21 Km ಮೈಲೇಜ್.. 5 ಸೀಟರ್.. ಮಧ್ಯಮ ವರ್ಗದವರ ನೆಚ್ಚಿನ ಕಾರಿದು, ಆನ್-ರೋಡ್ ಬೆಲೆ ಎಷ್ಟು.. EMI ಏನು?
ಮಹೀಂದ್ರಾ (Mahindra) ಜನಪ್ರಿಯ ಕಾರು ತಯಾರಕ ಕಂಪನಿಯಾಗಿದೆ. ಏಪ್ರಿಲ್‌ನಲ್ಲಿ ನೂತನ ಎಕ್ಸ್‌ಯುವಿ 3ಎಕ್ಸ್ಒ ಕಾರನ್ನು ಮಾರಾಟಕ್ಕೆ ತಂದಿತ್ತು. ಇದೊಂದು ಕಾಂಪ್ಯಾಕ್ಟ್ ಎಸ್‌ಯುವಿಯಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಿರುವುದರಿಂದ ಭಾರಿ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಸದ್ಯ ಈ ಕಾರಿನ ಪೆಟ್ರೋಲ್ ರೂಪಾಂತರಗಳು (ವೇರಿಯೆಂಟ್) 2 ತಿಂಗಳಿಂದ 1 ವರ್ಷ ಹಾಗೂ ಎಲ್ಲ ಡೀಸೆಲ್ ರೂಪಾಂತರಗಳು 1 ತಿಂಗಳು ಕಾಯುವಿಕೆ ಅವಧಿಯನ್ನು ಹೊಂದಿವೆ. ನೀವು ಹೊಸ ಎಕ್ಸ್‌ಯುವಿ 3ಎಕ್ಸ್ಒ ಎಸ್‌ಯುವಿಯನ್ನು ಮನೆಗೆ ತರಲು ಆಲೋಚಿಸಿದ್ದೀರಾ.. ಇಲ್ಲಿ ಆನ್-ರೋಡ್ ಬೆಲೆ ಹಾಗೂ ಇಎಂಐ ಆಯ್ಕೆಯ ಕುರಿತಂತೆ ಸಂಕ್ಷಿಪ್ತವಾಗಿ ತಿಳಿಸಿಕೊಟ್ಟಿದ್ದೇವೆ.
ಬೆಂಗಳೂರಿನಲ್ಲಿ ಹೊಚ್ಚ ಹೊಸ ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್ಒ (Mahindra XUV 3XO) ಎಸ್‌ಯುವಿಯು ಹಲವು ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿ ದೊರೆಯುತ್ತದೆ. ಇದರ ಎಂಎಕ್ಸ್1 ಪೆಟ್ರೋಲ್ (MX1 Petrol) ರೂಪಾಂತರ, ರೂ.9.41 ಲಕ್ಷ ಆನ್-ರೋಡ್ ಬೆಲೆಯನ್ನು ಹೊಂದಿದೆ. ನೀವು ರೂ.2 ಲಕ್ಷ ಡೌನ್ ಪೇಮೆಂಟ್ ಪಾವತಿಸಿ ಈ ಕಾರನ್ನು ಖರೀದಿಸಿದರೆ, ರೂ.7.41 ಲಕ್ಷದವರೆಗೂ ಸಾಲವಿರುತ್ತದೆ. ಶೇಕಡ 9.8% ಬಡ್ದಿ ದರದಲ್ಲಿ 5 ವರ್ಷಕ್ಕೆ ತಿಂಗಳಿಗೆ ರೂ.15,681 ಇಎಂಐ ಕಟ್ಟಬೇಕು.

ಈ ಕಾರಿನ ಎಂಎಕ್ಸ್2 ಡೀಸೆಲ್ (MX2 Diesel) ರೂಪಾಂತರ, ರೂ.12.04 ಲಕ್ಷ ಆನ್-ರೋಡ್ ದರವನ್ನು ಪಡೆದಿದೆ. ಇದನ್ನು ರೂ.2 ಲಕ್ಷ ಡೌನ್ ಪೇಮೆಂಟ್ ಕಟ್ಟಿ ಮನೆಗೆ ತಂದರೆ ರೂ.10 ಲಕ್ಷದವರೆಗೂ ಸಾಲ ಬಾಕಿಯಿರುತ್ತದೆ. ಶೇಕಡ 9.8% ಬಡ್ದಿ ಹಾಕಿ, 5 ವರ್ಷದ ಅವಧಿಗೆ ಮಾಸಿಕ ರೂ.21,228 ಇಎಂಐ ಪಾವತಿಸಬೇಕು.
ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್ಒ ಎಸ್‌ಯುವಿಯ ಎಂಎಕ್ಸ್2 ಪ್ರೊ ಡೀಸೆಲ್ (MX2 Pro Diesel) ರೂಪಾಂತರ, ರೂ.13.09 ಲಕ್ಷ ಆನ್-ರೋಡ್ ಬೆಲೆಯನ್ನು ಒಳಗೊಂಡಿದೆ. ರೂ.2 ಲಕ್ಷ ಡೌನ್ ಪೇಮೆಂಟ್ ಪಾವತಿಸಿ ಈ ಕಾರನ್ನು ತೆಗೆದುಕೊಂಡಿರೆ, ಸರಿ ಸುಮಾರು ರೂ.11.08 ಲಕ್ಷ ಸಾಲ ಉಳಿಯುತ್ತದೆ. ಅದಕ್ಕೆ 9.8% ಬಡ್ದಿ ದರದಲ್ಲಿ 5 ವರ್ಷಕ್ಕೆ ತಿಂಗಳಿಗೆ ರೂ.23,450 ಇಎಂಐ ಕಟ್ಟಬೇಕು.

ಎಕ್ಸ್‌ಯುವಿ 3ಎಕ್ಸ್ಒ ಕಾರಿನ ಎಂಎಕ್ಸ್3 (MX3 Diesel) ರೂಪಾಂತರ, ರೂ.13.71 ಲಕ್ಷ ಆನ್-ರೋಡ್ ದರವನ್ನು ಹೊಂದಿದೆ. ನೀವು ರೂ.2 ಲಕ್ಷ ಡೌನ್ ಪೇಮೆಂಟ್ ಕಟ್ಟಿ ಈ ಎಸ್‌ಯುವಿಯನ್ನು ಖರೀದಿ ಮಾಡಿದರೆ, ರೂ.11.70 ಲಕ್ಷ ಸಾಲವಿರುತ್ತದೆ. ಶೇಕಡ 9.8% ಬಡ್ದಿ ಹಾಕಿ, 5 ವರ್ಷದ ಅವಧಿಗೆ ಮಾಸಿಕ ರೂ.24,756 ಇಎಂಐ ತುಂಬಬೇಕು.
ಈ ಕಾರಿನ ಎಎಕ್ಸ್7 ಎಲ್ ಟರ್ಬೊ ಪೆಟ್ರೋಲ್ (AX7 L Turbo Petrol) ರೂಪಾಂತರ ರೂ.17.41 ಲಕ್ಷ ಆನ್-ರೋಡ್ ಬೆಲೆಯನ್ನು ಪಡೆದಿದೆ. ಇದನ್ನು ರೂ.2 ಲಕ್ಷ ಡೌನ್ ಪೇಮೆಂಟ್ ಪಾವತಿ ಮಾಡಿ ತೆಗೆದುಕೊಂಡರೆ, ರೂ.15.41 ಲಕ್ಷ ಸಾಲವಿತ್ತದೆ. ಶೇಕಡ 9.8% ಬಡ್ದಿ ದರದಲ್ಲಿ 5 ವರ್ಷಕ್ಕೆ ತಿಂಗಳಿಗೆ ರೂ.32,595 ಇಎಂಐಯನ್ನು ಗ್ರಾಹಕರು ಕಟ್ಟಬೇಕು.

ಹೊಸ ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್ಒ ಕಾರು, 1.2-ಲೀಟರ್ ಪೆಟ್ರೋಲ್, 1.2-ಲೀಟರ್ ಟಿಜಿಡಿಐ ಟರ್ಬೊ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನೊಂದಿಗೂ ಖರೀದಿಗೆ ದೊರೆಯುತ್ತದೆ. ರೂಪಾಂತರಗಳಿಗೆ ಅನುಗುಣವಾಗಿ 17.96 ರಿಂದ 21.2 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.
ಈ ಎಸ್‌ಯುವಿಯಲ್ಲಿ 5 ಮಂದಿ ಸುಲಭವಾಗಿ ಓಡಾಟ ನಡೆಸಬಹುದು. ಇನ್ಫೋಟೈನ್‌ಮೆಂಟ್ ಸಿಸ್ಟಮ್ & ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ ಡಿಸ್ಪ್ಲೇಗಳು ಮತ್ತು ವೈರ್‌ಲೆಸ್ ಫೋನ್ ಚಾರ್ಜರ್ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. ಪ್ರಯಾಣಿಕರ ರಕ್ಷಣೆಗಾಗಿ 6-ಏರ್‌ಬ್ಯಾಗ್‌ಗಳು ಹಾಗೂ ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಅನ್ನು ಹೊಂದಿದೆ.
ನಿಮ್ಮ ಗಮನಕ್ಕೆ.. ಈ ಆನ್-ರೋಡ್ ದರಗಳು ಹಾಗೂ ಇಎಂಐ ಆಯ್ಕೆಗಳು ನಗರದಿಂದ ನಗರಕ್ಕೆ ಬೇರೆಯಿರಲಿದ್ದು, ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂಗೆ ಭೇಟಿ ನೀಡಿರಿ.


Click it and Unblock the Notifications








