ಮಹೀಂದ್ರಾ ಥಾರ್ VS ಸ್ಕಾರ್ಪಿಯೋ ಡಿಕ್ಕಿಯ ಸಮರ: ಗೆದ್ದಿದ್ದು ಯಾರು? ವಿಡಿಯೋ

ಮಹೀಂದ್ರಾ ಕಂಪನಿಯ ಎರಡು ಜನಪ್ರಿಯ ಎಸ್‌ಯುವಿಗಳಾದ ಥಾರ್ ಮತ್ತು ಸ್ಕಾರ್ಪಿಯೋ ಕ್ಲಾಸಿಕ್ ಕಾರುಗಳ ನಡುವೆ ಡಿಕ್ಕಿಯ ಪೈಪೋಟಿ ನಡೆದಿದೆ. ಈ ಘಟನೆಯನ್ನು ವೀಡಿಯೊದಲ್ಲಿ ಸೆರೆಹಿಡಿಯಲಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗಿದೆ. ಥಾರ್ ಚಾಲಕ ಸ್ಕಾರ್ಪಿಯೋಗೆ ನಿರಂತರವಾಗಿ ಡಿಕ್ಕಿ ಹೊಡೆಯುವುದನ್ನು ವಿಡಿಯೋದಲ್ಲಿ ನೋಡಬಹುದು, ಸ್ಕಾರ್ಪಿಯೋ ಡಿಕ್ಕಿಯಿಂದ ತಪ್ಪಿಸಿಕೊಳ್ಳಲು ನಿರ್ಧರಿಸಿದಂತೆ ತೋರುತ್ತದೆ. ಸ್ಕಾರ್ಪಿಯೋ ತಪ್ಪಿಸಿಕೊಳ್ಳುವ ಪ್ರಯತ್ನಗಳ ಹೊರತಾಗಿಯೂ, ಥಾರ್ ಚಾಲಕ ಅದನ್ನು ಗುರಿಯಾಗಿಸಿಕೊಂಡು ಡಿಕ್ಕಿ ಹೊಡೆಯುತ್ತಲೇ ಇದ್ದ ಕಾರಣ ಎರಡೂ ವಾಹನಗಳಿಗೆ ಗಮನಾರ್ಹ ಹಾನಿಯಾಗಿದೆ.

ಮಹೀಂದ್ರಾ ಥಾರ್ ಸ್ಕಾರ್ಪಿಯೋಗೆ ಅನೇಕ ಬಾರಿ ತೀವ್ರವಾಗಿ ಡಿಕ್ಕಿ ಹೊಡೆದ ಪರಿಣಾಮವಾಗಿ ಸೈಡ್ ಪ್ರೊಫೈಲ್‌ಗೆ ಹಾನಿಯಾಗಿದೆ. ವೀಡಿಯೊದ ಕೊನೆಯಲ್ಲಿ, ಥಾರ್ ಚಾಲಕ ಸ್ಕಾರ್ಪಿಯೋವನ್ನು ಒಂದು ಮೂಲೆಗೆ ತಳ್ಳಿ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಕಾರ್ಪಿಯೋ ಮಾಲೀಕ ಜಗಳಕ್ಕೆ ಇಳಿಯುವ ಉದ್ದೇಶವನ್ನು ಹೊಂದಿರಲಿಲ್ಲ ಎಂದು ವೀಡಿಯೊದಲ್ಲಿ ಗೋಚರಿಸುತ್ತದೆ.

mahindra-thar-vs-scorpio-collision-battle-viral-video

ಯಾವ ಕಾರಣಕ್ಕಾಗಿ ಈ ಜಗಳ ನಡೆದಿದೆ ಎಂಬುದರ ಬಗ್ಗೆ ಮಾಹಿತಿಯಿಲ್ಲ. ಆದ್ರೆ ಸಾರ್ವಜಿಕ ರಸ್ತೆಯಲ್ಲಿ ಇಂತಹ ಕೃತ್ಯಗಳಿಗೆ ಮುಂದಾಗುವುದರಿಂದ ಇತರ ಪ್ರಯಾಣಿಕರನ್ನು ತೊಂದರೆಗೆ ಸಿಲುಕಿಸಿದಂತಾಗುತ್ತದೆ. ಇದು ಕಾನೂನು ಬಾಹಿರವಾಗಿದ್ದು, ಸ್ಥಳಿಯ ಪೊಲೀಸರು ಕ್ರಮ ಕೈಗೊಂಡಿದ್ದಾರೆಯೇ ಎಂಬುದರ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಆದ್ರೆ ವಿಡಿಯೋ ವೈರಲ್ ಆಗುತ್ತಿರುವ ಕಾರಣ ಪೊಲೀಸರು ಶೀಘ್ರದಲ್ಲೇ ಕ್ರಮ ಕೈಗೊಳ್ಳಬಹುದು.

ರಗಡ್ ಲುಕ್‌ಗೆ ಹೆಸರುವಾಸಿಯಾಗಿರುವ ಮಹೀಂದ್ರಾ ಥಾರ್ ಹಾಗೂ ಸ್ಕಾರ್ಪಿಯೋ ಎರಡೂ ಎಸ್‌ಯುವಿಗಳು ಭಾರತದಲ್ಲಿ ಆಫ್‌ರೋಡಿಂಗ್ ವಿಭಾಗದಲ್ಲಿ ಹೆಚ್ಚು ಜನಪ್ರಿಯತೆ ಪಡೆದಿವೆ. ಮಹೀಂದ್ರಾ ಕಂಪನಿ ಪಡೆಯುವ ಹೆಚ್ಚಿನ ಆರ್ಡ್‌ಗಳಲ್ಲಿ ಗಮನಾರ್ಹ ಪಾಲು ಈ ಎಸ್‌ಯುವಿಗಳದ್ದೇ ಆಗಿದೆ. ಆಗಾಗ್ಗೆ ದೀರ್ಘ ಕಾಯುವ ಅವಧಿಯೊಂದಿಗೆ ಈ ಕಾರುಗಳು ಸುದ್ದಿಯಾಗುತ್ತಿರುತ್ತವೆ.

mahindra-thar-vs-scorpio-collision-battle-viral-video

ಸ್ಕಾರ್ಪಿಯೋ ಕ್ಲಾಸಿಕ್: ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ಎಸ್‌ಯುವಿಯು ಡೀಸೆಲ್ ಪವರ್‌ಟ್ರೇನ್‌ನೊಂದಿಗೆ ಮಾತ್ರ ದೊರೆಯುತ್ತದೆ. ಬೆಂಗಳೂರಿನಲ್ಲಿ ಇದರ ಬೇಸ್ ಮಾಡೆಲ್ ಆಗಿರುವ ಎಸ್ ವೇರಿಯೆಂಟ್ ರೂ.17.06 ಲಕ್ಷ, ಎಸ್ (9 ಸೀಟರ್) ರೂ.17.36 ಲಕ್ಷ, ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಳ್ಳುವ ಎಸ್ 11 ರೂ.21.69 ಲಕ್ಷ ಹಾಗೂ ಎಸ್ 11 (7ಸಿಸಿ) ರೂಪಾಂತರವು ರೂ.21.76 ಲಕ್ಷ ಆನ್-ರೋಡ್ ಬೆಲೆಯನ್ನು ಹೊಂದಿದೆ.

ಹೊಸ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ಎಸ್‌ಯುವಿ 2.2 - ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, 132 ಪಿಎಸ್ ಗರಿಷ್ಠ ಪವರ್ (ಶಕ್ತಿ) ಹಾಗೂ 300 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸಿವ ಸಾಮರ್ಥ್ಯವನ್ನು ಒಳಗೊಂಡಿದೆ. ಜೊತೆಗೆ 6 - ಸ್ಪೀಡ್ ಮ್ಯಾನುವಲ್ ಗೇರ್‌ ಬಾಕ್ಸ್‌ನ್ನು ಪಡೆದಿದ್ದು, 16 ಕೆಎಂಪಿಎಲ್ ಮೈಲೇಜ್ ಕೊಡುತ್ತದೆ.

ಮಹೀಂದ್ರಾ ಥಾರ್: ಬೆಂಗಳೂರಿನಲ್ಲಿ ಮಹೀಂದ್ರಾ ಥಾರ್ ಆರಂಭಿಕ ವೇರಿಯಂಟ್ ಆನ್‌ ರೋಡ್‌‌ ಬೆಲೆ ರೂ. 14,00,369 ಇದೆ. ಮಹೀಂದ್ರಾ ಥಾರ್ ಎಸ್‍ಯುವಿ ಹಲವು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಇದರಲ್ಲಿ ಮೊದಲಿಗೆ 2.0 ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ 150 ಬಿಹೆಚ್‍ಪಿ ಪವರ್ ಮತ್ತು 320 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಇನ್ನು 2.2 ಲೀಟರ್ ಟರ್ಬೊ-ಡೀಸೆಲ್ ಎಂಜಿನ್ 130 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎರಡು ಎಂಜಿನ್‌ಗಳೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇದು ಗ್ಲೊಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 4 ಸ್ಟಾರ್ ಸೇಫ್ಚಿ ರೇಟಿಂಗ್ ಪಡೆದುಕೊಂಡಿದೆ.

More from DriveSpark

Article Published On: Saturday, June 22, 2024, 8:30 [IST]
English summary
Mahindra thar vs scorpio collision battle viral video
Read more on off beat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+