Mahindra: ಹೊಸ ಮಹೀಂದ್ರಾ ಥಾರ್ ರಾಕ್ಸ್ ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
ಮಹೀಂದ್ರಾ & ಮಹೀಂದ್ರಾ (Mahindra & Mahindra), ಪ್ರಖ್ಯಾತ ವಾಹನ ತಯಾರಕ ಕಂಪನಿಯಾಗಿದೆ. ಆಗಸ್ಟ್‌ನಲ್ಲಿ ಥಾರ್ ರಾಕ್ಸ್ 5-ಡೋರ್ (Thar Roxx 5-Door) ಆಫ್-ರೋಡ್ ಎಸ್‌ಯುವಿಯನ್ನು ಮಾರಾಟಕ್ಕೆ ತಂದಿತ್ತು. ಇದೇ ತಿಂಗಳ 3 ರಿಂದ ನೂತನ ಥಾರ್ ರಾಕ್ಸ್‌ಗಾಗಿ ಬುಕ್ಕಿಂಗ್‌ನ್ನು ಶುರು ಮಾಡಿತ್ತು. ಕೇವಲ ಒಂದು ಗಂಟೆಯೊಳಗೆ 1,76,218 ಆರ್ಡರ್‌ಗಳನ್ನು ಪಡೆದುಕೊಳ್ಳುವಲ್ಲಿಯೂ ಯಶಸ್ವಿಯಾಗಿತ್ತು. ಈಚೆಗೆ ವಿತರಣೆಯನ್ನು ಪ್ರಾರಂಭಿಸಲಾಗಿದೆ. ನೀವು ಹೊಸ ಮಹೀಂದ್ರಾ ಥಾರ್ ರಾಕ್ಸ್ ಖರೀದಿಸಲು ಆಲೋಚಿಸಿದ್ದೀರಾ.. ಇಲ್ಲಿ ಆನ್-ರೋಡ್ ಬೆಲೆ ಹಾಗೂ ಇಎಂಐ ಆಯ್ಕೆಯ ಕುರಿತಂತೆ ಸಂಕ್ಷಿಪ್ತವಾಗಿ ತಿಳಿಸಿಕೊಟ್ಟಿದ್ದೇವೆ.
ಬೆಂಗಳೂರಿನಲ್ಲಿ ಹೊಚ್ಚ ಹೊಸ ಮಹೀಂದ್ರಾ ಥಾರ್ ರಾಕ್ಸ್ ಎಸ್‌ಯುವಿಯು ವಿವಿಧ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿ ಲಭ್ಯವಿದೆ. ಇದರ ಎಂಎಕ್ಸ್1 ಆರ್‌ಡಬ್ಲ್ಯೂಡಿ ಡೀಸೆಲ್ (MX1 RWD Diesel) ರೂಪಾಂತರ, ರೂ.17.66 ಲಕ್ಷ ಆನ್-ರೋಡ್ ಬೆಲೆಯನ್ನು ಹೊಂದಿದೆ. ನೀವು ರೂ.3 ಲಕ್ಷ ಡೌನ್ ಪೇಮೆಂಟ್ ಪಾವತಿಸಿ ಈ ಎಸ್‌ಯುವಿಯನ್ನು ತೆಗೆದುಕೊಂಡರೆ, ರೂ.14.66 ಲಕ್ಷ ಸಾಲವಿರುತ್ತದೆ. ಶೇಕಡ 9.8% ಬಡ್ದಿ ದರದಲ್ಲಿ 5 ವರ್ಷಕ್ಕೆ ತಿಂಗಳಿಗೆ ರೂ.31,021 ಇಎಂಐ ಕಟ್ಟಬೇಕು.

ಈ ಮಹೀಂದ್ರಾ ಥಾರ್ ರಾಕ್ಸ್ (Mahindra Thar ROXX) ಎಸ್‌ಯುವಿಯ ಎಂಎಕ್ಸ್3 ಆರ್‌ಡಬ್ಲ್ಯೂಡಿ ಡೀಸೆಲ್ (MX3 RWD Diesel) ರೂಪಾಂತರ, ರೂ.20.14 ಲಕ್ಷ ಆನ್-ರೋಡ್ ದರವನ್ನು ಪಡೆದಿದೆ. ರೂ.3 ಲಕ್ಷ ಡೌನ್ ಪೇಮೆಂಟ್ ಕಟ್ಟಿ ಥಾರ್ ರಾಕ್ಸ್‌ನ್ನು ತೆಗೆದುಕೊಂಡರೆ, ರೂ.17.14 ಲಕ್ಷ ಸಾಲ ಬಾಕಿಯಿರುತ್ತದೆ. 9.8% ಬಡ್ದಿ ಹಾಕಿ 5 ವರ್ಷದ ಅವಧಿಗೆ ಮಾಸಿಕ ರೂ.36,268 ಇಎಂಐ ಪಾವತಿಸಬೇಕು.
ನೂತನ ಥಾರ್ ರಾಕ್ಸ್ ಕಾರಿನ ಎಎಕ್ಸ್3ಎಲ್ ಆರ್‌ಡಬ್ಲ್ಯೂಡಿ ಡೀಸೆಲ್ (AX3L RWD Diesel) ರೂಪಾಂತರ, ರೂ.21.39 ಲಕ್ಷ ಆನ್-ರೋಡ್ ಬೆಲೆಯನ್ನು ಒಳಗೊಂಡಿದೆ. ರೂ.3 ಲಕ್ಷ ಡೌನ್ ಪೇಮೆಂಟ್ ಪಾವತಿಸಿ ಈ ಎಸ್‌ಯುವಿಯನ್ನು ಮನೆಗೆ ತಂದರೆ, ರೂ.18.39 ಲಕ್ಷ ಸಾಲವಿರುತ್ತದೆ. ಅದಕ್ಕೆ 9.8% ಬಡ್ದಿ ದರದಲ್ಲಿ 5 ವರ್ಷಕ್ಕೆ ತಿಂಗಳಿಗೆ ರೂ.38,895 ಇಎಂಐ ಕಟ್ಟಬೇಕು.

ಮಹೀಂದ್ರಾ ಥಾರ್ ರಾಕ್ಸ್‌ನ ಎಂಎಕ್ಸ್3 ಆರ್‌ಡಬ್ಲ್ಯೂಡಿ ಡೀಸೆಲ್ ಎಟಿ (MX3 RWD Diesel AT) ರೂಪಾಂತರ, ರೂ.22.01 ಲಕ್ಷ ಆನ್-ರೋಡ್ ದರವನ್ನು ಹೊಂದಿದೆ. ನೀವು ರೂ.3 ಲಕ್ಷ ಡೌನ್ ಪೇಮೆಂಟ್ ಕಟ್ಟಿ ಈ ಥಾರ್ ರಾಕ್ಸ್‌ನ್ನು ಖರೀದಿಸಿದರೆ, ರೂ.19.01 ಲಕ್ಷ ಸಾಲ ಬಾಕಿಯಿರುತ್ತದೆ. 9.8% ಬಡ್ದಿಯನ್ನು ಹಾಕಿ, 5 ವರ್ಷದ ಅವಧಿಗೆ ಮಾಸಿಕ ರೂ.40,204 ಇಎಂಐ ಪಾವತಿಸಬೇಕು.
ಹೊಸ ಥಾರ್ ರಾಕ್ಸ್‌ನ ಎಂಎಕ್ಸ್5 4ಡಬ್ಲ್ಯೂಡಿ ಡೀಸೆಲ್ (MX5 4WD Diesel) ರೂಪಾಂತಕ್ಕೆ ರೂ.23.54 ಲಕ್ಷ ಆನ್-ರೋಡ್ ಬೆಲೆಯಿದೆ. ಇದನ್ನು ರೂ.3 ಲಕ್ಷ ಡೌನ್ ಪೇಮೆಂಟ್ ಪಾವತಿಸಿ ತೆಗೆದುಕೊಂಡರೆ, ರೂ.20.54 ಲಕ್ಷ ಸಾಲವಿರುತ್ತದೆ. ಶೇಕಡ 9.8% ಬಡ್ದಿ ದರದಲ್ಲಿ 5 ವರ್ಷಕ್ಕೆ ತಿಂಗಳಿಗೆ ರೂ.43,440 ಇಎಂಐ ಕಟ್ಟಬೇಕು.
ಈ ಮಹೀಂದ್ರಾ ಥಾರ್ ರಾಕ್ಸ್ ಎಸ್‌ಯುವಿಯ ಎಂಎಕ್ಸ್5 ಆರ್‌ಡಬ್ಲ್ಯೂಡಿ ಪೆಟ್ರೋಲ್ ಎಟಿ (MX5 RWD Petrol AT) ರೂ.22.63 ಲಕ್ಷ ಆನ್-ರೋಡ್ ದರವನ್ನು ಒಳಗೊಂಡಿದೆ. ರೂ.3 ಲಕ್ಷ ಡೌನ್ ಪೇಮೆಂಟ್ ಕಟ್ಟಿ ಈ ಥಾರ್ ರಾಕ್ಸ್‌ನ್ನು ಕೊಂಡುಕೊಂಡರೆ ರೂ.19.62 ಸಾಲ ಉಳಿಯುತ್ತದೆ. 9.8% ಬಡ್ದಿ ಹಾಕಿ, 5 ವರ್ಷದ ಅವಧಿಗೆ ಮಾಸಿಕ ರೂ.41,514 ಇಎಂಐ ಪಾವತಿಸಬೇಕು.
ನೂತನ ಮಹೀಂದ್ರಾ ಥಾರ್ ರಾಕ್ಸ್ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಒಳಗೊಂಡಿದೆ. ಈ ಕಾರಿನಲ್ಲಿ 5 ಮಂದಿ ಓಡಾಟ ನಡೆಸಬಹುದು. ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಪನೋರಮಿಕ್ ಸನ್‌ರೂಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಯಾಣಿಕರ ರಕ್ಷಣೆಗಾಗಿ 6-ಏರ್‌ಬ್ಯಾಗ್‌ಗಳು ಮತ್ತು ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ಅನ್ನು ಹೊಂದಿದೆ.
ನಿಮ್ಮ ಗಮನಕ್ಕೆ.. ಈ ಆನ್-ರೋಡ್ ಬೆಲೆ ಹಾಗೂ ಇಎಂಐ ಆಯ್ಕೆಗಳು ನಗರದಿಂದ ನಗರಕ್ಕೆ ರೂಪಾಂತರಗಳನ್ನು ಅವಲಂಭಿಸಿ ಬೇರೆಯಿರಲಿದ್ದು, ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂಗೆ ಭೇಟಿ ನೀಡಿರಿ.


Click it and Unblock the Notifications








