Mahindra Bolero: ಅಪಘಾತವಾದ ಕಾರಿಗೆ ಅದ್ದೂರಿ ಮಾಡಿಫಿಕೇಷನ್: ವಿಡಿಯೋಗೆ ವಾವ್ ಎನ್ನಲೇಬೇಕು!
ದೇಶಿಯ ಬ್ರಾಂಡ್‌ನ ಹೆಮ್ಮೆಯ ಮಹೀಂದ್ರಾ ಬೊಲೆರೊ (Mahindra Bolero)ಗೆ ಭಾರತದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವಿದೆ. ದೇಶದ ವಿವಿಧ ಭಾಗಗಳಲ್ಲಿ ಈ ಬೊಲೆರೊವನ್ನು ಮಾಡಿಫೈಗೊಳಿಸಿದ ಹಲವು ವಿಡಿಯೋಗಳನ್ನು ನೋಡಿರುತ್ತೀರಾ, ಆದ್ರೆ ಟ್ರಕ್‌ಗೆ ಡಿಕ್ಕಿ ಹೊಡೆದು ಮುಂಭಾಗ ನಜ್ಜುಗುಜ್ಜಾದ ಬೊಲೆರೊ ರಗಡ್ ಲುಕ್‌ನಲ್ಲಿ ಮಾಡಿಫೈಗೊಂಡಿರುವುದನ್ನು ನೋಡುವುದು ಬಹುಶಃ ಇದೇ ಮೊದಲಿರಬಹುದು.
ಈ ಕುರಿತ ವಿಡಿಯೋವನ್ನು ಬೊಲೆರೊ ಮಾಲೀಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅಪಘಾತವಾದ ಮೊದಲ ಬೊಲೆರೊವನ್ನು ನೋಡಬಹುದು. ಇದು 4x4 ಎಸ್‌ಯುವಿ ಆಗಿದ್ದು, ಬೃಹತ್ ಟ್ರಕ್‌ಗೆ ಡಿಕ್ಕಿಯಾಗಿರುವುದು ತಿಳಿದುಬಂದಿದೆ. ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡು ಬಲಭಾಗದ ಫೆಂಡರ್ ಗ್ರಿಲ್, ಬಾನೆಟ್, ಹೆಡ್‌ಲ್ಯಾಂಪ್ ಸೇರಿದಂತೆ ವೀಲ್‌ಗಳು ಹಾನಿಗೊಳಗಾಗಿವೆ.

ಅಪಘಾತವಾದ ಸ್ಥಳದಿಂದ ಮೊದಲು ಕಾರನ್ನು ವರ್ಕ್‌ಷಾಪ್‌ಗೆ ಕೊಂಡೊಯ್ದ ಮಾಲೀಕ ಮಾಡಿಫೈ ಮಾಡಲು ನಿರ್ಣಯಿಸಿದ್ದಾರೆ. ವಿಡಿಯೋದಲ್ಲಿ ಮೇಲ್ನೋಟಕ್ಕೆ ಕಾರು ಮುಂಭಾದಲ್ಲಿ ಕನಿಷ್ಟ ಹಾನಿಯಾಗಿರುವಂತೆ ಕಾಣುತ್ತದೆಯಾದರೂ, ಸೂಕ್ಷ್ಮವಾಗಿ ಗಮನಿಸಿದರೆ ತೀವ್ರ ಹಾನಿಯಾಗಿರುವುದು ತಿಳಿಯುತ್ತದೆ. ಹಾಗಾಗಿಯೇ ಮಾಲೀಕ ಸಂಪೂರ್ಣವಾಗಿ ಕಾರಿನ ಲುಕ್ ಬದಲಿಸಲು ಮುಂದಾಗಿದ್ದಾರೆ. ಇಡೀ ಎಸ್‌ಯುವಿಗೆ ಹೊಸ ಪೇಂಟ್ ಹಾಗೂ ಹೊಸ ಲುಕ್ ನೀಡಿದ್ದಾರೆ.
ಮೊದಲು ಸಿಲ್ವರ್ ಬಣ್ಣದಲ್ಲಿದ್ದ ಎಸ್‌ಯುವಿಯನ್ನು ತೀಕ್ಷ್ಣ ಹಸಿರು ಬಣ್ಣಕ್ಕೆ ಬದಲಿಸಿದ್ದಾರೆ. ಮುಂಭಾಗದಲ್ಲಿ ರಗಡ್ ಲುಕ್ ನೀಡಲು ಫೆಂಡರ್, ಗ್ರಿಲ್, ಬಾನೆಟ್ ಎಲ್ಲವನ್ನು ಬದಲಿಸಲಾಗಿದೆ. ಮುಂಭಾಗದಲ್ಲಿ ಒಂದು ವೀಲ್ ಮುರಿದಿರುವುದನ್ನು ಕಾಣಬಹುದು, ಆದ್ರೆ ಮಾಲೀಕ ಎಲ್ಲಾ ನಾಲ್ಕು ವೀಲ್‌ಗಳನ್ನು ಬದಲಿಸಿಬಿಟ್ಟಿದ್ದಾರೆ. ಹಾಗೆಯೇ ಸಸ್ಪೆನ್ಷನ್ ಕೂಡ ತೀವ್ರ ಹಾನಿಯಾದ್ದರಿಂದ ಪಕ್ಕಾ ಆಫ್‌ರೋಡರ್‌ಗೆ ಬೇಕಾದಂತೆ ಸಸ್ಪೆನ್ಷನ್ ಸೆಟಪ್ ಅನ್ನು ಮರುಸ್ಥಾಪಿಸಿದ್ದಾರೆ.

ಒಟ್ಟಾರೆ ಮಾಡಿಫೇಕಷನ್‌ನಲ್ಲಿ ಬಹುತೇಕ ಎಲ್ಲವನ್ನು ಆಫ್ಟರ್ ಮಾರ್ಕೆಟ್‌ನಿಂದ ಬದಲಿಸಿಬಿಟ್ಟಿದ್ದಾರೆ. ಎಲ್ಲಾ ಬದಲಾವಣೆಗಳ ಬಳಿಕ ಹೊಸ ಎಸ್‌ಯುವಿ ಮೊದಲಿಗಿಂತ ಎತ್ತರ, ದಪ್ಪ ಹಾಗೂ ರಗಡ್ ಲುಕ್ ಪಡೆದುಕೊಂಡು ಮೃಗದಂತೆ ಕಾಣುತ್ತಿದೆ. ರೂಫ್ ಮೇಲೆ ಲ್ಯಾಂಪ್‌ಗಳ ಸೆಟಪ್, ಹಿಂಭಾಗದ ಮತ್ತು ಮುಂಭಾಗದ ವಿಂಡ್‌ಶೀಲ್ಡ್‌ಗಳ ಮೇಲೆ ಗ್ರಾಫಿಕ್ ಸ್ಟಿಕರ್ ನೀಡಿ ಸ್ಟೈಲಿಷ್ ಆಗಿ ಮಾಡಿಫೈಗೊಳಿಸಲಾಗಿದೆ.
ಈ ನವೀಕರಗಳನ್ನು ಬಿಟ್ಟರೆ ವಾಹನದಲ್ಲಿ ಹೆಚ್ಚಾಗಿ ಯಾವುದೇ ಬದಲಾವಣೆಗಳು ಕಾಣುವುದಿಲ್ಲ, ಇನ್ನು ಇಂಟೀರಿಯರ್ ಬಗ್ಗೆ ಯಾವುದೇ ವಿಡಿಯೋವನ್ನು ಹಂಚಿಕೊಂಡಿಲ್ಲ. ಈ ಬಗ್ಗೆ ಯಾವುದೇ ಮಾಹಿತಿ ಕೂಡ ಮಾಲೀಕ ತಿಳಿಸಿಲ್ಲ. ನಮ್ಮ ಪ್ರಕಾರ ಇಂಟೀರಿಯರ್ ಕೂಡ ಪ್ರೀಮಿಯಂ ಆಗಿ ಮಾಡಿಫೈ ಆಗಿರುವ ಸಾಧ್ಯತೆ ಇದೆ. ಮಾಲೀಕ ಶೀಘ್ರದಲ್ಲೇ ಅದನ್ನು ಕೂಡ ಹಂಚಿಕೊಳ್ಳಬಹುದು.
ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ನಾವು ನೋಡಿದಂತಹ ಬೊಲೆರೊ ಮಾಡಿಫಿಕೇಷನ್‌ಗಳಲ್ಲಿ ಇದು ಟಾಪ್ ಸ್ಥಾನವನ್ನು ಪಡೆದುಕೊಂಡಿದೆ. ಖಂಡಿತವಾಗಿಯು ಭಾರತದಲ್ಲಿ ಕಾಣಸಿಗುವ ಸುಂದರವಾದ 4x4 ಬೊಲೆರೊ ಎಸ್‌ಯುವಿ ಎಂದರು ತಪ್ಪಾಗುವುದಿಲ್ಲ. ಯಾವುದೇ ರೀತಿಯ ಕಾರು ಮಾಡಿಫೈಗಳು, ಕಾನೂನುಬಾಹಿರವಾಗಿದೆ. ಇಂತಹ ಮಾರ್ಪಡಿಸಿದ ವಾಹನಗಳನ್ನು ಸಾರ್ವಜನಿಕ ರಸ್ತೆಗಳಲ್ಲಿ ಓಡಿಸಬಾರದು, ಮಾಲೀಕರು ತೊಂದರೆಗೆ ಸಿಲುಕಬಹುದು ಎಂಬುದನ್ನು ಮರೆಯದಿರಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








