ಅತ್ಯಾಕರ್ಷಕ ಹಬ್ಬದ ಕೊಡುಗೆಗಳೊಂದಿಗೆ ಹೊಸ ಲಿಮಿಟೆಡ್ ಎಡಿಷನ್ ಪರಿಚಯಿಸಿದ ಕೈನೆಟಿಕ್ ಗ್ರೀನ್
ಎಲೆಕ್ಟ್ರಿಕ್ ದ್ವಿಚಕ್ರ ವಾಹನ (e2W) ಮತ್ತು ಎಲೆಕ್ಟ್ರಿಕ್ ತ್ರಿಚಕ್ರ ವಾಹನ (e3W) ತಯಾರಕರಾದ ಕೈನೆಟಿಕ್ ಗ್ರೀನ್ ಎನರ್ಜಿ ಕಂಪನಿಯು, ಸಫರ್ ಸ್ಮಾರ್ಟ್ ಪ್ಯಾಸೆಂಜರ್ ವಾಹನದ ಸೀಮಿತ ಆವೃತ್ತಿಯನ್ನು (limited edition) ಲೀಡ್ ಆಸಿಡ್ ಮತ್ತು ಲಿಥಿಯಂ ಬ್ಯಾಟರಿ ವೇರಿಯೆಂಟ್‌ಗಳಲ್ಲಿ ಪರಿಚಯಿಸಿದೆ. ಇದನ್ನು ಬಹು ಕಾರ್ಯನಿರ್ವಹಣೆಯ ಅಗತ್ಯವಿರುವ ಗ್ರಾಹಕರಿಗಾಗಿ ವಿನ್ಯಾಸಗೊಳಿಸಲಾಗಿದ್ದು, ಪ್ರಯಾಣಿಕರು ಮತ್ತು ಸರಕು ಎರಡಕ್ಕೂ ಸ್ಥಳಾವಕಾಶವನ್ನು ನೀಡುತ್ತದೆ. ಇದು ಗಟ್ಟಿಯಾದ ಮೇಲ್ಛಾವಣಿಯೊಂದಿಗೆ ಮೀಸಲಾದ ವಾಹಕವನ್ನು ಹೊಂದಿದೆ, ಪ್ರಯಾಣಿಕರು ತಮ್ಮ ಸರಕುಗಳನ್ನು ಸುರಕ್ಷಿತವಾಗಿ ಇಡುವ ಜೊತೆಗೆ ಆರಾಮವಾಗಿ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ ಎಂದು ಕಂಪನಿ ತಿಳಿಸಿದೆ.
ಹೊಸ ಲಿಮಿಟೆಡ್ ಎಡಿಷನ್ ವಾಹನವು ಮ್ಯೂಸಿಕ್ ಸಿಸ್ಟಂ, ಫ್ಲೋರ್ ಮ್ಯಾಟ್ಸ್ ಮತ್ತು ಸ್ಟೈಲಿಶ್ ವೀಲ್ ಕ್ಯಾಪ್‌ಗಳನ್ನು ಒಳಗೊಂಡಿದ್ದು, ಇದಕ್ಕಾಗಿ ಹೆಚ್ಚುವರಿಯಾಗಿ ರೂ. 5,000 ಪಾವತಿಸಬೇಕಾಗುತ್ತದೆ. ಈ ಹಬ್ಬದ ಸೀಸನ್‌ನಲ್ಲಿ, ಕೈನೆಟಿಕ್ ಗ್ರೀನ್ ತನ್ನ ಸಂಪೂರ್ಣ e3W ಶ್ರೇಣಿಯಾದ್ಯಂತ ವಿಶೇಷ ಆಫರ್‌ಗಳನ್ನು ಸಹ ನೀಡುತ್ತಿರುವುದಾಗಿ ಹೇಳಿಕೊಂಡಿದೆ.

ಸಫರ್ ಸ್ಮಾರ್ಟ್ ಪ್ಯಾಸೆಂಜರ್ ಲಿಮಿಟೆಡ್ ಎಡಿಷನ್ ವಾಹನ ಒಳಗೊಂಡಂತೆ ಕಂಪನಿಯ ಎಲ್ಲಾ ಎಲೆಕ್ಟ್ರಿಕ್ ತ್ರಿ-ಚಕ್ರ ವಾಹನಗಳು ಪ್ರಮುಖ ಪಾಲುದಾರರಿಂದ ಆಕರ್ಷಕ ಹಣಕಾಸು ಆಯ್ಕೆಗಳೊಂದಿಗೆ ಬರಲಿವೆ. ದಸರಾ ನವರಾತ್ರಿಯ ಮೊದಲ ದಿನದಿಂದ ಡೀಲರ್‌ಶಿಪ್‌ಗಳಲ್ಲಿ ಈ ಕೊಡುಗೆಗಳನ್ನು ಪಡೆಯಬಹುದು ಎಂದು ಕೈನೆಟಿಕ್ ಗ್ರೀನ್ ಎನರ್ಜಿ ತಿಳಿಸಿದೆ.
ಕೈನೆಟಿಕ್ ಗ್ರೀನ್ ಎರಡು ಪ್ರಮುಖ ಫೈನಾನ್ಷಿಯರ್‌ಗಳಾದ ಚೋಳಮಂಡಲಂ ಫೈನಾನ್ಸ್ ಮತ್ತು ರೆವಿಫಿನ್ ಫೈನಾನ್ಸ್‌ನೊಂದಿಗೆ ಕೈಜೋಡಿಸಿದ್ದು, ಇವರ ಮೂಲಕ ಗ್ರಾಹಕರು ತಮ್ಮ ತ್ರಿಚಕ್ರ ವಾಹನಗಳನ್ನು ಖರೀದಿಸಲು ಇನ್ನೂ ಅನುಕೂಲಕರವಾಗಿರುತ್ತದೆ. ಉದಾಹರಣೆಗೆ, ಕೈನೆಟಿಕ್ ಗ್ರೀನ್ ಪ್ಯಾಸೆಂಜರ್ ಸಫರ್ ಸ್ಮಾರ್ಟ್ ಲೀಡ್ ಆಸಿಡ್ e3W ಈಗ ಕೇವಲ ರೂ.29,000 ಕ್ಕಿಂತ ಕಡಿಮೆ ಡೌನ್ ಪೇಮೆಂಟ್ ಹಾಗೂ ರೂ.8,200 ರಿಂದ EMI ಪ್ರಾರಂಭವಾಗುತ್ತದೆ.
ಅದೇ ರೀತಿ, ಕೈನೆಟಿಕ್ ಗ್ರೀನ್ ಲಿಥಿಯಂ ಬ್ಯಾಟರಿ ಆವೃತ್ತಿಯು ರೂ.32,000 ಡೌನ್ ಪೇಮೆಂಟ್ ಮತ್ತು ರೂ.8,500 ರಿಂದ EMI ಆರಂಭವಾಗುತ್ತದೆ. ಇದರ ಜೊತೆಗೆ ಲೀಡ್ ಆಸಿಡ್ e3W ಗೆ ಒಂದು ವರ್ಷದ ವಾರಂಟಿ ಮತ್ತು 18 ತಿಂಗಳ ಸಾಲದ ಅವಧಿಯನ್ನು ಅಥವಾ ಲಿಥಿಯಂ ಮಾದರಿಗೆ ಮೂರು ವರ್ಷಗಳ ವಾರಂಟಿ ಮತ್ತು ಮೂರು ವರ್ಷಗಳ ಸಾಲದ ಅವಧಿಯನ್ನು ಆಯ್ಕೆ ಮಾಡಬಹುದು.
ಈ ಕುರಿತು ಪ್ರತಿಕ್ರಿಯಿಸಿದ ಕೈನೆಟಿಕ್ ಗ್ರೀನ್ ಬ್ಯುಸಿನೆಸ್ ಹೆಡ್ ದೇಬಶಿಶ್ ಮಿತ್ರಾ, "ಇದೊಂದು ಉತ್ತೇಜಕ ಅವಕಾಶವಾಗಿದೆ, ಏಕೆಂದರೆ ನಾವು ತಮ್ಮ ಕೈನೆಟಿಕ್ ಗ್ರೀನ್ ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳಿಗೆ ಆಕರ್ಷಕ ಹಣಕಾಸು ಮತ್ತು ಬ್ಯಾಟರಿಗಳ ಆಯ್ಕೆಯನ್ನು ನೀಡುವ ಮೂಲಕ ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚು ಸುಲಭವಾಗಿ ಖರೀದಿಸಲು ಅನುವು ಮಾಡಿಕೊಟ್ಟಿದ್ದೇವೆ ಎಂದರು.
ಕಂಪನಿಯು ತನ್ನ ಡೀಲರ್‌ಶಿಪ್ ನೆಟ್‌ವರ್ಕ್ ಅನ್ನು 2024 ರಲ್ಲಿ 200 ರಿಂದ 2025ರ ಅಂತ್ಯದ ವೇಳೆಗೆ 400 ಡೀಲರ್‌ಗಳಿಗೆ ವಿಸ್ತರಿಸುವ ಮೂಲಕ ಗಮನಾರ್ಹ ಮೈಲಿಗಲ್ಲುಗಳನ್ನು ಸಾಧಿಸುವ ಗುರಿಯನ್ನು ಹೊಂದಿದೆ. ಕೈನೆಟಿಕ್ ಗ್ರೀನ್ 2024-25 ಹಣಕಾಸು ವರ್ಷದಲ್ಲಿ ತ್ರಿಚಕ್ರ ವಾಹನ ವಿಭಾಗದಲ್ಲಿ ರೂ. 250 ರಿಂದ ರೂ. 300 ಕೋಟಿಗಳಷ್ಟು ಬಲವಾದ ಆದಾಯವನ್ನು ಗುರಿಯಾಗಿಸಿಕೊಂಡಿರುವುದಾಗಿ ಕಂಪನಿ ವಿಶ್ವಾಸ ವ್ಯಕ್ತಪಡಿಸಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








