ಇದೇ ತಿಂಗಳು 2 ಮಹೀಂದ್ರಾ ಕಾರುಗಳ ಪಾದಾರ್ಪಣೆ: ಅಗ್ಗದ ಬೆಲೆ, ಪ್ರೀಮಿಯಂ ಕಾರುಗಳಿಗೆ ನಡುಕ ಶುರು!
ನವೆಂಬರ್ 26, 2024 ರಂದು ಚೆನ್ನೈನಲ್ಲಿ ನಡೆಯಲಿರುವ ಅನ್‌ಲಿಮಿಟ್ ಇಂಡಿಯಾ ವರ್ಲ್ಡ್ ಪ್ರೀಮಿಯರ್‌ನಲ್ಲಿ ಮಹೀಂದ್ರಾ ಕಂಪನಿಯಿಂದ ಎರಡು ಫ್ಯೂಚರಿಸ್ಟಿಕ್ ಎಲೆಕ್ಟ್ರಿಕ್ ಕಾರುಗಳು ಎಂಟ್ರಿ ಕೊಡಲಿವೆ. ಆದ್ರೆ ಇವನ್ನು ನೇರವಾಗಿ ಮಹೀಂದ್ರಾ ಪರಿಚಯಿಸುತ್ತಿಲ್ಲ, ಬದಲಾಗಿ ಎಲೆಕ್ಟ್ರಿಕ್ ಒರಿಜಿನ್ INGLO ಆರ್ಕಿಟೆಕ್ಚರ್‌ನಲ್ಲಿ XEV ಮತ್ತು BE ಎಂಬ ಎರಡು ಎಲೆಕ್ಟ್ರಿಕ್ ಬ್ರಾಂಡ್‌ಗಳನ್ನು ಮಹೀಂದ್ರಾ ಕಂಪನಿ ಪರಿಚಯಿಸಲಿದೆ. ಈ ಎರಡೂ ಬ್ರ್ಯಾಂಡ್‌ಗಳು ಮಹೀಂದ್ರಾ ಕಂಪನಿ ಅಡಿಯಲ್ಲಿ ಕೆಲಸ ಮಾಡಲಿದ್ದು, ನವೆಂಬರ್ 26 ರಂದು ತಮ್ಮ ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಅನಾವರಣಗೊಳಿಸಲಿವೆ.
ಮಹೀಂದ್ರಾ ಕಂಪನಿಯ ಹೊಸ ಬ್ರಾಂಡ್‌ಗಳಾದ XEV ಮತ್ತು BE ತಮ್ಮ ಮೊದಲ ಪ್ರಮುಖ ಉತ್ಪನ್ನಗಳಾಗಿ XEV 9e ಮತ್ತು BE 6e ಎಂಬ ಎಲೆಕ್ಟ್ರಿಕ್ ಕಾರುಗಳನ್ನು ನವೆಂಬರ್ 26 ರಂದು ಅನಾವರಣಗೊಳಿಸಲಿವೆ. ಈ ಕಾರುಗಳು ಮಹೀಂದ್ರಾದ ಹೊಸ ಗ್ರೌಂಡ್ - ಅಪ್ INGLO ಆರ್ಕಿಟೆಕ್ಚರ್‌ನಲ್ಲಿ ನಿರ್ಮಾಣವಾಗಿವೆ. ಭವಿಷ್ಯದ ಅಗತ್ಯಗಳನ್ನು ಅರಿತು ಈ ಪ್ಲಾಟ್‌ಫಾರ್ಮ್‌ನಲ್ಲಿ ಕಾರುಗಳು ನಿರ್ಮಾಣವಾಗಲಿವೆ ಎಂದು ಕಂಪನಿ ತಿಳಿಸಿದೆ.

ಏನಿದು ಇಂಗ್ಲೋ ಆರ್ಕಿಟೆಕ್ಚರ್?: ಈ ಗ್ರೌಂಡ್ - ಅಪ್ INGLO ಆರ್ಕಿಟೆಕ್ಚರ್ ಎಂಬುದು, ಭಾರತೀಯ ಹೃದಯ ಮತ್ತು ಜಾಗತಿಕ ದೃಷ್ಟಿಕೋನ (Indian heart and a global outlook)ದಿಂದ ರಚಿಸಲ್ಪಟ್ಟಿದೆ. ಅಂದರೆ ವಿಶ್ವದ ಎಲ್ಲಾ ಪ್ರದೇಶಗಳಿಗೆ ಅಗತ್ಯವಿರುವ ಭವಿಷ್ಯದ ಕಾರುಗಳನ್ನು ಭಾರತದಿಂದ ನಿರ್ಮಿಸಿಕೊಡುವುದಾಗಿದೆ. ಅರ್ಥಗರ್ಭಿತ, ಬುದ್ಧಿವಂತ ಮತ್ತು ತಲ್ಲೀನಗೊಳಿಸುವ ನಾವೀನ್ಯತೆಗಳನ್ನು ಇದು ಒಳಗೊಂಡಿರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಕ್ಲಾಸ್ - ಲೀಡಿಂಗ್ ಸುರಕ್ಷತಾ ಮಾನದಂಡಗಳೊಂದಿಗೆ ಅತ್ಯುತ್ತಮ ಪರ್ಫಾಮೆನ್ಸ್ ಮತ್ತು ಪ್ರಭಾವಶಾಲಿ ರೇಂಜ್, ಬಹು - ಸಂವೇದನಾ ಚಾಲನಾ ಅನುಭವವನ್ನು ನೀಡಲು INGLO ಅನ್ನು ವಿನ್ಯಾಸಗೊಳಿಸಲಾಗಿದೆ. ಅಂದರೆ ಈ ಆರ್ಕಿಟೆಕ್ಚರ್‌ನಲ್ಲಿ ನಿರ್ಮಾಣವಾಗುವ ಮಹೀಂದ್ರಾ ಎಲೆಕ್ಟ್ರಿಕ್ ಕಾರುಗಳು ಅತ್ಯಧಿಕ ರೇಂಜ್ ನೀಡುವ ಜೊತೆಗೆ ಕಡಿಮೆ ಸಮಯದಲ್ಲಿ ವೇಗವಾಗಿ ಚಾರ್ಜ್ ಆಗುವ ಸಾಮರ್ಥ್ಯವನ್ನು ಹೊಂದಿರುತ್ತವೆ.

ಇನ್ನು XEV 9e ಎಲೆಕ್ಟ್ರಿಕ್ ಕಾರು ಐಷಾರಾಮಿ ಕಾರುಗಳಿಗೆ ಸೆಡ್ಡುಹೊಡೆಯುವಂತಹ ಫೀಚರ್‌ಗಳನ್ನು ಹೊಂದಿದ್ದರೇ, BE 6e ಕಾರು ಅಥ್ಲೆಟಿಕ್ ಪರ್ಫಾಮೆನ್ಸ್ ಹೊಂದಿರುತ್ತದೆ. ಎರಡು ಭಾರತೀಯ ನಿರ್ಮಿತ ಕಾರುಗಳು ಅಂತರಾಷ್ಟ್ರೀಯ ಮಟ್ಟದ ಮಾನದಂಡಗಳೊಂದಿಗೆ ನಿರ್ಮಾಣವಾಗಲಿವೆ. ವಿನ್ಯಾಸ, ಸಾಟಿಯಿಲ್ಲದ ತಂತ್ರಜ್ಞಾನ ಮತ್ತು ಅಪ್ರತಿಮ ಪರ್ಫಾಮೆನ್ಸ್‌ನೊಂದಿಗೆ ವಿಶ್ವದ ಐಷಾರಾಮಿ ಬ್ರಾಂಡ್‌ಗಳಿಗೆ ಪೈಪೋಟಿ ನೀಡಲು ಸಜ್ಜಾಗಿವೆ ಎಂದು ಕಂಪನಿ ಹೇಳಿದೆ.
ಐಷಾರಾಮಿ ಬ್ರಾಂಡ್‌ಗಳಿಗೆ ನಡುಕ: ಪ್ರಸ್ತುತ ಪ್ರೀಮಿಯಂ ಎಲೆಕ್ಟ್ರಿಕ್ ಕಾರು ವಿಭಾಗದಲ್ಲಿ ಜಾಗತಿಕವಾಗಿ ಹಲವು ಪ್ರಮುಖ ಕಂಪನಿಗಳು ಮುನ್ನುಗ್ಗುತ್ತಿವೆ. ಇದರಲ್ಲಿ ಪ್ರಮುಖವಾಗಿ ಟೆಸ್ಲಾ, ಬಿವೈಡಿದಂತಹ ಬ್ರಾಂಡ್‌ಗಳು ಹೆಚ್ಚು ಬೇಡಿಕೆ ಹೊಂದಿರುವ ಎಲೆಕ್ಟ್ರಿಕ್ ಕಾರು ಬ್ರಾಂಡ್‌ಗಳಾಗಿವೆ. ಭಾರತ ಸರ್ಕಾರದೊಂದಿಗಿನ ಕೆಲ ಸಮಸ್ಯೆಗಳಿಂದಾಗಿ ಟೆಸ್ಲಾ ಭಾರತಕ್ಕೆ ಲಗ್ಗೆಯಿಡಲು ಸಾಧ್ಯವಾಗಿಲ್ಲ. ಬಿವೈಡಿ ಭಾರತದಲ್ಲಿ ಉತ್ತಮ ಮಾರಾಟವನ್ನು ಕಾಣುತ್ತಿದೆ.

ಇದೀಗ ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಗಳಿಗಾಗಿ ಮಹೀಂದ್ರಾದ ಹೊಸ ಎಲೆಕ್ಟ್ರಿಕ್ ಕಾರುಗಳು ನಿರ್ಮಾಣವಾಗುತ್ತಿವೆ. ಈ ಕಾರುಗಳು ಪ್ರತಿಸ್ಪರ್ಧಿಗಳಷ್ಟೇ ಪ್ರೀಮಿಯಂ ಫೀಚರ್ಸ್, ಅತ್ಯಾಧುನಿಕ ತಂತ್ರಜ್ಞಾನ, ಆಧುನಿಕ ಡಿಸೈನ್‌ನೊಂದಿಗೆ ಅನಾವರಣಗೊಳ್ಳಲಿವೆ. ಆದ್ರೆ ಪ್ರತಿಸ್ಪರ್ಧಿಗಳಿಗೆ ಹೋಲಿಸಿಕೊಂಡರೆ ಬೆಲೆಯ ವಿಷಯದಲ್ಲಿ ಸ್ಪರ್ಧಾತ್ಮಕವಾಗಿರಲಿವೆ. ಇದೇ ಕಾರಣಕ್ಕೆ ಪ್ರತಿಸ್ಪರ್ಧಿಗಳಿಗೆ ಇದು ನಡುಕ ಹುಟ್ಟಿಸುವ ಸಾಧ್ಯತೆ ಇದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications