ಬಡವರ ಈ ಮಹೀಂದ್ರಾ ಕಾರು ಪ್ರೀಮಿಯಂ ಟಚ್‌ನಲ್ಲಿ ಮಾರುಕಟ್ಟೆಗೆ ಸದ್ಯದಲ್ಲೇ: ಇನ್ಮುಂದೆ ಸಾಮಾನ್ಯರಿಗೂ ಲಕ್ಷುರಿ ಫೀಲ್‌!

ಭಾರತದ ಪ್ರಖ್ಯಾತ ವಾಹನ ನಿರ್ಮಾಣ ಕಂಪನಿಯಾದ ಮಹೀಂದ್ರಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿಹಲವಾರು ವಾಹನಗಳನ್ನು ಆಗಾಗ ಮಾರುಕಟ್ಟೆಗೆ ತಂದು ಭಾರತೀಯರ ಮನಗೆಲ್ಲುವಲ್ಲಿ ನಿಸ್ಸೀಮವಾಗಿದೆ. ಈಗ ಮಹೀಂದ್ರಾ ಕಂಪನಿಯು ತನ್ನ ಅಭಿಮಾನಿ ಗ್ರಾಹಕರಿಗೆ ಮತ್ತೊಂದು ಹೊಸ ಸುದ್ದಿಯೊಂದನ್ನು ಹೊತ್ತು ತಂದಿದೆ.

ಹೌದು, ಮಹೀಂದ್ರಾ ಕಂಪನಿಯ ಪ್ರಖ್ಯಾತ ಕಾರು ಮಾದರಿಗಳಲ್ಲಿ ಒಂದಾದ ಮಹೀಂದ್ರಾ ಎಕ್ಸ್‌ಯುವಿ ೩೦೦ ಕಾರಿನ ಫೇಸ್‌ಲಿಫ್ಟ್‌ ಮಾಡೆಲ್‌ ಅನ್ನು ಮಹೀಂದ್ರಾ ಸದ್ಯದಲ್ಲೇ ಹೊರತರಲಿದೆ ಎಂಬ ಮಾತುಗಳು ಅಲ್ಲಲ್ಲಿ ಕೇಳಿ ಬರುತ್ತಿದ್ದು, ಗ್ರಾಹಕರು ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ ಈ ಕಾರು ಭಾರತೀಯ ಮಾರುಕಟ್ಟೆಗೆ ಲಾಂಚ್‌ ಆಗಿ ಸುಮಾರು ಐದು ವರ್ಷಗಳಾಗುತ್ತಾ ಬಂದಿದ್ದು, ಇದರ ಫೇಸ್‌ಲಿಫ್ಟ್‌ ಮೇಲೆ ಭರ್ಜರಿ ನಿರೀಕ್ಷೆಯನ್ನು ಇಡಲಾಗಿದೆ.

Mahindra XUV 300 Facelift Will Be Coming Soon

ಇನ್ನು ಮುಂಬರಲಿರುವ ಈ ಕಾರಿನ ಡಿಸೈನ್‌ ಮತ್ತು ಫೀಚರ್ಗಳು ಕೊಂಚ ಸಾಮಾಜಿಕ ಜಾಲತಾಣಗಳಲ್ಲಿ ಸೊರಿಕೆ ಆಗಿದ್ದು, ಇದರ ಡಿಸೈನ್‌ ಮುಂಬರಲಿರುವ ಮಹೀಂದ್ರಾದ BE SUV ಲೈನ್‌ಅಪ್‌ನ ಡಿಸೈನ್‌ ಮಾದರಿಯನ್ನು ಹೋಲಲಿದೆ ಎಂದು ತಿಳದು ಬಂದಿದೆ. ಈ ಕಾರಿನ ಸ್ಪೈ ಇಮೇಜ್‌ಗಳು ಈಗಾಗಲೇ ಸೋರಿಕೆಯಾಗಿದ್ದು, ಅದರ ಆಧಾರದ ಮೇಲೆ ಈ ವಿಷಯಗಳು ಅಡಗಿದೆ ಎಂದು ಹೇಳಲಾಗುತ್ತಿದೆ.

ಇತ್ತೀಚೆಗೆ ಕಾರು ಪ್ರಪಂಚದಲ್ಲಿ ಟ್ರೆಂಡಿಂಗ್‌ನಲ್ಲಿರುವ ಕನೆಕ್ಟೆಡ್‌ ಡಿಆರ್‌ಎಲ್‌ ಮತ್ತು ಕನೆಕ್ಟೆಡ್‌ ಟೇಲ್‌ ಲಯಟ್‌ಗಳು ಈ ಕಾರಿನಲ್ಲಿಯೂ ಬರಲಿದ್ದು, ಇದರ ಲೈಟಿಂಗ್‌ ಸೆಟ್‌ಅಪ್‌ ಸಂಪೂರ್ಣವಾಗಿ ಎಲ್‌ಇಡಿ ಆಗಿರಲಿದೆ ಎಂದು ಹೇಳಲಾಗುತ್ತಿದೆ. ಕಳೆದ ತಲೆಮಾರಿನ Mahindra XUV 300 ಗಿಂತಲೂ ಹಲವಾರು ಬದಲಾವಣೆಗಳು ಈ ಕಾರಿನಲ್ಲಿ ಕಾಣಿಸಿಕೊಳ್ಳಲಿದೆ ಎಂಬುದು ಎಲ್ಲರ ನಿರೀಕ್ಷೆಯಾಗಿದೆ.

Mahindra XUV 300 Facelift Will Be Coming Soon

ಇನ್ನು ಸದ್ಯಕ್ಕೆ ಇರುವ Mahindra XUV 300 ಕಾರಿನ ಬಗ್ಗೆ ನೋಡುವುದಾದರೆ, ಮಹೀಂದ್ರಾ XUV300 ಸ್ಯಾಂಗ್‌ಯಾಂಗ್ ಟಿವೊಲಿ ಆಧಾರಿತ ಸಬ್-4 ಮೀಟರ್ ಎಸ್‍ಯುವಿಯಾಗಿದೆ. ಯಾವುದೇ ತಯಾರಕರು ಯಾವುದೇ ನವೀಕರಣಗಳಿಲ್ಲದೆ ಗ್ರಾಹಕರನ್ನು ಸೆಳೆಯುವುದು ಸುಲಭವಲ್ಲ. ಟಾಟಾ ಮೋಟಾರ್ಸ್ ಇತ್ತೀಚಿಗೆ ನೆಕ್ಸಾನ್ ಎಸ್‌ಯುವಿಯನ್ನು ಸ್ಥಿರವಾಗಿ ಮಾರಾಟದ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೂ ನವೀಕರಿಸಿದೆ. ಮಹೀಂದ್ರಾ XUV300 ಎಸ್‍ಯುವಿ ಯಾವುದೇ ಪ್ರಮುಖ ನವೀಕರಣವಿಲ್ಲದೆ ಸ್ವಲ್ಪ ಸಮಯದವರೆಗೆ ಸಬ್-4 ಮೀಟರ್ ಎಸ್‍ಯುವಿ ವಿಭಾಗದಲ್ಲಿ ಸ್ಪರ್ಧಿಸುತ್ತಿದೆ.

ಮುಂಬರಲಿರುವ ಮಹೀಂದ್ರಾ XUV300 ಎಸ್‍ಯುವಿಯಲ್ಲಿ 360-ಡಿಗ್ರಿ ಸರೌಂಡ್-ವ್ಯೂ ಕ್ಯಾಮೆರಾ, ದೊಡ್ಡ ಇನ್ಫೋಟೈನ್‌ಮೆಂಟ್, ವೈರ್‌ಲೆಸ್ ಚಾರ್ಜಿಂಗ್, ವೆಂಟಿಲೇಟೆಡ್ ಸೀಟ್‌ಗಳು, ಪನೋರಮಿಕ್ ಸನ್‌ರೂಫ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಳಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಲು ಕೆಲವು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆಯಬಹುದು. ಮಹೀಂದ್ರಾ XUV300 ಎಸ್‍ಯುವಿ ಈಗಾಗಲೇ ಗ್ಲೋಬಲ್ NCAP ನಿಂದ 5-ಸ್ಟಾರ್ ಸುರಕ್ಷತಾ ರೇಟಿಂಗ್‌ನೊಂದಿಗೆ ಭಾರತದಲ್ಲಿ ಸುರಕ್ಷಿತ ಎಸ್‍ಯುವಿಗಳಲ್ಲಿ ಒಂದಾಗಿದೆ.

ಮಹೀಂದ್ರಾ ಡೀಲರ್‌ಶಿಪ್‌ಗಳು ಮಹೀಂದ್ರಾ XUV300 ಎಸ್‍ಯುವಿಯ ಮೇಲೆ ಭಾರಿ ರಿಯಾಯಿತಿಗಳನ್ನು ನೀಡುತ್ತಿವೆ. ಈ ಮಹೀಂದ್ರಾ XUV300 ಎಸ್‍ಯುವಿಯ ಮೇಲೆ ನಗದು ರಿಯಾಯಿತಿಗಳು, ವಿನಿಮಯ ಬೋನಸ್, ಕಾರ್ಪೊರೇಟ್ ರಿಯಾಯಿತಿಗಳು, ಅಧಿಕೃತ ಬಿಡಿಭಾಗಗಳು ಮತ್ತು ವಿಸ್ತೃತ ವಾರಂಟಿ ರೂಪದಲ್ಲಿ ಭರ್ಜರಿ ಆಫರ್ ಗಳನ್ನು ನೀಡುತ್ತಿದೆ. ಮಹೀಂದ್ರಾ XUV300 ಎಸ್‍ಯುವಿಯ ಮೇಲೆ ರೂ.1.82 ಲಕ್ಷದವರೆಗೆ ರಿಯಾಯಿತಿಗಳನ್ನು ನೀಡಲಾಗುತ್ತಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, February 9, 2024, 14:33 [IST]
English summary
Mahindra xuv 300 facelift will be coming soon
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+