ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್ ಝಡ್8 ಸೆಲೆಕ್ಟ್ ವೇರಿಯೆಂಟ್ ಬಿಡುಗಡೆ

ಭಾರತದ ಪ್ರಮುಖ SUV ತಯಾರಕರಾದ ಮಹೀಂದ್ರಾ, ಇಂದು 'Scorpio-N Z8 Select' ರೂಪಾಂತರವನ್ನು ರೂ. 16.99 ಲಕ್ಷದ ಆಕರ್ಷಕ ಬೆಲೆಯಲ್ಲಿ ಬಿಡುಗಡೆ ಮಾಡಿದ್ದಾರೆ. ಇದು ತನ್ನ ಮೆಚ್ಚುಗೆ ಪಡೆದ Scorpio-N Z8 ಪ್ರೀಮಿಯಂ ಶ್ರೇಣಿಗೆ ಗಮನಾರ್ಹ ಸೇರ್ಪಡೆಯಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

Z8 ಮತ್ತು Z8L ರೂಪಾಂತರಗಳ ಜೊತೆಗೆ, ಪ್ರತಿಯೊಂದೂ ಅವುಗಳ ವಿಶಿಷ್ಟ ವೈಶಿಷ್ಟ್ಯಗಳಿಗೆ ಹೆಸರುವಾಸಿಯಾಗಿದ್ದರೇ ಈ ಹೊಸ 'Z8 ಸೆಲೆಕ್ಟ್' ರೂಪಾಂತರವು ವಿಭಾಗದಲ್ಲಿಯೇ ಎದ್ದು ಕಾಣುವ ವೇರಿಯೆಂಟ್ ಆಗಿದೆ. ಆಕರ್ಷಕ ಬೆಲೆಯಲ್ಲಿ ಲೆಥೆರೆಟ್ ಒಳಾಂಗಣವನ್ನು ನೀಡಲಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ.

mahindra-expands-z8-range-with-the-new-scorpio-n-z8-select-variant

ಹಾಗೆಯೇ ಸ್ವಯಂಚಾಲಿತ (AT) ಮತ್ತು ಮ್ಯಾನುಯಲ್ ಟ್ರಾನ್ಸ್‌ಮಿಷನ್ (MT) ಸಂರಚನೆಗಳಲ್ಲಿ, 'Scorpio-N Z8 Select' ಅನ್ನು ವ್ಯಾಪಕ ಶ್ರೇಣಿಯ ಡ್ರೈವಿಂಗ್ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ. ಇದು ಬಹುಮುಖ SUV ಉತ್ಸಾಹಿಗಳಿಗೆ ಅತ್ಯುತ್ತಮ ಆಯ್ಕೆಯಾಗಿದೆ ಎಂದು ಕಂಪನಿ ಭರವಸೆ ನೀಡಿದೆ.

ಅಡ್ರೆನಾಕ್ಸ್ ಕನೆಕ್ಟ್, ಬಿಲ್ಟ್-ಇನ್ ಅಲೆಕ್ಸಾ, ಸಿಗ್ನೇಚರ್ ಡ್ಯುಯಲ್ ಬ್ಯಾರೆಲ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಪ್ರೊಜೆಕ್ಟರ್ ಫಾಗ್‌ಲ್ಯಾಂಪ್‌ಗಳು ಮತ್ತು ಸ್ಟಿಂಗ್ ತರಹದ ಎಲ್‌ಇಡಿ ಡಿಆರ್‌ಎಲ್‌ಗಳು, ಆರ್17 ಡೈಮಂಡ್ ಕಟ್ ಅಲಾಯ್ ವೀಲ್‌ಗಳು, ರಿಚ್ ಕಾಫಿ-ಬ್ಲಾಕ್ ಮುಂತಾದ ಪ್ರಮುಖ ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ 'ಸ್ಕಾರ್ಪಿಯೋ-ಎನ್ ಝಡ್8 ಸೆಲೆಕ್ಟ್' ಅನ್ನು ನಿರ್ಮಿಸಲಾಗಿದೆ.

'Z8 ಸೆಲೆಕ್ಟ್' ತನ್ನ ವಿಶೇಷವಾದ ಮಿಡ್‌ನೈಟ್ ಬ್ಲಾಕ್ ಬಣ್ಣದೊಂದಿಗೆ ಎದ್ದು ಕಾಣುತ್ತದೆ. ಸ್ಕಾರ್ಪಿಯೋ-ಎನ್‌ನ ಕಮಾಂಡಿಂಗ್ ಪ್ರೆಸೆನ್ಸ್ ಅನ್ನು ಹೆಚ್ಚಿಸುತ್ತದೆ. ಜೊತೆಗೆ ಇದರ ಪ್ರೀಮಿಯಂ ಇಂಟೀರಿಯರ್ ಸಾಫ್ಟ್ ಟಚ್ ಐಪಿಯನ್ನು ಒಳಗೊಂಡಿದ್ದು, ಅತ್ಯಾಧುನಿಕ ಸಂವೇದನೆಯನ್ನು ನೀಡಲು ವಿನ್ಯಾಸಗೊಳಿಸಲಾಗಿದೆ ಎಂದು ಮಹೀಂದ್ರಾ ಹೇಳಿಕೊಂಡಿದೆ.

ಅದ್ಬುತ ಪರ್ಫಾಮೆನ್ಸ್: 'Z8 ಸೆಲೆಕ್ಟ್' ವೇರಿಯೆಂಟ್ TGDi mStallion ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದು 149.14 kW (200 PS) ಪವರ್ ಮತ್ತು 380 Nm ಟಾರ್ಕ್ ಅನ್ನು ನೀಡುತ್ತದೆ. ಹಾಗೆಯೇ ಇದರ ಡೀಸೆಲ್ ಎಂಜಿನ್ ವಿಷಯಕ್ಕೆ ಬಂದರೆ 128.6 kW (175 PS) ಪವರ್ ಮತ್ತು ದಕ್ಷ mHawk ಡೀಸೆಲ್ ಎಂಜಿನ್ ಹೊಂದಿದೆ. 6-ಸ್ಪೀಡ್ ಮ್ಯಾನ್ಯುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳನ್ನು ಹೊಂದಿದೆ.

ಸುಧಾರಿತ ತಂತ್ರಜ್ಞಾನ ಮತ್ತು ವೈಶಿಷ್ಟ್ಯಗಳು: ಈ ರೂಪಾಂತರವು 20.32 cm ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಮತ್ತು 17.78 cm ಬಣ್ಣದ TFT ಕ್ಲಸ್ಟರ್ ಅನ್ನು ಹೊಂದಿದ್ದು, 60+ ಕನೆಕ್ಟೆಡ್ ಕಾರ್ ಕಾರ್ಯನಿರ್ವಹಣೆಯೊಂದಿಗೆ Adrenox ಕನೆಕ್ಟ್ ಅನ್ನು ಒಳಗೊಂಡಿದೆ. ಇನ್‌ಬಿಲ್ಟ್ ಅಲೆಕ್ಸಾ, ಸನ್‌ರೂಫ್ ಮತ್ತು ವೈರ್‌ಲೆಸ್ Android Auto ಮತ್ತು Apple CarPlay ಹೊಂದಿದೆ.

ಅತ್ಯಾಧುನಿಕ ಡೈನಾಮಿಕ್ಸ್ ಮತ್ತು ರೈಡ್ ಕಂಫರ್ಟ್: ಈ ವೇರಿಯೆಂಟ್ ಫ್ರೀಕ್ವೆನ್ಸಿ ಡಿಪೆಂಡೆಂಟ್ ಡ್ಯಾಂಪಿಂಗ್ (FDD) ಮತ್ತು ಮಲ್ಟಿ-ಟ್ಯೂನ್ಡ್ ವಾಲ್ವ್ ಸೆಂಟ್ರಲ್ ಲ್ಯಾಂಡ್ (MTV-CL) ತಂತ್ರಜ್ಞಾನಗಳೊಂದಿಗೆ ಉತ್ತಮ ಸವಾರಿ ಸೌಕರ್ಯವನ್ನು ನೀಡುತ್ತದೆ. ಅಗೈಲ್ ಮತ್ತು ರೆಸ್ಪಾನ್ಸಿವ್ ಸ್ಟೀರಿಂಗ್ ಸಿಸ್ಟಮ್ ಮತ್ತು ಎಲ್ಲಾ 4 ಡಿಸ್ಕ್ ಬ್ರೇಕ್‌ಗಳೊಂದಿಗೆ, Z8 ಸೆಲೆಕ್ಟ್ ಸುಗಮ, ಆರಾಮದಾಯಕ ಸವಾರಿ ಅನುಭವವನ್ನು ನೀಡುವುದಾಗಿ ಮಹೀಂದ್ರಾ ಹೇಳಿದೆ.

ಸುರಕ್ಷತೆಯ ಉನ್ನತ ಗುಣಮಟ್ಟ: ಗ್ಲೋಬಲ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಮ್‌ನ (GNCAP) ಹೊಸ ಕ್ರ್ಯಾಶ್-ಟೆಸ್ಟ್‌ನಲ್ಲಿ 5-ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡ ಮೊದಲ ಬಾಡಿ-ಆನ್-ಫ್ರೇಮ್ SUV ಎಂದು Scorpio-N ನ ಗಮನಾರ್ಹ ಸಾಧನೆ ಮಾಡಿದೆ. ಸ್ಟ್ಯಾಂಡರ್ಡ್ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP) ಮತ್ತು 6 ಏರ್‌ಬ್ಯಾಗ್‌ಗಳು ಅದರ ಸಮಗ್ರ ಸುರಕ್ಷತಾ ಸೂಟ್‌ ಅನ್ನು ಒಳಗೊಂಡಿದೆ.

Article Published On: Friday, February 23, 2024, 8:30 [IST]
English summary
Mahindra expands z8 range with the new scorpio n z8 select variant
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+