Kia: ಕಿಯಾ ಗ್ರಾಹಕರಿಗೆ ಕಹಿಸುದ್ದಿ: ಹಣ ಉಳಿಸಲು ಇದೇ ಸರಿಯಾದ ಸಮಯ!

Kia ಕಂಪನಿಯು ತನ್ನ ಸೆಲ್ಟೋಸ್, ಸಾನೆಟ್ ಮತ್ತು ಕ್ಯಾರೆನ್ಸ್ ಸೇರಿದಂತೆ ತನ್ನ ಎಲ್ಲಾ ಮಾಡೆಲ್‌ಗಳ ಮೇಲೆ ಏಪ್ರಿಲ್ 1, 2024 ರಿಂದ ಶೇ3 ರಷ್ಟು ಬೆಲೆ ಏರಿಕೆ ಮಾಡುವುದಾಗಿ ಘೋಷಿಸಿದೆ. ಸರಕುಗಳ ಬೆಲೆಗಳು ಮತ್ತು ಪೂರೈಕೆ ಸರಪಳಿ-ಸಂಬಂಧಿತ ಹೆಚ್ಚಳದಿಂದಾಗಿ ಈ ಬೆಲೆ ಏರಿಕೆ ನಿರ್ಧಾರ ತೆಗೆದುಕೊಂಡಿರುವುದಗಿ ಕಂಪನಿ ಹೇಳಿಕೊಂಡಿದೆ.

ಕಿಯಾ ಇಂಡಿಯಾದ ಮಾರಾಟ ಮತ್ತು ಮಾರುಕಟ್ಟೆಯ ರಾಷ್ಟ್ರೀಯ ಮುಖ್ಯಸ್ಥ ಹರ್ದೀಪ್ ಸಿಂಗ್ ಬ್ರಾರ್ ಮಾತನಾಡಿ, "ಗ್ರಾಹಕರಿಗೆ ಪ್ರೀಮಿಯಂ ಮತ್ತು ತಾಂತ್ರಿಕವಾಗಿ ಸುಧಾರಿತ ಉತ್ಪನ್ನಗಳನ್ನು ತಲುಪಿಸಲು ನಾವು ಸತತವಾಗಿ ಶ್ರಮಿಸುತ್ತಿದ್ದೇವೆ. ಆದರೂ, ನಿರಂತರ ಸರಕುಗಳ ಬೆಲೆಗಳು, ಪ್ರತಿಕೂಲ ವಿನಿಮಯ ದರ ಮತ್ತು ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚದಿಂದಾಗಿ ನಾವು ಬೆಲೆ ಏರಿಕೆಯನ್ನು ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

kia-to-announce-price-hike-across-its-line-up-starting-april-1-2024

ಕಿಯಾ ಭಾರತದಲ್ಲಿ ಈವರೆಗೆ ಸುಮಾರು 1.16 ಮಿಲಿಯನ್ ಯೂನಿಟ್‌ ಕಾರುಗಳನ್ನು ಮಾರಾಟ ಮಾಡಿದೆ. ಇದರಲ್ಲಿ ಕಿಯಾದ ಜನಪ್ರಿಯ ಸೆಲ್ಟೋಸ್ ಮಾದರಿ 6,13,000 ಯುನಿಟ್ ಮಾರಾಟವನ್ನು ಮೀರಿದೆ, ನಂತರ 3,95,000 ಯುನಿಟ್‌ಗಳೊಂದಿಗೆ ಸಾನೆಟ್ ಮತ್ತು ಕ್ಯಾರೆನ್ಸ್ 1,59,000 ಯುನಿಟ್‌ ಮಾರಾಟದೊಂದಿಗೆ ಜನಪ್ರಿಯತೆ ಗಳಿಸಿರುವುದಾಗಿ ಕಂಪನಿ ಹೇಳಿಕೊಂಡಿದೆ.

ಇತ್ತೀಚೆಗೆ ಸೆಲ್ಟೋಸ್ ಡೀಸೆಲ್ ಬಿಡುಗಡೆ: ಕಿಯಾ ಇಂಡಿಯಾ ತನ್ನ ನವೀಕರಿಸಿದ 2024ರ ಕಿಯಾ ಸೆಲ್ಟೋಸ್ ಎಸ್‍ಯುವಿಯ ಡೀಸೆಲ್ ಮ್ಯಾನುವಲ್ ರೂಪಾಂತರಗಳನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಇವುಗಳ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.11,99,900 ರಿಂದ ರೂ.18,27,900 ವರೆಗೆ ಇದೆ. ಕಿಯಾ ಸೆಲ್ಟೋಸ್ (Kia Seltos) ಎಸ್‍ಯುವಿಯ ಹೊಸ ಡೀಸೆಲ್ ರೂಪಾಂತರಗಳಲ್ಲಿ 1.5 - ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ.

kia-to-announce-price-hike-across-its-line-up-starting-april-1-2024

ಈ ಎಂಜಿನ್ 114 bhp ಮತ್ತು 250 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6 - ಸ್ಪೀಡ್ iMT ಮತ್ತು 6 - ಸ್ಪೀಡ್ ಟಾರ್ಕ್ ಕನ್ವರ್ಟರ್ ಅನ್ನು ನೀಡಲಾಗಿದೆ. ಗ್ರಾಹಕರು ಈಗ HTE, HTK, HTK+, HTX, ಮತ್ತು HTX+ ಸೇರಿದಂತೆ ಐದು ವಿಭಿನ್ನ ರೂಪಾಂತರಗಳಲ್ಲಿ 6-ಸ್ಪೀಡ್ ಡೀಸೆಲ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆ ಮಾಡಬಹುದು.

ಭಾರತದಲ್ಲಿ ಕಿಯಾ ಪ್ರಯಾಣ: ಏಪ್ರಿಲ್ 2017 ರಲ್ಲಿ, ಕಿಯಾ ಇಂಡಿಯಾ ಅನಂತಪುರ ಜಿಲ್ಲೆಯಲ್ಲಿ ಹೊಸ ಉತ್ಪಾದನಾ ಸೌಲಭ್ಯವನ್ನು ನಿರ್ಮಿಸಲು ಆಂಧ್ರಪ್ರದೇಶ ರಾಜ್ಯ ಸರ್ಕಾರದೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ (MOU) ಸಹಿ ಹಾಕಿತು. ಕಿಯಾ ಆಗಸ್ಟ್ 2019 ರಲ್ಲಿ ಸಾಮೂಹಿಕ ಉತ್ಪಾದನೆಯನ್ನು ಪ್ರಾರಂಭಿಸಿ, ಇದೀಗ 3,00,000 ಯುನಿಟ್‌ ಕಾರುಗಳ ವಾರ್ಷಿಕ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ.

kia-to-announce-price-hike-across-its-line-up-starting-april-1-2024

ಕಿಯಾ ಇಂಡಿಯಾ ಭಾರತೀಯ ಮಾರುಕಟ್ಟೆಯಲ್ಲಿ ಇಲ್ಲಿಯವರೆಗೆ ಸೆಲ್ಟೋಸ್, ಕಾರ್ನಿವಲ್, ಸಾನೆಟ್, ಕ್ಯಾರೆನ್ಸ್ ಮತ್ತು EV6 ಸೇರಿದಂತೆ ಐದು ವಾಹನಗಳನ್ನು ಬಿಡುಗಡೆ ಮಾಡಿದೆ. ಕಿಯಾ ಇಂಡಿಯಾ ತನ್ನ ಅನಂತಪುರದ ಸ್ಥಾವರದಿಂದ 1.16 ಮಿಲಿಯನ್ ವಾಹನ ರವಾನೆಗಳನ್ನು ಪೂರ್ಣಗೊಳಿಸಿದೆ, ಇದರಲ್ಲಿ 9.1 ಲಕ್ಷಕ್ಕೂ ಹೆಚ್ಚು ದೇಶೀಯ ಮಾರಾಟಗಳು ಮತ್ತು 2.5 ಲಕ್ಷ ರಫ್ತುಗಳು ಸೇರಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, March 21, 2024, 19:04 [IST]
English summary
Kia to announce price hike across its line up starting april 1 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+