ಕಡಿಮೆ ಬೆಲೆಗೆ ರಾಶಿ ಫೀಚರ್ಸ್‌ನ SUV: ಸುಲಭವಾಗಿ ಖರೀದಿಸಲು ಕಡಿಮೆ DOWN PAYMENT, EMI ನಿಮಗಾಗಿ!

ಕಿಯಾ ಸೊನೆಟ್‌ ಕಾರಿನ ಕುರಿತಾಗಿ ಕೇಳದವರು ಕಮ್ಮಿಯೇ ಸರಿ. ಕಡಿಮೆ ಬೆಲೆಗೆ ಒಂದು ಎಸ್‌ಯುವಿ ಬೇಕು ಎಂದುಕೊಳ್ಳುಉವರಿಗೆ ಕಿಯಾ ಸೊನೆಟ್‌ ಪರ್ಫೆಕ್ಟ್‌ ಆಯ್ಕೆ. ಇಂದಿನ ಈ ಲೇಖನದಲ್ಲಿ ನಾವು ಈ ಕಾರಿನ ಡೌನ್‌ ಪೇಮೆಂಟ್‌, ಇಎಂಐ ಕುರಿತಾಗಿ ನೋಡಲಿದ್ದು, ಸಂಪೂರ್ಣ ಮಾಹಿತಿಗಾಗಿ ಲೇಖನವನ್ನು ಕೊನೆಯವರೆಗೆ ಓದಿ.

ಮೊದಲಿಗೆ ಕಿಯಾ ಸೋನೆಟ್‌ ಕಾರಿನ ಎಕ್ಸ್‌ ಶೋರೂಮ್‌ ಬೆಲೆ ನೋಡುವುದಾದರೆ ಸುಮಾರು 7,99,000 ರೂಪಾಯಿಗಳು. ಇದಕ್ಕೆ ಕರ್ನಾಟಕದ ಆರ್‌ಟಿಒ ಟ್ಯಾಕ್ಸ್‌ ನೋಡುವುದಾದರೆ ಅದು ಸುಮಾರು 1,24,165 ಲಕ್ಷ ರೂಪಾಯಿಗಳಷ್ಟು ಬರುತ್ತದೆ. ಈ ಕಾರಿನ ಇನ್ಸ್ಯುರೆನ್ಸ್‌ ಸುಮಾರು 39,087 ರೂಗಳು. ಇವೆಲ್ಲಾ ಸೇರಿ ಬೆಂಗಳೂರಿನಲ್ಲಿ ಕಿಯಾ ಸೋನೆಟ್‌‌ ಸುಮಾರು 9,65,414 ರೂಗಳಷ್ಟಾಗುತ್ತದೆ.

Kia Sonnet SUV On road Price Down payment EMI Explained

ಇನ್ನು ಈ ಕಾರಿನ ಇಎಂಐ ಮತ್ತು ಕುರಿತಾಗಿ ನೋಡುವುದಾದರೆ ನೀವು ಈ ಕಾರಿಗೆ ಕನಿಷ್ಟವೆಂದರೂ 1,50,000 ರೂಗಳನ್ನು ಡೌನ್‌ ಪೇಮೆಂಟ್‌ ರೀತಿಯಲ್ಲಿ ಕಟ್ಟಬೇಕಾಗುತ್ತದೆ. ನೀವು 9.8% ಬಡ್ಡಿ ದರದಲ್ಲಿ ಸುಮಾರು ೭ ವರ್ಷಗಳ ಕಾಲಾವಧಿಗೆ ಲೋನ್‌ ಮಾಡಿದರೆ, ಪ್ರತೀ ತಿಂಗಳು ಸುಮಾರು 13,453 ರೂಗಳನ್ನು ಇಎಂಐ ರೂಪದಲ್ಲಿ ಬ್ಯಾಂಕಿಗೆ ಪಾವತಿಸಬೇಕಾಗುತ್ತದೆ.

ಕಿಯಾ ಸೋನೆಟ್ (Kia Sonet) ಪ್ರೀಮಿಯಂ ಕಾಂಪ್ಯಾಕ್ಟ್ ಎಸ್‌ಯುವಿಯಾಗಿದ್ದು, ಬಿಡುಗಡೆಯಾಗಿ 4 ವರ್ಷ (44 ತಿಂಗಳು) ಕಳೆಯುವ ಮೊದಲೇ 400,000 ಯುನಿಟ್ ಕಾರುಗಳು ಮಾರಾಟಗೊಂಡಿವೆ. ಅದರಲ್ಲಿ ಭಾರತದ ಮಾರುಕಟ್ಟೆಯಲ್ಲಿ 317,754 ಯುನಿಟ್ ಎಸ್‌ಯುವಿಗಳನ್ನು ಮಾರಲಾಗಿದೆ. ಇನ್ನುಳಿದ 85,814 ಯುನಿಟ್ ಕಾರುಗಳನ್ನು ವಿದೇಶಕ್ಕೆ ರಫ್ತು ಮಾಡಲಾಗಿದೆ. ಆಂಧ್ರಪ್ರದೇಶದಲ್ಲಿ ಕಿಯಾ ತನ್ನ ಉತ್ಪಾದನಾ ಘಟಕವನ್ನು ಹೊಂದಿದೆ.

Kia Sonnet SUV On road Price Down payment EMI Explained

ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಕಿಯಾ ಸೋನೆಟ್ ಎಸ್‌ಯುವಿ, ರೂ.7.99 ಲಕ್ಷದಿಂದ ರೂ.15.75 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಎಕ್ಸ್‌ಟಿಇ, ಎಕ್ಸ್‌ಟಿಇ (ಒ), ಎಕ್ಸ್‌ಟಿಕೆ, ಎಕ್ಸ್‌ಟಿಕೆ (ಒ) ಎಕ್ಸ್‌ಟಿಕೆ ಪ್ಲಸ್ ಸೇರಿದಂತೆ ವಿವಿಧ ರೂಪಾಂತರ (ವೇರಿಯೆಂಟ್) ಹಾಗೂ ಪ್ಯೂಟರ್ ಆಲಿವ್, ಗ್ಲೇಸಿಯರ್ ವೈಟ್ ಪರ್ಲ್, ಕ್ಲಿಯರ್ ವೈಟ್ ಒಳಗೊಂಡಂತೆ ಆಕರ್ಷಕ ಬಣ್ಣಗಳೊಂದಿಗೂ ದೊರೆಯುತ್ತದೆ.

ಈ ಕಾರು ಪೆಟ್ರೋಲ್ ಹಾಗೂ ಡೀಸೆಲ್ ಪವರ್‌ಟ್ರೇನ್ ಆಯ್ಕೆಯನ್ನು ಹೊಂದಿದೆ. ಇದರ 1-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್, 120 ಪಿಎಸ್ ಗರಿಷ್ಠ ಪವರ್ (ಶಕ್ತಿ) ಹಾಗೂ 172 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 1.2-ಲೀಟರ್ ಪೆಟ್ರೋಲ್ ಎಂಜಿನ್ 83 ಪಿಎಸ್ ಪವರ್ ಮತ್ತು 115 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ.

Kia Sonnet SUV On road Price Down payment EMI Explained

ಮತ್ತೊಂದು, 1.5-ಲೀಟರ್ ಎಂಜಿನ್ 116 ಪಿಎಸ್ ಪವರ್ ಮತ್ತು 250 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ರೂಪಾಂತರಗಳಿಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮೆಟಿಕ್, 7-ಸ್ಪೀಡ್ ಡಿಸಿಟಿ (ಡುಯಲ್ ಕ್ಲಚ್ ಟ್ರಾಸ್ಮಿಷನ್) ಗೇರ್ ಬಾಕ್ಸ್ ಅನ್ನು ಪಡೆದಿದೆ. ಪೆಟೋಲ್ ಮಾದರಿಗಳು 18.7 - 19.2 ಕೆಎಂಪಿಎಲ್, ಡೀಸೆಲ್ ರೂಪಾಂತರಗಳು 18.6 - 22.3 ಕೆಎಂಪಿಎಲ್ ಮೈಲೇಜ್ ಕೊಡುತ್ತವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, May 3, 2024, 17:06 [IST]
English summary
Kia sonet suv on road price down payment emi explained
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+