ಮಹೀಂದ್ರಾ ಥಾರ್ ರಾಕ್ಸ್‌ ಖರೀದಿಸುವವರ ಗಮನಕ್ಕೆ.. ಅಕ್ಟೋಬರ್ 3, ಬೆಳಗ್ಗೆ 11 ಗಂಟೆಗೆ.. ಸೇವ್ ಮಾಡಿಕೊಳ್ಳಿ!

ಆನಂದ್ ಮಹೀಂದ್ರಾ ಮಾಲೀಕತ್ವದ ಮಹೀಂದ್ರಾ (Mahindra) ವಿಶ್ವಾಸಾರ್ಹ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಆಗಸ್ಟ್ 14ರಂದು ದೇಶೀಯ ಮಾರುಕಟ್ಟೆಯಲ್ಲಿ 5-ಡೋರ್‌ನ ಮಾರುತಿ ಸುಜುಕಿ ಜಿಮ್ನಿ ಮತ್ತು ಫೋರ್ಸ್ ಗೂರ್ಖಾಗೆ ಗಟ್ಟಿ ಸ್ಪರ್ಧೆಯೊಡ್ಡಲು, ಹೊಚ್ಚ ಹೊಸ ಥಾರ್ ರಾಕ್ಸ್‌ (Thar Roxx) ಎಸ್‌ಯುವಿಯನ್ನು 5-ಡೋರ್‌ ಆಯ್ಕೆಯಲ್ಲಿ ಮಾರಾಟಕ್ಕೆ ತಂದಿತ್ತು. ಕೆಲವೇ ದಿನಗಳ ಹಿಂದೆ, ಇದರ ಮೊದಲ ಯುನಿಟ್ ದಾಖಲೆಯ ರೂ.1.31 ಕೋಟಿ ಬೆಲೆಗೆ ಹರಾಜಾಗಿತ್ತು. ಶೀಘ್ರದಲ್ಲಿಯೇ ನೂತನ ಥಾರ್ ರಾಕ್ಸ್‌ ಆಫ್-ರೋಡ್ ಎಸ್‌ಯುವಿ ಬುಕ್ಕಿಂಗ್ ಕೂಡ ಶುರುವಾಗಲಿದ್ದು, ಆ ಬಳಿಕ ವಿತರಣೆಗಳು ಆರಂಭವಾಗಲಿದೆ.

ಹೊಸ ಮಹೀಂದ್ರಾ ಥಾರ್ ರಾಕ್ಸ್‌ (Mahindra Thar Roxx) ಎಸ್‌ಯುವಿ ಬುಕ್ಕಿಂಗ್ ಅಕ್ಟೋಬರ್ 3ರ ಬೆಳಗ್ಗೆ 11 ಗಂಟೆಗೆ ಪ್ರಾರಂಭವಾಗಲಿದೆ. ಆಸಕ್ತ ಗ್ರಾಹಕರು ರೂ.21,000 ಮುಂಗಡ ಹಣವನ್ನು ಪಾವತಿಸಿ, ಕಂಪನಿಯ ಅಧಿಕೃತ ವೆಬ್‌ಸೈಟ್‌ ಅಥವಾ ಸಮೀಪದ ಡೀಲರ್‌ಶಿಪ್‌ಗೆ ಭೇಟಿ ನೀಡಿ ಥಾರ್ ರಾಕ್ಸ್‌ನ್ನು ಆರ್ಡರ್ ಮಾಡಬಹುದು ಎಂದು ಮೂಲಗಳು ದೃಢಪಡಿಸಿವೆ. ಈಗಾಗಲೇ, ದೇಶಾದ್ಯಂತ ಹಲವೆಡೆ ಅನಧಿಕೃತ ಬುಕ್ಕಿಂಗ್ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ತಿಳಿದುಬಂದಿದೆ.

Booking Open October 3 Morning 11 Am Mahindra Thar Roxx 5 Door

ಸದ್ಯ ಥಾರ್ ರಾಕ್ಸ್ ಟೆಸ್ಟ್ ಡ್ರೈವ್ (ಗ್ರಾಹಕರ ಪರೀಕ್ಷಾರ್ಥ ಸಂಚಾರ) ಆರಂಭವಾಗಿದೆ. ಹತ್ತಿರದ ಮಹೀಂದ್ರಾ ಡೀಲರ್‌ಶಿಪ್‌ಗೆ ತೆರಳಿ ಥಾರ್ ರಾಕ್ಸ್‌ನ್ನು ಚಾಲನೆ ಮಾಡಿ, ನಿಮಗೆ ಸರಿ ಹೊಂದುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಪರೀಕ್ಷಿಸಬಹುದು. ದಸರಾ ಹಬ್ಬದ ವೇಳೆಗೆ ವಿತರಣೆಗಳು (ಡೆಲಿವರಿ) ಶುರುವಾಗಲಿದೆ ಎಂದು ವರದಿಯಾಗಿದೆ. ಆದರೆ, ಈ ಬಗ್ಗೆ ಮಹೀಂದ್ರಾ ಕಂಪನಿಯಿಂದ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.

ನೂತನ ಮಹೀಂದ್ರಾ ಥಾರ್ ರಾಕ್ಸ್‌ ಎಸ್‌ಯುವಿ ರೂ.12.99 ಲಕ್ಷದಿಂದ ರೂ.22.49 ಲಕ್ಷ (ಎಕ್ಸ್ ಶೋರೂಂ) ದರದಲ್ಲಿ ಖರೀದಿಗೆ ಲಭ್ಯವಿದೆ. ಎಂಎಕ್ಸ್1, ಎಂಎಕ್ಸ್3, ಎಎಕ್ಸ್, ಎಎಕ್ಸ್3ಎಲ್ ಹಾಗೂ ಎಂಎಕ್ಸ್5 ಒಳಗೊಂಡಂತೆ ವಿವಿಧ ರೂಪಾಂತರಗಳನ್ನು (ವೇರಿಯೆಂಟ್) ಹೊಂದಿದೆ. ಈ ಕಾರಿನಲ್ಲಿ 5 ಮಂದಿ ಸುಲಭವಾಗಿ ಓಡಾಟ ನಡೆಸಬಹುದು.

Booking Open October 3 Morning 11 Am Mahindra Thar Roxx 5 Door

ಹೊಸ ಮಹೀಂದ್ರಾ ಥಾರ್ ರಾಕ್ಸ್‌ 2-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2.2-ಲೀಟರ್ ಡಿಸೇಲ್ ಎಂಜಿನ್ ಆಯ್ಕೆಯನ್ನು ಪಡೆದಿದೆ. 6-ಸ್ಪೀಡ್ ಮ್ಯಾನುವಲ್/ 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಹೊಂದಿದೆ. ಆರ್‌ಡಬ್ಲ್ಯೂಡಿ (ರೇರ್ ವೀಲ್ ಡ್ರೈವ್) ಮತ್ತು 4ಡಬ್ಲ್ಯೂಡಿ ತಂತ್ರಜ್ಞಾನವನ್ನು (ಟೆಕ್ನಾಲಜಿ) ಒಳಗೊಂಡಿದೆ. 12.4 ರಿಂದ 15.2 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ ಎಂದು ಅಂದಾಜಿಸಲಾಗಿದೆ.

ಈ ಥಾರ್ ರಾಕ್ಸ್‌ ಹೊರಭಾಗದಲ್ಲಿ ಆಕರ್ಷಕವಾದ ವಿನ್ಯಾಸ (ಡಿಸೈನ್) ಹೊಂದಿದೆ. ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು, ಸಿ-ಆಕಾರಕ್ಕೆ ಹೋಲಿಕೆಯಾಗುವ ಎಲ್‌ಇಡಿ ಡಿಆರ್‌ಎಲ್‌ಗಳನ್ನು ಒಳಗೊಂಡಿದೆ. ಟ್ಯಾಂಗೋ ರೆಡ್, ಎವರೆಸ್ಟ್ ವೈಟ್ ಮತ್ತು ಫಾರೆಸ್ಟ್ ಗ್ರೀನ್ ಸೇರಿದಂತೆ ವಿವಿಧ ಬಣ್ಣಗಳ (ಕಲರ್) ಆಯ್ಕೆಯಲ್ಲಿಯೂ ಸಿಗುತ್ತದೆ. ಹೆಚ್ಚಿನ ಲಗೇಜ್ ಹೊತ್ತೊಯ್ಯಲು 447 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಪಡೆದಿದೆ.

ನೂತನ ಮಹೀಂದ್ರಾ ಥಾರ್ ರಾಕ್ಸ್‌ ಎಸ್‌ಯುವಿ ದೊಡ್ಡ ಗಾತ್ರದ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಮತ್ತು ಪನೋರಮಿಕ್ ಸನ್‌ರೂಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಯಾಣಿಕರ ರಕ್ಷಣೆಗಾಗಿ 6-ಏರ್‌ಬ್ಯಾಗ್‌, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ಹಾಗೂ 4 ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ.

ಒಟ್ಟಾರೆಯಾಗಿ, ಬಹುನಿರೀಕ್ಷಿತ ಮಹೀಂದ್ರಾ ಥಾರ್ ರಾಕ್ಸ್‌ನ್ನು ಬುಕ್ಕಿಂಗ್ ಮಾಡಲು ಗ್ರಾಹಕರು ಸಹ ತುದಿಗಾಲಲ್ಲಿ ನಿಂತಿದ್ದಾರೆ. ಇದೊಂದು ಫ್ಯಾಮಿಲಿ ಆಫ್-ರೋಡ್ ಎಸ್‌ಯುವಿಯಾಗಿದ್ದು, ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿರುವುದರಿಂದ ಬಹುತೇಕರ ಆಯ್ಕೆಯ ವಾಹನವಾಗುವುದರಲ್ಲಿ ಎರಡು ಮಾತಿಲ್ಲ. ದಸರಾ ಹಬ್ಬದ ವೇಳೆಗೆ ವಿತರಣೆ ಶುರುವಾಗಲಿದ್ದು, ಆ ನಂತರ ಖರೀದಿದಾರರಿಂದ ಯಾವ ರೀತಿಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.

Article Published On: Thursday, September 26, 2024, 17:43 [IST]
English summary
Mahindra thar roxx 5 door booking open october 3 morning 11 am
Read more on mahindra india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+