ಮಹೀಂದ್ರಾದ ಈ ಕಾರಿಗೆ ಬರೋಬ್ಬರಿ 1 ಲಕ್ಷ ಕ್ಯಾಶ್‌ ಡಿಸ್ಕೌಂಟ್‌: ಕನಸು ನನಸಾಗುವ ಸಮಯವಿದು!

ಮಹೀಂದ್ರಾ ಸ್ಕಾರ್ಪಿಯೋ ಎನ್‌ ಕಾರು ಸದ್ಯಕ್ಕೆ ಮಹೀಂದ್ರಾ ಕಂಪನಿ ಭಾರತದಲ್ಲಿ ಮಾರಾಟ ಮಾಡುತ್ತಿರುವ ಪ್ರಸಿದ್ದ ಕಾರುಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಇರುವ ಕಾರು. ಪ್ರತಿಯೊಬ್ಬ ಮಹೀಂದ್ರಾ ಫ್ಯಾನ್‌ ಸಹ ಒಮ್ಮೆಯಾದರೂ ಈ ಕಾರನ್ನು ಖರೀದಿ ಮಾಡಬೇಕು ಎಂದು ಕೊಂಡಿರುತ್ತಾರೆ. ಅಂತಹ ವ್ಯಕ್ತಿಗಳಿಗೆ ಇದೀಗ ಸಿಹಿ ಸುದ್ದಿಯೊಂದು ಬಂದಿದೆ.

ಮಹೀಂದ್ರಾ ಕಂಪನಿಯು ಈ ಪ್ರಸಿದ್ದ ಸ್ಕಾರ್ಪಿಯೋವನ್ನು ಮೊದಲ ಬಾರಿಗೆ 2002 ರಲ್ಲಿ ಮಾರುಕಟ್ಟೆಗೆ ಪರಿಚಯಿಸಿತ್ತು. ಈ ಕಾರು ಮಾರುಕಟ್ಟೆಗೆ ಬಂದ ಆ ಕಾಲದಿಂದ ಇಲ್ಲಿಯವರೆಗೆ ಜನಮಾನಸದಲ್ಲಿ ಭಾರೀ ಹೆಸರನ್ನು ಮಾಡಿದೆ. ಇನ್ನು ಕಂಪನಿಯು 2022 ರಲ್ಲಿ ಸ್ಕಾರ್ಪಿಯೋ ಎನ್‌ ಎಂಬ ಮಾಡೆಲ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಿತು.

Mahindra Scorpio N Gets Upto 1 Lakh Cash Discount On Top variants See Details

ಇನ್ನು 2022 ರಲ್ಲಿ ಸ್ಕಾರ್ಪಿಯೋ ಎನ್‌ (Mahindra Scorpio N) ಅನ್ನು ಮಾರುಕಟ್ಟೆಗೆ ತಂದಾಗ ಜನರಿಂದ ಭಾರೀ ಸ್ಪಂದನೆ ದೊರಕಿತ್ತು. ಈ ಮೂಲಕ ಭಾರತೀಯ ಎಸ್‌ಯುವಿ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಭಾರೀ ಅಲೆಯನ್ನು ಎಬ್ಬಿಸಿದೆ. ಸದ್ಯ ಭಾರತದಲ್ಲಿ ಸ್ಕಾರ್ಪಿಯೋ ಎನ್‌ ಮತ್ತು ಸ್ಕಾರ್ಪಿಯೋ ಕ್ಲಾಸಿಕ್‌ ಮಾಡೆಲ್‌ಗಳು ಮಾರಾಟಕ್ಕೆ ಲಭ್ಯವಿದೆ.

ಮಹೀಂದ್ರಾ ಕಂಪನಿಯು ಇದೀಗ ಸ್ಕಾರ್ಪಿಯೋ ಎನ್ ಕಾರಿಗೆ ಭಾರೀ ಡಿಸ್ಕೌಂಟ್‌ ಅನ್ನು ಘೋಷಣೆ ಮಾಡಿದೆ. ಮಾಹಿತಿಗ ಪ್ರಕಾರ ಈ ಕಾರಿನ ಮೇಲೆ ಕಂಪನಿಯು ಸುಮಾರು ೧ ಲಕ್ಷ ರೂಪಾಯಿವರೆಗೆ ಕ್ಯಾಶ್‌ ಡಿಸ್ಕೌಂಟ್‌ ಅನ್ಉ ನೀಡುತ್ತಿದೆ. ಮಹೀಂದ್ರಾ ಸ್ಕಾರ್ಪಿಯೋದ ಟಾಪ್‌ ಮಾಡೆಲ್‌ಗಳಾದ Z8 ಮತ್ತು Z8L ವೇರಿಯಂಟ್‌ಗಳಿಗೆ ಈ ಸೌಲಭ್ಯ ಸಿಗಲಿದೆ.

Mahindra Scorpio N Gets Upto 1 Lakh Cash Discount On Top variants See Details

Z8 ಮತ್ತು Z8L ಡೀಸೆಲ್‌ 4x4 ಆವೃತ್ತಿಗಳಿಹೆ ಈ ಆಫರ್‌ ಲಭ್ಯವಾಗಲಿದೆ. ಆಟೋಮ್ಯಾಟಿಕ್ ಮತ್ತು ಮ್ಯಾನುವಲ್‌ ಎರಡು ಮಾದರಿಗಳಿಗೂ ಒಂದು ಲಕ್ಷ ರೂಗಳ ವರೆಗೆ ಆಫರ್‌ ಸಿಗಲಿದೆ ಎಂದು ತಿಳಿದು ಬಂದಿದೆ.
ಇನ್ನು ಭಾರತದಲ್ಲಿ ಹೆಸರುವಾಸಿಯಾಗಿರುವ ಮಹೀಂದ್ರಾ ಬೊಲೇರೋ ಕಾರಿಗಿಂತಲೂ ಸ್ಕಾರ್ಪಿಯೋ ಮಾಡೆಲ್‌ಗಳು ಮುಂಚೂಣಿಯಲ್ಲಿದೆ.

ಮಹೀಂದ್ರಾ ಸ್ಕಾರ್ಪಿಯೋ ಎನ್ ಯಾವೆಲ್ಲ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ನೋಡುವುದಾದರೆ, 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜರ್, ಸೆಮಿ ಡಿಜಿಟಲ್ ಇನ್ಸ್ರುಮೆಂಟಲ್ ಕ್ಲಸ್ಟರ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, 360-ಡಿಗ್ರಿ ಕ್ಯಾಮೆರಾ ಸೇರಿದಂತೆ ಭಾರತದ ಗ್ರಾಹಕರನ್ನು ತನ್ನತ್ತ ಆಕರ್ಷಿಸುವ ಭರಪೂರ ವೈಶಿಷ್ಟ್ಯಗಳನ್ನು ಹೊಂದಿದೆ.

Mahindra Scorpio N Gets Upto 1 Lakh Cash Discount On Top variants See Details

ಇನ್ನು ಮಹೀಂದ್ರಾ ಸ್ಕಾರ್ಪಿಯೋ ಎನ್‌ 2.2 ಲೀಟರ್ ಡೀಸೆಲ್‌ ಇಂಜಿನ್‌ ಜೊತೆ ಬರುತ್ತಿದ್ದು, ಈ ಎಂಜಿನ್‌ ಸಹಾಯದಿಂದ ಸ್ಕಾರ್ಪಿಯೋ ಎನ್‌ 172 ಬಿಹೆಚ್‌ಪಿ ಪವರ್‌ ಮತ್ತು 370 ಎನ್‌ಎಮ್‌ ಟಾರ್ಕನ್ನು ಉತ್ಪಾದಿಸುತ್ತದೆ. ಇನ್ನು ಇದೇ ಕಾರಿನ 6 ಸ್ಪೀಡ್‌ ಟಾರ್ಕ್‌ ಕನ್ವರ್ಟರ್‌ ಆಟೋಮ್ಯಾಟಿಕ್‌ ಟ್ರಾನ್ಸ್ಮಿಷನ್‌ ಹೊಂದಿರುವ ವೇರಿಯಂಟ್‌ನ ಕಾರು ಸುಮಾರಯ 400 ಎನ್‌ಎಮ್‌ ಟಾರ್ಕನ್ನು ಉತ್ಪಾದಿಸುತ್ತದೆ.

ಭಾರತದ ಮಾರುಕಟ್ಟೆಯಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಎನ್ ಎಸ್‌ಯುವಿ, ಬಿಡುಗಡೆಯಾದಾಗಿನಿಂದಲೂ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದಿರುವುದರಿಂದ ಗರಿಷ್ಠ ಕಾಯುವಿಕೆ ಅವಧಿಯನ್ನು ಹೊಂದಿದೆ. ಕೆಲವೊಂದು ರೂಪಾಂತರಗಳಿಗೆ ಇವತ್ತು ಬುಕ್ ಮಾಡಿದರೂ ಕನಿಷ್ಠವೆಂದರೂ 60 ವಾರಗಳು ಕಾಯಬೇಕು. ಇತ್ತೀಚೆಗೆ ಕಂಪನಿಯು Z6 ರೂಪಾಂತರದ ವಿತರಣೆಯನ್ನು ಪ್ರಾರಂಭಿಸಿದೆ. ಇದು ರೂ.16.05 ಲಕ್ಷ ಬೆಲೆಯನ್ನು ಹೊಂದಿದ್ದು, ಮ್ಯಾನುವಲ್ ಆವೃತ್ತಿ ಬೆಲೆ ರೂ.18.01 ಲಕ್ಷವಿದೆ.

Mahindra Scorpio N

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, April 5, 2024, 18:30 [IST]
English summary
Mahindra scorpio n gets upto 1 lakh cash discount on top variants see details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+