ಭಾರತ ನಿರ್ಮಿತ ಕಾರುಗಳೇ ಬೇಕೆಂದ ಜಪಾನ್ ಜನ: ಬುಕ್ಕಿಂಗ್ಸ್ ಕಂಡು ಬೆರಗಾದ ಕಂಪನಿ!
ಹಲವು ವರ್ಷಗಳಿಂದ ಹಲವಾರು ದೇಶಗಳಿಗೆ ಮೇಡ್ ಇನ್ ಇಂಡಿಯಾ ಸುಜುಕಿ ಮತ್ತು ಟೊಯೊಟಾ ಬ್ರಾಂಡ್ ಮಾದರಿಗಳನ್ನು ರಫ್ತು ಮಾಡುತ್ತಿರುವ ಮಾರುತಿ ಸುಜುಕಿ ಇತ್ತೀಚೆಗೆ ಜಪಾನ್‌ಗೆ ಭಾರತದಲ್ಲಿ ತಯಾರಿಸಿದ ಫ್ರಾಂಕ್ಸ್ ಅನ್ನು ರಫ್ತನ್ನು ಪ್ರಾರಂಭಿಸಿತು. ಇತರ ರಫ್ತು ಮಾರುಕಟ್ಟೆಗಳಲ್ಲಿ ಮಾರಾಟವಾಗುವ ಫ್ರಾಂಕ್ಸ್‌ನಂತೆಯೇ, ಜಪಾನ್-ಬೌಂಡ್ ಎಸ್‍ಯುವಿಯು 1.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ, ಇದು ಭಾರತದಲ್ಲಿ ಮಾರಾಟವಾಗುವ ಫ್ರಾಂಕ್ಸ್‌ನಲ್ಲಿ (Fronx) ಲಭ್ಯವಿಲ್ಲ. ಆದರೆ ಫ್ರಾಂಕ್ಸ್ ಅನ್ನು FWD ಆಯ್ಕೆಯೊಂದಿಗೆ ಮಾತ್ರ ಮಾರಾಟ ಮಾಡುವ ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗಿಂತ ಭಿನ್ನವಾಗಿ, ಜಪಾನ್‌ಗೆ ಹೋಗುವ ಮಾದರಿ ಸುಜುಕಿಯ ಆಲ್‌ಗ್ರಿಪ್ ಸೆಲೆಕ್ಟ್ ಎಡಬ್ಲ್ಯೂಡಿ ಪಡೆಯುತ್ತವೆ.
ಎಲ್ಲಾ ಇತರ ಫ್ರಾಂಕ್ಸ್ ಎಸ್‌ಯುವಿಗಳಂತೆ, ಜಪಾನ್‌ಗೆ ಹೋಗುವವುಗಳು ಗುಜರಾತ್‌ನ ಎಸ್‌ಎಂಜಿ (ಸುಜುಕಿ ಮೋಟಾರ್ ಗ್ರೂಪ್) ಕಾರ್ಖಾನೆಯಲ್ಲಿ ನಿರ್ಮಿಸಲಾಗಿದೆ. ಜಪಾನಿನ ಸ್ಪೆಕ್ ಕಾರು ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ 1.5-ಲೀಟರ್ ಪೆಟ್ರೋಲ್‌ನೊಂದಿಗೆ ಬರುತ್ತದೆ, ಇದು ದಕ್ಷಿಣ ಆಫ್ರಿಕಾದಲ್ಲಿ ಮಾರಾಟವಾದ ಫ್ರಾಂಕ್ಸ್‌ನಲ್ಲಿಯೂ ಇದೆ ಮತ್ತು ಬಹು ರೂಪಾಂತರಗಳನ್ನು ಪಡೆಯುತ್ತದೆ. ಗೇರ್‌ಬಾಕ್ಸ್ ಆಯ್ಕೆಗಳು ಪ್ಯಾಡಲ್ ಶಿಫ್ಟರ್‌ಗಳೊಂದಿಗೆ 5-ಸ್ಪೀಡ್ ಟಾರ್ಕ್ ಕರ್ನವಾಟರ್ ಅನ್ನು ಒಳಗೊಂಡಿವೆ.

ಆಲ್‌ಗ್ರಿಪ್ ಸೆಲೆಕ್ಟ್ ಎಡಬ್ಲ್ಯೂಡಿ ತಂತ್ರಜ್ಞಾನವು ಟಾಪ್ ಟ್ರಿಮ್‌ಗಳಲ್ಲಿ ಮಾತ್ರ ಲಭ್ಯವಿದೆ, ಆದರೂ ಕಾರಿಗೆ ಬಾಹ್ಯ "ಆಲ್‌ಗ್ರಿಪ್" ಬ್ಯಾಡ್ಜಿಂಗ್ ಇಲ್ಲ. ಆಲ್‌ಗ್ರಿಪ್ ಸೆಲೆಕ್ಟ್ ಸುಜುಕಿಯ ಮಿಡ್ ಲೆವೆಲ್ AWD ತಂತ್ರಜ್ಞಾನವಾಗಿದ್ದು ಅದು ಆಲ್‌ಗ್ರಿಪ್ ಆಟೋ ಮೇಲೆ ಮತ್ತು ಆಲ್‌ಗ್ರಿಪ್ ಪ್ರೊ ಕೆಳಗೆ ಇರುತ್ತದೆ. ಇದು ಆಯ್ಕೆ ಮಾಡಲು ನಾಲ್ಕು "ಆಫ್-ರೋಡ್" ಮೋಡ್‌ಗಳೊಂದಿಗೆ ಆಟೋ, ಸ್ಪೋರ್ಟ್, ಸ್ನೋ ಮತ್ತು ಲಾಕ್ ಡ್ರೈವರ್ತ್ ಕಂಟ್ರೋಲ್ ಅನ್ನು ನೀಡುತ್ತದೆ. ಸೆಂಟರ್ ಕನ್ಸೋಲ್‌ನಲ್ಲಿರುವ ಬಟನ್‌ಗಳ ಮೂಲಕ ಸಿಸ್ಟಮ್ ಅನ್ನು ಎಲೆಕ್ಟ್ರಿಕ್ ಆಗಿ ನಿಯಂತ್ರಿಸಲಾಗುತ್ತದೆ.
ಸ್ಪೋರ್ಟ್ ಮತ್ತು ಸ್ನೋ ಮೋಡ್‌ಗಳು ಥ್ರೊಟಲ್ ಸೆಟ್ಟಿಂಗ್‌ಗಳನ್ನು ಮಾಡ್ಯುಲೇಟ್ ಮಾಡುತ್ತದೆ ಮತ್ತು ರಸ್ತೆಯ ಪರಿಸ್ಥಿತಿಗಳು ಮತ್ತು ಡ್ರೈವರ್ ಇನ್‌ಪುಟ್ ಅನ್ನು ಅವಲಂಬಿಸಿ ಪವರ್ ಅನ್ನು ಚಕ್ರಗಳಿಗೆ ಶಕ್ತಿಯನ್ನು ಕಳುಹಿಸುತ್ತದೆ. ಫ್ರಾಂಕ್ಸ್ ಎಡಬ್ಲ್ಯೂಡಿಯಲ್ಲಿನ ಸಸ್ಪೆಕ್ಷನ್ ಸೆಟಪ್ ವಿಭಿನ್ನವಾಗಿದೆ, ಹಿಂಭಾಗದ ಟಾರ್ಶನ್ ಬೀಮ್ ಸೆಟಪ್ ಎಡಬ್ಲ್ಯೂಡಿ ಸಿಸ್ಟಮ್ ಅನ್ನು ಸರಿಹೊಂದಿಸಲು ವಿಶಿಷ್ಟ ವಿನ್ಯಾಸವನ್ನು ಪಡೆಯುತ್ತದೆ.

ಇದು ಹೆಚ್ಚಿನ ವೈಶಿಷ್ಟ್ಯಗಳನ್ನು ಸಹ ಪಡೆಯುತ್ತದೆ. ಜಪಾನ್-ಮಾತ್ರ ವೈಶಿಷ್ಟ್ಯಗಳ ಪಟ್ಟಿಯು ಲೇನ್-ಕೀಪಿಂಗ್ ಅಸಿಸ್ಟ್ ಮತ್ತು ಆಟೋಮ್ಯಾಟಿಕ್ ಎಮರ್ಜನ್ಸಿ ಬ್ರೇಕಿಂಗ್, ಮುಂಭಾಗದ ಪಾರ್ಕಿಂಗ್ ಸೆನ್ಸರ್ ಗಳು, ಹಿಲ್-ಹೋಲ್ಡ್ ಹೊಂದಿರುವ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಸ್ವಯಂಚಾಲಿತ ಕ್ರೂಸ್ ಕಂಟ್ರೋಲ್, ಹಿಟೆಡ್ ಸೀಟ್‌ಗಳು ಮತ್ತು ಕೆಲವು ಇತರ ವಿಶಿಷ್ಟ ಬಿಟ್‌ಗಳೊಂದಿಗೆ ADAS ಸೂಟ್ ಅನ್ನು ಹೊಂದಿದೆ.
ಜಪಾನ್‌ನಲ್ಲಿ ಫ್ರಾಂಕ್ಸ್ ಈಗಾಗಲೇ 700 ಬುಕಿಂಗ್‌ಗಳನ್ನು ಸಂಗ್ರಹಿಸಿದೆ ಮತ್ತು ಇದು ಅಕ್ಟೋಬರ್ 16 ರಂದು ಅಲ್ಲಿ ಮಾರಾಟವಾಗಲಿದೆ. ಮಾರುತಿ ಸುಜುಕಿ ಪ್ರಕಾರ, ಮೇಡ್-ಇನ್-ಇಂಡಿಯಾ ಫ್ರಾಂಕ್ಸ್‌ನ ಆರಂಭಿಕ ಭಾಗವು 1,600 ಯುನಿಟ್‌ಗಳನ್ನು ಒಳಗೊಂಡಿದೆ. ಜಪಾನ್‌ನಲ್ಲಿ ಕಾಂಪ್ಯಾಕ್ಟ್ ಎಸ್‍ಯುವಿಗಾಗಿ ಬುಕ್ಕಿಂಗ್‌ಗಳು ಈ ತಿಂಗಳ ಆರಂಭದಲ್ಲಿ ಪ್ರಾರಂಭವಾಯಿತು ಮತ್ತು ವಿತರಣೆಗಳು ಅಕ್ಟೋಬರ್‌ನ ದ್ವಿತೀಯಾರ್ಧದಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ.

ಭಾರತದಲ್ಲಿ ಈ ಮಾರುತಿ ಸುಜುಕಿ ಫ್ರಾಂಕ್ಸ್ (Maruti Suzuki Fronx) ಮಾದರಿಯು ಸೂಪರ್ ಹಿಟ್ ಆಗಿದ್ದು, ಭಾರತದ ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿದೆ. ಈ ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‍ಯುವಿಯು ಸಿಗ್ಮಾ, ಡೆಲ್ಟಾ, ಡೆಲ್ಟಾ +, ಡೆಲ್ಟಾ + (O), ಝೀಟಾ ಮತ್ತು ಆಲ್ಫಾ ಎಂಬ ರೂಪಾಂತರಗಳಲ್ಲಿ ಲಭ್ಯವಿದೆ. ಇನ್ನು ಮಾರುತಿ ಫ್ರಾಂಕ್ಸ್ ಕಾರು ಒಂಬತ್ತು ಬಣ್ಣಗಳಲ್ಲಿ ಲಭ್ಯವಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications