Mahindra Scorpio: ಹೊಸ ವಿದೇಶಿ ಕಾರುಗಳು ಬಂದರೂ ಘರ್ಜಿಸುತ್ತಿದೆ ಹಳೇ ಹುಲಿ ಸ್ಕಾರ್ಪಿಯೋ

ಭಾರತದ ವಿಶ್ವಾಸಾರ್ಹ ವಾಹನ ತಯಾರಕ ಸಂಸ್ಥೆಯಾಗಿ ಸ್ವದೇಶಿ ಮಹೀಂದ್ರಾ (Mahindra) ಕೂಡ ಭಾರೀ ಖ್ಯಾತಿಗಳಿಸಿದೆ. ಈ ಸ್ವದೇಶಿ ವಾಹನ ಕಂಪನಿಯು ದಶಕಗಳಿಂದ ಮಾರಾಟಗೊಳಿಸುತ್ತಿರುವ ಮಹೀಂದ್ರಾ ಸ್ಕಾರ್ಪಿಯೋ ಎಸ್‌ಯುವಿಯು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿ ಬಳಗವನ್ನು ಹೊಂದಿದೆ. ಕಳೆದ ತಿಂಗಳ ಮಿಡ್ ಸೈಜ್ ಎಸ್‍ಯುವಿ ವಿಭಾಗದಲ್ಲಿ ಮಹೀಂದ್ರಾ ಸ್ಕಾರ್ಪಿಯೋ/ಎನ್ (Mahindra's Scorpio/N) ಮತ್ತು ಮಹೀಂದ್ರಾ XUV700 (Mahindra XUV700) ಎಸ್‍ಯುವಿಗಳು 73% ಮಾರುಕಟ್ಟೆ ಪಾಲನ್ನು ಹೊಂದಿದೆ. ಅದರಲ್ಲೂ ಮಹೀಂದ್ರಾ ಸ್ಕಾರ್ಪಿಯೋ ಹಲವು ವರ್ಷಗಳಾದರೂ ಬೇಡಿಕೆ ಕಮ್ಮಿಯಾಗದೆ ರೀತಿಯಲ್ಲಿ ರಸ್ತೆಯಲ್ಲಿ ರಾಜನಂತೆ ಮೆರೆಯುತ್ತಿದೆ.

2024ರ ಮೇ ತಿಂಗಳಿನಲ್ಲಿ ಮಹೀಂದ್ರಾ ಕಂಪನಿಯು ಸ್ಕಾರ್ಪಿಯೋ/ಎನ್ ಮಾದರಿಗಳ 13,717 ಯುನಿಟ್‌ಗಳನ್ನು ಮಾರಾಟ ಮಾಡಿತು. ಇನ್ನು 2023ರ ಮೇ ತಿಂಗಳಿನಲ್ಲಿ 9,318 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.47.21 ರಷ್ಟು ಗಮನಾರ್ಹವಾದ ಬೆಳವಣಿಗೆಯನ್ನು ಕಂಡಿದೆ. ಇನ್ನು ಕಳೆದ ತಿಂಗಳ ಮಿಡ್ ಸೈಜ್ ಎಸ್‍ಯುವಿ ವಿಭಾಗದಲ್ಲಿ ಮಹೀಂದ್ರಾ XUV700 ಮಾದರಿಯು ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.

Mahindra Scorpio

2024ರ ಮೇ ತಿಂಗಳಿನಲ್ಲಿ ಮಹೀಂದ್ರಾ XUV700 ಮಾದರಿಯು 5,008 ಯುನಿಟ್‌ಗಳು ಮಾರಾಟವಾಗಿತ್ತು. ಇದನ್ನು 2023ರ ಮೇ ತಿಂಗಳಿನಲ್ಲಿ XUV700 ಮಾದರಿಯ 5,008 ಯುನಿಟ್‌ಗಳು ಮಾರಾಟವಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.4.52 ರಷ್ಟು ಕುಸಿತವನ್ನು ಕಂಡಿದೆ. 2024ರ ಮೇ ತಿಂಗಳ ಮಿಡ್ ಸೈಜ್ ಎಸ್‍ಯುವಿ ವಿಭಾಗದಲ್ಲಿ ಕ್ರಮವಾಗಿ ಎಂಜಿ ಹೆಕ್ಟರ್ / ಪ್ಲಸ್, ಟಾಟಾ ಸಫಾರಿ, ಟಾಟಾ ಹ್ಯಾರಿಯರ್ ಮತ್ತು ಹುಂಡೈ ಅಲ್ಕಾಜರ್ ಎಸ್‍ಯುವಿಗಳು ಸ್ಥಾನವನ್ನು ಪಡೆದುಕೊಂಡಿದೆ.

ಇನ್ನು ಮಹೀಂದ್ರಾ ಕಂಪನಿ ಮಾರಾಟಗೊಳಿಸುವ ಸ್ಕಾರ್ಪಿಯೋ ಕಾರು ದಶಕಗಳಿಂದ ಖ್ಯಾತಿ ಪಡೆದಿದ್ದು, ಪ್ರತ್ಯೇಕ ಅಭಿಮಾನಿ ಬಳಗವನ್ನು ಹೊಂದಿದೆ. ಸದ್ಯ ನ್ಯೂ ಜನರೇಷನ್ ಸ್ಕಾರ್ಪಿಯೋ ಎನ್ ಕೂಡ ಗ್ರಾಹಕರ ಗಮನ ಸೆಳೆದಿದೆ. ಮಹೀಂದ್ರಾ ಸ್ಕಾರ್ಪಿಯೋ ಎನ್ (Mahindra Scorpio N) ಎಸ್‌ಯುವಿ ವಿನ್ಯಾಸದ ದೃಷ್ಟಿಯಿಂದ ಅತ್ಯುತ್ತಮವಾಗಿದ್ದು, 6, 7 ಆಸನ ಆಯ್ಕೆ ವ್ಯವಸ್ಥೆಯಲ್ಲಿ ದೊರೆಯುತ್ತದೆ.

Mahindra Scorpio

ಇದರ ಜೊತೆಗೆ ಝಡ್2, ಝಡ್4, ಝಡ್6, ಝಡ್8, ಝಡ್8 ಮತ್ತು ಝಡ್8ಎಲ್ ರೂಪಾಂತರಗಳಲ್ಲಿ ಲಭ್ಯವಿದೆ. ಈ ಸ್ಕಾರ್ಪಿಯೋ ಎನ್ ಎಸ್‍ಯುವಿಯು ಡೀಪ್ ಫಾರೆಸ್ಟ್, ಎವರೆಸ್ಟ್ ವೈಟ್, ನಾಪೋಲಿ ಬ್ಲ್ಯಾಕ್ ಸೇರಿದಂತೆ ಹಲವು ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಈ ಸ್ಕಾರ್ಪಿಯೋ ಎನ್ 2 ಪವರ್‌ಟ್ರೇನ್ ಆಯ್ಕೆಗಳಲ್ಲಿ ಸಿಗುತ್ತದೆ.

ಇದರಲ್ಲಿ 2.0 - ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ 200 ಬಿಹೆಚ್‌ಪಿ ಪವರ್ ಹಾಗೂ 380 ಎನ್ಎಂ ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಪಡೆದಿದೆ. ಈ ಎಂಜಿನ್ ನೊಂದಿಗೆ 6 - ಸ್ಪೀಡ್ ಮ್ಯಾನುವಲ್/ 6 - ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ ಅನ್ನು ನೀಡಲಾಗಿದೆ. ಮತ್ತೊಂದು, 2.2 - ಲೀಟರ್ ಡೀಸೆಲ್ ಎಂಜಿನ್ ಆಗಿದೆ.

Mahindra Scorpio

ಈ ಎಂಜಿನ್ ಗೇರ್‌ಬಾಕ್ಸ್‌ಗೆ ಅನುಗುಣವಾಗಿ 132 ಬಿಹೆಚ್‌ಪಿ ಪವರ್, 300 ಎನ್ಎಂ ಪೀಕ್ ಟಾರ್ಕ್ ಅಥವಾ 175 ಬಿಹೆಚ್‌ಪಿ ಪವರ್ ಮತ್ತು 400 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. 2WD (ಟೂ ವೀಲ್ ಡ್ರೈವ್), 4WD (ಫೋರ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಪಡೆದಿದೆ. ಇನ್ನು ಮಹೀಂದ್ರಾ ಸ್ಕಾರ್ಪಿಯೋ ಎನ್ ಬೆಲೆಗೆ ತಕ್ಕಂತೆ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ.\

ಇದರೊಂದಿಗೆ 8 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಫ್ರಂಟ್, ರೇರ್ ಕ್ಯಾಮೆರಾ, ವೈರ್‌ಲೆಸ್ ಫೋನ್ ಚಾರ್ಜಿಂಗ್, 6 - ವೇ ಪವರ್ ಡ್ರೈವರ್ ಸೀಟ್, ಸಿಂಗಲ್-ಪೇನ್ ಸನ್‌ರೂಫ್ ಮತ್ತು ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ.

ಹೊಸ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ (Mahindra Scorpio Classic) ಸುರಕ್ಷತೆಗೂ ಹೆಸರುವಾಸಿಯಾಗಿದ್ದು, ಡುಯಲ್ ಫ್ರಂಟ್ ಏರ್‌ಬ್ಯಾಗ್‌, ರೇರ್ ಪಾರ್ಕಿಂಗ್ ಸೇನಾರ್ಸ್ ಒಳಗೊಂಡಂತೆ ಹಲವು ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ. ಈ ಕಾರಿಗೆ ಹ್ಯುಂಡೈ ಕ್ರೆಟಾ, ಸ್ಕೋಡಾ ಕುಶಾಕ್, ಕಿಯಾ ಸೆಲ್ಟೋಸ್, ಟೊಯೊಟಾ ಫಾರ್ಚುನರ್, ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಹಾಗೂ ಪೋಕ್ಸ್‌ವ್ಯಾಗನ್ ಟೈಗನ್ ಪ್ರಬಲ ಪ್ರತಿಸ್ಪರ್ಧಿಯಾಗಿವೆ.

Article Published On: Saturday, June 22, 2024, 17:09 [IST]
English summary
Mahindra scorpio dominates mid size suv sales in may 2024
Read more on mahindra india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+