Mahindra Thar ಪ್ರೀಯರಿಗೆ ಶಾಕ್: ಬುಕ್ ಮಾಡಿದರೆ ಇಷ್ಟು ಬೇಗ ಕೈ ಸೇರುತ್ತಾ ಈ ಆಫ್‌ರೋಡ್ ಕಿಂಗ್!
ಆಫ್‌ರೋಡ್ ಪ್ರೀಯರು ಒಮ್ಮೆಯಾದರೂ ಖರೀದಿಸಿಬೇಕು ಎಂದುಕೊಳ್ಳುವ ವಾಹನದಲ್ಲಿ ಮಹೀಂದ್ರಾ ಥಾರ್ ಪ್ರಮುಖವಾದುದು. 4x4 ಆಯ್ಕೆಯಿರುವ ಕಡಿಮೆ ದುಡ್ಡಿನ ವಾಹನದಲ್ಲಿ ಇದು ಪ್ರಮುಖವಾದುದು. ಅತಿ ಹೆಚ್ಚು ಬೇಡಿಕೆ ಇರುವ ಮಹೀಂದ್ರಾ ಕಾರುಗಳಲ್ಲಿ ಥಾರ್ ಸಹ ಒಂದು. ಇದನ್ನು ಖರೀದಿಸಲು ಹಲವಾರು ತಿಂಗಳುಗಳೇ ಕಾಯಬೇಕಿತ್ತು.
ಇದೀಗ ಮಹೀಂದ್ರಾ ಥಾರ್ ಕೊಳ್ಳಬೇಕು ಎಂದುಕೊಂಡಿರುವವರಿಗೆ ಸಿಹಿ ಸುದ್ದಿಯೊಂದು ಬಂದಿದೆ. ಮಹೀಂದ್ರಾ ಥಾರ್‌ನ ವೇಟಿಂಗ್ ಪಿರಿಯಡ್ ಇದೀಗ ಗಮನಾರ್ಹ ಮಟ್ಟದಲ್ಲ ಕಡಿಮೆ ಆಗಿದೆ ಎಂದು ಮಾಹಿತಿಗಳ ಪ್ರಕಾರ ತಿಳಿದು ಬಂದಿದೆ. ಈ ಥಾರ್‌ನ 4x4 ಆವೃತ್ತಿ ವೇಟಿಂಗ್ ಪಿರಿಯಡ್ ಕಡಿಮೆ ಆಗಿದೆ ಎಂದು ತಿಳಿದು ಬಂದಿದೆ.

ನೀವು ಥಾರ್ ಬುಕ್ ಮಾಡಿ ಕೇವಲ ಎರಡೇ ಎರಡು ತಿಂಗಳಲ್ಲಿ ನಿಮ್ಮ ಕೈ ಸೇರಲಿದೆ. ಅಂದರೆ ಇದೀಗ ಮಹೀಂದ್ರಾ ಥಾರ್‌ನ ವೇಟಿಂಗ್ ಪಿರಿಯಡ್ ಕೇವಲ ಎರಡು ತಿಂಗಳಿಗೆ ಬಂದಿದ್ದು, ಇದು ಥಾರ್ ಅನ್ನು ಕೊಳ್ಳಬೇಕು ಆದರೆ ತುಂಬಾ ತಿಂಗಳುಗಳ ಕಾಲ ಕಾಯಲು ಸಾಧ್ಯವಿಲ್ಲ ಎಂದು ನಿರಾಸೆಯಾಗಿದ್ದವರ ಮುಖದಲ್ಲಿ ಮಂದಹಾಸ ಮೂಡಲು ಕಾರಣವಾಗಿದೆ.
ಇದರಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಇದರ 4X2 ಆವೃತ್ತಿಯ ವೇಟಿಂಗ್ ಪಿರಿಯಡ್ ಮಾತ್ರ ಇನ್ನೂ ಹಾಗೆಯೇ ಇದೆ. ಬುಕ್ ಮಾಡಿದ ನಂತರ ಈ ಆವೃತ್ತಿ ನಿಮ್ಮ ಕೈ ಸೇರಲು ಬರೋಬ್ಬರಿ ೧೦ ತಿಂಗಳುಗಳ ಕಾಲ ನೀವು ಕಾಯಲೇ ಬೇಕು. ಸದ್ಯಕ್ಕೆ ಥಾರ್‌ನ 4X2 ಆವೃತ್ತಿಗೆ ಹೆಚ್ಚಿನ ಡಿಮ್ಯಾಂಡ್ ಇದ್ದು, ಹೆಚ್ಚು ಆಫ್‌ರೋಡ್ ಮಾಡದೇ ಇರುವವರು, ಆದರೆ ರಗಡ್ ಲುಕ್ ಬೇಕು ಎಂದುಕೊಳ್ಳುವವರ ನೆಚ್ಚಿನ ಆಯ್ಕೆಯಾಗಿದೆ.

ಬೆಂಗಳೂರಿನಲ್ಲಿ ಮಹೀಂದ್ರಾ ಥಾರ್ ಆರಂಭಿಕ ವೇರಿಯಂಟ್ ಆನ್ ರೋಡ್ ಬೆಲೆ ಆರಂಭವಾಗುವುದು, 14,00,369 ರೂಪಾಯಿಗಳು. ಇದರಲ್ಲಿ ಎಕ್ಸ್ ಶೋರೂಮ್ ಬೆಲೆ ಸುಮಾರು 11,25,000 ಲಕ್ಷಗಳು. ಇದರ ಜೊತೆಗೆ ಇನ್ಸುರೆನ್ಸ್ ಮತ್ತು ಆರ್‌ಟಿಒ ಟ್ಯಾಕ್ಸ್‌ಗಳು ಸೇರಿ ಸುಮಾರು ಹದಿನಾಲ್ಕು ಲಕ್ಷ ರೂಗಳಿಗೆ ನಿಮಗೆ ಸಿಗುತ್ತದೆ.
ಇನ್ನಿದರ (Mahindra Thar) ಡೌನ್ ಪೇಮೆಂಟ್ ಬಗ್ಗೆ ನೋಡುವುದಾದರೆ ನೀವು ಈ ವಾಹನಕ್ಕೆ 2 ಲಕ್ಷ ರೂ ಡೌನ್ ಪೇಮೆಂಟ್ ಮಾಡಿದರೆ ಸುಮಾರು ೯.೮ % ಬಡ್ಡಿದರದಲ್ಲಿ ೭ ವರ್ಷಗಳ ಕಾಲಾವಧಿಯ ಲೋನ್ ಮಾಡಬಹುದು. ಹೀಗೆ ಮಾಡಿದಾಗ ನೀವು ಪ್ರತೀ ತಿಂಗಳು ಇಎಂಐ ರೂಪದಲ್ಲಿ ಸುಮಾರು 19,804 ರೂಪಾಯಿಗಳಷ್ಟು ಹಣವನ್ನು ಪಾವತಿಸಬೇಕಾಗುತ್ತದೆ.

ಈ ಮಹೀಂದ್ರಾ ಥಾರ್ ಎಸ್‍ಯುವಿಯ ಬಗ್ಗೆ ಹೇಳುವುದಾದರೆ, ಇದು ಹಲವು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಇದರಲ್ಲಿ ಮೊದಲಿಗೆ 2.0 ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಆಗಿದೆ. ಈ ಎಂಜಿನ್ 150 ಬಿಹೆಚ್‍ಪಿ ಪವರ್ ಮತ್ತು 320 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು 2.2 ಲೀಟರ್ ಟರ್ಬೊ-ಡೀಸೆಲ್ ಎಂಜಿನ್ 130 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಈ ಎರಡು ಎಂಜಿನ್ ಗಳೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇದು ಗ್ಲೊಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 4 ಸ್ಟಾರ್ ಸೇಫ್ಚಿ ರೇಟಿಂಗ್ ಪಡೆದುಕೊಳ್ಳುವ ಮೂಲಕ ಸುರಕ್ಷಿತ ಕಾರು ಮಾದರಿಯಾಗಿ ಗುರುತಿಸಿಕೊಂಡ ನಂತರ ಈ ಥಾರ್ ಎಸ್‍ಯುವಿಗೆ ಮತ್ತಷ್ಟು ಬೇಡಿಕೆ ಪಡೆದುಕೊಂಡಿದೆ. ಈ ಎಸ್‍ಯುವಿಯ ವೈಟಿಂಗ್ ಪಿರೇಡ್ ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ನಿರ್ಧಾರವಾಗಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








