ಕಡಿಮೆ ಬೆಲೆಗೆ ಲಕ್ಷುರಿ ಫೀಚರ್ ಪರಿಚಯಿಸಲಿದೆ ಮಹೀಂದ್ರಾ: ದುಬಾರಿ ಕಾರುಗಳಿಗೆ ಎದೆನಡುಕ ಶುರು!
ಸದ್ಯಕ್ಕೆ ಪ್ರಖ್ಯಾತ ಕಾರು ನಿರ್ಮಾಣ ಕಂಪನಿಯಾದ ಮಹೀಂದ್ರಾದ ಮುಂದಿನ ಲಾಂಚ್ ಯಾವುದೆಂದು ಎಲ್ಲರಿಗೂ ತಿಳಿದಿದೆ. ತನ್ನ ಹೊಸ XUV 3XO ಕಾರನ್ನು ಸದ್ಯದಲ್ಲೇ ಭಾರತೀಯ ಮಾರುಕಟ್ಟೆಗೆ ಮಹೀಂದ್ರಾ ತರಲಿದ್ದು, ನಿಮಗೆಲ್ಲಾ ತಿಳಿದಿರುವಂತೆ ಹಳೆಯ XUV 300 ಕಾರನ್ನು ಅಪ್‌ಡೇಟೆಡ್ ಮಾಡೆಲ್ ಇದಾಗಿದೆ.
ಇದೀಗ ಈ ಕಾರಿನ ಕುರಿತಾಗಿ ಹೊಸ ಸುದ್ದಿಯೊಂದು ಬಂದಿದ್ದು, ಈ ಕಾರಿನಲ್ಲಿ ಸೆಗ್ಮೆಂಟ್‌ನಲ್ಲೇ ಅತೀ ದೊಡ್ಡದಾದ ಸನ್‌ರೂಫ್ ಸಿಗಲಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಕಂಪನಿ ಈ ಕುರಿತಾದ ಟೀಸರ್ ಸಹ ಹೊರಬಿಟ್ಟಿದ್ದು, ದೊಡ್ಡದಾದ ಪಾನರೋಮಿಕ್ ಸನ್‌ರೂಫ್ ಇದಾಗಿದೆ. ಇದರಿಂದಾಗಿ ಕಾರಿನ ಒಳಭಾಗದಿಂದ ಪ್ರಯಾಣ ಮಾಡುವ ಸಂಧರ್ಭದಲ್ಲಿ ಒಳ್ಳೆಯ ವ್ಯೂವ್ ಸಿಗಲಿದ್ದು, ಪ್ರಯಾಣ ಮತ್ತಷ್ಟು ಆಹ್ಲಾದಕರವಾಗಿರಲಿದೆ.

ಈ ಕಾರನ್ನು ಮಹೀಂದ್ರಾ ಎಲ್ಲಾ ಪವರ್‌ಟ್ರೇನ್ ಆಯ್ಕೆಯಲ್ಲೂ ಮಾರುಕಟ್ಟೆಗೆ ತರುವ ಮಾಹಿತಿ ಇದೆ. ಪೆಟ್ರೋಲ್, ಡೀಸೆಲ್ ಆವೃತ್ತಿಯಲ್ಲಿ ಈ ಕಾರು ಭಾರತೀಯ ಮಾರುಕಟ್ಟೆಗೆ ಕಾಲಿಡಲಿದ್ದು, ಇದಾದ ಕೆಲವೇ ಸಮಯದಲ್ಲಿ ಈ ಕಾರನ್ನು ಎಲೆಕ್ಟ್ರಿಕ್ ಗೊಳಿಸುವ ಯೋಜನೆಯೂ ಇದೆ ಎಂದು ತಿಳಿದು ಬಂದಿದೆ.
ಇನ್ನು ಮಹೀಂದ್ರಾ ಈ ಹಿಂದೆ ಇದರ ಒಳಾಂಗಣ ವಿನ್ಯಾಸದ ಟೀಸರ್ ಅನ್ನು ಸಹ ಬಿಡುಗಡೆ ಮಾಡಿತ್ತು. XUV 3XOನ 30-ಸೆಕೆಂಡ್ ಟೀಸರ್ ವೀಡಿಯೋವನ್ನು ಕೂಡ ಬಿಡುಗಡೆ ಮಾಡಿದ್ದ ಮಹೀಂದ್ರಾ, ಕಾರಿನ ಹಿಂಭಾಗದ ವಿಭಾಗವನ್ನು ಒಳಗೊಂಡಂತೆ ಕೆಲವು ಮುಖ್ಯಾಂಶಗಳನ್ನು ಭಾಗಶಃ ಬಹಿರಂಗಪಡಿಸಿತ್ತು. ಹಿಂಬದಿಯ ವಿಭಾಗದಿಂದ ಪ್ರಾರಂಭಿಸಿ, ಮುಂಬರುವ ಮಹೀಂದ್ರಾ XUV 3XO (Mahindra XUV 3XO) ಪೂರ್ಣ-ಅಗಲದ ಎಲ್ಇಡಿ ಟೈಲ್‌ಲ್ಯಾಂಪ್ ಅನ್ನು ತೋರಿಸಲಾಗಿತ್ತು.

ಈ ಕಾರಿನ ಇಂಟೀರಿಯರ್‌ಗಳನ್ನು ನೊಡುವುದಾದರೆ, ಈ ಕಾರು ಪಕ್ಕಾ ಪ್ರೀಮಿಯಂ ಫೀಲ್ ಕೊಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದನ್ನು ಗಮನಿಸಿದರೆ ಇದೇ ವರ್ಷ ಲಾಂಚ್ ಆದ XUV400 ಎಲೆಕ್ಟ್ರಿಕ್ ಕಾರಿನ ರೀತಿಯಲ್ಲಿಯೇ ಹೋಲುತ್ತಿದೆ. ಕಾರಿನ ಡ್ಯಾಶ್ ಬೋರ್ಡ್‌ನ ಮಧ್ಯದಲ್ಲಿ ದೊಡ್ಡದಾದ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಕಾಣಬಹುದು. ಈ ಕಾರಿನಲ್ಲಿ ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್ ಅನ್ನು ಸಹ ಪಡೆಯುತ್ತಿದೆ.
ಕಾರಿನ ಹಿಂಭಾಗದ ಆಸನಗಳನ್ನು ಗಮನಿಸಿದರೆ ಮೂರು ಜನ ಆರಾಮವಾಗಿ ಕಾರಿನ ಹಿಂಭಾಗದ ಸೀಟ್‌ನಲ್ಲಿ ಕುಳಿತುಕೊಳ್ಳಬಹುದಾಗಿದ್ದು, ಮೂವರಿಗೂ ಅಡ್ಜಸ್ಟಬಲ್ ಹೆಡ್ ರೆಸ್ಟ್ ಸಿಗುತ್ತದೆ. ಇದರಿಂದ ದೂರ ಪ್ರಯಾಣ ಮಾಡುವವರಿಗೆ ಆರಾಮದಾಯಕವಾಗಿ ಯಾವುದೇ ಒತ್ತಡಗಳಿಲ್ಲದೇ ಪ್ರಯಾಣ ಮಾಡಬಹುದಾಗಿದೆ. ಕಾರಿನ ಡ್ಯಾಶ್‌ಬೊರ್ಡ್ ಗ್ರೇ ಮತ್ತ ಬ್ಲಾಕ್ ಬಣ್ಣದಲ್ಲಿದ್ದು, ಕಾರಿಗೆ ಬೋಲ್ಡ್ ಲುಕ್ ನೀಡುತ್ತದೆ.
ಇನ್ನು ಈ ಕಾರಿನ ಇತರ ವಿಷಯಗಳನ್ನು ನೋಡುವುದಾದರೆ, ಮುಂಬರುವ ಮಹೀಂದ್ರಾ XUV 3XO ಕಾರು, ಮಹೀಂದ್ರಾ XUV300 ಗೆ ಬದಲಿ ಆಗಿದ್ದರೆ, ಮಾದರಿಯು ಅದರ ಪೂರ್ವವರ್ತಿಯಂತೆ ಅದೇ ಪವರ್‌ಟ್ರೇನ್ ಆಯ್ಕೆಗಳನ್ನು ಹಾಗೆಯೇ ಮುಂದುವರೆಸುವ ನಿರೀಕ್ಷೆಯಿದೆ. ಏಕೆಂದರೆ ಮಹೀಂದ್ರಾ XUV300 ಈಗಾಗಲೇ ತನ್ನ ಪ್ರತಿಸ್ಪರ್ಧಿಗಳಿಗಿಂತ ಉತ್ತಮವಾದ ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಬರುತ್ತದೆ.
ಪ್ರಸ್ತುತವಿರುವ XUV300 ನಲ್ಲಿನ ಬೇಸ್ 1.2-ಲೀಟರ್, ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ (TCMPFi) ಅನ್ನು 108.6bhp ಮತ್ತು 200Nm ಟಾರ್ಕ್ ಉತ್ಪಾದಿಸಲು ಟ್ಯೂನ್ ಮಾಡಲಾಗಿದೆ. ಹಾಗೆಯೇ ಇದರ ಹೆಚ್ಚು ಶಕ್ತಿಶಾಲಿ 1.2-ಲೀಟರ್, ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ (TGDi) 128.7 bhp ಪವರ್ ಮತ್ತು 230Nm ಟಾರ್ಕ್ ಉತ್ಪಾದಿಸಲು ಟ್ಯೂನ್ ಮಾಡಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








