ಅಗ್ಗದ ಹೊಸ ಕಿಯಾ ಕಾರು ಬಿಡುಗಡೆಗೆ ಸಜ್ಜು... ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಸೈರಸ್ ಎಸ್‌ಯುವಿ!

ಭಾರತೀಯ ಗ್ರಾಹಕರ ಆದ್ಯತೆಗಳಿಗೆ ಅನುಗುಣವಾಗಿ ಹಾಗೂ ಭಾರತೀಯ ಮಾರುಕಟ್ಟೆಯನ್ನು ಅರ್ಥ ಮಾಡಿಕೊಂಡಿರುವ ಹೊಸ ಕಾರು ಕಂಪನಿಗಳಲ್ಲಿ ಕಿಯಾ ಮೋಟಾರ್ಸ್ ಕೂಡ ಒಂದಾಗಿದ್ದು, ಅಗ್ಗದ ಬೆಲೆಗೆ ಹೊಸ ಕಾರನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಹೌದು ಕಿಯಾದಿಂದ ಮುಂಬರುವ ಎಸ್‌ಯುವಿ ರೋಡ್‌ ಟೆಸ್ಟ್ ಮಾಡುವಾಗ ಕ್ಯಾಮರಾ ಕಣ್ಣಿಗೆ ಬಿದ್ದಿದೆ. ಕಂಪನಿಯ ಪೇಟೆಂಟ್ ಪ್ರಕಾರ, ಇದನ್ನು 'ಸೈರೋಸ್' ಎಂದು ಕರೆಯುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ ಕಿಯಾ ಸೈರೋಸ್ ಪೆಟ್ರೋಲ್ ಆವೃತ್ತಿಯು ಈ ವರ್ಷದ ಕೊನೆಯಲ್ಲಿ ಪಾದಾರ್ಪಣೆ ಮಾಡಲಿದೆ ಎಂದು ಹೇಳಲಾಗುತ್ತಿದೆ.

ಅಂದರೆ ಮುಂದಿನ ವರ್ಷದ ಆರಂಭದಲ್ಲಿ ಹೊಸ ಕಾರು ಮಾರಾಟವಾಗಲಿದೆ. ಇದರ ಎಲೆಕ್ಟ್ರಿಕ್ ಆವೃತ್ತಿಯು 2025ರ ಮಧ್ಯದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಪ್ರಸ್ತುತ 8 ಲಕ್ಷ ರೂ. (ಎಕ್ಸ್ ಶೋರೂಂ) ಆರಂಭಿಕ ಬೆಲೆ ಹೊಂದಿರುವ ಸೊನೆಟ್‌ಗಿಂತ ಸ್ವಲ್ಪ ಪ್ರೀಮಿಯಂ ಆಗಿರಲಿದ್ದು, ಬೆಲೆ ಇದಕ್ಕಿಂತ ತುಸು ಹೆಚ್ಚಾಗಿರುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ.

Kia Syros spotted again spy shots reveal more details

ಮುಂಬರುವ ಕಿಯಾ ಸಿರೋಸ್, ಕಿಯಾ ಸೆಲ್ಟೋಸ್ ಎಸ್‌ಯುವಿಗಿಂತ ಸ್ವಲ್ಪ ಎತ್ತರವಾಗಿದೆ. ಹೆಚ್ಚುವರಿಯಾಗಿ, ಬದಿಗಳಿಂದ ಹಿಂಭಾಗದ ಬಂಪರ್ ತುಂಬಾ ತೆಳುವಾಗಿ ಕಾಣುತ್ತಿದ್ದು, ಇದು ಸಬ್-4m SUV ಆಗಿರಬಹದು. ಮುಂಬರುವ Kia Syros SUV ಪ್ರಮುಖ ವೀಲ್ ಕ್ಲಾಡಿಂಗ್‌ಗಳು ಮತ್ತು ರೂಫ್ ರೈಲ್‌ಗಳೊಂದಿಗೆ ಬಾಕ್ಸಿ ಆಕಾರವನ್ನು ಹೊಂದಿದ್ದು, ಎತ್ತರದ ಪ್ರಯಾಣಿಕರಿಗೆ ವರದಾನವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಒಟ್ಟಾರೆ ಈ ಕಾರಿನ ವಿನ್ಯಾಸವು, ಇದೇ ವರ್ಷದ ಆರಂಭದಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪಾದಾರ್ಪಣೆ ಮಾಡಿದ ಕಿಯಾದ ಕೆ4 ಸೆಡಾನ್‌ನಂತೆ ಕಾಣುತ್ತದೆ. ಅಲ್ಲಿಗೆ ಭಾರತದ ಇತರ ಯಾವುದೇ ಕಿಯಾ ಕಾರಿನಂತಿಲ್ಲ ಎಂಬುದು ಸ್ಪಷ್ಟವಾಗಿದೆ. ಇದು ಈ ಹೊಚ್ಚ ಹೊಸ 2-ಸ್ಪೋಕ್ ಫ್ಲಾಟ್-ಬಾಟಮ್ ಸ್ಟೀರಿಂಗ್ ವೀಲ್ ಜೊತೆಗೆ ಆಫ್‌ಸೆಟ್ ಕಿಯಾ ಎಂಬ್ಲಮ್ ಅನ್ನು ಹೊಂದಿದೆ.

Kia Syros spotted again spy shots reveal more details

ಮೊದಲೇ ವರದಿ ಮಾಡಿದಂತೆ, ಸೈರೋಸ್ ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಪವರ್ ಟ್ರೇನ್‌ನಲ್ಲಿ ಲಭ್ಯವಾಗಲಿದೆ. ಪೆಟ್ರೋಲ್ ಚಾಲಿತ ಕಾರು ಬಿಡುಗಡೆಯಾದ ಸುಮಾರು ಆರು ತಿಂಗಳ ನಂತರ ಎಲೆಕ್ಟ್ರಿಕ್ ಆವೃತ್ತಿಯು ಬಿಡುಗಡೆಯಾಗುವ ನಿರೀಕ್ಷೆಯಿದೆ. ಎರಡೂ ಆವೃತ್ತಿಗಳು ಒಂದೇ ಪ್ಲಾಟ್ ಫಾರ್ಮ್‌ನಲ್ಲಿ ನಿರ್ಮಾಣವಾಗಲಿವೆ, ಹೈಬ್ರಿಡ್ ಆವೃತ್ತಿಯನ್ನು ನಂತರ ಪರಿಚಯಿಸಬಹುದು.

ಇದು ಡೈಮಂಡ್-ಕಟ್ ಅಲಾಯ್ ವೀಲ್‌ಗಳು, ವೆಂಟಿಲೇಟೆಡ್ ಮತ್ತು ಪವರ್ಡ್ ಫ್ರಂಟ್ ಸೀಟ್‌ಗಳು, ಡ್ರೈವ್ ಮೋಡ್‌ಗಳು, ಟ್ರಾಕ್ಷನ್ ಮೋಡ್‌ಗಳು, ಕ್ಲೈಮೇಟ್ ಕಂಟ್ರೋಲ್ ಸಿಸ್ಟಮ್ ಮತ್ತು ಬೋಸ್ ಆಡಿಯೊ ಸಿಸ್ಟಮ್ ಅನ್ನು ಸಹ ಹೊಂದಿರುವುದು ಸ್ಪಷ್ಟವಾಗಿತ್ತು. ಹೆಚ್ಚುವರಿಯಾಗಿ 360-ಡಿಗ್ರಿ ಕ್ಯಾಮೆರಾ, ಸನ್‌ರೂಫ್ ಸ್ವಯಂಚಾಲಿತ ಹವಾಮಾನ ನಿಯಂತ್ರಣ ಮತ್ತು ವೈರ್‌ಲೆಸ್ ಚಾರ್ಜಿಂಗ್ ಸಾಮರ್ಥ್ಯಗಳನ್ನು ಒಳಗೊಂಡಿರಬಹುದು.

ಒಳಾಂಗಣವು ಸೆಲ್ಟೋಸ್‌ನಲ್ಲಿ ನೀಡಲಾದಂತೆಯೇ 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇಯೊಂದಿಗೆ 10.25-ಇಂಚಿನ ಟಚ್ ಸ್ಕ್ರೀನ್ (ಡ್ಯುಯಲ್ ಡಿಸ್ ಪ್ಲೇ) ನೊಂದಿಗೆ ಬರಲಿದೆ. ಹೆಚ್ಚುವರಿಯಾಗಿ, ಕಾರು ಟಚ್ ಸ್ಕ್ರೀನ್ ಕೆಳಗೆ ಕೆಲವು ಬಟನ್‌ಗಳನ್ನು ಸಹ ಪಡೆದಿದೆ, ಇದರಲ್ಲಿ ವಾಲ್ಯೂಮ್ ಅನ್ನು ಸರಿಹೊಂದಿಸಲು ಸ್ಕ್ರಾಲ್ ಚಕ್ರವೂ ಇದೆ.

ಎಂಜಿನ್ ವಿಷಯಕ್ಕೆ ಬಂದರೆ, ಕಿಯಾ ಸೈರೋಸ್ SUV ಎರಡು ಎಂಜಿನ್ ಆಯ್ಕೆಗಳನ್ನು ಒದಗಿಸಬಹುದು. 118bhp ಮತ್ತು 172Nm ಟಾರ್ಕ್‌ನೊಂದಿಗೆ 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಮತ್ತು 114bhp ಮತ್ತು 250Nm ಟಾರ್ಕ್‌ನೊಂದಿಗೆ 1.5-ಲೀಟರ್ ಡೀಸೆಲ್ ಎಂಜಿನ್ ನೀಡುವ ಸಾಧ್ಯತೆ ಇದೆ. ಅಲ್ಲದೆ, ಎರಡೂ ಎಂಜಿನ್ ಆಯ್ಕೆಗಳು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಆಯ್ಕೆಗಳನ್ನು ಪಡೆಯುವ ಸಾಧ್ಯತೆಯಿದೆ.

More from DriveSpark

Article Published On: Sunday, November 24, 2024, 18:11 [IST]
English summary
Kia syros spotted again spy shots reveal more details
Read more on india kia motors
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+