ಅನಾವರಣಕ್ಕೂ ಮುನ್ನವೇ ಹೊಸ ಎಸ್‌ಯುವಿಗಳನ್ನು ಬಹಿರಂಗಪಡಿಸಿದ ಮಹೀಂದ್ರಾ: ವಿಶೇಷತೆಗಳೇನು?
ಮಹೀಂದ್ರಾ ಕಂಪನಿಯು ತನ್ನ ಮುಂಬರುವ ಎಲೆಕ್ಟ್ರಿಕ್ ಎಸ್‌ಯುವಿಗಳಾದ ಎಕ್ಸ್‌ಇವಿ 9ಇ (XEV 9e) ಮತ್ತು ಬಿಇ 6ಇ (BE 6e) ಕಾರುಗಳನ್ನು ಇಂದು ಬಹಿರಂಗಪಡಿಸಿದೆ. ಇದೇ ನವೆಂಬರ್ 26 ರಂದು ಕಾರುಗಳನ್ನು ಅನಾವರಣಗೊಳಿಸುವುದಾಗಿ ಕಂಪನಿ ಹೇಳಿತ್ತು. ಆದ್ರೆ ಈಗ ಆ ಅನಾವರಣಕ್ಕೂ ಮುನ್ನವೇ ಡಿಸೈನ್ ಅನ್ನು ಬಹಿರಂಗಪಡಿಸಿದೆ. ಕಂಪನಿಯು ಮುಂದಿನ ವರ್ಷದ ಆರಂಭದಲ್ಲಿ ಎರಡು ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡುವುದಾಗಿ ಖಚಿತಪಡಿಸಿದ್ದು, ಬಿಇ 6ಇ ಮತ್ತು ಎಕ್ಸ್‌ಇವಿ 9ಇ ಡೆಲಿವರಿಗಳು 2025 ರ ಕೊನೆಯ ತ್ರೈಮಾಸಿಕದಿಂದ ಪ್ರಾರಂಭವಾಗಲಿವೆ ಎಂದು ಮೂಲಗಳು ತಿಳಿಸಿವೆ.
ಕಂಪನಿಯು ಹೊಸ ಎಸ್‌ಯುವಿಗಳನ್ನು ಹೊಸ ಬ್ರಾಂಡ್ ಎಲೆಕ್ಟ್ರಿಕ್ ಒರಿಜಿನ್ ಎಸ್‌ಯುವಿ ಅಡಿಯಲ್ಲಿ ಬಿಡುಗಡೆ ಮಾಡಲಿದೆ. ಇತ್ತೀಚಿನ ಟೀಸರ್‌ನಲ್ಲಿ ಕಾರುಗಳ ಬಗ್ಗೆ ಒಂದಷ್ಟು ಮಾಹಿತಿ ಹೊರಬಿದ್ದಿದೆ. ಮುಂಬರುವ ಮಹೀಂದ್ರಾ ಎಲೆಕ್ಟ್ರಿಕ್ ಎಸ್‌ಯುವಿಗಳು ಎಂಜಿ ಝಡ್ ಎಸ್‌ಇವಿ, ಬಿವೈಡಿ ಅಟ್ಟೋ 3, ಟಾಟಾ ಕರ್ವ್ ಇವಿ ಕಾರುಗಳಿಗೆ ಪೈಪೋಟಿ ನೀಡಲಿವೆ.

ಬಿಇ 6ಇ ಮತ್ತು ಎಕ್ಸ್‌ಇವಿ 9ಇ ಒಳಾಂಗಣ ವಿನ್ಯಾಸ: ಮಹೀಂದ್ರಾ ಬಿಇ 6ಇ ಡ್ಯುಯಲ್ ಸ್ಕ್ರೀನ್ ಲೇಔಟ್ ಪಡೆದರೆ, ಎಕ್ಸ್‌ಇವಿ 9ಇ ಟ್ರಿಪಲ್ ಸ್ಕ್ರೀನ್ ಲೇಔಟ್ ಪಡೆಯಲಿದೆ. ಎರಡೂ ಎಲೆಕ್ಟ್ರಿಕ್ ವಾಹನಗಳು ದೊಡ್ಡ ಪನೋರಮಿಕ್ ಸನ್‌ರೂಫ್, ADAS, ಚೌಕಾಕಾರದ ಸ್ಟೀರಿಂಗ್ ವೀಲ್ ಮತ್ತು ಅದರ ಮೇಲೆ ಬಿಇ ಲೋಗೋವನ್ನು ಹೊಂದಿದೆ. ಸ್ಟೀರಿಂಗ್ ವೀಲ್ ಬಲಭಾಗದಲ್ಲಿ ಟಾಗಲ್ ಬಟನ್‌ಗಳ ಸಹ ನೀಡಲಾಗಿದೆ.
ಬಾಹ್ಯಾ ವಿನ್ಯಾಸ: ಬಿಇ 6ಇ ಮುಂಭಾಗದಲ್ಲಿ ಎಕ್ಸ್‌ಯುವಿ 3ಎಕ್ಸ್‌ಒನಂತೆ ಕಾಣುವ ಲೈಟ್ ಸಿಸ್ಟಮ್ ಅನ್ನು ಹೊಂದಿದ್ದರೇ, ಎಕ್ಸ್‌ಇವಿ 9ಇ ಮುಂಭಾಗದಲ್ಲಿ ಕನೆಕ್ಟೆಡ್ ಎಲ್ಇಡಿ ಲೈಟ್ ಬಾರ್ ಜೊತೆಗೆ ವರ್ಟಿಕಲ್ ಲಿಗ್ ಸಿಸ್ಟಮ್‌ನೊಂದಿಗೆ ಬರುತ್ತದೆ. ಎಕ್ಸ್‌ಇವಿ 9ಇ ಹೊಸ ಮಹೀಂದ್ರಾ ಇವಿ ಲೋಗೋದೊಂದಿಗೆ ಮುಚ್ಚಿದ ಗ್ರಿಲ್ ಮತ್ತು ಸ್ಕ್ರಾಪಿಂಗ್ ಬಾನೆಟ್‌ನೊಂದಿಗೆ ಬರಲಿದೆ.

ಇವಿ 9ಇ ಗಿಂತ ಭಿನ್ನವಾಗಿ, ಬಿಇ 6ಇ ಎಲೆಕ್ಟ್ರಿಕ್ ಎಸ್‌ಯುವಿಯು ಮುಂಭಾಗದಲ್ಲಿ ಮಹೀಂದ್ರಾ ಲೋಗೋ ಬದಲಿಗೆ ಬಿಇ ಲೋಗೋವನ್ನು ಹೊಂದಿದೆ. ಕಾರುಗಳಲ್ಲಿ ದೊಡ್ಡ ವ್ಹೀಲ್ ಆರ್ಚ್‌ಗಳಿದ್ದು, ಇವು 18 ಇಂಚುಗಳವರೆಗಿನ ಅಲಾಯ್ ವೀಲ್‌ಗಳನ್ನು ಪಡೆಯುವ ನಿರೀಕ್ಷೆಯಿದೆ. ಹಿಂಭಾಗದಲ್ಲಿ, ಎಕ್ಸ್‌ಇವಿ 9ಇ ಮತ್ತು ಬಿಇ 6ಇ ಕನೆಕ್ಟೆಡ್ ಎಲ್‌ಇಡಿ ಟೈಲ್ ಲೈಟ್‌ಗಳನ್ನು ಪಡೆದಿವೆ.
ಬ್ಯಾಟರಿ & ರೇಂಜ್ ವಿವರಗಳು: ಮುಂಬರುವ ಎಕ್ಸ್‌ಇವಿ 9ಇ ಎಲೆಕ್ಟ್ರಿಕ್ ಎಸ್‌ಯುವಿಯನ್ನು 60 ಅಥವಾ 80 ಕಿಲೋವ್ಯಾಟ್ ನಡುವಿನ ಬ್ಯಾಟರಿಯೊಂದಿಗೆ ನೀಡುವ ಸಾಧ್ಯತೆಯಿದೆ. ಇದು 175 ಕಿಲೋವ್ಯಾಟ್ ವರೆಗೆ ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯದೊಂದಿಗೆ ಬರುವ ನಿರೀಕ್ಷೆಯಿದೆ. ಈ ಎಲೆಕ್ಟ್ರಿಕ್ ಎಸ್‌ಯುವಿ ಒಂದು ಬಾರಿ ಚಾರ್ಜ್ ಮಾಡಿದರೆ ಸುಮಾರು 500 ಕಿ.ಮೀ ಓಡುವ ನೀಡಲಿದೆ.
ಮತ್ತೊಂದೆಡೆ ಮಹೀಂದ್ರಾ ಬಿಇ 6ಇ ಇದೇ ರೀತಿಯ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆಯುವ ನಿರೀಕ್ಷೆಯಿದ್ದು, ಇದು ಕೂಡ ಒಂದು ಬಾರಿ ಚಾರ್ಜ್ ಮಾಡಿದರೆ ಸುಮಾರು 450 ರಿಂದ 500 ಕಿ.ಮೀ ರೇಂಜ್ ನೀಡುವ ಸಾಧ್ಯತೆ ಇದೆ. ಈ ಎರಡೂ ಕಾರುಗಳು ಸಂಪೂರ್ಣ ಫ್ಯೂಚರಿಸ್ಟಿಕ್ ಆಗಿ ಇರಲಿದ್ದು, ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ಹೊಸ ಅಲೆ ಎಬ್ಬಿಸಲಿವೆ ಎಂದು ಹೇಳಲಾಗುತ್ತಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








