ಟೊಯೋಟಾ ಹಿಲಕ್ಸ್‌ಗೆ ಸರಿಯಾದ ಪ್ರತಿಸ್ಪರ್ಧಿಯನ್ನು ಇಳಿಸಲು ಸಜ್ಜಾದ ಕಿಯಾ

ಅಂತರಾಷ್ಟ್ರಿಯ ಮಾರುಕಟ್ಟೆಯಲ್ಲಿ ಪಿಕಪ್ ವಾಹನಗಳಿಗೆ ಭರ್ಜರಿ ಬೇಡಿಕೆಯಿದೆ. ಹಾಗಾಗಿ ಮುಂಬರುವ ತಿಂಗಳುಗಳಲ್ಲಿ ಜಾಗತಿಕವಾಗಿ ಪಾದಾರ್ಪಣೆ ಮಾಡಲಿರುವ ಹೊಸ ಟ್ಯಾಸ್ಮನ್‌ನೊಂದಿಗೆ ಕಿಯಾ ಪಿಕಪ್ ಮಾರುಕಟ್ಟೆಯನ್ನು ಪ್ರವೇಶಿಸಲು ಸಜ್ಜಾಗುತ್ತಿದೆ. ಮೂಲಗಳ ಪ್ರಕಾರ ಟ್ಯಾಸ್ಮನ್ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾರಾಟವಾಗಲಿದೆ. ಇದು ಟೊಯೊಟಾ ಹಿಲಕ್ಸ್‌ಗೆ ನೇರ ಪ್ರತಿಸ್ಪರ್ಧಿಯಾಗಲಿದೆ.

ಬಹಳಷ್ಟು ಊಹಾಪೋಹಗಳ ನಂತರ, ಕಿಯಾ ಅಂತಿಮವಾಗಿ ಆಸ್ಟ್ರೇಲಿಯಾದಲ್ಲಿ ಟ್ಯಾಸ್ಮನ್ ಟೀಸರ್ ವೀಡಿಯೋವನ್ನು ಬಿಡುಗಡೆ ಮಾಡಿತು. ಟ್ಯಾಸ್ಮನ್ ಲ್ಯಾಡರ್-ಫ್ರೇಮ್ ಆರ್ಕಿಟೆಕ್ಚರ್ ಅನ್ನು ಒಳಗೊಂಡಿರುವ ಕಿಯಾದ ಮೊದಲ ಪಿಕಪ್ ಆಗಿದೆ. Tasman ಹಿಲಕ್ಸ್, ಫೋರ್ಡ್ ರೇಂಜರ್ ಮತ್ತು ಇತರ ಒರಟಾದ ಪಿಕಪ್‌ಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

kia-tasman-pickup-proper-rival-to-the-toyota-hilux

ಟ್ಯಾಸ್ಮಾನ್ ಬಿಡುಗಡೆ ಬಳಿಕ ಟೊಯೊಟಾ ಹಿಲಕ್ಸ್, ಫೋರ್ಡ್ ರೇಂಜರ್ ಮತ್ತು ಫೋಕ್ಸ್‌ವ್ಯಾಗನ್ ಅಮರೋಕ್‌ನಂತಹ ಜನಪ್ರಿಯ ಸ್ಪರ್ಧಿಗಳನ್ನು ಎದುರಿಸಲಿದೆ. ಕಿಯಾ ಟ್ಯಾಸ್‌ಮನ್‌ನ ವಿನ್ಯಾಸವನ್ನು ಬಹಿರಂಗಪಡಿಸಲಾಗಿಲ್ಲವಾದರೂ, ಕಿಯಾ ಟ್ರಕ್‌ನ ಸಿಲೂಯೆಟ್ ಅನ್ನು ತೋರಿಸಿದೆ, ನೇರವಾದ ನಿಲುವು, ಕೋನೀಯ ವಿನ್ಯಾಸ ಮತ್ತು ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್‌ನೊಂದಿಗೆ ಬಾಕ್ಸ್ ಡಿಸೈನ್‌ ಪಿಕಪ್ ಎಂಬುದು ಖಚಿತವಾಗಿದೆ.

ಪ್ಲಾಟ್‌ಫಾರ್ಮ್ ಅಥವಾ ಆಫ್-ರೋಡ್ ಗೇರ್ ಬಗ್ಗೆ ಹೆಚ್ಚು ತಿಳಿದಿಲ್ಲವಾದರೂ, ಟ್ಯಾಸ್‌ಮನ್ ಡೀಸೆಲ್ ಎಂಜಿನ್ ಆಯ್ಕೆ ಪಡೆಯುತ್ತದೆ ಎಂದು ಕಿಯಾ ಮೊದಲು ದೃಢಪಡಿಸಿತ್ತು. ಕಿಯಾ ಕಾರ್ನಿವಲ್ ಮತ್ತು ಸಾಂಟಾ ಫೆನಂತಹ ಇತರ ಕಿಯಾ ಮತ್ತು ಹ್ಯುಂಡೈ ಮಾದರಿಗಳಿಗೆ ಪವರ್ ನೀಡುವ 2.2-ಲೀಟರ್ ಎಂಜಿನ್ ಅನ್ನು ಇದರಲ್ಲೂ ಬಳಸುವ ಸಾಧ್ಯತೆಯಿದೆ.

kia-tasman-pickup-proper-rival-to-the-toyota-hilux

ಈ ವರ್ಷದ ದ್ವಿತೀಯಾರ್ಧದಲ್ಲಿ ಜಾಗತಿಕ ಚೊಚ್ಚಲ ಪ್ರದರ್ಶನದೊಂದಿಗೆ ಮುಂಬರುವ ತಿಂಗಳುಗಳಲ್ಲಿ ಕಿಯಾ ಟ್ಯಾಸ್ಮನ್ ಕುರಿತು ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳುವ ನಿರೀಕ್ಷೆಯಿದೆ. ಟ್ಯಾಸ್ಮನ್ ಭಾರತಕ್ಕೆ ಬರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇನ್ನು ಕಿಯಾ ಕಂಪನಿಯು ಈ ವರ್ಷ ಭಾರತೀಯ ಮಾರುಕಟ್ಟೆಗೆ ಹೊಸ ಕಾರ್ನಿವಲ್ MPV ಮತ್ತು EV9 ಅನ್ನು ತರಲಿದ್ದಾರೆ.

Kia EV9 ವಿಶೇಷತೆಗಳು: ಕಿಯಾ EV9 ಎಲೆಕ್ಟ್ರಿಕ್ ಎಸ್‌ಯುವಿ CBU (ಸಂಪೂರ್ಣ ನಿರ್ಮಿತ ಘಟಕ) ಆಗಿ ಭಾರತವನ್ನು ಪ್ರವೇಶಿಸಲಿದೆ. ಇದರ ಬೇಸ್ ಟ್ರಿಮ್ ಅಂದಾಜು 80 ಲಕ್ಷ ರೂ. ಬೆಲೆಯಿರಬಹುದು ಎಂದು ನಿರೀಕ್ಷಿಸಲಾಗಿದೆ. ಮೂರು ಪವರ್‌ಟ್ರೇನ್ ಆಯ್ಕೆಗಳನ್ನು ಪಡೆಯಬಹುದು. ಮೂಲ RWD ವೇರಿಯೆಂಟ್ 76.1 kWh ಬ್ಯಾಟರಿಯನ್ನು ಹೊಂದಿದ್ದು, 215 hp ಸಿಂಗಲ್ ಎಲೆಕ್ಟ್ರಿಕ್ ಮೋಟರ್‌ಗೆ ಸಂಪರ್ಕ ಹೊಂದಿದೆ. ಇದು ಅಂದಾಜು 370 ಕಿ.ಮೀ ರೇಂಜ್ ನೀಡುತ್ತದೆ.

Kia EV9 ಲಾಂಗ್ ರೇಂಜ್ ವೇರಿಯೆಂಟ್ 99.8 kWh ಬ್ಯಾಟರಿಯನ್ನು ಹೊಂದಿದ್ದು, 201 hp ಸಿಂಗಲ್ ಎಲೆಕ್ಟ್ರಿಕ್ ಮೋಟರ್‌ಗೆ ಸಂಪರ್ಕ ಹೊಂದಿದೆ. ಇದು ಅಂದಾಜು 489 ಕಿ.ಮೀ ರೇಂಜ್ ನೀಡುತ್ತದೆ. ಇದರ ಜೊತೆಗೆ 379 hp ಗರಿಷ್ಠ ಪವರ್ ನೀಡುವ ಡ್ಯುಯಲ್-ಮೋಟರ್ ವೇರಿಯೆಂಟ್ ಕೂಡ ಇದ್ದು, ಇದು ಅಂದಾಜು 450 ಕಿ.ಮೀ ರೇಂಜ್ ನೀಡಬಹುದು.

Kia EV9 ಸ್ಥಿರ ಮತ್ತು ಪೋರ್ಟಬಲ್ ಚಾರ್ಜಿಂಗ್ ಆಯ್ಕೆಗಳೊಂದಿಗೆ ಬರುತ್ತದೆ. ಕೇವಲ 15 ನಿಮಿಷಗಳಲ್ಲಿ 248 km ರೇಂಜ್ ಓಡುವಷ್ಟು ಚಾರ್ಜ್ ಮಾಡಬಹುದು. ವೇಗದ ಚಾರ್ಜರ್‌ನೊಂದಿಗೆ, ಕೇವಲ 24 ನಿಮಿಷಗಳಲ್ಲಿ ಶೇ 80 ರಷ್ಟು ಚಾರ್ಜ್ ಮಾಡಬಹುದು. ಹಾಗೆಯೇ ವೆಹಿಕಲ್-ಟು-ಲೋಡ್ (V2L) ಸಾಮರ್ಥ್ಯವನ್ನು ಸಹ ಈ ಕಾರು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, March 6, 2024, 18:05 [IST]
English summary
Kia tasman pickup proper rival to the toyota hilux
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+