ಹೊಂದಿದೆ.
ಈ ಎಸ್‍ಯುವಿಯು ಅತ್ಯಾಧುನಿಕವಾಗಿ ವಿನ್ಯಾಸಗೊಳಿಸಲಾಗಿದ್ದು, ಮುಂಭಾಗ (ಫ್ರಂಟ್) ಹುಲಿಯ ಮೂಗಿನ (Tiger Nose) ಆಕಾರದ ಗ್ರೀಲ್, ನವೀನ ಕ್ರೌನ್ ಜ್ಯುವೆಲ್ ಎಲ್‌ಇಡಿ ಹೆಡ್‌ಲ್ಯಾಂಪ್, ಆಕರ್ಷಕ ಎಲ್ಇಡಿ ಡಿಆರ್‌ಎಲ್ ಪಡೆದಿದೆ. ಸೈಡ್ (ಬದಿ) ವಿನ್ಯಾಸ ಹಿಂದಿನ ಮಾದರಿಯಂತೆಯೇ ಇದ್ದು, 16-ಇಂಚಿನ ಡುಯಲ್ ಟೋನ್ ಅಲಾಯ್ ವೀಲ್ಸ್ ಅನ್ನು ಒಳಗೊಂಡಿದೆ. ಹಿಂಭಾಗದ (ರೇರ್) ವಿನ್ಯಾಸವು ನೋಡುಗರನ್ನು ಸೆಳೆಯುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








