ಪೈಲೆಟ್‌ಗಳಾದ KSRTC ಬಸ್ ಡ್ರೈವರ್‌ಗಳು: ಪ್ರೈವೇಟ್ ಬಸ್ ಮಾಲೀಕರಿಗೆ ನಡುಕ ಶುರು!
ವಿಮಾನದಂತಹ ಸೌಕರ್ಯವಿರುವ ಹೊಸ ಬಸ್‌ಗಳನ್ನು ಕೆಎಸ್‌ಆರ್‌ಟಿಸಿ (KSRTC) ಪರಿಚಯಿಸಿದೆ. ಬರೋಬ್ಬರಿ 20 ಅಂಬಾರಿ ಉತ್ಸವ ಸ್ಲೀಪರ್ ಬಸ್ಸುಗಳನ್ನು ರಾಜ್ಯದ ವಿವಿಧ ನಗರಗಳ ನಡುವೆ ಕಾರ್ಯಾಚರಿಸಲಿವೆ. ಇವು ಅತ್ಯಾಧುನಿಕ ತಂತ್ರಜ್ಞಾನ, ಆರಾಮದಾಯಿಕ ಅನುಭವ, ಅತ್ಯುತ್ತಮ ಫೀಚರ್ಸ್ ಒಳಗೊಂಡಿರುವ ನಿಗಮದ ಬೆಸ್ಟ್ ಬಸ್‌ಗಳಾಗಿವೆ. ಈ ವಾಹನಗಳು 15 ಮೀಟರ್ ಉದ್ದವಿದ್ದು, 40 ಬರ್ತ್ 2x1 ಸಂರಚನೆಯೊಂದಿಗೆ ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣವನ್ನು ನೀಡುತ್ತವೆ. ಪ್ರಯಾಣಿಕರ ಸುರಕ್ಷತೆಗೆ ಹೆಚ್ಚನ ಆದ್ಯತೆ ನೀಡಲಾಗಿದ್ದು, ಈ ಹೊಸ ಬಸ್‌ಗಳ ವಿಶೇಷತೆಗಳನ್ನು ಇಲ್ಲಿ ನೋಡೋಣ.
ಈ ವಾಹನವು 15 ಮೀಟರ್ ಉದ್ದವಿದ್ದು, ಉತ್ತಮ ಆಸನಗಳು ಮತ್ತು ಉತ್ತಮ ಗುಣಮಟ್ಟದ ವಸ್ತುಗಳಿಂದ ಹೆಚ್ಚಿನ ಅನುಕೂಲವನ್ನು ಒದಗಿಸುತ್ತದೆ. ಬಸ್‌ನಲ್ಲಿ 40 ಬರ್ತ್ 2x1 ಸಂರಚನೆಯೊಂದಿಗೆ ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣವನ್ನು ನೀಡುತ್ತದೆ. ಚಾಲಕರ ಅನುಕೂಲತೆಗಾಗಿ ಸುಲಭವಾಗಿ ಕೈಗೆಟುಕುವ ನಿಯಂತ್ರಕಗಳು ಮತ್ತು ಸ್ವಿಚ್ಚುಗಳನ್ನು ನೀಡಲಾಗಿದೆ.

ಚಾಲಕರ ದೃಶ್ಯಾವಧಿಯನ್ನು ಸುಧಾರಿಸಲು ಮತ್ತು ಬ್ಲೈಂಡ್ ಸ್ಪಾಟ್ ಕಡಿಮೆ ಮಾಡಲು ಮುಂಭಾಗದ ಗಾಜು 9.5% ಅಗಲವಾಗಿ ವಿನ್ಯಾಸಗೊಳಿಸಲಾಗಿದೆ. ಇದು ಶಕ್ತಿಯುತ ಹಾಲೋಜನ್ ಹೆಡ್ ಲೈಟ್‌ಗಳು ಮತ್ತು ಡೇ ಟೈಮ್ ರನ್ನಿಂಗ್ ಲೈಟ್‌ಗಳನ್ನು (DRL) ಹೊಂದಿದೆ. ಹಾಗೆಯೇ ರಾತ್ರಿ ಸಮಯದಲ್ಲಿ ಚಾಲನೆ ಮಾಡುವಾಗ ಹೆಚ್ಚಿನ ಸುರಕ್ಷತೆಗಾಗಿ ಹಿಂಬದಿ ಫಾಗ್ ಲೈಟುಗಳನ್ನು ನೀಡಲಾಗಿದೆ.
ಚಾಲಕರು ಪ್ರಯಾಣಿಕರ ಬಾಗಿಲಿನಿಂದ ಪಾದಚಾರಿಗಳನ್ನು ಸುಲಭವಾಗಿ ನೋಡಬಹುದಾದ ಕಾರಣ, ಪಾದಚಾರಿ ಸುರಕ್ಷತೆಯನ್ನು ಸುಧಾರಿಸಲಾಗಿದೆ. ಹಾಗೆಯೇ ತುರ್ತು ಪರಿಸ್ಥಿತಿಗಳಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಫೈರ್ ಅಲಾರ್ಮ್ ಮತ್ತು ಪ್ರೊಟೆಕ್ಷನ್ ಸಿಸ್ಟಮ್ (FDSS) ಸ್ಥಾಪಿಸಲಾಗಿದೆ. ಮೊಬೈಲ್ ಚಾರ್ಜಿಂಗ್ ಪಾಯಿಂಟ್‌ಗಳಿಗಾಗಿ ಯು.ಎಸ್.ಬಿ ಮತ್ತು C-ಟೈಪ್ ಹೊಂದಿಸಲಾಗಿದೆ.

ಹೊಸ ಅಂಬಾರಿ ಉತ್ಸವ ಸ್ಲೀಪರ್ ಬಸ್ಸುಗಳ ಪ್ಯಾಂಟೊಗ್ರಾಫಿಕ್ ವಿನ್ಯಾಸವು ವಾಹನ ನಿರ್ವಹಣೆಯನ್ನು ಸುಲಭಗೊಳಿಸುತ್ತದೆ. ದೊಡ್ಡ ಏರ್ ಡಕ್ಟ್ ಹೊಂದಿರುವುದರಿಂದ ಹೆಚ್ಚಿನ ಏರ್ ಕಂಡೀಷನಿಂಗ್ ವ್ಯವಸ್ಥೆ ಇರಲಿದ್ದು, ಇದರಿಂದಾಗಿ ಪ್ರಯಾಣಿಕರಿಗೆ ಪ್ರೀಮಿಯಂ ಅನುಭವ ನೀಡಲಿದೆ. ಬಸ್‌ನ ವಾಯುಗತಿ ಶಾಸ್ತ್ರದ ವಿನ್ಯಾಸವು (Aerodynamic design) ಉತ್ತಮ ಮೈಲೇಜ್ ಒದಗಿಸುತ್ತದೆ.
ಹೊಸ ಪ್ಲಶ್ ಇಂಟೀರಿಯರ್ಸ್ ಮತ್ತು ಸ್ಕ್ಯಾಂಡಿನೇವಿಯನ್ ಶೈಲಿಯ ಎಕ್ಸ್ಟೀರಿಯರ್ಸ್ ಹೊಂದಿದೆ, ಇದು ದೃಶ್ಯಾವಳಿಯಲ್ಲಿ ಆಕರ್ಷಕ ಎಸ್ಥೆಟಿಕ್ಸ್ ಅನ್ನು ನೀಡುತ್ತದೆ. ನೂತನ ಆವಿಷ್ಕಾರದ ಎಂಜಿನ್ ತಂತ್ರಜ್ಞಾನವು ಶ್ರೇಷ್ಠ ಪರ್ಫಾಮೆನ್ಸ್ ಮತ್ತು ಸುಧಾರಿತ ಮೈಲೇಜ್ (KMPL) ಒದಗಿಸುತ್ತದೆ. ಈ 20 ಅಂಬಾರಿ ಉತ್ಸವ ಹೊಸ ಸ್ಲೀಪರ್ ಬಸ್ಸುಗಳು ಈ ಕೆಳಕಂಡ ಮಾರ್ಗಗಳಲ್ಲಿ ಕಾರ್ಯಾಚರಿಸಲಿವೆ.

ಹೊಸದಾಗಿ ಪರಿಚಯಿಸಲಾದ ಅಂಬಾರಿ ಉತ್ಸವ ಸ್ಲೀಪರ್ ಬಸ್ಸುಗಳನ್ನು ಬೆಂಗಳೂರು - ನೆಲ್ಲೂರು ನಡುವೆ 2, ಬೆಂಗಳೂರು - ಹೈದಾರಬಾದ್ ನಡುವೆ 2, ಕುಂದಾಪುರ - ಬೆಂಗಳೂರು ನಡುವೆ 2, ಮಂಗಳೂರು - ಬೆಂಗಳೂರು ನಡುವೆ 2, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ - ಕುಂದಾಪುರ ನಡುವೆ 2 ಬಸ್‌ಗಳನ್ನು ನಿಯೋಜಿಸಲಾಗಿದೆ.
ಈ ಮಾರ್ಗಗಳ ಜೊತೆಗೆ ಹೆಚ್ಚುವರಿಯಾಗಿದೆ ಬೆಂಗಳೂರು - ತ್ರಿಶೂರು ನಡುವೆ 2, ಬೆಂಗಳೂರು - ಕ್ಯಾಲಿಕಟ್ ನಡುವೆ 2, ಬೆಂಗಳೂರು - ವಿಜಯವಾಡ ನಡುವೆ 4, ಬೆಂಗಳೂರು - ಎರ್ನಾಕುಲಂ ನಡುವೆ 2 ಬಸ್‌ಗಳು ಕಾರ್ಯಾಚರಿಸಲಿವೆ. ಈ ಬಸ್‌ಗಳು ಮೊದಲೇ ಹೇಳಿದಂತೆ ಅತ್ಯಾಧುನಿಕ ಫೀಚರ್ಸ್ ಹಾಗೂ ಆರಾಮದಾಯಕ ಅನುಭವ ನೀಡಲಿವೆ. ಹೊಸ ಬಸ್‌ಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.


Click it and Unblock the Notifications