ಮಹೀಂದ್ರಾ ಕೂಡ ಊಹಿಸಿರಲಿಲ್ಲ! ಬುಕಿಂಗ್ಸ್ ತೆರದ 60 ನಿಮಿಷಗಳಲ್ಲೇ ಶಾಕ್ ಕೊಟ್ಟ ಹೊಸ XUV 3XO!
ಭಾರತದ ಪ್ರಮುಖ ಎಸ್‌ಯುವಿ ತಯಾರಕ ಮಹೀಂದ್ರಾ ಇತ್ತೀಚೆಗೆ ಬಿಡುಗಡೆ ಮಾಡಿರುವ ಕಾಂಪ್ಯಾಕ್ಟ್ ಎಸ್‌ಯುವಿ XUV 3XO (Mahindra XUV 3XO) ಹೊಸ ದಾಖಲೆ ನಿರ್ಮಿಸಿದೆ. ಕಂಪನಿಯಿಂದ ಬುಕ್ಕಿಂಗ್ ಆರಂಭವಾದ ಮೊದಲ 60 ನಿಮಿಷಗಳಲ್ಲಿ ಬರೋಬ್ಬರಿ 50,000 ಕ್ಕೂ ಹೆಚ್ಚು ಆರ್ಡರ್‌ಗಳನ್ನು ಸ್ವೀಕರಿಸಿದೆ.
ಈ ಬಗ್ಗೆ M&M Ltd ಅಧ್ಯಕ್ಷ ವೀಜಯ್ ನಕ್ರಾ ವಿವರಿಸಿ, " ನಮ್ಮ ಹೊಸ XUV 3XO ಕೆವಲ ಒಂದು ಗಂಟೆಯಲ್ಲೇ 50,000 ಬುಕಿಂಗ್‌ಗಳನ್ನು ಪಡೆದುಕೊಂಡಿದೆ ಎಂದು ಘೋಷಿಸಲು ಹೆಮ್ಮೆಪಡುತ್ತೇವೆ. ಇದು ನಮ್ಮ ಗ್ರಾಹಕರು ನಮ್ಮ ಮೇಲೆ ಇಟ್ಟಿರುವ ನಂಬಿಕೆಗೆ ಸಾಕ್ಷಿಯಾಗಿದೆ. ಇಂತಹ ಅಗಾಧ ಗ್ರಾಹಕ ಪ್ರತಿಕ್ರಿಯೆಯು ನಮಗೆ ಹೊಸ ಉತ್ಪನ್ನಗಳನ್ನು ಪರಿಚಯಸಲು ಉತ್ಸಾಹ ನೀಡುತ್ತಿದೆ. ನಾವೀನ್ಯತೆಗೆ ನಮ್ಮ ಬದ್ಧತೆ ಮತ್ತು ನಿರೀಕ್ಷೆಗಳನ್ನು ಮೀರಿದ ಮೌಲ್ಯವನ್ನು ತಲುಪಿಸುವಲ್ಲಿ XUV 3XO ಯಶಸ್ವಿಯಾಗಲಿದೆ. 'ನೀವು ಬಯಸುವ ಎಲ್ಲವನ್ನೂ ಮತ್ತು ಹೆಚ್ಚಿನದನ್ನು' ತಲುಪಿಸಲು ಈ ಕಾರನ್ನು ವಿನ್ಯಾಸಗೊಳಿಸಲಾಗಿದೆ. ಈ ನಂಬಲಾಗದ ಬೇಡಿಕೆಯನ್ನು ಪೂರೈಸಲು ನಾವು ಸಿದ್ಧರಿದ್ದೇವೆ ಎಂದು ವಿಜಯ್ ನಕ್ರಾ ಹೇಳಿದರು.

ಕಂಪನಿ ಪ್ರಕಾರ, ಮಹೀಂದ್ರಾ XUV 3XO ಮೊದಲ 10 ನಿಮಿಷಗಳಲ್ಲಿ 27,000 ಕ್ಕೂ ಹೆಚ್ಚು ಬುಕಿಂಗ್‌ಗಳು ದಾಖಲಾಗಿವೆ. ಇದು ಮಹೀಂದ್ರಾದ ಹೊಸ SUV ಗೆ ನಂಬಲಾಗದ ಉತ್ಸಾಹವನ್ನು ಪ್ರದರ್ಶಿಸುತ್ತದೆ. ಈ ಮೈಲಿಗಲ್ಲು XUV 3XO ನ ಅಸಾಧಾರಣ ವಿನ್ಯಾಸ, ಪ್ರೀಮಿಯಂ ಒಳಾಂಗಣ, ಆರಾಮದಾಯಕ ಸವಾರಿ, ಅತ್ಯಾಧುನಿಕ ತಂತ್ರಜ್ಞಾನ, ರೋಮಾಂಚಕ ಕಾರ್ಯಕ್ಷಮತೆ ಮತ್ತು ಸಾಟಿಯಿಲ್ಲದ ಸುರಕ್ಷತೆಯನ್ನು ಒತ್ತಿಹೇಳುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
XUV 3XO ನ ವಿತರಣೆಗಳು ಮೇ 26, 2024 ರಿಂದ ಪ್ರಾರಂಭವಾಗುತ್ತವೆ. ಕಂಪನಿಯು ಈಗಾಗಲೇ 10,000 ಯುನಿಟ್ ಕಾರುಗಳನ್ನು ತಯಾರಿಸಿದ್ದು, ಗ್ರಾಹಕರ ಅನುಭವದ ಮೇಲೆ ಹೆಚ್ಚಿನ ಗಮನಹರಿಸುವುದರೊಂದಿಗೆ ಸಕಾಲಿಕ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಮಹೀಂದ್ರಾ ತೆಗೆದುಕೊಳ್ಳುತ್ತದೆ. XUV 3XO ಗಾಗಿ ಬುಕ್ಕಿಂಗ್‌ಗಳು ಆನ್‌ಲೈನ್ ಮತ್ತು ಎಲ್ಲಾ ಅಧಿಕೃತ ಮಹೀಂದ್ರಾ ಡೀಲರ್‌ಶಿಪ್‌ಗಳಲ್ಲಿ ತೆರೆದಿರುತ್ತವೆ ಎಂದು ಕಂಪನಿ ತಿಳಿಸಿದೆ.

ಬೆಲೆ, ಎಂಜಿನ್, ಮೈಲೇಜ್: ಮಹೀಂದ್ರಾ XUV 3XO (Mahindra XUV 3XO) ಎಸ್‍ಯುವಿಯ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ. 7.49 ಲಕ್ಷವಾಗಿದೆ. ಈ ಎಸ್‍ಯುವಿ MX, AX, AX5 ಮತ್ತು AX7 ಎಂಬ ನಾಲ್ಕು ಟ್ರಿಮ್‌ಗಳಲ್ಲಿ ಲಭ್ಯವಿದೆ. ಮಹೀಂದ್ರಾ XUV 3XO ಎಸ್‍ಯುವಿ 1.2 ಲೀಟರ್ ಟರ್ಬೊ ಪೆಟ್ರೋಲ್, 1.2 ಟರ್ಬೊ GDi ಪೆಟ್ರೋಲ್ ಎಂಜಿನ್ ಮತ್ತು 1.5 ಡೀಸೆಲ್ ಎಂಜಿನ್ ಎಂಬ ಮೂರು ಆಯ್ಕೆಗಳಲ್ಲಿ ಲಭ್ಯವಿದೆ. ಇದರಲ್ಲಿ 1.2 - ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ 108 bhp ಪವರ್ ಮತ್ತು 200 Nm ಟಾರ್ಕ್ ಉತ್ಪಾದಿಸುತ್ತದೆ.
ಇದರೊಂದಿಗೆ 1.2 ಟರ್ಬೊ GDi ಪೆಟ್ರೋಲ್ ಎಂಜಿನ್ ಎಂಜಿನ್ 129 bhp ಮತ್ತು 230 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು 1.5-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ 115 bhp ಮತ್ತು 300 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್‌ಗಳೊಂದಿಗೆ 6-ಸ್ಪೀಡ್ ಮ್ಯಾನ್ಯುವಲ್ ಮತ್ತು 6-ಸ್ಪೀಡ್ AMT ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಲಭ್ಯವಿದೆ. ಈ ಎಸ್‍ಯುವಿಯು 18.89 ಕಿ.ಮೀ ಮತ್ತು 20.1 ಕಿ.ಮೀ ಮೈಲೇಜ್ ನೀಡುತ್ತದೆ.

ಸುರಕ್ಷತೆ: ಲೆವೆಲ್ 2 ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ತಂತ್ರಜ್ಞಾನವನ್ನು ಹೊಂದಿದೆ. ಹೆಚ್ಚುವರಿಯಾಗಿ, ಹೊಸ ಮಹೀಂದ್ರಾ ಸಬ್‌ಕಾಂಪ್ಯಾ ಎಸ್‍ಯುವಿಯಲ್ಲಿ ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, EBD ಜೊತೆಗೆ ABS, ಹಿಲ್ ಹೋಲ್ಡ್ ಕಂಟ್ರೋಲ್, ಹಿಲ್ ಡಿಸೆಂಟ್ ಕಂಟ್ರೋಲ್ ಮತ್ತು ಬ್ರೇಕ್ ಡಿಸ್ಕ್, ರೋಲ್ ಓವರ್ ಮಿಟಿಗೇಶನ್, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್, ವೆಹಿಕಲ್ ಡೈನಾಮಿಕ್ಸ್ ಕಂಟ್ರೋಲ್ ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ ಅನ್ನು ಹೊಂದಿದೆ.
ವೈಶಿಷ್ಟ್ಯಗಳು: ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಯೊಂದಿಗೆ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ನವೀಕರಿಸಿದ 7-ಸ್ಪೀಕರ್ ಒಳಗೊಂಡ ಹರ್ಮನ್ ಕಾರ್ಡನ್ ಮ್ಯೂಸಿಕ್ ಸಿಸ್ಟಮ್, 10.25-ಇಂಚಿನ ಸಂಪೂರ್ಣ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಸೀಟ್, ಆಂಬಿಯೆಂಟ್ ಸೌಂಡ್ ಮೋಡ್‌ಗಳು, ಹಿಂಬದಿಯಲ್ಲಿ ಎಸಿ ವೆಂಟ್‌ಗಳು, ಎಲೆಕ್ಟ್ರಿಕ್ ಸನ್‌ರೂಫ್ ಮತ್ತು ಇನ್ನಷ್ಟು ಫಿಚರ್ಸ್ ಗಳನ್ನು ಹೊಂದಿದೆ.


Click it and Unblock the Notifications