Mahindra Thar: ಸುಲಭವಾಗಿ ಆಫ್‌ರೋಡ್ ಕಿಂಗ್ ಖರೀದಿಸಬೇಕೆ?: ಆನ್‌ರೊಡ್ ಬೆಲೆ, EMI ಸಂಪೂರ್ಣ ಮಾಹಿತಿ!
ಮಹೀಂದ್ರಾ ಥಾರ್ ಸದ್ಯಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುತ್ತಿರುವ, ಕೈಗೆಟಕುವ ಆಫ್‌ರೋಡ್ ವಾಹನ ಎಂದರೆ ತಪ್ಪಾಗಲಾರದು. ಸದ್ಯದಲ್ಲೇ 5 ಡೋರ್ ಮಹೀಂದ್ರಾ ಥಾರ್ ಮಾರುಕಟ್ಟೆಗೆ ಬರಲಿದ್ದರೂ, ಈಗಿರುವ 3 ಡೋರ್ ಮಹೀಂದ್ರಾ ಥಾರ್‌ನ ಹವಾ ಮಾತ್ರ ಕಡಿಮೆಯಾಗುವಂತೆ ಕಾಣುತ್ತಿಲ್ಲ ಎಂದೇ ಹೇಳಬಹುದು.
ಹಲವರಿಗೆ ಈ ಮಹೀಂದ್ರಾ ಥಾರ್‌ನ ಆನ್ ರೋಡ್ ಬೆಲೆ ಎಷ್ಟು, ಇದರ EMI ಎಷ್ಟಿರಬಹುದು ಎಂಬ ಹಲವಾರು ಸಂಶಯಗಳು ಇರುತ್ತದೆ. ಇಂದಿನ ಈ ಲೇಖನದಲ್ಲಿ ನಾವು ಮಹೀಂದ್ರಾ ಥಾರ್‌ನ ಆರಂಭಿಕ ಆನ್‌ರೋಡ್ ಬೆಲೆ, ಅದರ ಇಎಂಐ, ಲೋನ್ ಕುರಿತಾಗಿ ನೋಡಲಿದ್ದು, ಸಂಪೂರ್ಣ ಮಾಹಿತಿಗಾಗಿ ಲೇಖನವನ್ನು ಕೊನೆಯವರೆಗೆ ಓದಿ.

ಮೊದಲಿಗೆ ಬೆಂಗಳೂರಿನಲ್ಲಿ ಮಹೀಂದ್ರಾ ಥಾರ್ ಆರಂಭಿಕ ವೇರಿಯಂಟ್ ಆನ್ ರೋಡ್ ಬೆಲೆ ಆರಂಭವಾಗುವುದು, 14,00,369 ರೂಪಾಯಿಗಳು. ಇದರಲ್ಲಿ ಎಕ್ಸ್ ಶೋರೂಮ್ ಬೆಲೆ ಸುಮಾರು 11,25,000 ಲಕ್ಷಗಳು. ಇದರ ಜೊತೆಗೆ ಇನ್ಸುರೆನ್ಸ್ ಮತ್ತು ಆರ್‌ಟಿಒ ಟ್ಯಾಕ್ಸ್‌ಗಳು ಸೇರಿ ಸುಮಾರು ಹದಿನಾಲ್ಕು ಲಕ್ಷ ರೂಗಳಿಗೆ ನಿಮಗೆ ಸಿಗುತ್ತದೆ.
ಇನ್ನಿದರ (Mahindra Thar) ಡೌನ್ ಪೇಮೆಂಟ್ ಬಗ್ಗೆ ನೋಡುವುದಾದರೆ ನೀವು ಈ ವಾಹನಕ್ಕೆ 2 ಲಕ್ಷ ರೂ ಡೌನ್ ಪೇಮೆಂಟ್ ಮಾಡಿದರೆ ಸುಮಾರು ೯.೮ % ಬಡ್ಡಿದರದಲ್ಲಿ ೭ ವರ್ಷಗಳ ಕಾಲಾವಧಿಯ ಲೋನ್ ಮಾಡಬಹುದು. ಹೀಗೆ ಮಾಡಿದಾಗ ನೀವು ಪ್ರತೀ ತಿಂಗಳು ಇಎಂಐ ರೂಪದಲ್ಲಿ ಸುಮಾರು 19,804 ರೂಪಾಯಿಗಳಷ್ಟು ಹಣವನ್ನು ಪಾವತಿಸಬೇಕಾಗುತ್ತದೆ.

ಈ ಮಹೀಂದ್ರಾ ಥಾರ್ ಎಸ್‍ಯುವಿಯ ಬಗ್ಗೆ ಹೇಳುವುದಾದರೆ, ಇದು ಹಲವು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಇದರಲ್ಲಿ ಮೊದಲಿಗೆ 2.0 ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಆಗಿದೆ. ಈ ಎಂಜಿನ್ 150 ಬಿಹೆಚ್‍ಪಿ ಪವರ್ ಮತ್ತು 320 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು 2.2 ಲೀಟರ್ ಟರ್ಬೊ-ಡೀಸೆಲ್ ಎಂಜಿನ್ 130 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಈ ಎರಡು ಎಂಜಿನ್ ಗಳೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇದು ಗ್ಲೊಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 4 ಸ್ಟಾರ್ ಸೇಫ್ಚಿ ರೇಟಿಂಗ್ ಪಡೆದುಕೊಳ್ಳುವ ಮೂಲಕ ಸುರಕ್ಷಿತ ಕಾರು ಮಾದರಿಯಾಗಿ ಗುರುತಿಸಿಕೊಂಡ ನಂತರ ಈ ಥಾರ್ ಎಸ್‍ಯುವಿಗೆ ಮತ್ತಷ್ಟು ಬೇಡಿಕೆ ಪಡೆದುಕೊಂಡಿದೆ. ಈ ಎಸ್‍ಯುವಿಯ ವೈಟಿಂಗ್ ಪಿರೇಡ್ ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ನಿರ್ಧಾರವಾಗಲಿದೆ.

ಈ ಥಾರ್ ಎಸ್‍ಯುವಿಯಲ್ಲಿ ಸುರಕ್ಷತೆಗಾಗಿ ಹಲವಾರು ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ. ಎರಡು ಎಂಜಿನ್ ಆಯ್ಕೆಗಳಲ್ಲೂ 4x4 ಡ್ರೈವ್ ಸಿಸ್ಟಂ ಹೊಂದಿದೆ. ಇದರೊಂದಿಗೆ ಕ್ರೂಸ್ ಕಂಟ್ರೋಲ್, 255/65 18-ಇಂಚಿನ ಆಲ್ ಟೆರೆನ್ ಟೈರ್ಸ್, ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್ ಮತ್ತು ಹಿಲ್ ಸ್ಟಾರ್ಟ್ ಅಸಿಸ್ಟ್ ಅನ್ನು ಹೊಂದಿದೆ.
ಇನ್ನು ಈ ಎಸ್‍ಯುವಿಯು ರೋಲ್ ಓವರ್ ಮಿಟಿಗೆಷನ್, ತ್ರೀ ಪಾಯಿಂಟ್ ಸಿಲ್ಟ್ ಬೆಲ್ಟ್ ಮತ್ತು ರಿಯರ್ ವ್ಯೂ ಕ್ಯಾಮೆರಾವನ್ನು ಕೂಡ ಒಳಗೊಂಡಿದೆ. ಥಾರ್ ಮಾದರಿಯಲ್ಲಿ ಮೊದಲ ಬಾರಿಗೆ ಡೀಸೆಲ್ ಎಂಜಿನ್ ಜೊತೆಗೆ ಪೆಟ್ರೋಲ್ ಕಾರಿನ ಆಯ್ಕೆಯನ್ನು ಸಹ ನೀಡಿದೆ. ಈ ಮಹೀಂದ್ರಾ ಥಾರ್ ಎಸ್‍ಯುವಿಯು ಆಫ್-ರೋಡ್ ಕಾರು ಮಾದರಿಯ ಮಾರಾಟದಲ್ಲಿ ಮತ್ತೊಂದು ಹಂತದ ಬದಲಾವಣೆಗೆ ಕಾರಣವಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








