Mahindra: ಮಹೀಂದ್ರಾ ಥಾರ್ ರಾಕ್ಸ್‌ ದಿಢೀರ್ ಬಿಡುಗಡೆ.. ರೂ.12.99 ಲಕ್ಷ ಬೆಲೆ, ನಿರೀಕ್ಷೆಗೂ ಮೀರಿದ ವೈಶಿಷ್ಟ್ಯಗಳಿವೆ!

ದೇಶದ ವಿಶ್ವಾಸಾರ್ಹ ವಾಹನ ತಯಾರಕ ಕಂಪನಿಯಾಗಿ ಮಹೀಂದ್ರಾ (Mahindra) ಮನೆ ಮಾತಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದಿರುವ ಹಲವು ಕಾರುಗಳನ್ನು ಮಾರಾಟ ಮಾಡುತ್ತಿದೆ. ಗ್ರಾಹಕರು ಸಹ ಮುಗಿಬಿದ್ದು ಖರೀದಿಸುತ್ತಿದ್ದಾರೆ. ವಿಶೇಷವಾಗಿ ಆಫ್-ರೋಡ್ ಎಸ್‌ಯುವಿ 3-ಡೋರ್ 'ಥಾರ್‌'ಗೆ ಭಾರಿ ಬೇಡಿಕೆಯಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. 5-ಡೋರ್‌ನ ಮಾರುತಿ ಸುಜುಕಿ ಜಿಮ್ನಿ ಮತ್ತು ಫೋರ್ಸ್ ಗೂರ್ಖಾಗೆ ಪ್ರಬಲವಾದ ಸ್ಪರ್ಧೆಯೊಡ್ಡಲು ಆಗಸ್ಟ್ 15ರಂದು ಥಾರ್ ರಾಕ್ಸ್‌ (Thar Roxx) ಎಸ್‌ಯುವಿಯನ್ನು 5-ಡೋರ್‌ ಆಯ್ಕೆಯಲ್ಲಿ ಬಿಡುಗಡೆಗೊಳಿಸಲು ದಿನಾಂಕ ನಿಗದಿಪಡಿಸಲಾಗಿತ್ತು. ಆದಾಗ್ಯೂ ಒಂದು ದಿನ ಮೊದಲೇ (ಆಗಸ್ಟ್ 14) ಬುಧವಾರ ತಡರಾತ್ರಿ ಥಾರ್ ರಾಕ್ಸ್‌ನ್ನು ಮಾರಾಟಕ್ಕೆ ತರಲಾಗಿದೆ.

ನೂತನ ಮಹೀಂದ್ರಾ ಥಾರ್ ರಾಕ್ಸ್‌ (Mahindra Thar Roxx) 5-ಡೋರ್ (ಬಾಗಿಲು) ಎಸ್‌ಯುವಿಯನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ಪರಿಚಯಿಸಲಾಗಿದೆ. ಇದರ ಪೆಟ್ರೋಲ್ ರೂಪಾಂತರ (Petrol Variant) ರೂ.12.99 ಲಕ್ಷ ಹಾಗೂ ಡೀಸೆಲ್ ರೂಪಾಂತರ (Diesel Variant) ರೂ.13.99 ಲಕ್ಷ (ಎಕ್ಸ್ ಶೋರೂಂ) ಆರಂಭಿಕ ದರವನ್ನು ಹೊಂದಿದೆ.

Mahindra Thar Roxx 5 Door suv in india rs 12 99 lakh price details

ಹೊಚ್ಚ ಹೊಸ ಮಹೀಂದ್ರಾ ಥಾರ್ ರಾಕ್ಸ್‌ 5-ಡೋರ್‌ ಎಸ್‌ಯುವಿ ಅತ್ಯಾಧುನಿಕ ವಿನ್ಯಾಸವನ್ನು ಪಡೆದಿದೆ. ಇದು ನೋಡುಗರನ್ನು ಸೆಳೆಯುತ್ತದೆ. ನವೀನವಾದ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು, ಸಿ-ಆಕಾರಕ್ಕೆ ಹೋಲುವ ಎಲ್‌ಇಡಿ ಡಿಆರ್‌ಎಲ್‌ಗಳು, ಸರ್ಕ್ಯೂಲರ್ ಫಾಗ್ ಲೈಟ್‌ಗಳು, ಅತ್ಯತ್ತಮ ಬಂಪರ್‌ ಹಾಗೂ ವಿನೂತನವಾಗಿರುವ ಗ್ರಿಲ್‌ನ್ನು ಒಳಗೊಂಡಿದೆ. ಜೊತೆಗೆ ಡುಯಲ್-ಟೋನ್ ಅಲಾಯ್ ವೀಲ್‌ಗಳು, ಟೈಲ್‌ಗೇಟ್-ಮೌಂಟೆಡ್ ಸ್ಪೇರ್ ವೀಲ್ ಮತ್ತು ಎಲ್ಇಡಿ ಟೈಲ್‌ಲೈಟ್‌ಗಳನ್ನು ಪಡೆದಿದೆ.

ಈ ಥಾರ್ ರಾಕ್ಸ್‌ ಎರಡು ಶಕ್ತಿಯುತ ಪವರ್‌ಟ್ರೇನ್ (Powertrain) ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಇದರ 2.0-ಲೀಟರ್, 4-ಸಿಲಿಂಡರ್, ಎಂಸ್ಟಾಲಿಯನ್ ಟರ್ಬೊ ಪೆಟ್ರೋಲ್ ಎಂಜಿನ್‌ 158 ಬಿಹೆಚ್‌ಪಿ ಗರಿಷ್ಠ ಶಕ್ತಿ (ಪವರ್) ಹಾಗೂ 330 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿದೆ.

Mahindra Thar Roxx 5 Door suv in india rs 12 99 lakh price details

ಮತ್ತೊಂದು 2-ಲೀಟರ್, 4-ಸಿಲಿಂಡರ್, ಎಂಹಾಕ್ ಡೀಸೆಲ್ ಎಂಜಿನ್ 148 ಬಿಹೆಚ್‌ಪಿ ಗರಿಷ್ಠ ಶಕ್ತಿ ಮತ್ತು 330 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. ರೂಪಾಂತರಗಳಿಗೆ ಅನುಗುಣವಾಗಿ 6-ಸ್ಪೀಡ್ ಮ್ಯಾನುವಲ್ ಹಾಗೂ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಹೊಂದಿದೆ. ಈ ಎಸ್‌ಯುವಿ 5-ಡೋರ್‌ ಹೊಂದಿರುವುದರಿಂದ ಸ್ವಲ್ಪ ಉದ್ದವಾಗಿದ್ದು, 5 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದು.

ನೂತನ ಮಹೀಂದ್ರಾ ಥಾರ್ ರಾಕ್ಸ್‌ ಎಸ್‌ಯುವಿ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ, ಆಪಲ್ ಕಾರ್ ಪ್ಲೇ, ಫುಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೆಂಟಿಲೇಟೆಡ್ ಫ್ರಂಟ್ ಸೀಟ್, ಪನೋರಮಿಕ್ ಸನ್‌ರೂಫ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಮತ್ತು ರೇರ್ ಎಸಿ ವೆಂಟ್‌ಗಳನ್ನು ಹೊಂದಿದೆ.

Mahindra Thar Roxx 5 Door suv in india rs 12 99 lakh price details

ಈ ಮಹೀಂದ್ರಾ ಥಾರ್ ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸುತ್ತದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್‌, ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಮತ್ತು 4 ಡಿಸ್ಕ್ ಬ್ರೇಕ್‌ಗಳನ್ನು ಪಡೆದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, August 14, 2024, 22:45 [IST]
English summary
Mahindra thar roxx launched in india rs 12 99 lakh price details
Read more on mahindra india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+