ಹೊಸ ರೂಪದಲ್ಲಿ ಮತ್ತೆ ಮಹೀಂದ್ರಾ ಸ್ಕಾರ್ಪಿಯೋ: ದೂರ ಪ್ರಯಾಣ ಮಾಡುವವರು ಇನ್ನು ಚಿಂತೆ ಬಿಡಿ!
ಭಾರತೀಯ ಕಾರು ಮಾರುಕಟ್ಟೆಗೆ ಲಾಂಚ್ ಆದಾಗಿನಿಂದ ಇಲ್ಲಿಯ ತನಕ ಒಂದೇ ರೀತಿಯಲ್ಲಿ ತನ್ನ ಚರೀಶ್ಮಾವನ್ನು ಹೊತ್ತೊಯ್ಯುತ್ತಿರುವ ಕೆಲವೇ ಕೆಲವು ಕಾರುಗಳಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಸಹ ಒಂದು. ಹಲವು ದಶಕಗಳಿಂದ ಅನೇಕ ಆವೃತ್ತಿಯಲ್ಲಿ ಬಂದಿರುವ ಮಹೀಂದ್ರಾ ಸ್ಕಾರ್ಪಿಯೋ ಇದೀಗ ಸ್ಕಾರ್ಪಿಯೋ ಎನ್ ಆಗಿ ನಮ್ಮ ನಡುವೆ ಇದೆ.
ಇದೀಗ ಮಹೀಂದ್ರಾ ಸ್ಕಾರ್ಪಿಯೋ ಎನ್ (Mahindra Scorpio N Adventure) ಕಾರಿನ ಅಡ್ವೆಂಚರ್ ಆವೃತ್ತಿಯು ಸಾಮಾಜಿಕ ಜಾಲತಾಣಗಳಲ್ಲಿ ಅನಾವರಣವಾಗಿದೆ. ಸಖತ್ ರಗಡ್ ಲುಕ್‌ನಿಂದ ಕೂಡಿರುವ ಸ್ಕಾರ್ಪಿಯೋ ಎನ್‌ನ ಅಡ್ವೆಂಚರ್ ಆವೃತ್ತಿಯಲ್ಲಿ ಹಲವಾರು ಆಕ್ಸಸರೀಸ್ ಜೊತೆಗೆ ಬಂದಿದೆ. ಇದು ಮಾತ್ರವಲ್ಲದೇ ಈ ಕಾರಿನಲ್ಲಿ ಇನ್ನೂ ಹಲವು ಪ್ರಮುಖ ಬದಲಾವಣೆಗಳು ಬಂದಿದೆ ಎಂದು ತಿಳಿದು ಬಂದಿದೆ.

ಮಾಹಿತಿಗಳ ಪ್ರಕಾರ ಈ ಸ್ಕಾರ್ಪಿಯೋ ಎನ್ ಅಡ್ವೆಂಚರ್ ಆವೃತ್ತಿಯಲ್ಲಿ ಬದಲಿ ಸಸ್ಪೆನ್ಷನ್ ಮತ್ತು ಸ್ಟೀಲ್ ಬಂಪರ್‌ಗಳನ್ನು ಅಳವಡಿಸಲಾಗಿದೆ. ಇದು ಮಾತ್ರವಲ್ಲದೇ ಉತ್ತಮ ಪ್ರಯಾಣಕ್ಕಾಗಿ ಅಧಿಕ ಲಗೇಜ್‌ಗಳನ್ನು ತೆಗೆದುಕೊಂಡು ಹೋಗಲು ರೂಫ್ ರಾಕ್‌ಗಳನ್ನು, ಟೋ ಬಾರ್‌ಗಳನ್ನು ಸ್ಟಾಂಡರ್ಡ್ ಆಗಿ ನೀಡಲಾಗಿದೆ. ಸ್ಕಾರ್ಪಿಯೋದಲ್ಲಿ 4X4 ಆವೃತ್ತಿ ಇರುವುದರಿಂದ ಆಫ್‌ರೋಡ್ ಹೋಗಬಹುದಾಗಿದೆ. ಈ ಸಂಧರ್ಭದಲ್ಲಿ ಅಧಿಕ ಉಪಯೋಗಕ್ಕಾಗಿ ಈ ಆವೃತ್ತಿಗಳನ್ನು ನೀಡಲಾಗಿದೆ ಎಂಬುದು ಹಲವರ ಅಭಿಪ್ರಾಯ.
ಇನ್ನು ಮೊದಲಿಗೆ ಈ ವಾಹನವನ್ನು ಆಫ್ರಿಕಾ ದೇಶದಲ್ಲಿ ಲಾಂಚ್ ಮಾಡಲಿದೆ. ಆ ನಂತರದಲ್ಲಿ ಈ ವಾಹನವನ್ನು ಬೇರೆ ಮಾರುಕಟ್ಟೆಗಳಿಗೆ ಲಾಂಚ್ ಮಾಡುವ ಉದ್ದೇಶವಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಈ ಆವೃತ್ತಿಗೆ ಈಗಿರುವ ಸ್ಕಾರ್ಪಿಯೋ ಎನ್ ಟಾಪ್ ಎಂಡ್ ಮಾದರಿಗಿಂತಲೂ ದುಬಾರಿಯಾಗಿರಲಿದೆ. ಮಾಹಿತಿಗಳ ಪ್ರಕಾರ 6,44,499 ಸೌತ್ ಆಫ್ರಿಕನ್ ರಾಂಡ್ಸ್ ಅಥವಾ ಭಾರತೀಯ ರೂ. 29.5 ಲಕ್ಷ ಇರಲಿದೆ.

ಇನ್ನು ಭಾರತೀಯ ಮಾರುಕಟ್ಟೆಯಲ್ಲಿರುವ ಸ್ಕಾರ್ಪಿಯೋ ಎನ್ ಬಗ್ಗೆ ನೋಡುವುದಾದರೆ, 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜರ್, ಸೆಮಿ ಡಿಜಿಟಲ್ ಇನ್ಸ್ರುಮೆಂಟಲ್ ಕ್ಲಸ್ಟರ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, 360-ಡಿಗ್ರಿ ಕ್ಯಾಮೆರಾ ಸೇರಿದಂತೆ ಭಾರತದ ಗ್ರಾಹಕರನ್ನು ತನ್ನತ್ತ ಆಕರ್ಷಿಸುವ ಭರಪೂರ ವೈಶಿಷ್ಟ್ಯಗಳನ್ನು ಹೊಂದಿದೆ.
ಇನ್ನು ಮಹೀಂದ್ರಾ ಸ್ಕಾರ್ಪಿಯೋ ಎನ್ 2.2 ಲೀಟರ್ ಡೀಸೆಲ್ ಇಂಜಿನ್ ಜೊತೆ ಬರುತ್ತಿದ್ದು, ಈ ಎಂಜಿನ್ ಸಹಾಯದಿಂದ ಸ್ಕಾರ್ಪಿಯೋ ಎನ್ 172 ಬಿಹೆಚ್‌ಪಿ ಪವರ್ ಮತ್ತು 370 ಎನ್‌ಎಮ್ ಟಾರ್ಕನ್ನು ಉತ್ಪಾದಿಸುತ್ತದೆ. ಇನ್ನು ಇದೇ ಕಾರಿನ 6 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಹೊಂದಿರುವ ವೇರಿಯಂಟ್‌ನ ಕಾರು ಸುಮಾರಯ 400 ಎನ್‌ಎಮ್ ಟಾರ್ಕನ್ನು ಉತ್ಪಾದಿಸುತ್ತದೆ.

ಭಾರತದ ಮಾರುಕಟ್ಟೆಯಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಎನ್ ಎಸ್‌ಯುವಿ, ಬಿಡುಗಡೆಯಾದಾಗಿನಿಂದಲೂ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದಿರುವುದರಿಂದ ಗರಿಷ್ಠ ಕಾಯುವಿಕೆ ಅವಧಿಯನ್ನು ಹೊಂದಿದೆ. ಇತ್ತೀಚೆಗೆ ಕಂಪನಿಯು Z6 ರೂಪಾಂತರದ ವಿತರಣೆಯನ್ನು ಪ್ರಾರಂಭಿಸಿದೆ. ಇದು ರೂ.16.05 ಲಕ್ಷ ಬೆಲೆಯನ್ನು ಹೊಂದಿದ್ದು, ಮ್ಯಾನುವಲ್ ಆವೃತ್ತಿ ಬೆಲೆ ರೂ.18.01 ಲಕ್ಷವಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications