20 ವರ್ಷದ ಬಳಿಕ ಲ್ಯಾಂಬೋರ್ಗಿನಿ ಲೋಗೋಗೆ ಹೊಸ ಟಚ್: ಈ ಕಂಪನಿಯ ಕಾರುಗಳು ಯಾಕೆ ಫೇಮಸ್?
ಇಟಾಲಿಯನ್ ಕಾರು ನಿರ್ಮಾಣ ಕಂಪನಿಯಾದ ಲ್ಯಾಂಬೋರ್ಗಿನಿ ಯಾರಿಗೆ ತಾನೆ ಗೊತ್ತಲ್ಲ ಹೇಳಿ. ಲ್ಯಾಂಬೋರ್ಗಿನಿ ಎಂದ ತಕ್ಷಣ ಎಲ್ಲರಿಗೂ ನೆನಪಾಗುವುದು, ಸಖತ್ ಸ್ಟೈಲಿಶ್ ಮತ್ತು ಅಗ್ರೆಸಿವ್ ಆಗಿರುವ ಕಾರುಗಳು. ಮತ್ತು ಅದೇ ರೀತಿ ಇನ್ನು ಕೆಲವರಿಗೆ ಈ ಹೆಸರು ಕೇಳಿದಾಗ ನೆನಪಾಗುವುದು ಲ್ಯಾಂಬೋರ್ಗಿನಿ ಬ್ರಾಂಡ್‌ನ ಲೋಗೋ!
ಗೂಳಿಯ ಚಿತ್ರವುಳ್ಳ ಲ್ಯಾಂಬೋರ್ಗಿನಿ (Lamborghini) ಲೋಗೋ ಎಲ್ಲರಿಗೂ ತಿಳಿದಿದೆ. ಇದೀಗ ಈ ಲೋಗೋ ಸುದ್ದಿಯಲ್ಲಿದ್ದು, ಸುಮಾರು 20 ವರ್ಷಗಳ ಬಳಿಕ ಲ್ಯಾಂಬೋರ್ಗಿನಿ ಕಂಪನಿಯು ತನ್ನ ಲೋಗೋವನ್ನು ಕೊಂಚ ಬದಲಾಯಿಸಿ ಫೇಸ್‌ಲಿಫ್ಟ್ ಲುಕ್ ಅನ್ನು ಕೊಟ್ಟಿದೆ. ಇಟಾಲಿಯನ್ ಕಾರು ತಯಾರಿಕಾ ಕಂಪನಿ ತನ್ನ ಲೋಗೋಗೆ ಫ್ರೆಶ್ ಟಚ್ ಕೊಟ್ಟಿರುವುದು ಸಾಮಾಜಿಕ ಜಾಲತಾನಗಳಲ್ಲಿ ವೈರಲ್ ಆಗುತ್ತಿದೆ.

ಕಳೆದ ಬಾರಿಯ ಲೋಗೋ ಚಿನ್ನ ಮತ್ತು ಕಪ್ಪು ಬಣ್ಣದಲ್ಲಿ ಕಂಗೊಳಿಸುತ್ತಿತ್ತು. ಇದರಲ್ಲಿ ಗೂಳಿ ಸಾಕಷ್ಟು ಎದ್ದು ಕಾಣುವ ರೀತಿಯಲ್ಲಿತ್ತು. ಆದರೆ ಇದೀಗ ಹೊಸ ಲೋಗೋದಲ್ಲಿ ಹಳೆಯ ಬಣ್ಣ ಕೊಂಚ ಕವಿದಿದ್ದು ಹೊಸ ಟಚ್ ನೀಡಿರುವುದು ಇದನ್ನು ಕಂಡಾಗ ನಮಗೆ ತಿಳಿದು ಬರುತ್ತದೆ.
ಈ ಕುರಿತಾಗಿ ವಿಡಿಯೋ ಮೂಲಕ ಲ್ಯಾಂಬೋರ್ಗಿನಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು, ಈ ವಿಡಿಯೋಗೆ ನೆಟ್ಟಿಗರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸುಮಾರು ಒಂಬತ್ತು ಸೆಕೆಂಡ್ ಬರುವ ಈ ವಿಡಿಯೋದಲ್ಲಿ ಮೊದಲಿಗೆ ಹಳೆಯ ಲ್ಯಾಂಬೋರ್ಗಿನಿ ಲೋಗೋ ತೋರಿಸುತ್ತಿದ್ದು ಕೊನೆಗೆ ಹೊಸ ಲೋಗೋವನ್ನು ತೋರಿಸಲಾಗುತ್ತಿದೆ.

ಇನ್ನು ಲ್ಯಾಂಬೋರ್ಗಿನಿಯ ಪ್ರಸಿದ್ದ ಮಾಡಲ್‌ಗಳನ್ನು ನೋಡುವುದಾದರೆ, ಲ್ಯಾಂಬೋರ್ಗಿನಿ ಉರುಸ್ ಬಗ್ಗೆ ಮಾತನಾಡಲೇ ಬೇಕು. ಲ್ಯಾಂಬೊರ್ಗಿನಿ ಉರಸ್ ಎಸ್ ಎಸ್‍ಯುವಿಯಲ್ಲಿ 4.0-ಲೀಟರ್ ಟ್ವಿನ್-ಟರ್ಬೊ V8 ಎಂಜಿನ್ ಅನ್ನು ಅಳವಡಿಸಿದ್ದಾರೆ. ಈ ಎಂಜಿನ್ 657 ಬಿಹೆಚ್‍ಪಿ ಪವರ್ ಮತ್ತು 850 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮೂಲಕ ಎಲ್ಲಾ ನಾಲ್ಕು ಚಕ್ರಗಳಿಗೆ ಪವರ್ ಅನ್ನು ಕಳುಹಿಸಲಾಗುತ್ತದೆ.
ಇನ್ನು ಲ್ಯಾಂಬೊರ್ಗಿನಿ ತನ್ನ ಹುರಾಕನ್ ಟೆಕ್ನಿಕಾ ಸೂಪರ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಲ್ಯಾಂಬೊರ್ಗಿನಿ ಹುರಾಕನ್ ಟೆಕ್ನಿಕಾ ಕಾರಿನಲ್ಲಿ ಅದೇ 5.2-ಲೀಟರ್ ನ್ಯಾಚುರಲ್ ಆಸ್ಪೈರಡ್ ವಿ10 ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 8,000 ಆರ್‌ಪಿಎಂನಲ್ಲಿ 631 ಬಿಹೆಚ್‍ಪಿ ಪವರ್ ಮತ್ತು 6,500 ಆರ್‌ಪಿಎಂನಲ್ಲಿ 565 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಈ ಎಂಜಿನ್ ಅನ್ನು 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮೂಲಕ ಹಿಂದಿನ ವ್ಹೀಲ್ ಗಳಿಗೆ ಪವರ್ ಕಳುಹಿಸಲಾಗುತ್ತದೆ. ಶಕ್ತಿಶಾಲಿ ವಿ10 ಎಂಜಿನ್ ಹೊಂದಿರುವ ಲ್ಯಾಂಬೊರ್ಗಿನಿ ಹುರಾಕನ್ ಟೆಕ್ನಿಕಾ ಸೂಪರ್ ಕಾರು 3.2 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಕಾರು 9.1 ಸೆಕೆಂಡುಗಳಲ್ಲಿ 0-200 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಸೂಪರ್‌ಕಾರ್ ಟಾಪ್ ಸ್ಪೀಡ್ 325 ಕಿ.ಮೀ ಆಗಿದೆ.
ಲ್ಯಾಂಬೋರ್ಗಿನಿ ರೆವುಲ್ಟೋ (Lamborghini Revulto) ಕಾರಿನ ಆರ್ಡರ್ ಸುಮಾರು 2026 ರ ವರೆಗೆ ಫುಲ್ ಆಗಿದ್ದು, ಇನ್ನು ಈ ಕಾರನ್ನು ಕೊಳ್ಳಬೇಕು ಎಂದುಕೊಳ್ಳುವವರು 2026 ರವರೆಗೆ ಕಾಯಲೇ ಬೇಕು. ಹೊಸ ಟೆಕ್ನಾಲಜಿ ಮತ್ತು ಸಾಂಪ್ರದಾಯಿಕ ವಿಧಾನದಿಂದ ಈ ಹೊಸ hybrid V12 ಎಂಜಿನ್ ಅನ್ನು ತಯಾರಿಸಲಾಗಿದ್ದು, ಇದು ಹೆಚ್ಚಿನ ಪವರ್ ಅನ್ನು ಕಾರಿಗೆ ನೀಡಲಿದೆ.
ಇದರಿಂದ ಈ ಹಿಂದೆಂದೂ ಕಂಡಿರದಂತಹ ಹೊಸ ಅನುಭವವನ್ನು ಚಾಲಕರು ಈ ಲ್ಯಾಂಬೋರ್ಗಿನಿ ರೆವುಲ್ಟೋ ಕಾರನ್ನು ಓಡಿಸುವ ಮೂಲಕ ಪಡೆಯಲಿದ್ದಾರೆ ಎಂದು ಅವರು ಇದೇ ಸಂಧರ್ಭದಲ್ಲಿ ಹೇಳಿದ್ದಾರೆ. ಮಾಹಿತಿಗಳ ಪ್ರಕಾರ ಈ ಹೊಸ hybrid V12 ಎಂಜಿನ್ ಕಳೆದ ಬಾರಿಯ ಎಂಜಿನ್‌ಗಿಂದ ಸುಮಾರು 17 ಕೆಜಿಗಳಷ್ಟು ಕಡಿಮೆ ತೂಕವಿದ್ದು ಇದರಿಂದ ಕಾರು ಹೆಚ್ಚಿನ ಪರ್ಫಾಮೆನ್ಸ್ ನಿಡುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








