ಮಹೀಂದ್ರಾ ಕಾರುಗಳ ಅಬ್ಬರ: ಆಗಸ್ಟ್‌ನಲ್ಲಿ ದಾಖಲೆ ಮಟ್ಟದಲ್ಲಿ ಎಸ್‌ಯುವಿಗಳ ಮಾರಾಟ

ಭಾರತೀಯ ಕಾರು ಮಾರುಕಟ್ಟೆಯು ಹೆಮ್ಮರವಾಗಿ ಬೆಳೆದುನಿಂತಿದೆ, ಕಳೆದ ಹತ್ತು ವರ್ಷಗಳಲ್ಲಿ ವಿಶ್ವ ಆಟೋ ವಲಯದಲ್ಲಿ ಭಾರೀ ಜನಪ್ರಿಯತೆ ಗಳಿಸಿ ಟಾಪ್-5 ಅಗ್ರ ದೇಶಗಳಲ್ಲಿ ಭಾರತ ಕೂಡ ಸ್ಥಾನ ಗಿಟ್ಟಿಸಿಕೊಂಡಿದೆ. ಪ್ರಮುಖ ದೇಶಿಯ ವಾಹನ ತಯಾರಕರಾದ ಟಾಟಾ ಮೋಟಾರ್ಸ್ ಹಾಗೂ ಮಹೀಂದ್ರಾ ಭಾರತದಲ್ಲಿ ಉತ್ತಮ ಮಾರಾಟವನ್ನು ದಾಖಲಿಸುತ್ತಿವೆ. ಅದರಲ್ಲೂ ಎಸ್‌ಯುವಿ ತಯಾರಕ ಕಂಪನಿಯಾದ ಮಹೀಂದ್ರಾ, ಆಗಸ್ಟ್ 2024 ರಲ್ಲಿ ರಫ್ತು ಸೇರಿದಂತೆ 76,755 ವಾಹನಗಳ ಒಟ್ಟಾರೆ ವಾಹನ ಮಾರಾಟವನ್ನು ದಾಖಲಿಸಿರುವುದಾಗಿ ಪ್ರಕಟಿಸಿದೆ.

ಯುಟಿಲಿಟಿ ವೆಹಿಕಲ್ಸ್ ವಿಭಾಗದಲ್ಲಿ, ಮಹೀಂದ್ರಾ ದೇಶೀಯ ಮಾರುಕಟ್ಟೆಯಲ್ಲಿ 43,277 ವಾಹನಗಳನ್ನು ಮಾರಾಟ ಮಾಡಿದೆ, ರಫ್ತು ಸೇರಿದಂತೆ ಒಟ್ಟಾರೆ 44,670 ವಾಹನಗಳ ಬೆಳವಣಿಗೆಯಾಗಿದೆ. ವಾಣಿಜ್ಯ ವಾಹನಗಳ ದೇಶೀಯ ಮಾರಾಟವು 21,092 ರಷ್ಟಿದೆ. ಈ ಬೆಳವಣಿಗೆಯು ಕಂಪನಿಗೆ ಉತ್ತಮ ಲಾಭವನ್ನು ತಂದುಕೊಟ್ಟಿರುವುದಾಗಿ ಮಹೀಂದ್ರಾ ಹೇಳಿಕೊಂಡಿದೆ.

mahindra-suv-sales-report-august-2024-16-percent-growth

ಮಹೀಂದ್ರಾ ಆಟೋಮೋಟಿವ್ ವಿಭಾಗದ ಅಧ್ಯಕ್ಷ ವೀಜಯ್ ನಕ್ರಾ ಮಾತನಾಡಿ, ನಾವು ಆಗಸ್ಟ್‌ನಲ್ಲಿ ಒಟ್ಟು 43,277 SUVಗಳನ್ನು ಮಾರಾಟ ಮಾಡಿದ್ದೇವೆ. ನಮ್ಮ ಇತರ ವ್ಯವಹಾರಗಳಲ್ಲಿ ಬರುವ ಎಲ್ಲಾ ವಾಹನಗಳನ್ನು ಒಳಗೊಂಡಂತೆ 76,755 ಒಟ್ಟು ವಾಹನಗಳ ಮಾರಾಟ ಬೆಳವಣಿಗೆಯಾಗಿದೆ. ಇದು ನಿರೀಕ್ಷಿತ ಮಾರಾಟಕ್ಕಿಂತ ಹೆಚ್ಚಿನದ್ದಾಗಿದೆ ಎಂದರು.

ಭಾರತದಲ್ಲಿ ಈ ವರ್ಷ ನಾವು ಬಹುನಿರೀಕ್ಷಿತ THAR ROXX ಬಿಡುಗಡೆಯೊಂದಿಗೆ ಮತ್ತೊಂದು ಹೊಸ ಪುಟವನ್ನು ತೆರೆದಿದ್ದೇವೆ. ಥಾರ್ ROXX ನೊಂದಿಗೆ, ನಾವು ಮುಂದಿನ 3 ರಿಂದ 5 ವರ್ಷಗಳಲ್ಲಿ ಥಾರ್ ಫ್ರ್ಯಾಂಚೈಸ್ ಅನ್ನು ನಂಬರ್ 1 SUV ಫ್ರ್ಯಾಂಚೈಸ್ ಮಾಡುವತ್ತ ನಮ್ಮ ದೃಷ್ಟಿಯನ್ನು ಹೊಂದಿಸುತ್ತಿದ್ದೇವೆ ಎಂದು ವಿಜಯ್ ನಕ್ರಾ ಹೇಳಿದರು.

mahindra-suv-sales-report-august-2024-16-percent-growth

ಮಹೀಂದ್ರಾ ಥಾರ್ ರೋಕ್ಸ್ ವಿಶೇಷತೆಗಳು: ಹೊಸದಾಗಿ ಬಿಡುಗಡೆಯಾದ ಐದು-ಡೋರಿನ ಥಾರ್ ರೋಕ್ಸ್ ಆಫ್-ರೋಡರ್‌ನ ಎಲ್ಲಾ ಗುಣಲಕ್ಷಣಗಳೊಂದಿಗೆ ಅತ್ಯಂತ ಸಮರ್ಥವಾದ ಎಸ್‍ಯುವಿಯಾಗಿದೆ. ಮಹೀಂದ್ರಾ ಥಾರ್ ರೋಕ್ಸ್ (Mahindra Thar Roxx) ಬೆಲೆ, ವಿನ್ಯಾಸ, ಪ್ರಾಯೋಗಿಕತೆ ಮತ್ತು ಪವರ್‌ಟ್ರೇನ್ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸುತ್ತಿದೆ. ಇದು ಮಲ್ಟಿ ಯುಟಿಲಿಟಿ ವಾಹನ ಎಂದು ಕೂಡ ಹೇಳಬಹುದು. ನೀವು ಹೊಸ ಎಸ್‍ಯುವಿಯನ್ನು ಫ್ಯಾಮಿಲಿ ಎಸ್‍ಯುವಿಯಾಗಿ ಬಳಸಬಹುದು.

ಮಹೀಂದ್ರಾ ಥಾರ್ ರೋಕ್ಸ್ ಒಂದು ಡೀಸೆಲ್ ಮತ್ತು ಒಂದು ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ನೀಡುತ್ತದೆ. ಎರಡೂ ಪವರ್‌ಟ್ರೇನ್‌ಗಳಲ್ಲಿ ಎರಡು ಸ್ಟೇಟ್ಸ್ ಟ್ಯೂನ್ ಇದೆ. ಮ್ಯಾನ್ಯುವಲ್ ಟ್ರಾನ್ಸ್ಮಿಷನ್ ಹೊಂದಿರುವ 2.2-ಲೀಟರ್ TGDi ಪೆಟ್ರೋಲ್ ರೂಪಾಂತರವು 152hp ಮತ್ತು 330 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದರೆ, ಆಟೋಮ್ಯಾಟಿಕ್ ರೂಪಾಂತರವು 177 hp ಮತ್ತು 380 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

mahindra-suv-sales-report-august-2024-16-percent-growth

ಮತ್ತೊಂದೆಡೆ, ಮಹೀಂದ್ರಾ ಥಾರ್ ರೋಕ್ಸ್‌ನಲ್ಲಿರುವ ಬೇಸ್ 2.2-ಲೀಟರ್ ಡೀಸೆಲ್ ಎಂಜಿನ್ 162 hp ಮತ್ತು 330 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಆದರೆ 4X4 ಪವರ್‌ಟ್ರೇನ್‌ಗಳೊಂದಿಗೆ ಟಾಪ್ ಸ್ಪೆಕ್ ಮಾದರಿಗಳು 175hp ಮತ್ತು 370Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಡೀಸೆಲ್ ಪವರ್‌ಟ್ರೇನ್‌ಗಳು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯೊಂದಿಗೆ ಬರುತ್ತವೆ.

ಮೈಲೇಜ್ ಅಂಕಿಅಂಶಗಳಿಗೆ ಸಂಬಂಧಿಸಿದಂತೆ, ಪೆಟ್ರೋಲ್ ಎಂಜಿನ್ 12.40 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಮತ್ತೊಂದೆಡೆ, ಡೀಸೆಲ್ ಎಂಜಿನ್ 15.20 ಕಿ.ಮೀ ನಷ್ಟು ಮೈಲೇಜ್ ನೀಡುತ್ತದೆ ಎಂದು ಹೇಳಲಾಗುತ್ತದೆ. ಇಲ್ಲಿ ಉಲ್ಲೇಖಿಸಲಾದ ಅಂಕಿಅಂಶಗಳು ARAI- ಪ್ರಮಾಣೀಕೃತವಾಗಿವೆ ಎಂಬುದನ್ನು ಗಮನಿಸಿ. ಥಾರ್ ರೋಕ್ಸ್ ನಗರ ಮತ್ತು ಹೆದ್ದಾರಿಯಲ್ಲಿ ಕ್ರಮವಾಗಿ 10.82 ಕಿ.ಮೀ ಮತ್ತು 15.44 ಕಿ.ಮೀ ಮೈಲೇಜ್ ಅನ್ನು ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ.

Article Published On: Tuesday, September 3, 2024, 17:19 [IST]
English summary
Mahindra suv sales report august 2024 16 percent growth
Read more on mahindra india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+