ಬಹುಕಾಲದ ಕನಸು ನನಸಾಯ್ತು: ಟಾಟಾವನ್ನು ಹಿಂದಿಕ್ಕಿದ ಮಹೀಂದ್ರಾ: ಮಾರಾಟದಲ್ಲಿ ಟಾಪ್

ಭಾರತೀಯ ಕಾರು ಉದ್ಯಮದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಭಾರೀ ಬದಲಾವಣೆಯಾಗಿದೆ. ವಿಶ್ವ ಆಟೋ ವಲಯವು ಈಗ ಭಾರತದತ್ತ ತಿರುಗಿ ನೋಡುವಂತಾಗಿದೆ. ಭಾರತವು ಈಗ ಅಗ್ರ 5 ಅತಿ ಹೆಚ್ಚು ಕಾರು ಮಾರಾಟ ದೇಶಗಳಲ್ಲಿ ಸ್ಥಾನ ಪಡೆದುಕೊಂಡು ಮುನ್ನುಗ್ಗುತ್ತಿದೆ. ಇನ್ನು ದೇಶೀಯವಾಗಿ ಅತಿ ಹೆಚ್ಚು ಮಾರಾಟ ಕಾಣುವ ಕಾರು ಬ್ರಾಂಡ್‌ಗಳಲ್ಲಿ ಮೊದಲು ಮಾರುತಿ ನಂತರ ಟಾಟಾ, ಮಹೀಂದ್ರಾ, ಹ್ಯುಂಡೈ ಬ್ರಾಂಡ್‌ಗಳು ಇವೆ. ಈ ಬ್ರಾಂಡ್‌ಗಳಲ್ಲಿ ಟಾಟಾವನ್ನು ಹಿಂದಿಕ್ಕುವ ದೀರ್ಘ ಕಾಲದ ಕನಸು ಮಹೀಂದ್ರಾಗೆ ಕೊನೆಗೂ ನನಸಾಗಿದೆ. ಈ ಮೂಲಕ ಮಹೀಂದ್ರಾ ಮಾರಾಟದಲ್ಲಿ ಹೊಸ ಮೈಲಿಗಲ್ಲನ್ನು ದಾಟಿದೆ.

ಮಹೀಂದ್ರಾ ಕಂಪನಿಯು ಕಾರುಗಳ ಮಾರಾಟದಲ್ಲಿ ದಾಖಲೆಯನ್ನು ಸೃಷ್ಟಿಸಿ, ಐದು ವರ್ಷಗಳ ನಂತರ ಅದರ ದೀರ್ಘಕಾಲದ ಪ್ರತಿಸ್ಪರ್ಧಿ ಟಾಟಾ ಮೋಟಾರ್ಸ್ ಕಾರುಗಳ ಮಾರಾಟವನ್ನು ಮೀರಿಸಿದೆ. ಕಂಪನಿಯ ಮಾರಾಟ ವರದಿಯ ಪ್ರಕಾರ, ಸೆಪ್ಟೆಂಬರ್ 2024 ರಲ್ಲಿ ಕಂಪನಿಯು 51,062 ಕಾರುಗಳನ್ನು ಮಾರಾಟ ಮಾಡಿರುವುದಾಗಿ ಘೋಷಿಸಿದೆ.

mahindra-tata-motors-sales-comparison-details

ಈ ಮೂಲಕ ದೇಶೀಯ ಮಾರಾಟದಲ್ಲಿ ಗಮನಾರ್ಹ ಬೆಳವಣಿಗೆಯನ್ನು ದಾಖಲಿಸಿದ್ದು, ಈ ಮಾರಾಟದಲ್ಲಿ 1,528 ಯುನಿಟ್ ಕಾರುಗಳನ್ನು ರಫ್ತು ಮಾಡಲಾಗಿದೆ. ಇದು ಮಾರಾಟದಲ್ಲಿ ವಾರ್ಷಿಕವಾಗಿ ಶೇಕಡಾ 24 ರಷ್ಟು ಬೆಳವಣಿಗೆಯನ್ನು ಕಂಡಿದೆ. ಇದು ಹೀಗಿದ್ದರೇ ಅನಿರೀಕ್ಷಿತವಾಗಿ, ಟಾಟಾ ಮೋಟಾರ್ಸ್ ಮಾರಾಟ ಕುಸಿದಿರುವುದು ಮಹೀಂದ್ರಾಗೆ ವರವಾಗಿದೆ.

ಟಾಟಾ ಮೋಟಾರ್ಸ್ ಮಾರಾಟವು ಸೆಪ್ಟೆಂಬರ್ 2024 ರಲ್ಲಿ ಕುಸಿದಿದ್ದು, ಟಾಟಾ ಕೇವಲ 41,063 ಕಾರುಗಳನ್ನು ಮಾರಾಟ ಮಾಡಿದೆ. ಈ ಮಾರಾಟವು ವರ್ಷದಿಂದ ವರ್ಷಕ್ಕೆ ಶೇಕಡಾ 8 ರಷ್ಟು ಕುಸಿದಿದೆ. ಈ ಕುಸಿತವು ಇತರ ಬ್ರಾಂಡ್‌ಗಳ ಮಾರಾಟದಲ್ಲಿನ ಏರಿಕೆಗೆ ಕಾರಣವಾಗಿದೆ. ಹಬ್ಬದ ಮುನ್ನ ಇತರ ಬ್ರಾಂಡ್‌ಗಳು ನೀಡಿದ ಭರ್ಜರಿ ಆಫರ್‌ಗಳು ಕೂಡ ಇದಕ್ಕೆ ಕಾರಣವಿರಬಹುದು ಎಂದು ಹೇಳಲಾಗುತ್ತಿದೆ.

mahindra-tata-motors-sales-comparison-details

ಇನ್ನು ಮಹೀಂದ್ರಾ ವಿಷಯಕ್ಕೆ ಬಂದರೆ ಮಹೀಂದ್ರಾ ಕಾರುಗಳಲ್ಲಿ ಎಸ್‌ಯುವಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಅಲ್ಲದೇ ಇತ್ತೀಚೆಗೆ ಪರಿಚಯಿಸಿದ ಹೊಸ ಮಹೀಂದ್ರಾ ಎಕ್ಸ್‌ಯುವಿ 3 ಎಕ್ಸ್‌ಒ (XUV 3XO) ಮಾದರಿಯು ಅಗ್ಗದ ಬೆಲೆ, ಉತ್ತಮ ಫೀಚರ್ಸ್‌ನೊಂದಿಗೆ ತನ್ನ ವಿಭಾಗದಲ್ಲಿ ಅತ್ಯುತ್ತ ಕಾರು ಎನ್ನಿಸಿಕೊಂಡಿದ್ದು, ಮಹೀಂದ್ರಾದ ಒಟ್ಟಾರೆ ಮಾರಾಟದಲ್ಲಿ ಹೆಚ್ಚಿನ ಪಾಲನ್ನು ಹೊಂದಿದೆ.

ಇದಲ್ಲದೆ, ಮಹೀಂದ್ರಾದ ಜನಪ್ರಿಯ ಮಾದರಿಗಳಾದ ಬೊಲೆರೊ, ಸ್ಕಾರ್ಪಿಯೋ-ಎನ್ ಮತ್ತು ಎಕ್ಸ್‌ಯುವಿ 700 ಮಾರಾಟವು ಅದ್ಭುತವಾಗಿ ಹೆಚ್ಚಾಗಿದೆ. ಇದು ಹೀಗೆ ಮುಂದುವರಿಯುವ ಮುನ್ಸೂಚನೆಯೂ ಇದೆ, ಆಫರ್‌ಗಳು ದಸರಾ, ದೀಪಾವಳಿ ವರೆಗೆ ಇರುವ ಕಾರಣ ಹೆಚ್ಚಿನ ಬುಕಿಂಗ್‌ಗಳು ಬರುವ ನಿರೀಕ್ಷೆಯಿಲ್ಲಿ ಕಂಪನಿಯಿದೆ ಎಂದು ಹೇಳಬಹುದು.

mahindra-tata-motors-sales-comparison-details

ಇನ್ನು ಟಾಟಾ ಮೋಟಾರ್ಸ್ ಹಿಂದುಳಿಯಲು ಕಾರಣವೆಂದರೆ ಸೀಸನ್ ಫ್ಯಾಕ್ಟರ್ಸ್ ಮತ್ತು ಕಂಪನಿಯ ಮಾದರಿಗಳಲ್ಲಿ ಗ್ರಾಹಕರ ಆಸಕ್ತಿಯ ಕೊರತೆ ಎಂದು ಸಹ ಹೇಳಲಾಗುತ್ತಿದೆ. ಇತ್ತೀಚೆಗೆ ಬಿಡುಗಡೆಯಾಗಿರುವ ಟಾಟಾ ಕರ್ವ್ ಎಸ್‌ಯುವಿ ಕೂಪೆ ಈ ತಿಂಗಳಲ್ಲಿ ಹೆಚ್ಚಿನ ಬುಕಿಂಗ್ಸ್ ತಂದುಕೊಡುವ ನಿರೀಕ್ಷೆಯೂ ಇದೆ. ಈ ಎರಡೂ ಸ್ವದೇಶಿ ಕಂಪನಿಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, October 7, 2024, 12:20 [IST]
English summary
Mahindra tata motors sales comparison details
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+